Monday, January 31, 2011

ಹಿಂದಿ ಚಿತ್ರನಟಿ ರವೀನ ಟಂಡನ್ ಶಿರಡಿ ಭೇಟಿ - 31ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಹಿಂದಿ ಚಿತ್ರನಟಿ ರವೀನ ಟಂಡನ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, January 30, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶ್ರೀ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಮಯೀ ಮಂದಿರ ಟ್ರಸ್ಟ್ (ನೋಂದಣಿ), ನಂ.86, ನಿವೇಶನ ಸಂಖ್ಯೆ.12, ಸೊಣ್ಣೆನಹಳ್ಳಿ, ದೊಡ್ಡಬಸ್ತಿ ಮುಖ್ಯ ರಸ್ತೆ, ವಿದ್ಯುಚ್ಚಕ್ತಿ ಮಂಡಳಿ ಪಕ್ಕ, ಕೆಂಗೇರಿ ಹೋಬಳಿ, ಬೆಂಗಳೂರು-560 056 . ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಂದಿರದ ವಿಶೇಷತೆಗಳು: 

ಸಾಯಿಬಾಬಾರವರ ಅಮೃತಶಿಲೆಯ ಚಿಕ್ಕ ವಿಗ್ರಹವನ್ನು ಹೊಂದಿರುವ ಮೊದಲನೆಯ ಮಂದಿರವು 9ನೇ ಅಕ್ಟೋಬರ್ 2008 ರಂದು ಉದ್ಘಾಟನೆಗೊಂಡಿತು. ಈ ದೇವಾಲಯದ ಹೊರ ಆವರಣದಲ್ಲಿ ಸಾಯಿಬಾಬಾರವರ ವಿಗ್ರಹಕ್ಕೆ ಎದುರುಗಡೆಯಲ್ಲಿರುವಂತೆ ಕಪ್ಪು ಶಿಲೆಯ ನಂದಿ ಮತ್ತು ಕೂರ್ಮದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ತುಳಸಿ ಬೃಂದಾವನ ಮತ್ತು ಸಾಯಿ ಕೋಟಿ ಸ್ತೂಪವನ್ನು ಕೂಡ ಈ ಮಂದಿರದ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ. ಈ ಕೋಟಿ ಸ್ತೂಪದ ವಿಶೇಷತೆ ಏನೆಂದರೆ ಸಾಯಿ ಕೋಟಿ ಸ್ತೂಪದ ಸುತ್ತಲೂ 36 ಕಪ್ಪು ಕಲ್ಲುಗಳನ್ನು ನೆಡಲಾಗಿದ್ದು ಸಾಯಿಭಕ್ತರು ಈ ಕಪ್ಪು ಕಲ್ಲುಗಳ ಮೇಲೆ 3 ಪ್ರದಕ್ಷಿಣೆಯನ್ನು ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಜಪಿಸುತ್ತ ಒಟ್ಟು 108 ನಾಮ ಜಪವನ್ನು ಪೂರ್ಣಗೊಳಿಸಿ ನಂತರ ಮಂದಿರದಲ್ಲಿರುವ ಸಾಯಿಬಾಬಾರವರ ದರ್ಶನ ಪಡೆಯುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.  

ಈ ಮಂದಿರದ ಪಕ್ಕದಲ್ಲೇ ಮತ್ತೊಂದು ದೊಡ್ಡ ಮಂದಿರವನ್ನು ಕಟ್ಟಲಾಗಿದೆ. ಈ ಮಂದಿರವನ್ನು 17ನೇ ಅಕ್ಟೋಬರ್ 2010 ರ ವಿಜಯದಶಮಿಯಂದು ಶ್ರೀ.ಶ್ರೀ.ಶ್ರೀ.ಅನ್ನದಾನೇಶ್ವರ ಸ್ವಾಮೀಜಿ, ಶಿವಗಿರಿ ಕ್ಷೇತ್ರ, ಉಂಬಳ್ಳಿ, ಶಿವಾಲ್ದಾಪ್ಪನ ಬೆಟ್ಟ, ಸಂಗಮದ ಹತ್ತಿರ, ಕನಕಪುರ ತಾಲ್ಲೂಕು, ಇವರ ಆಶೀರ್ವಾದದೊಂದಿಗೆ ಪ್ರಾರಂಭಿಸಲಾಯಿತು. ಈ ಮಂದಿರದಲ್ಲಿ ದೊಡ್ಡದಾದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ, ವೀರಾಂಜನೇಯನ ವಿಗ್ರಹ, ನಂದಿ, ಕೂರ್ಮದ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.  

ದೇವಾಲಯದ ಹಿಂಭಾಗದಲ್ಲಿ ಗುರುಸ್ಥಾನವಿದ್ದು ಇಲ್ಲಿ ಅಮೃತ ಶಿಲೆಯ ಸಾಯಿಬಾಬಾ ಮತ್ತು ದತ್ತಾತ್ರೇಯರ ವಿಗ್ರಹಗಳನ್ನು ತಾನೇ ತಾನಾಗಿ ಉದ್ಭವಗೊಂಡ  ಪವಿತ್ರ ಬೇವಿನ ಮರದ ಅಡಿಯಲ್ಲಿ ಸ್ಥಾಪಿಸಲಾಗಿದೆ. 










    ದೇವಾಲಯದ ಕಾರ್ಯಚಟುವಟಿಕೆಗಳು: 

    ಆರತಿಯ ಸಮಯ:
    ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಮತ್ತು ಗುರುವಾರ ಬೆಳಿಗ್ಗೆ 6:00 ಘಂಟೆಗೆ.  
    ಮಧ್ಯಾನ್ಹ ಆರತಿ : ಪ್ರತಿದಿನ ಮಧ್ಯಾನ್ಹ 11:30 ಕ್ಕೆ ಮತ್ತು ಗುರುವಾರ ಮಧ್ಯಾನ್ಹ 12:00 ಘಂಟೆಗೆ  
    ಧೂಪಾರತಿ : ಪ್ರತಿದಿನ ಸಂಜೆ 6:00 ಘಂಟೆಗೆ
    ಶೇಜಾರತಿ : ಪ್ರತಿದಿನ ರಾತ್ರಿ 7:45 ಕ್ಕೆ ಮತ್ತು ಗುರುವಾರ ರಾತ್ರಿ 9:15 ಕ್ಕೆ


    ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಪ್ರತಿನಿತ್ಯ ಗುಲಾಬಿ ನೀರಿನೊಂದಿಗೆ ಮಂಗಳ ಸ್ನಾನ ನೆರವೇರಿಸಲಾಗುತ್ತದೆ. ಪಂಚಾಮೃತ ಅಭಿಷೇಕವನ್ನು ಪಂಚಲೋಹದ ಸಾಯಿಬಾಬಾರವರ ವಿಗ್ರಹಕ್ಕೆ ಮಾಡಲಾಗುತ್ತದೆ. ಸೇವಾ ಶುಲ್ಕ 51/- ರುಪಾಯಿಗಳು.

    ಪ್ರತಿ ತಿಂಗಳ ಹುಣ್ಣಿಮೆಯಂದು ಮಧ್ಯಾನ್ಹ 12 ರಿಂದ 3 ಘಂಟೆಯವರೆಗೆ "ಅನ್ನ ಕುಟೀರ" ಯೋಜನೆಯ ಅಡಿಯಲ್ಲಿ ಅಂದು ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೂ ಅನ್ನದಾನ ಕಾರ್ಯಕ್ರಮವಿರುತ್ತದೆ. 

    ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6:45 ಕ್ಕೆ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. 

    ಪ್ರತಿ ತಿಂಗಳ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಸಂಜೆ 5 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.

    ಪ್ರತಿ ತಿಂಗಳ ಅಮಾವಾಸ್ಯೆಯಂದು ಸಂಜೆ 6 ಘಂಟೆಗೆ ದೀಪೋತ್ಸವ ಕಾರ್ಯಕ್ರಮವಿರುತ್ತದೆ. 

    ವಿಶೇಷ ಉತ್ಸವದ ದಿನಗಳು 
    1. ಶ್ರೀರಾಮನವಮಿ. 
    2. ಗುರುಪೂರ್ಣಿಮೆ. 
    3. ಶಿವರಾತ್ರಿ. 
    4. ವಿಜಯದಶಮಿ - ಮಂದಿರದ ವಾರ್ಷಿಕೋತ್ಸವದ ದಿವಸ. 
    5. ಹನುಮಜ್ಜಯಂತಿ. 
    ದೇಣಿಗೆ ನೀಡಲು ಮನವಿ: 

    ಈ ದೇವಾಲಯದ ಟ್ರಸ್ಟ್ ನ ವತಿಯಿಂದ "ಅನ್ನ ಕುಟೀರ" ಯೋಜನೆಯಡಿ ನಿರಂತರವಾಗಿ ನಡೆಯುತ್ತಿರುವ ಅನ್ನದಾನ ಕಾರ್ಯಕ್ರಮಕ್ಕೆ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಇಚ್ಚಿಸುವ ಭಕ್ತರು ತಮ್ಮ ಕಾಣಿಕೆಗಳನ್ನು ಚೆಕ್ ಅಥವಾ ಡಿಡಿ ರೂಪದಲ್ಲಿ "ಶ್ರೀ ಶ್ರೀ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಮಯೀ ಮಂದಿರ ಟ್ರಸ್ಟ್ (ನೋಂದಣಿ), ಬೆಂಗಳೂರು" ಇವರಿಗೆ ಸಂದಾಯವಾಗುವಂತೆ ಕೆಳಗೆ ನೀಡುವ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಟ್ರಸ್ಟ್ ನ ವತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ. 

    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

    ಸ್ಥಳ: 
    ವಿದ್ಯುಚ್ಚಕ್ತಿ ಮಂಡಳಿ ಪಕ್ಕ, ಶ್ರೀ ಧರ್ಮ ಶಾಸ್ತ ಬೇಕರಿ ಎದುರು.

    ವಿಳಾಸ: 
    ಶ್ರೀ ಶ್ರೀ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಮಯೀ ಮಂದಿರ ಟ್ರಸ್ಟ್ (ನೋಂದಣಿ),
    ನಂ.86, ನಿವೇಶನ ಸಂಖ್ಯೆ.12, ಸೊಣ್ಣೆನಹಳ್ಳಿ, ದೊಡ್ಡಬಸ್ತಿ ಮುಖ್ಯ ರಸ್ತೆ,
    ವಿದ್ಯುಚ್ಚಕ್ತಿ ಮಂಡಳಿ ಪಕ್ಕ, ಕೆಂಗೇರಿ ಹೋಬಳಿ, ಬೆಂಗಳೂರು-560 056 .ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿಗಳು:
    ಶ್ರೀ.ಸನತ್ ಕುಮಾರ್  / ಶ್ರೀಮತಿ. ರತ್ನ ಸನತ್ ಕುಮಾರ್.

    ದೂರವಾಣಿ:
    +91 95354 28048 / +91 98862 88609


    ಮಾರ್ಗಸೂಚಿ: 
    ಸೊಣ್ಣೆನಹಳ್ಳಿ ಶ್ರೀ ಧರ್ಮ ಶಾಸ್ತ  ಬೇಕರಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೊಡ್ಡಬಸ್ತಿ ಮುಖ್ಯ ರಸ್ತೆಯಲ್ಲಿ ಬೇಕರಿಯ ಎದುರು ಮತ್ತು ವಿದ್ಯುಚ್ಚಕ್ತಿ ಮಂಡಳಿ ಪಕ್ಕದಲ್ಲಿ ಇದೆ.  ಬಸ್ ಸಂಖ್ಯೆಗಳು: ಮಾರುಕಟ್ಟೆಯಿಂದ : 235-D  ಮೆಜಿಸ್ಟಿಕ್ ನಿಂದ: 235 K.

    ಕನ್ನಡ ಅನುವಾದ: ಶ್ರೀಕಂಠ ಶರ್ಮ 



    ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಉತ್ತರಾಯಣ ಸಾಯಿ ಮಂದಿರ, ಸಂಸ್ಕೃತಿ ಕೇಂದ್ರ, ಉತ್ತರಾಯಣ ಮಂದಿರ, ನಂ.3, 5ನೇ ಅಡ್ಡರಸ್ತೆ, ಸುಧೀಂದ್ರ ನಗರ, ಈಜುಕೊಳ ಬಡಾವಣೆ, ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ.

    ಈ ಮಂದಿರವು ಬೆಂಗಳೂರಿನ ಪ್ರಸಿದ್ದ ಬಡಾವಣೆಯಾದ ಮಲ್ಲೇಶ್ವರಂನ ಈಜುಕೊಳ ಬಡಾವಣೆಯಲ್ಲಿರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

    ಮಂದಿರದ ವಿಶೇಷತೆಗಳು:
    ಈ ಮಂದಿರವನ್ನು 1955ನೇ ಇಸವಿಯಲ್ಲಿ ಮಂದಿರದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ.ಎಸ್.ಆರ್.ಸುಬ್ರಮಣ್ಯಮ್ ರವರು ಪ್ರಾರಂಭಿಸಿದರು.   

    ಈ ಮಂದಿರದಲ್ಲಿ ಕಪ್ಪು ಶಿಲೆಯ ಗಣಪತಿ, ಸುಬ್ರಮಣ್ಯ, ಶ್ರೀಲಕ್ಷ್ಮೀ ವೆಂಕಟೇಶ್ವರ, ಈಶ್ವರ, ನಂದಿ, ಪಾರ್ವತಿ, ಭಕ್ತಾಂಜನೇಯ, ಪತ್ನಿ ಸಮೇತರಾದ ನವಗ್ರಹ ದೇವರುಗಳನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ, ಸುಂದರ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಇತ್ತೀಚಿಗೆ ಸ್ಥಾಪಿಸಲಾಗಿದೆ. 









      ದೇವಾಲಯದ ಸಮಯ: 
      ಬೆಳಿಗ್ಗೆ 6:30 ರಿಂದ 11:00 ಘಂಟೆಯವರೆಗೆ
      ಸಂಜೆ 5:30 ರಿಂದ ರಾತ್ರಿ 8:30 ರವರೆಗೆ

      ದೇವಾಲಯದಲ್ಲಿ ನಡೆಯುವ ಸೇವೆಯ ವಿವರಗಳು 
      1. ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 3/- ರುಪಾಯಿಗಳು.
      2. ಸಾಯಿಬಾಬಾರವರಿಗೆ ಪಂಚಾಮೃತ ಅಭಿಷೇಕವನ್ನು ಪ್ರತಿದಿನ ಮಾಡಲಾಗುತ್ತದೆ. ಸೇವಾ ಶುಲ್ಕ 70/- ರುಪಾಯಿಗಳು.
      3. ಸಾಯಿಬಾಬಾರವರಿಗೆ ರುದ್ರಾಭಿಷೇಕವನ್ನು ಪ್ರತಿದಿನ ಮಾಡಲಾಗುತ್ತದೆ. ಸೇವಾ ಶುಲ್ಕ 130/- ರುಪಾಯಿಗಳು.
      4. ಪ್ರತಿ ತಿಂಗಳ ತ್ರಯೋದಶಿಯಂದು ಸಂಜೆ 6 ಘಂಟೆಗೆ ಪ್ರದೋಷ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 35/- ರುಪಾಯಿಗಳು. 
      5. ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ಕ್ಕೆ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 40/- ರುಪಾಯಿಗಳು. 
      6. ಪ್ರತಿ ತಿಂಗಳ ಮೊದಲ ಶುಕ್ರವಾರದಂದು "ಅನ್ನ ಪ್ರಸನ್ನ" ಯೋಜನೆಯ ಅಡಿಯಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚಿಸುವ ಭಕ್ತರು 100/- ರುಪಾಯಿ ಅಥವಾ ಅದಕ್ಕೆ ಮೇಲ್ಪಟ್ಟು ಎಷ್ಟು ಬೇಕಾದರೂ ದೇಣಿಗೆಯನ್ನು ನೀಡಿ ಯೋಜನೆಯಲ್ಲಿ ಭಾಗವಹಿಸಬಹುದು. 
      7. ಪ್ರತಿ ತಿಂಗಳು ಗಣ ಹೋಮ ಸಹಿತ ಸಂಕಷ್ಟ ಚತುರ್ಥಿಯನ್ನು ಸಂಜೆ 5:30 ಕ್ಕೆ ಆಚರಿಸಲಾಗುತ್ತದೆ. ಸೇವಾ ಶುಲ್ಕ 50/- ರುಪಾಯಿಗಳು. 
      8. ಪ್ರತಿ ತಿಂಗಳ ಅಮಾವಾಸ್ಯೆಯಂದು ಸಂಜೆ 6 ಘಂಟೆಗೆ ಧನ್ವಂತರಿ ಹೋಮವನ್ನು ಏರ್ಪಡಿಸಲಾಗುತ್ತದೆ. ಸೇವಾ ಶುಲ್ಕ 35/- ರುಪಾಯಿಗಳು. 
      9. ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣೋತ್ಸವವನ್ನು ಮಂದಿರದಲ್ಲಿ ಆಚರಿಸಲಾಗುತ್ತದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಭಕ್ತರು 150/- ರುಪಾಯಿಗಳನ್ನು ನೀಡಿ ರಸೀದಿಯನ್ನು ಪಡೆಯತಕ್ಕದ್ದು. 
      10. ಶಿರಡಿ ಸಾಯಿಬಾಬಾರವರಿಗೆ ಸಾರ್ಥಕ ಗುರುವಾರ ಸೇವೆ (ಸಜ್ಜಿಗೆ ಸೇವೆ) ಯನ್ನು ಪ್ರತಿ ಗುರುವಾರ ಆಯೋಜಿಸಲಾಗಿದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಭಕ್ತರು 1 ಗುರುವಾರಕ್ಕೆ 50/- ರುಪಾಯಿಗಳು, 4 ಗುರುವಾರಗಳಿಗೆ 200/- ರುಪಾಯಿಗಳು, 12 ಗುರುವಾರಗಳಿಗೆ 500/- ರುಪಾಯಿಗಳು, 24 ಗುರುವಾರಗಳಿಗೆ 1000/- ರುಪಾಯಿಗಳು ಮತ್ತು 48 ಗುರುವಾರಗಳಿಗೆ 2000/- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
      11. ಪ್ರತಿ ದಿನ ಬೆಳಿಗ್ಗೆ 8:30 ಕ್ಕೆ ಲಕ್ಷ್ಮೀ ವೆಂಕಟೇಶ್ವರನಿಗೆ ಸಹಸ್ರನಾಮವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 20/- ರುಪಾಯಿಗಳು. 
      12. ಪ್ರತಿ ಕುಮಾರ ಷಷ್ಠಿಯ ದಿನ ಬೆಳಿಗ್ಗೆ 9 ಘಂಟೆಗೆ ಸುಬ್ರಮಣ್ಯ ದೇವರಿಗೆ ಸಹಸ್ರನಾಮವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 20/- ರುಪಾಯಿಗಳು.
      13. ಪ್ರತಿ ವರ್ಷದ ರಥ ಸಪ್ತಮಿಯಂದು ಬೆಳಿಗ್ಗೆ 9 ಘಂಟೆಗೆ ಸೂರ್ಯನಾರಾಯಣ ಸ್ವಾಮಿಗೆ ಸಹಸ್ರನಾಮವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 20/- ರುಪಾಯಿಗಳು.
       ವಿಶೇಷ ಉತ್ಸವದ ದಿನಗಳು:

      1. ಗಣೇಶ ಚತುರ್ಥಿ.
      2. ವೈಕುಂಠ ಏಕಾದಶಿ.
      3. ಶಿವರಾತ್ರಿ. 
      4. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
      ದೇವಾಲಯದಲ್ಲಿ ನಡೆಯುವ ಸಾಮಾಜಿಕ ಕಾರ್ಯಚಟುವಟಿಕೆಗಳು: 

      1. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ಘಂಟೆಯಿಂದ 7 ಘಂಟೆಯವರೆಗೆ ಯೋಗ ತರಗತಿಯನ್ನು ನಡೆಸಲಾಗುತ್ತಿದೆ. 
      2. ಪ್ರತಿ ದಿನ ಸಂಜೆ 6 ಘಂಟೆಗೆ ಸಾಮುಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಲಾಗುತ್ತಿದೆ. 
      3. ಪ್ರತಿ ಭಾನುವಾರ ಬೆಳಿಗ್ಗೆ 9 ಘಂಟೆಗೆ ಮಕ್ಕಳಿಂದ ಭಗವದ್ಗೀತಾ ಪಠಣವನ್ನು ನಡೆಸಲಾಗುತ್ತಿದೆ. 
      4. ದೇವಾಲಯದ ವತಿಯಿಂದ ದೇವಾಲಯದ ಪಕ್ಕದಲ್ಲೇ ಒಂದು ಛತ್ರವನ್ನು ಕಟ್ಟಲಾಗಿದ್ದು ಅದನ್ನು ಮದುವೆ, ಮುಂಜಿ ಮತ್ತಿತರ ಶುಭ ಸಮಾರಂಭಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. 
      ದೇಣಿಗೆ ನೀಡಲು ಕಳಕಳಿಯ ಮನವಿ:  

      ದೇವಾಲಯದ ಆಡಳಿತ ಮಂಡಳಿಯು 2011 ರಲ್ಲಿ 3 ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರ ವಿವರಗಳು ಈ ಕೆಳಕಂಡಂತೆ ಇವೆ:

      1. ದೇವಾಲಯದ ಒಳಾಂಗಣದಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ. 
      2. ಪತಂಜಲಿ ಯೋಗ ಮತ್ತು ಸ್ಮೃತಿ ಭವನದ ನಿರ್ಮಾಣದ ಯೋಜನೆ (PAYASM).
      3. ದೇವಾಲಯದ ಸಾಯಿಬಾಬಾ ವಿಗ್ರಹವನ್ನು ಹೊರತುಪಡಿಸಿ ಉಳಿದ ಎಲ್ಲಾ 7 ದೇವರುಗಳ ಗರ್ಭಗುಡಿಯಲ್ಲಿ ವಿಗ್ರಹಗಳ ಹಿಂಭಾಗ ಖಾಲಿ ಇರುವ ಜಾಗದಲ್ಲಿ ಹಿತ್ತಾಳೆಯ ಆಳೆತ್ತರದ ವಿಗ್ರಹಗಳನ್ನು ಸ್ಥಾಪಿಸುವ ಯೋಜನೆ.
      ಮೇಲಿನ ಈ ಎಲ್ಲಾ ಯೋಜನೆಗಳಿಗೆ ದೇಣಿಗೆ ನೀಡಲು ಬಯಸುವ ದಾನಿಗಳು ಚೆಕ್ ಅಥವಾ ಡಿ.ಡಿ.ರೂಪದಲ್ಲಿ "ಸಂಸ್ಕೃತಿ ಕೇಂದ್ರ, ಬೆಂಗಳೂರು" ಇವರ ಹೆಸರಿಗೆ ಸಂದಾಯವಾಗುವಂತೆ ದೇಣಿಗೆ ನೀಡಬಹುದು. 

      ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 
      ಸ್ಥಳ:
      ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಪಕ್ಕದಲ್ಲಿ. ಈಜುಕೊಳ ಬಡಾವಣೆ.  

      ವಿಳಾಸ:  
      ಶ್ರೀ ಉತ್ತರಾಯಣ ಸಾಯಿ ಮಂದಿರ, ಸಂಸ್ಕೃತಿ ಕೇಂದ್ರ, 
      ಉತ್ತರಾಯಣ ಮಂದಿರ, ನಂ.3, 5ನೇ ಅಡ್ಡರಸ್ತೆ, 
      ಸುಧೀಂದ್ರ ನಗರ, ಈಜುಕೊಳ ಬಡಾವಣೆ, 
      ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ.

      ಸಂಪರ್ಕಿಸಬೇಕಾದ ವ್ಯಕ್ತಿಗಳು: 
      ಶ್ರೀ.ಎಸ್.ಆರ್.ಮಂಜುನಾಥ್ / ಶ್ರೀಮತಿ.ಉಮಾ.

      ದೂರವಾಣಿ:  
      +91 80 2334 2145 / +91 98454 31954 / +91 95351 11637

      ಮಾರ್ಗಸೂಚಿ:
      ಈಜು ಕೊಳ ಬಡಾವಣೆ ಮುಖ್ಯ ರಸ್ತೆಯಲ್ಲಿ ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದ ಪಕ್ಕದಲ್ಲಿದೆ. ಬಸ್ ಗಳು ಮೆಜಿಸ್ಟಿಕ್ ನಿಂದ : 104 ಗಿರಿನಗರದಿಂದ : 36B, ವಿಜಯನಗರದಿಂದ: 176 ಮಹಾಲಕ್ಷ್ಮಿ ಬಡಾವಣೆಯಿಂದ: 187.  

      ಕನ್ನಡ ಅನುವಾದ: ಶ್ರೀಕಂಠ ಶರ್ಮ
      ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ  ಮಂದಿರ, ದತ್ತಾತ್ರೇಯ ದೇವಸ್ಥಾನದ ಮುಖ್ಯರಸ್ತೆ, ವಿವೇಕಾನಂದ ಬ್ಲಾಕ್, ಈಜುಕೊಳ ಬಡಾವಣೆ, ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ .

      ಈ ಮಂದಿರವು ಬೆಂಗಳೂರಿನ ಪ್ರಸಿದ್ದ ಬಡಾವಣೆಯಾದ ಮಲ್ಲೇಶ್ವರಂನ ಈಜುಕೊಳ ಬಡಾವಣೆಯಲ್ಲಿರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

      ಮಂದಿರದ ವಿಶೇಷತೆಗಳು:
      • ಈ ಮಂದಿರವನ್ನು 2005ನೇ ಇಸವಿಯಲ್ಲಿ ಶ್ರೀ.ರಮೇಶ್ ರವರು ಸ್ಥಳೀಯ ಆಟೋ ಚಾಲಕರ ಸಂಘದವರು ಮತ್ತು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಪ್ರಾರಂಭಿಸಿರುತ್ತಾರೆ.  
      • ಈ ಮಂದಿರದಲ್ಲಿ ಸುಂದರ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.
      • ಈ ಮಂದಿರವು ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಪಕ್ಕದಲ್ಲಿ ರಸ್ತೆಯ ಬದಿಯಲ್ಲಿ ಸಣ್ಣ ಗುಡಿಯನ್ನು ಕಟ್ಟಿ ಪ್ರತಿಷ್ಟಾಪನೆ ಮಾಡಿರುತ್ತಾರೆ.   





      ದೇವಾಲಯದಲ್ಲಿ ನಡೆಯುವ ಸೇವೆಯ ವಿವರಗಳು 
      1. ಪ್ರತಿ ಗುರುವಾರ ಸಂಜೆ 7:30 ಕ್ಕೆ ಸಾಯಿಬಾಬಾರವರಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
      2. ಎಲ್ಲಾ ಹಬ್ಬದ ದಿನಗಳಲ್ಲಿ ಸಾಯಿಬಾಬಾರವರಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. 

      ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

      ಸ್ಥಳ: 
      ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತು ಸಾಂಸ್ಕೃತಿಕ ಕೇಂದ್ರದ ಎದುರುಗಡೆ. ಈಜುಕೊಳ ಬಡಾವಣೆ.  

      ವಿಳಾಸ: 
      ಶ್ರೀ ಸಾಯಿಬಾಬಾ  ಮಂದಿರ, 
      ದತ್ತಾತ್ರೇಯ ದೇವಸ್ಥಾನದ ಮುಖ್ಯರಸ್ತೆ, ವಿವೇಕಾನಂದ ಬ್ಲಾಕ್, 
      ಈಜುಕೊಳ ಬಡಾವಣೆ, ಮಲ್ಲೇಶ್ವರಂ, ಬೆಂಗಳೂರು-560 003. ಕರ್ನಾಟಕ.

      ಸಂಪರ್ಕಿಸಬೇಕಾದ ವ್ಯಕ್ತಿಗಳು: 
      ಶ್ರೀ.ರಮೇಶ್ / ಶ್ರೀ.ಪ್ರಭು / ಶ್ರೀ.ಶ್ರೀನಾಥ್ - ಅರ್ಚಕರು.

      ದೂರವಾಣಿ: 
      +91 98809 58988 – ಶ್ರೀ.ಪ್ರಭು  +91 94480 01696 –ಶ್ರೀ.ಶ್ರೀನಾಥ್, ಅರ್ಚಕರು.

      ಮಾರ್ಗಸೂಚಿ:   
      ಈಜು ಕೊಳ ಬಡಾವಣೆ ಮುಖ್ಯ ರಸ್ತೆಯಲ್ಲಿ ದತ್ತಾತ್ರೇಯ ದೇವಸ್ಥಾನದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತು ಸಾಂಸ್ಕೃತಿಕ ಕೇಂದ್ರದ ಎದುರುಗಡೆ ಇದೆ. ಬಸ್ ಗಳು ಮೆಜಿಸ್ಟಿಕ್ ನಿಂದ : 104 ಗಿರಿನಗರದಿಂದ : 36B, ವಿಜಯನಗರದಿಂದ: 176 ಮಹಾಲಕ್ಷ್ಮಿ ಬಡಾವಣೆಯಿಂದ: 187.

      ಕನ್ನಡ ಅನುವಾದ: ಶ್ರೀಕಂಠ ಶರ್ಮ
      ಭಾರತದ ಪ್ರಖ್ಯಾತ ಕುಸ್ತಿಪಟು ಶ್ರೀ.ಅಮೋಲ್ ಬುಚಾಡೆ ಯವರಿಂದ ಸಾಯಿಬಾಬಾನಿಗೆ ಬೆಳ್ಳಿಯ ಗದೆಯ ಕಾಣಿಕೆ - 30ನೇ ಜನವರಿ 2011- ಕೃಪೆ: ಸಾಯಿಅಮೃತಧಾರಾ.ಕಾಂ 

      ಭಾರತದ ಪ್ರಖ್ಯಾತ ಕುಸ್ತಿಪಟು ಹಾಗೂ "ರುಸ್ತುಂ - ಎ - ಹಿಂದ್" ಪ್ರಶಸ್ತಿ ಪುರಸ್ಕೃತರಾದ ಪುಣೆಯ ಶ್ರೀ.ಅಮೋಲ್ ಬುಚಾಡೆ ಯವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರಿಗೆ ಬೆಳ್ಳಿಯ ಗದೆಯನ್ನು ಕಾಣಿಕೆಯಾಗಿ ಅರ್ಪಿಸಿದರು. ಕಾಣಿಕೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರೆ ಮೋರೆಯವರು ಸ್ವೀಕರಿಸಿದರು. ಆ ಸಂದರ್ಭದಲ್ಲಿ ಶಿರಡಿ ನಗರ ಪಂಚಾಯತಿಯ ಉಪಾಧ್ಯಕ್ಷ ಶ್ರೀ.ಶಿವಾಜಿ ಗೊಂಡ್ಕರ್ ಮತ್ತು ಶ್ರೀ.ಕಮಲಾಕರ್ ಕೋತೆಯವರು ಉಪಸ್ಥಿತರಿದ್ದರು.


      ಕನ್ನಡ ಅನುವಾದ: ಶ್ರೀಕಂಠ ಶರ್ಮ
      ಖ್ಯಾತ ಹಿಂದಿ ಅಭಿನೇತ್ರಿ ಶಿಲ್ಪಾ ಶೆಟ್ಟಿ ಶಿರಡಿ ಭೇಟಿ - 30ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ

      ಖ್ಯಾತ ಹಿಂದಿ ಅಭಿನೇತ್ರಿ ಶ್ರೀಮತಿ.ಶಿಲ್ಪಾ ಶೆಟ್ಟಿಯವರು ತಮ್ಮ ಪತಿ ಶ್ರೀ.ರಾಜ್ ಕುಂಡ್ರ ಮತ್ತು ತಮ್ಮ ಸಹೋದರಿ ಕುಮಾರಿ.ಶಮಿತಾ ಶೆಟ್ಟಿಯವರೊಡನೆ ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ದರ್ಶನ ಪಡೆದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀಮತಿ.ರಾಜಶ್ರೀ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ನಗರ ಪಂಚಾಯತಿಯ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರು ಕೂಡ ಉಪಸ್ಥಿತರಿದ್ದರು.  



      ಕನ್ನಡ ಅನುವಾದ: ಶ್ರೀಕಂಠ ಶರ್ಮ 

      Friday, January 28, 2011

      ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, 892/1, 1ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ಸರ್ಕಾರಿ ಆಸ್ಪತ್ರೆಯ ಹತ್ತಿರ, ಚೆನ್ನಕೇಶವನಗರ, ಬೆಂಗಳೂರು-560 100. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

      ಈ ಮಂದಿರವು ಬೆಂಗಳೂರಿನ ಹೊರವಲಯದ ಹೊಸೂರು ರಸ್ತೆಯಲ್ಲಿ ಸಿಗುವ ಚೆನ್ನಕೇಶವನಗರ ಎಂಬಲ್ಲಿರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

      ಮಂದಿರದ ವಿಶೇಷತೆಗಳು:

      ಈ ದೇವಾಲಯವನ್ನು ಅನೇಕ ಸಾಯಿಭಕ್ತರೆಲ್ಲರ ಸಹಕಾರದೊಂದಿಗೆ 30ನೇ ಮೇ 2004 ರಂದು ಪ್ರಾರಂಭಿಸಲಾಯಿತು.

      ಈ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಒಂದು ಸಣ್ಣ ಮತ್ತು ಒಂದು ದೊಡ್ಡದಾದ ಸುಂದರ ಅಮೃತ ಶಿಲೆಯ ವಿಗ್ರಹಗಳಿವೆ.  

      ದೇವಾಲಯದ ಹೊರಗಡೆ ಸಾಯಿಬಾಬಾರವರ ವಿಗ್ರಹಕ್ಕೆ ಎದುರಾಗಿ ನಂದಿಯ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.  

      ಪವಿತ್ರ ಧುನಿಯನ್ನು ದೇವಾಲಯದ ಹೊರ ಆವರಣದಲ್ಲಿ ಸ್ಥಾಪಿಸಲಾಗಿದೆ. 




        ದೇವಾಲಯದ ಕಾರ್ಯಚಟುವಟಿಕೆಗಳು:

        ದಿನನಿತ್ಯದ ಕಾರ್ಯಕ್ರಮಗಳು:

        ಆರತಿಯ ಸಮಯ:
        ಕಾಕಡಾ ಆರತಿ : ಬೆಳಿಗ್ಗೆ 6:30 ಕ್ಕೆ
        ಮಧ್ಯಾನ್ಹ ಆರತಿ : ಮಧ್ಯಾನ್ಹ 12 ಘಂಟೆಗೆ
        ಧೂಪಾರತಿ : ಸಂಜೆ 6:30 ಕ್ಕೆ
        ಶೇಜಾರತಿ: ರಾತ್ರಿ 8 ಘಂಟೆಗೆ  

        ಪ್ರತಿದಿನ ಬೆಳಿಗ್ಗೆ 7:30ಕ್ಕೆ ಪಂಚಲೋಹದ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಸೇವಾಶುಲ್ಕ 150/- ರುಪಾಯಿಗಳು. 

        ವಿಶೇಷ ಉತ್ಸವದ ದಿನಗಳು: 
        1. ಪ್ರತಿ ವರ್ಷದ 30ನೇ ಮೇ ಯಂದು ದೇವಾಲಯದ ವಾರ್ಷಿಕೋತ್ಸವ.
        2. ಶ್ರೀರಾಮನವಮಿ .
        3. ಗುರುಪೂರ್ಣಿಮ.
        4. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ). 
        5. ಪ್ರತಿ ವರ್ಷದ 1ನೇ ಜನವರಿ.
        ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


        ಸ್ಥಳ:
        ಸರ್ಕಾರಿ ಆಸ್ಪತ್ರೆಯ ಬಳಿ, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಹತ್ತಿರ.
        ವಿಳಾಸ:  
        ಶ್ರೀ ಶಿರಡಿ ಸಾಯಿ ಮಂದಿರ, 
        892/1, 1ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, 
        ಸರ್ಕಾರಿ ಆಸ್ಪತ್ರೆಯ ಹತ್ತಿರ, ಚೆನ್ನಕೇಶವನಗರ, 
        ಬೆಂಗಳೂರು-560 100. ಕರ್ನಾಟಕ.

        ಸಂಪರ್ಕಿಸಬೇಕಾದ ವ್ಯಕ್ತಿಗಳು:
        ಶ್ರೀ.ವೆಂಕಟೇಶ್/ ಶ್ರೀ.ರಮೇಶ್/ ಶ್ರೀ.ಲಕ್ಷ್ಮಣ್.


        ದೂರವಾಣಿ: 
        +91 98868 76576 / +91 98454 84804 / +91 97400 08021

        ಮಾರ್ಗಸೂಚಿ: 
        ಹೊಸೂರು ರಸ್ತೆಯಲ್ಲಿ ಸಿಗುವ ಹೊಸ ರೋಡ್ ಬಸ್ ನಿಲ್ದಾಣದ ಬಳಿ ಇಳಿದು ಹಿಂದೆ  5 ನಿಮಿಷ ನಡೆದರೆ  ಈ ಮಂದಿರ ಸಿಗುತ್ತದೆ. ಈ ಮಂದಿರವು ಸರ್ಕಾರಿ ಆಸ್ಪತ್ರೆಯ ಹತ್ತಿರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಪಕ್ಕದ ರಸ್ತೆಯಲ್ಲಿ ಇರುತ್ತದೆ. ಎಲೆಕ್ಟ್ರಾನಿಕ್ ಸಿಟಿಗೆ  ಹೋಗುವ ಎಲ್ಲಾ ಬಸ್ ಗಳು ಹೊಸ ರೋಡ್ ನಲ್ಲಿ ನಿಲ್ಲುತ್ತವೆ. 


        ಕನ್ನಡ ಅನುವಾದ: ಶ್ರೀಕಂಠ ಶರ್ಮ
        ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ರಾಹುಲ್ ಗಾಂಧಿ ಶಿರಡಿ ಭೇಟಿ - 28ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

        ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಶ್ರೀ.ರಾಹುಲ್ ಗಾಂಧಿಯವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ರೀ.ಮಾಣಿಕ್ ರಾವ್ ಠಾಕ್ರೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ, ಶ್ರೀಮತಿ.ರಾಜಶ್ರೀ ಸಾಸನೆ, ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೋಂಡಕರ್, ಶ್ರೀ.ಸುರೇಶ ವಾಬ್ಲೆ, ಶ್ರೀ.ಅಶೋಕ್ ಕಂಬೇಕರ್, ಶಿರಡಿ ನಗರ ಪಂಚಾಯತಿಯ ಅಧ್ಯಕ್ಷೆ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಉಪಸ್ಥಿತರಿದ್ದರು. 


        ಕನ್ನಡ ಅನುವಾದ: ಶ್ರೀಕಂಠ ಶರ್ಮ
        ಬೆಂಗಳೂರಿನ ಸಮರ್ಥನಂ ಟ್ರಸ್ಟ್ ನ ಅಂಧ ಮಕ್ಕಳಿಂದ ಅಮೋಘ ನೃತ್ಯ ಪ್ರದರ್ಶನ ಮತ್ತು ಬ್ರೈಲ್ ಸಾಯಿ ಸಚ್ಚರಿತೆ ಪಾರಾಯಣ  - ಕೃಪೆ: ಸಾಯಿಅಮೃತಧಾರಾ.ಕಾಂ

        ಬೆಂಗಳೂರಿನ ಸಮರ್ಥನಂ ಟ್ರಸ್ಟ್ ನ ಅಂಧ ಮಕ್ಕಳು ಇದೇ ತಿಂಗಳ 23ನೇ ಜನವರಿ 2011 , ಭಾನುವಾರದಂದು ಜೆ.ಪಿ.ನಗರದ ಶ್ರೀ ಸಾಯಿ ಧನ್ವಂತರಿ ಧ್ಯಾನ ಮಂದಿರದಲ್ಲಿ ಸಂಜೆ 6:00 ಘಂಟೆಯಿಂದ 7:30 ರ ವರೆಗೆ ಅಮೋಘ ನೃತ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದ ಎಲ್ಲಾ ಸಾಯಿಭಕ್ತರನ್ನು ಅಚ್ಚರಿಗೊಳಿಸಿದರು. ಅಷ್ಟೇ ಅಲ್ಲದೇ, ಒಬ್ಬ ಅಂಧ ಹೆಣ್ಣು ಮಗಳು ಬ್ರೈಲ್ ನಲ್ಲಿ ಆಂಗ್ಲ ಭಾಷೆಯಲ್ಲಿ ರಚಿತವಾಗಿರುವ ಸಾಯಿ ಸಚ್ಚರಿತೆಯ ಒಂದು ಭಾಗವನ್ನು ಪಾರಾಯಣ ಮಾಡಿದುದು ಆ ದಿನ ಸಂಜೆಯ ಒಂದು ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಡಾ.ಪಿ.ವಿ.ಶಿವಚರಣ್ ರವರು ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಾಯಿಭಕ್ತರು ಭಾಗವಹಿಸಿದ್ದರು. 





        ಕನ್ನಡ ಅನುವಾದ: ಶ್ರೀಕಂಠ ಶರ್ಮ 


        Thursday, January 27, 2011

        ಮಿಸ್ ಯುನಿವರ್ಸ್ ಜಮೀನ ನವರಟ್ಟೆ ಶಿರಡಿ ಭೇಟಿ - 27ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ

        ಮಿಸ್ ಯುನಿವರ್ಸ್ ಜಮೀನ ನವರಟ್ಟೆ ಯವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಜಮೀನ ನವರಟ್ಟೆಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. 



        ಕನ್ನಡ ಅನುವಾದ: ಶ್ರೀಕಂಠ ಶರ್ಮ 
        ಪದ್ಮಶ್ರೀ ಪ್ರಶಸ್ತಿ ವಿಜೇತ ಶ್ರೀ.ಕಾನುಭಾಯಿ ಟೈಲರ್ ಶಿರಡಿ ಭೇಟಿ - 27ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

        ಪದ್ಮಶ್ರೀ ಪ್ರಶಸ್ತಿ ವಿಜೇತ ಶ್ರೀ.ಕಾನುಭಾಯಿ ಟೈಲರ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನ ಪಡೆದರು. 


        ಕನ್ನಡ ಅನುವಾದ: ಶ್ರೀಕಂಠ ಶರ್ಮ

        Monday, January 24, 2011

        ಖ್ಯಾತ ಹಿಂದಿ ಚಿತ್ರನಟರಾದ  ರಾಜೇಶ್ ಖನ್ನಾ ಮತ್ತು  ಜೀನತ್ ಅಮಾನ್ ಶಿರಡಿ ಭೇಟಿ - 24ನೇ ಜನವರಿ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ 

        ಖ್ಯಾತ ಹಿಂದಿ ಚಿತ್ರನಟ ರಾಜೇಶ್ ಖನ್ನಾ ಹಾಗೂ ಖ್ಯಾತ ಹಿಂದಿ ಚಿತ್ರನಟಿ ಜೀನತ್ ಅಮಾನ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 



        ಕನ್ನಡ ಅನುವಾದ: ಶ್ರೀಕಂಠ ಶರ್ಮ

        Sunday, January 23, 2011

        ಸಾಯಿಬಾಬಾರವರ ಪಾದಧೂಳಿಯಿಂದ ಪವಿತ್ರವಾದ ಸ್ಥಳ - ನೀಮಗಾವ್ - ಕೃಪೆ: ಸಾಯಿಅಮೃತಧಾರಾ.ಕಾಂ

        ಸಾಯಿಬಾಬಾರವರು ತಮ್ಮ ಜೀವಿತ ಕಾಲದಲ್ಲಿ  ಶಿರಡಿಯಿಂದ ಕೇವಲ 3 ಕಿಲೋಮೀಟರ್ ಗಳ ದೂರವಿದ್ದ ನೀಮಗಾವ್ ಗೆ ಅನೇಕ ಬಾರಿ ಹೋಗಿ ಬರುತ್ತಿದ್ದರೆಂದು ಸಾಯಿ ಸಚ್ಚರಿತೆಯಲ್ಲಿ ಉಲ್ಲೇಖಿಸಲಾಗಿದೆ. ಅದರ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ.

        ನಾನಾ ಸಾಹೇಬ್ ಡೆನ್ಗ್ಲೆಯವರ ಮನೆ:

        ನಾನಾ ಸಾಹೇಬ್ ಡೆನ್ಗ್ಲೆಯವರು ಸಾಯಿಬಾಬಾರವರಿಗೆ ನಿದ್ರೆ ಮಾಡಲು ಅನುಕೂಲವಾಗುವಂತೆ ಮರದ ಹಲಿಗೆಯನ್ನು ತಂದು ಕೊಟ್ಟರು. ನಾನಾ ಸಾಹೇಬ್ ಡೆನ್ಗ್ಲೆಯವರು ಸಾಯಿಬಾಬಾರವರ ಪೂಜೆಯನ್ನು ಮಾಡಲು ಅನೇಕ ಬಾರಿ ಪ್ರಯತ್ನ ಪಟ್ಟರು. ಆದರೆ ಸಾಯಿಬಾಬಾರವರು ಅದಕ್ಕೆ ಅನುಮತಿ ನೀಡದೆ ದ್ವಾರಕಾಮಾಯಿಯಲ್ಲಿದ್ದ ಮರದ ಕಂಭಕ್ಕೆ ಪೂಜಿಸುವಂತೆ ಹೇಳಿದರು. ಈಗ ಆ ಕಂಭಕ್ಕೆ ಕೆಂಪು ಬಣ್ಣವನ್ನು ಬಳಿಯಲಾಗಿದೆ. ದಾಸಗಣುರವರು ತಮ್ಮ ಭಕ್ತ ಲೀಲಾಮೃತದ ೩೧ ನೇ ಅಧ್ಯಾಯದಲ್ಲಿ ಸಾಯಿಬಾಬಾರವರು ನೀರಿನಿಂದ ದೀಪ ಉರಿಸಿದ ಬಗ್ಗೆ ವಿವರಣೆ ನೀಡಿದ್ದಾರೆ. ಅದು ಹೀಗಿದೆ. ಒಮ್ಮೆ ಶಿರಡಿಯ ಗಾಣಿಗರು ಬಾಬಾರವರಿಗೆ ದೀಪವನ್ನು ಹಚ್ಚಲು ಎಣ್ಣೆಯನ್ನು ಕೊಡಲಿಲ್ಲ.  ಅಲ್ಲದೇ ಸಾಯಿಬಾಬಾರವರ ಹಿಂದೆಯೇ ಮಸೀದಿಗೆ ತೆರಳಿ ಬಚ್ಚಿಟ್ಟುಕೊಂಡು ಮುಂದೆ ಏನು ನಡೆಯುತ್ತದೆ ಎಂಬ ಕುತೂಹಲದಿಂದ ನೋಡುತ್ತಿದ್ದರು. ಬಾಬಾರವರು ತಲೆಯನ್ನೇ ಕೆಡಿಸಿಕೊಳ್ಳದೆ ಬರಿಯ ನೀರನ್ನೇ ಹಣತೆಯಲ್ಲಿ ಹಾಕಿದರು. ಇದನ್ನು ನೋಡಿದ ವರ್ತಕರು ಬಾಬಾರವರಿಗೆ ಹುಚ್ಚು ಹಿಡಿದಿದೆ ಎಂದು ತಿಳಿದುಕೊಂಡರು. ಆದರೆ ನಾನಾ ಸಾಹೇಬ್ ಡೆನ್ಗ್ಲೆ ಅದಕ್ಕೆ ಒಪ್ಪದೇ, "ಇವರ ಶಕ್ತಿಯನ್ನು ಶ್ರೀಹರಿ ಮಾತ್ರ ಅಳೆಯಲು ಸಾಧ್ಯ. ವಜ್ರವು ಕಸದ ರಾಶಿಯಲ್ಲಿ ಬಿದ್ದಿದ್ದರೆ ಅದನ್ನು ಕಲ್ಲು ಎಂದು ಕರೆಯಲು ಸಾಧ್ಯವೇ?" ಎಂದು ನುಡಿದರು. ಸಾಯಿಯವರು ಬರಿಯ ನೀರಿನಿಂದಲೇ ದೀಪವನ್ನು ಹಚ್ಚಿ ಇಡೀ ರಾತ್ರಿಯೆಲ್ಲ ಅವುಗಳು ಉರಿಯುವಂತೆ ಮಾಡಿದರು. ಇದನ್ನು ಕಂಡು ಆಶ್ಚರ್ಯಗೊಂಡ ನಾನಾ ಸಾಹೇಬ್ ಡೆನ್ಗ್ಲೆಯವರು ಬಾಬಾರವರ ಪಾದಪದ್ಮಗಳಿಗೆ ಶರಣಾದರು. ನಂತರ ಸಾಯಿಬಾಬಾರವರ ಅನನ್ಯ ಭಕ್ತರಾದರು. ಕೆಳಗೆ ಚಿತ್ರದಲ್ಲಿ ನೋಡುವ ಈ ನೀಮಗಾವ್ ನ ಮನೆಯಲ್ಲಿ ನಾನಾ ಸಾಹೇಬ್ ಡೆನ್ಗ್ಲೆ ಮತ್ತು ಅವರ ಸಹೋದರ ಬಾಳಾ ಸಾಹೇಬ್ ಡೆನ್ಗ್ಲೆಯವರು ವಾಸವಾಗಿದ್ದರು. ಇದು ಶಿರಡಿಯಿಂದ 3 ಕಿಲೋಮೀಟರ್ ದೂರದಲ್ಲಿ ಕೊಪರ್ಗಾವ್ ಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಸಾಯಿಬಾಬಾರವರು ಶಿರಡಿಯನ್ನು ಬಿಟ್ಟು ಹೋಗುತ್ತಿದ್ದುದು ಬಹಳ ಅಪರೂಪ. ಆದರೆ, ಕೆಲವು ದಿನ ಮಧ್ಯಾನ್ಹದ ವೇಳೆ ನೀಮಗಾವ್ ನಲ್ಲಿದ್ದ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಗೆ ಹೋಗುತ್ತಿದ್ದರು. ಬಾಳಾ ಸಾಹೇಬ್ ಡೆನ್ಗ್ಲೆ ಯವರ ತಮ್ಮನಾದ ನಾನಾ ಸಾಹೇಬ್ ಡೆನ್ಗ್ಲೆ ಯವರಿಗೆ ಎರಡನೇ ಮದುವೆಯಾದರೂ ಕೂಡ  ಮಕ್ಕಳಿರಲಿಲ್ಲ. ಸಾಯಿಬಾಬಾರವರ ಆಶೀರ್ವಾದದಿಂದ ಅವರಿಗೆ ಮಗನು ಹುಟ್ಟಿದನು. ಆ ಕ್ಷಣದಿಂದ ನಾನಾ ಸಾಹೇಬ್ ಡೆನ್ಗ್ಲೆಸಾಯಿಬಾಬಾರವರ ಅನನ್ಯ ಭಕ್ತನಾದನು. ಸಾಯಿಬಾಬಾರವರ ಈ ಲೀಲೆ ಎಲ್ಲೆಡೆ ಹಬ್ಬಿ ಸಾಯಿಬಾಬಾರವರ ಬಳಿ ಅನೇಕ ಜನರು ಹುಡುಕಿಕೊಂಡು ಬರುವಂತೆ ಆಯಿತು. ಅಷ್ಟೇ ಅಲ್ಲದೇ, ನಾನಾ ಸಾಹೇಬ್ ಚಂದೋರ್ಕರ್ ಮತ್ತು ಕೇಶವ ಚಿದಂಬರ ಮುಂತಾದವರು ಸಾಯಿಬಾಬಾರವರ ಬಳಿ ಬರುವಂತೆ ಮಾಡಿತು (ಸಾಯಿ ಸಚ್ಚರಿತ್ರೆ 5ನೇ ಅಧ್ಯಾಯ). ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆತನ ಬಹಳ ಹೆಸರುವಾಸಿಯಾಗಿತ್ತು. ಏಕೆಂದರೆ, ನಾನಾ ಸಾಹೇಬ್ ಡೆನ್ಗ್ಲೆ ಯವರ ಮುತ್ತಾತನವರಾದ ಶ್ರೀ.ತ್ರಯಂಬಕ ಡೆನ್ಗ್ಲೆ ಯವರು ಸುಮಾರು ಕ್ರಿ.ಶ.1800 ರಲ್ಲಿ ಪೇಶ್ವೆಯಾಗಿದ್ದು ಸುಮಾರು 20000 ಪದಾತಿ ಸೈನ್ಯವನ್ನು ಹೊಂದಿದ್ದರು ಮತ್ತು ಅವರ ಶೌರ್ಯಕ್ಕೆ ಊರಿನ ಜನರಿಂದ ಸನ್ಮಾನಿತರಾಗಿದ್ದರು. 

        ನಾನಾ ಸಾಹೇಬ್ ಡೆನ್ಗ್ಲೆಯವರ ಮನೆಯ ಹೆಬ್ಬಾಗಿಲು:

        ಈ ಹೆಬ್ಬಾಗಿಲುಗಳು ನಾನಾ ಸಾಹೇಬ್ ಡೆನ್ಗ್ಲೆ ಯವರ ಕೋಟೆಗೆ ಮುಖ್ಯದ್ವಾರವಾಗಿತ್ತು. ಆದರೆ ಈಗ  ಇವು ಅವನತಿಯ ಸ್ಥಿತಿಯಲ್ಲಿವೆ. ಈ ತರಹದ ಎರಡು ಬಾಗಿಲುಗಳು ಇದ್ದು ಸಾಯಿಬಾಬಾರವರು ಬಂದಾಗ ಅವು ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತಿದವೆಂದು ಮತ್ತು ಬಾಬಾರವರನ್ನು ಸ್ವಾಗತಿಸುತ್ತಿದವೆಂದು ತಿಳಿದುಬಂದಿದೆ. ಇದರಿಂದ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಯವರಿಗೆ ಆಶ್ಚರ್ಯವಾಗಿ ತಮ್ಮ ಮನೆಗೆ ಒಬ್ಬ ಮಹಾ ಸತ್ಪುರುಷ ಬಂದಿರುವನೆಂದು ಅರ್ಥವಾಯಿತೆಂದು ತಿಳಿದುಬಂದಿದೆ. 

        ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಪವಿತ್ರ ಸ್ಥಳ:

        ಸಾಯಿಬಾಬಾರವರು ನೀಮಗಾವ್ ಗೆ ಬಂದಾಗ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಯ ಒಳಗಡೆ ಹೋಗುತ್ತಿರಲಿಲ್ಲವೆಂದು ಮತ್ತು  ಮನೆಯ ಹೊರಭಾಗದಲ್ಲಿದ್ದ ಖಾಲಿ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದರೆಂದು ಬಾಳಾ ಸಾಹೇಬ್ ಡೆನ್ಗ್ಲೆ ಯವರ ವಂಶಸ್ಥರಾದ ಶ್ರೀ.ವಸಂತ್ ರಾವ್ ರವರು ಹೇಳುತ್ತಾರೆ. ಅದರ ಗುರುತಿಗೊಸ್ಕರ ಆ ಜಾಗದಲ್ಲಿ ಪವಿತ್ರ ತುಳಸಿ ಬೃಂದಾವನವನ್ನು ಇರಿಸಿದ್ದರು. ಆದರೆ ಈಗ ಆ ಜಾಗದಲ್ಲಿ ತುಳಸಿ ಬೃಂದಾವನ ಕಾಣಿಸುವುದಿಲ್ಲ. ಅದರ ಗುರುತಿಗೊಸ್ಕರ ಒಂದು ಕಲ್ಲನ್ನು ಅಲ್ಲಿ ಇರಿಸಲಾಗಿದೆ. ಅದರ ಚಿತ್ರವನ್ನು ಈ ಕೆಳಗೆ ಸಾಯಿಭಕ್ತರ ಅನುಕೂಲಕ್ಕಾಗಿ ಕೊಡಲಾಗಿದೆ. 


        ಪವಿತ್ರ ಬೇವಿನ ಮರ:

        ಈ ಪವಿತ್ರ ಮರವು ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿದೆ. ಈ ಬೇವಿನ ಮರವು ಸಾಯಿಬಾಬಾರವರು ಮಹಾಸಮಾಧಿಯಾದ 20 ವರ್ಷಗಳ ಬಳಿಕ ತನ್ನಷ್ಟಕ್ಕೆ ತಾನೇ ಉದ್ಭವವಾಯಿತೆಂದು ತಿಳಿದುಬಂದಿದೆ. ಇದರ ಕೊಂಬೆಗಳು ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಕಡೆಗೆ ಬೆಳೆಯುತ್ತಿದ್ದು ಇದರ ಎಲೆಗಳು ಸದಾ ಹಸಿರಾಗಿರುವುದಷ್ಟೇ ಅಲ್ಲದೇ ಬಹಳ ಸಿಹಿಯಾಗಿರುವುದು. 

        ಸಾಯಿಬಾಬಾ ದೇವಾಲಯ:

        ಸಾಯಿಬಾಬಾರವರು ನೀಮಗಾವ್ ಗೆ ಬಂದ ನೆನಪಿಗೊಸ್ಕರವಾಗಿ ನಾನಾ ಸಾಹೇಬ್ ಡೆನ್ಗ್ಲೆ ಯವರ ಮನೆಯ ಪಕ್ಕದಲ್ಲಿ ಈ ಭವ್ಯವಾದ ಸಾಯಿಬಾಬಾರವರ ಮಂದಿರವನ್ನು ನಿರ್ಮಿಸಲಾಗುತ್ತಿದೆ. 


        ಖಂಡೋಬ ಮಂದಿರ: 

        ಈ ಮಂದಿರವು ನೀಮಗಾವ್ ನ ಹೊರಭಾಗದಲ್ಲಿ ಪ್ರಾರಂಭದಲ್ಲಿಯೇ ಇದೆ. ಈ ಮಂದಿರದ ಒಳಗಡೆ ಸಾಯಿಬಾಬಾರವರು ಬಂದು ಕುಳಿತುಕೊಳ್ಳುತ್ತಿದ್ದ ಸ್ಥಳವಿದ್ದು ಅದರ ನೆನಪಿಗಾಗಿ ಗ್ರಾಮಸ್ಥರು ಆ ಜಾಗದಲ್ಲಿ ಸಾಯಿಬಾಬಾರವರ ವಿಗ್ರಹವನ್ನು ಮತ್ತು ಪವಿತ್ರ ಪಾದುಕೆಗಳನ್ನು ಸ್ಥಾಪಿಸಿದ್ದಾರೆ. 


        ಚಾವಡಿ: 

        ಇದು ಖಂಡೋಬ ಮಂದಿರದ ಪಕ್ಕದಲ್ಲಿ ಇದೆ. ಈಗ ಇದು ಶಿಥಿಲಾವಸ್ಥೆಯಲ್ಲಿದೆ . ಸಾಯಿಬಾಬಾರವರು ಈ ಸ್ಥಳದಲ್ಲಿ  ಸ್ವಲ್ಪ ಕಾಲ ನಡೆದಾಡುತ್ತಿದ್ದರೆಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಒಂದು ಶಿಲಾಶಾಸನವಿದ್ದು ಅದು ಕ್ರಿ.ಶ.1209 ಇಸವಿಗೆ ಸೇರಿದ್ದಾಗಿರುತ್ತದೆ. 




        ಕ್ರಿ.ಶ.1209 ಕ್ಕೆ ಸೇರಿದ ಶಿಲಾಶಾಸನ

        ಪವಿತ್ರ ಕೊಳ: 

        ಈ ಕೊಳವು ನೀಮಗಾವ್ ನ ಹೊರಭಾಗದಲ್ಲಿ ಖಂಡೋಬ ಮಂದಿರದಿಂದ ಸ್ವಲ್ಪವೇ ದೂರದಲ್ಲಿರುತ್ತದೆ. ಇದರಲ್ಲಿ ಮೆಟ್ಟಿಲುಗಳನ್ನು ನಾವು ಕಾಣಬಹುದು. ಸಾಯಿಬಾಬಾರವರು ಈ ಕೊಳದಿಂದ ನೀರನ್ನು ತೆಗೆದುಕೊಂಡು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಖಂಡೋಬ ಮಂದಿರಕ್ಕೆ ಹೋಗುತ್ತಿದ್ದರೆಂದು ಹೇಳಲಾಗುತ್ತದೆ. ಈ ಕೊಳದ ಪಕ್ಕದಲ್ಲಿ ಬಾಬಾರವರು ಕೈಕಾಲು ತೊಳೆದುಕೊಳ್ಳುತ್ತಿದ್ದ ಸ್ಥಳವಿರುತ್ತದೆ. ಅಲ್ಲದೇ, ಈ ಕೊಳದಲ್ಲಿರುವ ಮೆಟ್ಟಿಲುಗಳನ್ನು ಇಳಿದರೆ ಸುರಂಗ ಮಾರ್ಗವಿದ್ದು ಆ ಸುರಂಗ ಮಾರ್ಗವು ಶಿರಡಿಗೆ ಸಮೀಪದಲ್ಲಿರುವ ರೂಯಿ ಎಂಬಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ಸ್ಥಳವನ್ನು ನೀಮಗಾವ್ ನ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಶತ್ರುಗಳ ಆಕ್ರಮಣವಾದಾಗ ಬಚ್ಚಿಟ್ಟುಕೊಳ್ಳಲು ಉಪಯೋಗಿಸುತ್ತಿದ್ದರೆಂದು ತಿಳಿದುಬಂದಿದೆ. ಸಾಯಿಬಾಬಾರವರ ಸ್ಪರ್ಶದಿಂದ ಈ ಕೊಳವು ಸದಾ ನೀರಿನಿಂದ ತುಂಬಿರುತ್ತಿದ್ದು ಆ ನೀರು ನೀಮಗಾವ್ ನ ಗ್ರಾಮದ ಜನರಿಗೆಲ್ಲ ಸಾಕಾಗುತ್ತಿತ್ತು ಎಂದು ತಿಳಿದುಬಂದಿದೆ. ಆದರೆ ಈ ಕೊಳವನ್ನು ಈಗ ಯಾರು ಉಪಯೋಗಿಸುತ್ತಿಲ್ಲ. 



        ಕನ್ನಡ ಅನುವಾದ: ಶ್ರೀಕಂಠ ಶರ್ಮ
        ಶಿರಡಿ ಮಿಂಚು ಸುದ್ದಿಗಳ ವರದಿಗಾರ - ಶ್ರೀ.ಜ್ಯೋತಿ ಪ್ರಕಾಶ್ ಮಹಾಪಾತ್ರ  - ಕೃಪೆ: ಸಾಯಿ ಅಮೃತಧಾರಾ.ಕಾಂ 


        ಶ್ರೀ.ಜ್ಯೋತಿ ಪ್ರಕಾಶ್ ಮಹಾಪಾತ್ರ ರವರು 7ನೇ ಡಿಸೆಂಬರ್ 1962 ರಂದು ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಸದಾಶಿವ ಮಹಾಪಾತ್ರ. ಇವರು ಗಣಕ ಯಂತ್ರ ವಿಜ್ಞಾನದಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಗಳಿಸಿರುತ್ತಾರೆ.  ಸುಮಾರು ಹನ್ನೆರಡು ವರ್ಷಗಳ ಕಾಲ ಭಾರತೀಯ ಲೋಹ ಮತ್ತು ಕಬ್ಬಿಣ ಸಂಸ್ಥೆ (IMFA ಗ್ರೂಪ್) ಯಲ್ಲಿ ವಿವಿಧ ಹುದ್ದೆಗಳಲ್ಲಿ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಸೇವೆರ್ಯನ್ನು ಸಲ್ಲಿಸಿರುತ್ತಾರೆ. ನಂತರ ಎರಡು ವರ್ಷಗಳ ಕಾಲ OTV ವಾಹಿನಿಯಲ್ಲಿ ಉಪ ಸಂಪಾದಕರಾಗಿ ಕೆಲಸ ನಿರ್ವಹಿಸಿರುತ್ತಾರೆ. 

        ಪ್ರಸ್ತುತ ಇವರು ಒರಿಸ್ಸಾ ರಾಜ್ಯದ ಪ್ರಮುಖ ಸುದ್ದಿ ವಾಹಿನಿಯಾದ "ನಕ್ಷತ್ರ ನ್ಯೂಸ್" (http://www.naxatranews.com) ನಲ್ಲಿ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಾ ಸಾಯಿಬಾಬಾರವರ ಪುಣ್ಯಕ್ಷೇತ್ರವಾದ ಶಿರಡಿಯಲ್ಲಿ ದಿನನಿತ್ಯ ನಡೆಯುವ ಎಲ್ಲಾ ವಿಷಯಗಳ ವರದಿಯನ್ನು ತಲುಪಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿದ್ದಾರೆ. ಅಲ್ಲದೇ, ಒರಿಸ್ಸಾ ರಾಜ್ಯದ ಪ್ರಮುಖ ಪತ್ರಿಕೆಯಾದ "ಖಬರಾ" ಪತ್ರಿಕೆಯಲ್ಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಾ ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ ಪ್ರಾಂತ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. 

        ಇವರು ಒಂದು ಸೋನಿ 3 ಸಿಸಿಡಿ ಕ್ಯಾಮೆರಾ (PD), ಒಂದು ಕಾರ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಮತ್ತು ಇತರ ಸುದ್ದಿ ಸಂಗ್ರಹಕ್ಕೆ ಬೇಕಾದ ಎಲ್ಲಾ ಅಗತ್ಯ ಸಲಕರಣೆಗಳನ್ನು ಹೊಂದಿದ್ದಾರೆ. 

        ಇವರು ಶ್ರೀಮತಿ.ಜಯಂತಿ ಮಹಾಪಾತ್ರ ರವರನ್ನು ವಿವಾಹವಾಗಿ ಶ್ರೀ.ಜಿಗ್ಯಾಂಶು ಎಂಬ ಸುಂದರ ಮಗನೊಡನೆ ಸುಖೀ ಜೀವನವನ್ನು ಶಿರಡಿಯಲ್ಲಿ ನಡೆಸುತ್ತಿದ್ದಾರೆ. ಇವರ ಧರ್ಮಪತ್ನಿಯವರು ಕೂಡ ಉತ್ತಮ ಬರಹಗಾರ್ತಿ ಮತ್ತು ಅನುವಾದಕಿಯಾಗಿದ್ದು ಅನೇಕ ಸಾಯಿಬಾಬಾರವರ ಪುಸ್ತಕಗಳನ್ನು ಓರಿಯಾ ಭಾಷೆಗೆ ಅನುವಾದ ಮಾಡಿದ್ದಾರೆ. 

        ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ. 


        ವಿಳಾಸ: 
        "ಸಾಯಿ ಪುಷ್ಪಂ", ಗುರುಕುಲ ನಗರ, 
        ಶ್ರೀಖಂಡ್ ಬಸ್ತಿ, ನಗರ - ಮನಮಾಡ್ ಹೆದ್ದಾರಿ, 
        ಸಾಕುರಿ, ಶಿರಡಿ,ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ.

        ದೂರವಾಣಿ:  
        +91 94043 24744 

        ಈ ಮೇಲ್ ವಿಳಾಸ: 
        shirdikhabar@gmail.com, jmshirdi@gmail.com


        ಕನ್ನಡ ಅನುವಾದ: ಶ್ರೀಕಂಠ ಶರ್ಮ
        ಸಿಕಂದರಾಬಾದ್ ನ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಮಂದಿರ, 8-2-21, ಮಾರ್ಕೆಟ್ ರಸ್ತೆ, ಕೊನೇರು, ಸಿಕಂದರಾಬಾದ್-500 003, ಆಂಧ್ರಪ್ರದೇಶ - ಕೃಪೆ: ಸಾಯಿ ಅಮೃತಧಾರಾ.ಕಾಂ 

        ಈ ಮಂದಿರವನ್ನು ಸಾಯಿಭಕ್ತ ದಿವಂಗತ ಜಿ.ವಿ.ಆರ್.ನಾಯ್ಡು ರವರು "ಶ್ರೀ ಸಾಯಿಬಾಬಾ ಸೇವಾ ಸಮಾಜಂ" ಎಂಬ ಹೆಸರಿನಲ್ಲಿ 1962 ರಲ್ಲಿ ನೋಂದಣಿ ಮಾಡಿಸಿದರು ಮತ್ತು ಅದರ ಸಂಸ್ಥಾಪಕ ಅಧ್ಯಕ್ಷರಾದರು. ಇದಕ್ಕೂ ಮುಂಚೆ ೧೯೩೮ ರಿಂದಲೇ ತಮ್ಮ ಮನೆಯಲ್ಲೇ  ಸಾಯಿಬಾಬಾ ರವರ ಪೂಜೆಯನ್ನು ಮಾಡುತ್ತಿದ್ದರು. 1982ನೇ ಇಸವಿಯಲ್ಲಿ ರಾಜ್ಯಸರ್ಕಾರದ ಅನುಮೋದನೆಯೊಂದಿಗೆ ನೋಂದಣಿ ಮಾಡಿಸಿ ಸಾಯಿಬಾಬಾ ಮಂದಿರವನ್ನು ಪ್ರಾರಂಭಿಸಿದರು. 

        ಈ ಮಂದಿರದಲ್ಲಿ ಸುಮಾರು 7 ಅಡಿ ಉದ್ದವಿರುವ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು 25 ನೇ ಏಪ್ರಿಲ್ 1994 ರಂದು ಬೆಂಗಳೂರಿನ ದ್ವಾರಕಾ ಪೀಠದ ಜಗದ್ಗುರುಗಳಾದ ಡಾ.ವಿದ್ಯಾರಣ್ಯ ತೀರ್ಥ ಸ್ವಾಮಿಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಈ ಸಮಾರಂಭದಲ್ಲಿ ಸಾವಿರಾರು ಸಾಯಿಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಈ ಮಂದಿರವನ್ನು ಶ್ರೀ.ಶ್ರೀಪತಿ ಪಾಂಡುರಂಗ ರಾವ್ (ಅಧ್ಯಕ್ಷರು), ಶ್ರೀ.ನಂದುರಿ ದ್ವಾರಕಾನಾಥ್ (ಕಾರ್ಯದರ್ಶಿ), ಶ್ರೀ.ಸುನೀಲ್ ಸಿದ್ದಂ ಶೆಟ್ಟಿ ಯವರು ಬಹಳ ಉತ್ತಮವಾಗಿ ಕಟ್ಟಿಸಿರುವುದೇ ಅಲ್ಲದೇ ಅದನ್ನು ಬಹಳ ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ ಕೂಡ.

        ಈ ಮಂದಿರದಲ್ಲಿನ ಕೆಲವು ವಿಶೇಷತೆಗಳನ್ನು ಈ ಕೆಳಗೆ ಕೊಡಲಾಗಿದೆ.

        1. ಧ್ಯಾನ ಮಾಡಲು ಮತ್ತು ಸಾಯಿ ಸಚ್ಚರಿತೆ ಪಾರಾಯಣ ಮಾಡಲು ಸುಸಜ್ಜಿತ ಧ್ಯಾನ ಮಂದಿರ.
        2. ವಿಶಾಲವಾದ ಮತ್ತು ಆರತಿಯ ಸಮಯದಲ್ಲಿ ಹೆಚ್ಚು ಭಕ್ತರು ಕೂಡಬಹುದಾದ ಪ್ರಾರ್ಥನೆಯ ಸ್ಥಳ. 
        3. ಪವಿತ್ರ ಧುನಿಯನ್ನು 8 ನೇ ಆಗಸ್ಟ್ 1997 ರಂದು ಸಾಯಿಧಾಂ ನ ಪರಮ ಪೂಜ್ಯ ಶ್ರೀ.ಶ್ರೀ.ಪ್ರಭುಜಿ ಸ್ವಾಮಿಜಿಯವರು ಉದ್ಘಾಟಿಸಿದರು. 
        4. ಸಾಯಿಬಾಬಾರವರ ನೈವೇದ್ಯಕ್ಕೆ ಮತ್ತು ನಿತ್ಯ ಅನ್ನದಾನಕ್ಕೆ ಅನುಕೂಲವಾಗುವಂತೆ ವಿಶಾಲವಾದ ಅಡಿಗೆ ಮನೆ. 
        5. ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ವೈದ್ಯಕೀಯ ಕೇಂದ್ರ. 


        ದೇವಾಲಯದ ಕಾರ್ಯಚಟುವಟಿಕೆಗಳು 

        ದಿನನಿತ್ಯದ ಕಾರ್ಯಕ್ರಮಗಳು:

        ಆರತಿಯ ಸಮಯ:
        ಕಾಕಡಾ ಆರತಿ : ಬೆಳಿಗ್ಗೆ 5:15 ಕ್ಕೆ  
        ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
        ಧೂಪಾರತಿ: ಸಂಜೆ 6:30 ಕ್ಕೆ
        ಶೇಜಾರತಿ: ರಾತ್ರಿ 9 ಘಂಟೆಗೆ 

        ಪ್ರತಿನಿತ್ಯ ಅಭಿಷೇಕವನ್ನು ಬೆಳಿಗ್ಗೆ 5:45 ಕ್ಕೆ ಮಾಡಲಾಗುತ್ತದೆ.
        ಸಾಯಿ ಸಹಸ್ರನಾಮವನ್ನು ಪ್ರತಿದಿನ ಬೆಳಿಗ್ಗೆ 7:15 ಕ್ಕೆ ಮಾಡಲಾಗುತ್ತದೆ.
        ಮಹಾಪೂಜೆಯನ್ನು ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಮಾಡಲಾಗುತ್ತದೆ.
        ಅನ್ನದಾನ ಮತ್ತು ಉಚಿತ ವೈದ್ಯಕೀಯ ಸೌಲಭ್ಯವನ್ನು ಪ್ರತಿದಿನ ಆಚರಿಸಲಾಗುತ್ತದೆ.
        ಪ್ರತಿ ಗುರುವಾರ ಸಂಜೆ 7 ಘಂಟೆಗೆ ಪಲ್ಲಕ್ಕಿ ಉತ್ಸವವಿರುತ್ತದೆ.
        ಪ್ರತಿ ಗುರುವಾರ ಮಂದಿರದ ಆವರಣದಲ್ಲಿ ಭಜನೆಯ ಕಾರ್ಯಕ್ರಮವಿರುತ್ತದೆ.

        ವಿಶೇಷ ಉತ್ಸವದ ದಿನಗಳು:

        1. ಶ್ರೀರಾಮನವಮಿ - 7 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ. 
        2. ಬ್ರಹ್ಮೋತ್ಸವ (ದೇವಾಲಯದ ವಾರ್ಷಿಕೋತ್ಸವ) - ಶ್ರೀರಾಮನವಮಿಯ ನಡುವೆ ಬರುವ ಹನುಮಾನ್ ಜಯಂತಿಯ ದಿನ ಆಚರಿಸಲಾಗುತ್ತದೆ. 
        3. ಗುರುಪೂರ್ಣಿಮೆ - 3 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ. 
        4. ವಿಜಯದಶಮಿ - (ಸಾಯಿಬಾಬಾ ಮಹಾಸಮಾಧಿ ದಿವಸ) - 7 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ. 
        5. ದತ್ತ ಜಯಂತಿ - 3 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ.
        ಮೇಲಿನ ಎಲ್ಲಾ ವಿಶೇಷ ಉತ್ಸವದ ದಿನಗಳಂದು ಆಧ್ಯಾತ್ಮಿಕ ಪ್ರವಚನಗಳನ್ನು, ವಿಶೇಷ ಭಜನೆಯ ಕಾರ್ಯಕ್ರಮಗಳನ್ನು ಸಾಮುಹಿಕ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು, ಸಾಯಿ ವ್ರತವನ್ನು ಮತ್ತು ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೇ, ಫಲ ಅರ್ಚನೆ, ಬಿಲ್ವಾರ್ಚನೆ, ತುಳಸಿ ಅರ್ಚನೆ ಯ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. 

        ವಿಶೇಷ ಉತ್ಸವದ ದಿನಗಳಾದ ಶ್ರೀರಾಮನವಮಿ, ವಿಜಯದಶಮಿ, ಗುರುಪೂರ್ಣಿಮೆ ಮತ್ತು ದತ್ತ ಜಯಂತಿಯ ದಿನಗಳಂದು ಸಹಸ್ರ ಕಲಶ ರುದ್ರ ಕ್ಷೀರ ಅಭಿಷೇಕ ಕಾರ್ಯಕ್ರಮವನ್ನು 508 ಲೀಟರ್ ಹಾಲಿನೊಂದಿಗೆ ಮಾಡಲಾಗುತ್ತದೆ. 

        ಸಾಮಾಜಿಕ ಕಾರ್ಯಚಟುವಟಿಕೆಗಳು: 

        1. ಪ್ರತಿನಿತ್ಯ ಸುಮಾರು 150 ರಿಂದ 200 ಜನರಿಗೆ ಅನ್ನದಾನ ಕಾರ್ಯಕ್ರಮ. 
        2. ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಮತ್ತು ಕಡಿಮೆ ದರದಲ್ಲಿ ಲ್ಯಾಬ್ ತಪಾಸಣೆಗಳನ್ನು ಮಾಡಲಾಗುತ್ತದೆ. 
        3. ಪ್ರತಿ ೩ ತಿಂಗಳಿಗೊಮ್ಮೆ ಉಚಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. 
        4. ಉಚಿತ ಕಣ್ಣಿನ ತಪಾಸಣೆಯ ಶಿಬಿರವನ್ನು ನಿಯಮಿತವಾಗಿ ಮಾಡಲಾಗುತ್ತಿದ್ದು ಇದುವರೆಗೂ ಸುಮಾರು 2000 ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. 
        5. ಅನಾಥ ಮಕ್ಕಳಿಗೆ ಮತ್ತು ವಯೋವೃದ್ದರಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ನೀಡಲಾಗುತ್ತಿದೆ. 
        6. ಬಡ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕಗಳ ವಿತರಣೆ ಮತ್ತು ಅರ್ಹ ಬಡ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕವನ್ನು ಭರಿಸುವುದು. 

        ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

        ಸ್ಥಳ:
        ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಹತ್ತಿರ, ಪಾಸ್ಪೋರ್ಟ್  ಆಫೀಸ್ ಹತ್ತಿರ, ಕೊನೇರು ಪಕ್ಕದಲ್ಲಿ, ಶಿವಾಜಿನಗರ.

        ವಿಳಾಸ:   
        ಶ್ರೀ ಸಾಯಿಬಾಬಾ ಮಂದಿರ,
        8-2-21, ಮಾರ್ಕೆಟ್ ರಸ್ತೆ, ಕೊನೇರು,
        ಸಿಕಂದರಾಬಾದ್-500 003, ಆಂಧ್ರಪ್ರದೇಶ.

        ಸಂಪರ್ಕಿಸಬೇಕಾದ ವ್ಯಕ್ತಿ: 
        ಶ್ರೀ.ನಂದುರಿ ದ್ವಾರಕಾನಾಥ್ (ಕಾರ್ಯದರ್ಶಿ)

        ದೂರವಾಣಿ: 
        +91 40 2771 1714 / +91 94403 99989/ +91 94417 04089 

        ಈ ಮೇಲ್ ವಿಳಾಸ: 
        saibabamandirkoneru@gmail.com

        ಮಾರ್ಗಸೂಚಿ: 
        ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಹತ್ತಿರ, ಪಾಸ್ಪೋರ್ಟ್  ಆಫೀಸ್ ಹತ್ತಿರ, ಕೊನೇರು ಪಕ್ಕದಲ್ಲಿ, ಶಿವಾಜಿನಗರ. ಸಿಕಂದರಾಬಾದ್ ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂದದಲ್ಲಿ ಈ ಮಂದಿರವಿದೆ. 


        ಕನ್ನಡ ಅನುವಾದ: ಶ್ರೀಕಂಠ ಶರ್ಮ

        Saturday, January 22, 2011

        ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಮಂದಿರ ಟ್ರಸ್ಟ್ (ನೋಂದಣಿ), ಬ್ರಾಹ್ಮಣರ ಬೀದಿ, ಹೊಸಕೋಟೆ - 562 114, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

        ಈ ಮಂದಿರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಗ್ರಾಮದಲ್ಲಿದೆ.ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕಳಗೆ ಕೊಡಲಾಗಿದೆ.

        ದೇವಾಲಯದ ವಿಶೇಷತೆಗಳು:

        • ಈ ದೇವಾಲಯದ ಭೂಮಿಪೂಜೆಯನ್ನು 2003 ನೇ ಇಸವಿಯ ಅಕ್ಷಯ ತೃತೀಯದಂದು ಮಾಡಲಾಯಿತು. 
        • ಈ ದೇವಾಲಯದ ಉದ್ಘಾಟನೆಯನ್ನು 19ನೇ ಫೆಬ್ರವರಿ 2009 ರಂದು ಆವನಿ ಶಂಕರ ಮಠದ ಜಗದ್ಗುರುಗಳು ನೆರವೇರಿಸಿದರು. ಅಂದಿನ ಕಾರ್ಮಿಕ ಸಚಿವ ಶ್ರೀ.ಬಿ.ಎನ್.ಬಚ್ಚೇಗೌಡ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 
        • ಈ ದೇವಾಲಯದ ಉಸ್ತುವಾರಿಯನ್ನು 10 ಟ್ರಸ್ಟಿಗಳ ತಂಡವು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದೆ. 
        • ಈ ದೇವಾಲಯದಲ್ಲಿ ಶಿರಡಿ ಸಾಯಿಬಾಬಾ, ಶ್ರೀ.ರಾಧಾಕೃಷ್ಣಸ್ವಾಮಿಜೀ, ಶ್ರೀ.ನರಸಿಂಹ ಸ್ವಾಮೀಜಿ ಯವರುಗಳ ಸುಂದರ ಅಮೃತಶಿಲೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 
        • ದೇವಾಲಯದ ಹಿಂಭಾಗಗಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. 
        • ಕಪ್ಪು ಶಿಲೆಯ ವಿನಾಯಕ, ಈಶ್ವರ, ಪಾರ್ವತಿ, ದತ್ತಾತ್ರೇಯ, ಲಕ್ಷ್ಮೀ ನರಸಿಂಹ ಮತ್ತು ಭಕ್ತಾಂಜನೇಯ ದೇವರುಗಳ ವಿಗ್ರಹಗಳನ್ನು ದೇವಾಲಯದ ಹಿಂಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 






        ದೇವಾಲಯದ ಕಾರ್ಯಚಟುವಟಿಕೆಗಳು:

        ದಿನನಿತ್ಯದ ಕಾರ್ಯಕ್ರಮಗಳು

        ಆರತಿಯ ಸಮಯ:
        ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6:15 ಕ್ಕೆ ಮತ್ತು ಗುರುವಾರ 6:00 ಘಂಟೆಗೆ  
        ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ
        ಧೂಪಾರತಿ : ಪ್ರತಿದಿನ ಸಂಜೆ 6 ಘಂಟೆಗೆ
        ಶೇಜಾರತಿ: ಪ್ರತಿದಿನ ರಾತ್ರಿ 8:15 ಕ್ಕೆ ಮತ್ತು ಗುರುವಾರ ರಾತ್ರಿ 8:30 ಕ್ಕೆ

        ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. 
        ಪ್ರತಿ ತಿಂಗಳು ದೇವಾಲಯದಲ್ಲಿ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.

        ವಿಶೇಷ ಉತ್ಸವದ ದಿನಗಳು:
        1. ದೇವಾಲಯದ ವಾರ್ಷಿಕೋತ್ಸವ ಪ್ರತಿವರ್ಷದ 19ನೇ ಫೆಬ್ರವರಿ ಯಂದು. 
        2. ಗುರುಪೂರ್ಣಿಮೆ.
        3. ನರಸಿಂಹ ಜಯಂತಿ.
        4. ಶಂಕರ ಜಯಂತಿ.
        5. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
        6. ಹನುಮಾನ್ ಜಯಂತಿ. 
        7. ದತ್ತ ಜಯಂತಿ. 
        ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

        ಸ್ಥಳ:
        ಹೊಸಕೋಟೆ ಬಸ್ ನಿಲ್ದಾಣದ ಹತ್ತಿರ.

        ವಿಳಾಸ: 
        ಶ್ರೀ ಶಿರಡಿ ಸಾಯಿಮಂದಿರ ಟ್ರಸ್ಟ್ (ನೋಂದಣಿ),
        ಬ್ರಾಹ್ಮಣರ ಬೀದಿ, ಹೊಸಕೋಟೆ - 562 114,
        ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ

        ಸಂಪರ್ಕಿಸಬೇಕಾದ ವ್ಯಕ್ತಿಗಳು:
        ಶ್ರೀ.ಟಿ.ಎಸ್.ರಮೇಶ್ / ಶ್ರೀ.ಹೆಚ್.ಎಸ್.ಲಕ್ಷ್ಮಿಕಾಂತ.

        ದೂರವಾಣಿ: 
        +91 99002 15194 / +91 91419 44281

        ಈ ಮೇಲ್ ವಿಳಾಸ:
        tssairamesh@gmail.com

        ಮಾರ್ಗಸೂಚಿ:

        ಹಳೆಯ ಮದ್ರಾಸ್ ರಸ್ತೆಯಲ್ಲಿ  ಹೊಸಕೋಟೆ ಬಸ್ ನಿಲ್ದಾಣದ ಬಳಿ ಇಳಿಯುವುದು. 3 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. 


        ಕನ್ನಡ ಅನುವಾದ: ಶ್ರೀಕಂಠ ಶರ್ಮ