Tuesday, January 18, 2011

ಸಾಯಿನಾಥನನ್ನು ಬಿಡೇ ಎನ್ನುವ ಲೇಖಕಿ ಮತ್ತು ಕವಿಯಿತ್ರಿ ಶ್ರೀಮತಿ.ಬುಡೇನಮ್ಮ (ಬಾನು) - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀಮತಿ.ಬುಡೇನಮ್ಮ (ಬಾನು) ರವರು ಒಳ್ಳೆಯ ಲೇಖಕಿ ಮತ್ತು ಕವಿಯಿತ್ರಿ. ಇವರು 6ನೇ ಜುಲೈ 1940 ರಂದು ತುಮಕೂರು ಜಿಲ್ಲೆಯ, ಮಧುಗಿರಿ ತಾಲ್ಲೂಕಿನ ಎಸ್.ಎಂ.ಗೊಲ್ಲಹಳ್ಳಿಯಲ್ಲಿ ದಿವಂಗತ ಶ್ರೀಮತಿ.ಬಾನು ಮತ್ತು ಶ್ರೀ.ಬಾಬು ಸಾಹೇಬ್ ರವರ ಹಿರಿಯ ಮಗಳಾಗಿ ಜನಿಸಿದರು. ಇವರು ಮೊದಲು ಶಿರಡಿಗೆ 1984 ರಲ್ಲಿ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಇವರು ತಮ್ಮ ಬರವಣಿಗೆಯ ಹವ್ಯಾಸವನ್ನು 1996 ರಲ್ಲಿ ಪ್ರಾರಂಭಿಸಿದರು. ಇವರ ಪ್ರಪ್ರಥಮ ಕನ್ನಡ ಪುಸ್ತಕ "ಶ್ರೀ ಸಾಯಿ ನುಡಿಸಿದ ಹಾಡುಗಳು" 1999 ರಲ್ಲಿ ಪ್ರಕಟವಾಯಿತು. ಇದಾದ ನಂತರ 2001 ರಲ್ಲಿ "ಕೊಟ್ಟು ಪಡೆ ಸಂತೃಪ್ತಿ" ಎಂಬ ಸಾಮಾಜಿಕ ಸಮಸ್ಯೆಗಳ ಸುತ್ತ ಹೆಣೆಯಲಾದ ಕವನ ಸಂಕಲವು ಪ್ರಕಟಗೊಂಡಿತು. ಇದಕ್ಕೆ ಮುಂಚೆ 2000 ಇಸವಿಯಲ್ಲಿ ಸಾಯಿಬಾಬಾರವರ ಬಗ್ಗೆ ತೆಲುಗಿನಲ್ಲಿ ಬರೆದ "ಶ್ರೀ ಬಾಬಾ ಭಕ್ತಿ ಕುಸುಮಾಂಜಲಿ" ಪ್ರಕಾಶನಗೊಂಡಿತು. ಇವರ 4ನೇ ಯ ಪುಸ್ತಕವಾದ "ಸತ್ಯಂ ವದ ಧರ್ಮಂ ಚರ" ವು ಸಾಯಿಬಾಬಾರವರ ಬಗ್ಗೆ ಗದ್ಯ ಮತ್ತು ಪದ್ಯ ಎಂಬ ಎರಡು ವಿಭಾಗಗಳನ್ನು ಒಳಗೊಂಡಿದ್ದು 2007ನೇ ಇಸವಿಯಲ್ಲಿ ಪ್ರಕಟಗೊಂಡಿರುತ್ತದೆ. 

ಶ್ರೀಮತಿ.ಬುಡೇನಮ್ಮ (ಬಾನು) ಅವರು ದಾನ ಧರ್ಮ ಮಾಡುವುದರಲ್ಲೂ ಕೂಡ ಎತ್ತಿದ ಕೈ. ತಾವು ಬರೆದ ಪುಸ್ತಕಗಳ ಮಾರಾಟದಿಂದ ಬಂದ ಹಣವನ್ನು ಇವರು ಹಲವಾರು ಆಶ್ರಮಗಳಿಗೆ, ವೃದ್ದಾಶ್ರಮಗಳಿಗೆ, ಅಂಧರ ಶಾಲೆಗಳಿಗೆ, ದೇವಾಲಯಗಳಿಗೆ ಮತ್ತು ಮಸೀದಿಗಳಿಗೆ ಉದಾರವಾಗಿ ದಾನ ಮಾಡಿರುತ್ತಾರೆ.  

ಇವರು ಹಲವಾರು ಆಶ್ರಮ ಮತ್ತು ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ. ಅವುಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ. 

  1. ಶ್ರೀ.ಭೂಮಾನಂದ ಸ್ವಾಮಿ ಆಶ್ರಮ, ಕೃಷ್ಣರಾಜಪುರಂ, ಬೆಂಗಳೂರು, ಕರ್ನಾಟಕ. 
  2. ಶ್ರೀ.ಶಾರದಾ ದೇವಿ ಆಶ್ರಮ, ಶಿವಮೊಗ್ಗ, ಕರ್ನಾಟಕ. 
  3. ಬೆಳಕು ವೃದ್ದಾಶ್ರಮ, ಜಯನಗರ, ಬೆಂಗಳೂರು, ಕರ್ನಾಟಕ. 
  4. ಮಾನವ ಧರ್ಮ ಟ್ರಸ್ಟ್, ಬೆಂಗಳೂರು, ಕರ್ನಾಟಕ - ಕಮಿಟಿ ಸದಸ್ಯರು. 
  5. ಜಯನಗರ ನಾಗರೀಕ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು, ಕರ್ನಾಟಕ - ಆಜೀವ ಸದಸ್ಯರು. 
  6. ಪ್ರಗತಿ ಮಹಿಳಾ ಸಮಾಜ, ಜಯನಗರ, ಬೆಂಗಳೂರು - ಅಧ್ಯಕ್ಷೆ.
ಇವರಿಗೆ ಸಂದ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು  

  1. ಪತ್ರಕರ್ತರ ಮಹಿಳಾ ವಿಭಾಗದ ವತಿಯಿಂದ ನೀಡುವ "ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ".
  2. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನೀಡುವ "ಅಕ್ಕಮಹಾದೇವಿ ಪ್ರಶಸ್ತಿ".
  3. ಬೆಂಗಳೂರಿನ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಸನ್ಮಾನ ಮಾಡಿ ಗೌರವಿಸಿರುತ್ತಾರೆ. 
ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ: 
ಕ್ಷೀರ ಪ್ರಕಾಶನ,
ನಂ.135, 40ನೇ  ಅಡ್ಡರಸ್ತೆ,  7ನೇ  ಮುಖ್ಯರಸ್ತೆ,
5ನೇ ಬ್ಲಾಕ್, ಜಯನಗರ, ಬೆಂಗಳೂರು-560 041.ಕರ್ನಾಟಕ.

ದೂರವಾಣಿ: 
+91 98861  82364

ಇವರು ರಚಿಸಿದ ಪುಸ್ತಕಗಳು:
ಶ್ರೀ ಸಾಯಿ ನುಡಿಸಿದ ಹಾಡುಗಳು, ಕೊಟ್ಟು ಪಡೆ ಸಂತೃಪ್ತಿ, ಸತ್ಯಂ ವದ ಧರ್ಮಂ ಚರ (ಕನ್ನಡ), ಶ್ರೀ ಬಾಬಾ ಭಕ್ತಿ ಕುಸುಮಾಂಜಲಿ (ತೆಲುಗು). 
 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment