Sunday, January 23, 2011

ಸಿಕಂದರಾಬಾದ್ ನ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಮಂದಿರ, 8-2-21, ಮಾರ್ಕೆಟ್ ರಸ್ತೆ, ಕೊನೇರು, ಸಿಕಂದರಾಬಾದ್-500 003, ಆಂಧ್ರಪ್ರದೇಶ - ಕೃಪೆ: ಸಾಯಿ ಅಮೃತಧಾರಾ.ಕಾಂ 

ಈ ಮಂದಿರವನ್ನು ಸಾಯಿಭಕ್ತ ದಿವಂಗತ ಜಿ.ವಿ.ಆರ್.ನಾಯ್ಡು ರವರು "ಶ್ರೀ ಸಾಯಿಬಾಬಾ ಸೇವಾ ಸಮಾಜಂ" ಎಂಬ ಹೆಸರಿನಲ್ಲಿ 1962 ರಲ್ಲಿ ನೋಂದಣಿ ಮಾಡಿಸಿದರು ಮತ್ತು ಅದರ ಸಂಸ್ಥಾಪಕ ಅಧ್ಯಕ್ಷರಾದರು. ಇದಕ್ಕೂ ಮುಂಚೆ ೧೯೩೮ ರಿಂದಲೇ ತಮ್ಮ ಮನೆಯಲ್ಲೇ  ಸಾಯಿಬಾಬಾ ರವರ ಪೂಜೆಯನ್ನು ಮಾಡುತ್ತಿದ್ದರು. 1982ನೇ ಇಸವಿಯಲ್ಲಿ ರಾಜ್ಯಸರ್ಕಾರದ ಅನುಮೋದನೆಯೊಂದಿಗೆ ನೋಂದಣಿ ಮಾಡಿಸಿ ಸಾಯಿಬಾಬಾ ಮಂದಿರವನ್ನು ಪ್ರಾರಂಭಿಸಿದರು. 

ಈ ಮಂದಿರದಲ್ಲಿ ಸುಮಾರು 7 ಅಡಿ ಉದ್ದವಿರುವ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು 25 ನೇ ಏಪ್ರಿಲ್ 1994 ರಂದು ಬೆಂಗಳೂರಿನ ದ್ವಾರಕಾ ಪೀಠದ ಜಗದ್ಗುರುಗಳಾದ ಡಾ.ವಿದ್ಯಾರಣ್ಯ ತೀರ್ಥ ಸ್ವಾಮಿಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಈ ಸಮಾರಂಭದಲ್ಲಿ ಸಾವಿರಾರು ಸಾಯಿಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಈ ಮಂದಿರವನ್ನು ಶ್ರೀ.ಶ್ರೀಪತಿ ಪಾಂಡುರಂಗ ರಾವ್ (ಅಧ್ಯಕ್ಷರು), ಶ್ರೀ.ನಂದುರಿ ದ್ವಾರಕಾನಾಥ್ (ಕಾರ್ಯದರ್ಶಿ), ಶ್ರೀ.ಸುನೀಲ್ ಸಿದ್ದಂ ಶೆಟ್ಟಿ ಯವರು ಬಹಳ ಉತ್ತಮವಾಗಿ ಕಟ್ಟಿಸಿರುವುದೇ ಅಲ್ಲದೇ ಅದನ್ನು ಬಹಳ ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ ಕೂಡ.

ಈ ಮಂದಿರದಲ್ಲಿನ ಕೆಲವು ವಿಶೇಷತೆಗಳನ್ನು ಈ ಕೆಳಗೆ ಕೊಡಲಾಗಿದೆ.

  1. ಧ್ಯಾನ ಮಾಡಲು ಮತ್ತು ಸಾಯಿ ಸಚ್ಚರಿತೆ ಪಾರಾಯಣ ಮಾಡಲು ಸುಸಜ್ಜಿತ ಧ್ಯಾನ ಮಂದಿರ.
  2. ವಿಶಾಲವಾದ ಮತ್ತು ಆರತಿಯ ಸಮಯದಲ್ಲಿ ಹೆಚ್ಚು ಭಕ್ತರು ಕೂಡಬಹುದಾದ ಪ್ರಾರ್ಥನೆಯ ಸ್ಥಳ. 
  3. ಪವಿತ್ರ ಧುನಿಯನ್ನು 8 ನೇ ಆಗಸ್ಟ್ 1997 ರಂದು ಸಾಯಿಧಾಂ ನ ಪರಮ ಪೂಜ್ಯ ಶ್ರೀ.ಶ್ರೀ.ಪ್ರಭುಜಿ ಸ್ವಾಮಿಜಿಯವರು ಉದ್ಘಾಟಿಸಿದರು. 
  4. ಸಾಯಿಬಾಬಾರವರ ನೈವೇದ್ಯಕ್ಕೆ ಮತ್ತು ನಿತ್ಯ ಅನ್ನದಾನಕ್ಕೆ ಅನುಕೂಲವಾಗುವಂತೆ ವಿಶಾಲವಾದ ಅಡಿಗೆ ಮನೆ. 
  5. ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ವೈದ್ಯಕೀಯ ಕೇಂದ್ರ. 


ದೇವಾಲಯದ ಕಾರ್ಯಚಟುವಟಿಕೆಗಳು 

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 5:15 ಕ್ಕೆ  
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ 6:30 ಕ್ಕೆ
ಶೇಜಾರತಿ: ರಾತ್ರಿ 9 ಘಂಟೆಗೆ 

ಪ್ರತಿನಿತ್ಯ ಅಭಿಷೇಕವನ್ನು ಬೆಳಿಗ್ಗೆ 5:45 ಕ್ಕೆ ಮಾಡಲಾಗುತ್ತದೆ.
ಸಾಯಿ ಸಹಸ್ರನಾಮವನ್ನು ಪ್ರತಿದಿನ ಬೆಳಿಗ್ಗೆ 7:15 ಕ್ಕೆ ಮಾಡಲಾಗುತ್ತದೆ.
ಮಹಾಪೂಜೆಯನ್ನು ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಮಾಡಲಾಗುತ್ತದೆ.
ಅನ್ನದಾನ ಮತ್ತು ಉಚಿತ ವೈದ್ಯಕೀಯ ಸೌಲಭ್ಯವನ್ನು ಪ್ರತಿದಿನ ಆಚರಿಸಲಾಗುತ್ತದೆ.
ಪ್ರತಿ ಗುರುವಾರ ಸಂಜೆ 7 ಘಂಟೆಗೆ ಪಲ್ಲಕ್ಕಿ ಉತ್ಸವವಿರುತ್ತದೆ.
ಪ್ರತಿ ಗುರುವಾರ ಮಂದಿರದ ಆವರಣದಲ್ಲಿ ಭಜನೆಯ ಕಾರ್ಯಕ್ರಮವಿರುತ್ತದೆ.

ವಿಶೇಷ ಉತ್ಸವದ ದಿನಗಳು:

  1. ಶ್ರೀರಾಮನವಮಿ - 7 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ. 
  2. ಬ್ರಹ್ಮೋತ್ಸವ (ದೇವಾಲಯದ ವಾರ್ಷಿಕೋತ್ಸವ) - ಶ್ರೀರಾಮನವಮಿಯ ನಡುವೆ ಬರುವ ಹನುಮಾನ್ ಜಯಂತಿಯ ದಿನ ಆಚರಿಸಲಾಗುತ್ತದೆ. 
  3. ಗುರುಪೂರ್ಣಿಮೆ - 3 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ. 
  4. ವಿಜಯದಶಮಿ - (ಸಾಯಿಬಾಬಾ ಮಹಾಸಮಾಧಿ ದಿವಸ) - 7 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ. 
  5. ದತ್ತ ಜಯಂತಿ - 3 ದಿನಗಳ ಉತ್ಸವವನ್ನು ಆಚರಿಸಲಾಗುತ್ತದೆ.
ಮೇಲಿನ ಎಲ್ಲಾ ವಿಶೇಷ ಉತ್ಸವದ ದಿನಗಳಂದು ಆಧ್ಯಾತ್ಮಿಕ ಪ್ರವಚನಗಳನ್ನು, ವಿಶೇಷ ಭಜನೆಯ ಕಾರ್ಯಕ್ರಮಗಳನ್ನು ಸಾಮುಹಿಕ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು, ಸಾಯಿ ವ್ರತವನ್ನು ಮತ್ತು ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೇ, ಫಲ ಅರ್ಚನೆ, ಬಿಲ್ವಾರ್ಚನೆ, ತುಳಸಿ ಅರ್ಚನೆ ಯ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. 

ವಿಶೇಷ ಉತ್ಸವದ ದಿನಗಳಾದ ಶ್ರೀರಾಮನವಮಿ, ವಿಜಯದಶಮಿ, ಗುರುಪೂರ್ಣಿಮೆ ಮತ್ತು ದತ್ತ ಜಯಂತಿಯ ದಿನಗಳಂದು ಸಹಸ್ರ ಕಲಶ ರುದ್ರ ಕ್ಷೀರ ಅಭಿಷೇಕ ಕಾರ್ಯಕ್ರಮವನ್ನು 508 ಲೀಟರ್ ಹಾಲಿನೊಂದಿಗೆ ಮಾಡಲಾಗುತ್ತದೆ. 

ಸಾಮಾಜಿಕ ಕಾರ್ಯಚಟುವಟಿಕೆಗಳು: 

  1. ಪ್ರತಿನಿತ್ಯ ಸುಮಾರು 150 ರಿಂದ 200 ಜನರಿಗೆ ಅನ್ನದಾನ ಕಾರ್ಯಕ್ರಮ. 
  2. ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಮತ್ತು ಕಡಿಮೆ ದರದಲ್ಲಿ ಲ್ಯಾಬ್ ತಪಾಸಣೆಗಳನ್ನು ಮಾಡಲಾಗುತ್ತದೆ. 
  3. ಪ್ರತಿ ೩ ತಿಂಗಳಿಗೊಮ್ಮೆ ಉಚಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. 
  4. ಉಚಿತ ಕಣ್ಣಿನ ತಪಾಸಣೆಯ ಶಿಬಿರವನ್ನು ನಿಯಮಿತವಾಗಿ ಮಾಡಲಾಗುತ್ತಿದ್ದು ಇದುವರೆಗೂ ಸುಮಾರು 2000 ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. 
  5. ಅನಾಥ ಮಕ್ಕಳಿಗೆ ಮತ್ತು ವಯೋವೃದ್ದರಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ನೀಡಲಾಗುತ್ತಿದೆ. 
  6. ಬಡ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕಗಳ ವಿತರಣೆ ಮತ್ತು ಅರ್ಹ ಬಡ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕವನ್ನು ಭರಿಸುವುದು. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಹತ್ತಿರ, ಪಾಸ್ಪೋರ್ಟ್  ಆಫೀಸ್ ಹತ್ತಿರ, ಕೊನೇರು ಪಕ್ಕದಲ್ಲಿ, ಶಿವಾಜಿನಗರ.

ವಿಳಾಸ:   
ಶ್ರೀ ಸಾಯಿಬಾಬಾ ಮಂದಿರ,
8-2-21, ಮಾರ್ಕೆಟ್ ರಸ್ತೆ, ಕೊನೇರು,
ಸಿಕಂದರಾಬಾದ್-500 003, ಆಂಧ್ರಪ್ರದೇಶ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ನಂದುರಿ ದ್ವಾರಕಾನಾಥ್ (ಕಾರ್ಯದರ್ಶಿ)

ದೂರವಾಣಿ: 
+91 40 2771 1714 / +91 94403 99989/ +91 94417 04089 

ಈ ಮೇಲ್ ವಿಳಾಸ: 
saibabamandirkoneru@gmail.com

ಮಾರ್ಗಸೂಚಿ: 
ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಹತ್ತಿರ, ಪಾಸ್ಪೋರ್ಟ್  ಆಫೀಸ್ ಹತ್ತಿರ, ಕೊನೇರು ಪಕ್ಕದಲ್ಲಿ, ಶಿವಾಜಿನಗರ. ಸಿಕಂದರಾಬಾದ್ ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂದದಲ್ಲಿ ಈ ಮಂದಿರವಿದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment