Monday, January 10, 2011

ಬೆಂಗಳೂರಿನ ಪುರಾತನ ಮತ್ತು ಪ್ರಪ್ರಥಮ ಸಾಯಿಬಾಬಾ ಮಂದಿರ - ಶ್ರೀ.ಸಾಯಿಬಾಬಾ ಮಂದಿರ, ನಂ.7, 4ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಮಾರುತಿ ಬಡಾವಣೆ, ಬೆಂಗಳೂರು-560 021. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರಿನ ಅತ್ಯಂತ ಪುರಾತನ ಮತ್ತು ಪ್ರಪ್ರಥಮ ಸಾಯಿಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ. ಈ ಮಂದಿರದಲ್ಲಿರುವ ಸಾಯಿಬಾಬಾರವರ ವಿಗ್ರಹವನ್ನು ಸ್ವತಃ ಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು 1943 ನೇ ಇಸವಿಯಲ್ಲಿ  ತಂದಿರುತ್ತಾರೆ. ಈ ಮಂದಿರವು 1947 ನೇ ಇಸವಿಯಲ್ಲಿ ಉದ್ಘಾಟನೆಯಾಗಿರುತ್ತದೆ. 

ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು
  • ಈ ಮಂದಿರದಲ್ಲಿರುವ ಸಾಯಿಬಾಬಾರವರ ವಿಗ್ರಹವನ್ನು ಸ್ವತಃ ಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು 14ನೇ ಫೆಬ್ರವರಿ 1943 ರಂದು ತಂದಿರುತ್ತಾರೆ.
  • ಈ ಮಂದಿರವನ್ನು 8ನೇ ಜೂನ್ 1947 ರಂದು ಅನಂತಾಶ್ರಮ, ಬೆಂಗಳೂರಿನ ಶ್ರೀ.ಶ್ರೀ.ಶ್ರೀ.ಹರಿಹರಾನಂದ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿರುತ್ತಾರೆ. 
  • ಹೊಸದಾಗಿ ನವೀಕರಣಗೊಂಡ ಸಾಯಿಬಾಬಾ ಮಂದಿರವನ್ನು 5ನೇ ಜೂನ್ 2005 ರಂದು ಬೇಲಿ ಮಠದ ಶ್ರೀ.ಶ್ರೀ.ಶ್ರೀ.ಶಿವರುದ್ರ ಸ್ವಾಮೀಜಿಯವರು ಉದ್ಘಾಟನೆ ಮಾಡಿರುತ್ತಾರೆ. ಮೊದಲನೇ ಮಹಡಿಯಲ್ಲಿರುವ ಧ್ಯಾನ ಮಂದಿರವನ್ನು ಶ್ರೀ.ಶ್ರೀ.ಶ್ರೀ.ವಿದ್ಯಾಭೂಷಣ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಮಾಡಿರುತ್ತಾರೆ. 
  • ಈ ಮಂದಿರದಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ಸುಂದರ ವಿಗ್ರಹವಿದೆ. 
  • ಪವಿತ್ರ ಧುನಿಯನ್ನು ಸಾಯಿಬಾಬಾ ಮಂದಿರದ ಗರ್ಭಗುಡಿಯ ಹೊರಗಡೆ ಎಡಭಾಗದಲ್ಲಿ ಸ್ಥಾಪಿಸಲಾಗಿದೆ. 

 ದೇವಾಲಯದ ಹೊರನೋಟ 

ನರಸಿಂಹ ಸ್ವಾಮಿಜಿಯವರ ಅಮೃತ ಹಸ್ತದಿಂದ ಬಂದಿರುವ ಅಮೃತ ಶಿಲೆಯ ಬಾಬಾ ವಿಗ್ರಹ  

ಪವಿತ್ರ ಧುನಿ ಮಾ 

ಸಾಯಿಬಾಬಾರವರ ಅಮೃತಶಿಲೆಯ  ಪವಿತ್ರ ಪಾದುಕೆಗಳು 

ದೇವಾಲಯದ ಕಾರ್ಯಚಟುವಟಿಕೆಗಳು 

ದಿನನಿತ್ಯದ ಕಾರ್ಯಕ್ರಮಗಳು 

ಆರತಿಯ ಸಮಯ

ಆರತಿ
ಸಮಯ
ಕಾಕಡಾ ಆರತಿ
6:30 AM
ಮಧ್ಯಾನ್ಹ ಆರತಿ
12:30 PM
ಧೂಪಾರತಿ
6:30 PM
ಶೇಜಾರತಿ
8:30 PM

ಪ್ರತಿನಿತ್ಯ ಬೆಳಿಗ್ಗೆ 9:30 ಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಸೇವಾಶುಲ್ಕ 50/- ರುಪಾಯಿಗಳು.

ಪ್ರತಿನಿತ್ಯ ಬೆಳಿಗ್ಗೆ 9:30 ಕ್ಕೆ ರುದ್ರಾಭಿಷೇಕ ಕಾರ್ಯಕ್ರಮವಿರುತ್ತದೆ. ಸೇವಾಶುಲ್ಕ 30/- ರುಪಾಯಿಗಳು.

ಪ್ರತಿ ತಿಂಗಳ ಹುಣ್ಣಿಮೆಯ ದಿನ ಬೆಳಿಗ್ಗೆ 8 ಘಂಟೆಗೆ ಸತ್ಯನಾರಾಯಣ ಪೂಜಾ ಕಾರ್ಯಕ್ರಮವಿರುತ್ತದೆ. ಸೇವಾಶುಲ್ಕ 50/- ರುಪಾಯಿಗಳು.

ಎಲ್ಲಾ ಉತ್ಸವದ ದಿನಗಳಂದು ಅನ್ನದಾನ ಕಾರ್ಯಕ್ರಮವಿರುತ್ತದೆ.

ವಿಶೇಷ ಉತ್ಸವದ ದಿನಗಳು 

  1. ಪ್ರತಿ ವರ್ಷ 5ನೇ ಜೂನ್ - ದೇವಾಲಯದ ವಾರ್ಷಿಕೋತ್ಸವ - ವಿಶೇಷ ಪೂಜಾ ಕಾರ್ಯಕ್ರಮ.
  2. ಶ್ರೀರಾಮನವಮಿ. 
  3. ಗುರುಪೂರ್ಣಿಮೆ. 
  4. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ). 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ಸ್ಥಳ 
ದೇವಯ್ಯ ಪಾರ್ಕ್ ಬಸ್ ನಿಲ್ದಾಣದ ಬಳಿ.
ವಿಳಾಸ 
ಶ್ರೀ.ಸಾಯಿಬಾಬಾ ಮಂದಿರ, ನಂ.7, 4ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಮಾರುತಿ ಬಡಾವಣೆ, ಬೆಂಗಳೂರು-560 021. ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿ 
ಶ್ರೀ. ಎನ್.ಬಾಬಾ ಪ್ರಸಾದ್
ದೂರವಾಣಿ 
+91 80 2332 6721 / +91 80 2312 2359 / +91 97398 48974
ಈ ಮೇಲ್ ವಿಳಾಸ 
ಮಾರ್ಗಸೂಚಿ 
ದೇವಯ್ಯ ಪಾರ್ಕ್ ಬಸ್ ನಿಲ್ದಾಣದಲ್ಲಿ ಇಳಿದು ಹಿಂದೆ ಸಿಗುವ ಎರಡನೇ ತಿರುವಿನಲ್ಲಿ (4 ನೇ ಮುಖ್ಯರಸ್ತೆ)  5 ನಿಮಿಷ ನಡೆಯುವುದು. ರಸ್ತೆಯ ಬಲಭಾಗಕ್ಕೆ  4ನೇ  ಅಡ್ಡರಸ್ತೆ ನಾಮ ಫಲಕ ಸಿಗುತ್ತದೆ. ಬಲಕ್ಕೆ ತಿರುಗಿದರೆ ಸಿಗುವ ಎರಡನೇ ಬಿಲ್ಡಿಂಗ್ ಸಾಯಿಬಾಬಾ ಮಂದಿರವಾಗಿರುತ್ತದೆ. 

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment