Saturday, March 31, 2012

ಶಿರಡಿ ಸಾಯಿಬಾಬಾ ಸಂಸ್ಥಾನ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಮೊದಲನೇ ದಿನದ ವರದಿ - 31ನೇ ಮಾರ್ಚ್ 2012 , ಶನಿವಾರ - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಸಾಯಿಬಾಬಾರವರ ವಿಗ್ರಹ, ವೀಣೆ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಪುರೋಹಿತರುಗಳಾದ ಶ್ರೀ.ನಾರಾಯಣ್ ಭಿಷೆ ಹಾಗೂ ಶ್ರೀ.ವಿಲಾಸ್ ಜೋಷಿಯವರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 


ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಏರ್ಪಡಿಸಿದ್ದ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆಯವರು ಉದ್ಘಾಟಿಸಿದರು. 


ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆಯವರು ನೆರವೇರಿಸಿದರು. 



ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೊಸದಾಗಿ ನಿಯೋಜಿಸಲಾಗಿರುವ ತ್ರಿಸದಸ್ಯ ಸಮಿತಿಯ ಸದಸ್ಯರುಗಳು. ಎಡದಿಂದ ಬಲಕ್ಕೆ: ಶ್ರೀ.ಕಿಶೋರ್ ಮೋರೆ (ಸಮಿತಿ ಸದಸ್ಯರು), ಶ್ರೀ.ಜಯಂತ್ ಕುಲಕರ್ಣಿ (ಜಿಲ್ಲಾ ನ್ಯಾಯಾಧೀಶರು ಮತ್ತು ಸಮಿತಿಯ ಅಧ್ಯಕ್ಷರು) ಮತ್ತು ಡಾ.ಸಂಜೀವ್ ಕುಮಾರ್ (ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಮಿತಿ ಸದಸ್ಯರು). 



ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಸಾಯಿ ಭಕ್ತೆ ಶ್ರೀಮತಿ.ರಿಂಪಲ್ ಲೋಹಿಯಾ ರವರು ಸಮಾಧಿ ಮಂದಿರ ಸುತ್ತಮುತ್ತಲಿನ ಪರಿಸರವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಿದ್ದರು. 




ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ದಿಲ್ವಾರಾ ದೇವಾಲಯದ ವಾಸ್ತುಶಿಲ್ಪದ ಪ್ರತಿರೂಪವನ್ನು ಬಹಳ ಸುಂದರವಾಗಿ ಪುನರ್ ಸೃಷ್ಟಿ ಮಾಡಲಾಗಿತ್ತು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, March 25, 2012

ಚಿತ್ರನಟ ನಾಗಾರ್ಜುನ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಚಲನಚಿತ್ರ ನಟರಾದ ಶ್ರೀ.ಅಕ್ಕಿನೇನಿ ನಾಗಾರ್ಜುನರವರು ಇದೇ ತಿಂಗಳ 25ನೇ ಮಾರ್ಚ್ 2012, ಭಾನುವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಸಂಸತ್ ಸದಸ್ಯರಾದ ಶ್ರೀ.ಬಾವುಸಾಹೇಬ್ ವಾಕ್ಚುರೆಯವರು ಕೂಡ ಉಪಸ್ಥಿತರಿದ್ದರು. 


 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, March 23, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುಡಿಪಾಡ್ವ ಹಬ್ಬದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ 


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುಡಿಪಾಡ್ವ ಹಬ್ಬವನ್ನು ಇದೇ ತಿಂಗಳ 23ನೇ ಮಾರ್ಚ್ 2012, ಶುಕ್ರವಾರ ದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆಯವರು ಗುಡಿ ಪೂಜೆಯನ್ನು ನೆರವೇರಿಸಿದರು. ನಂತರ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಾಯಿಬಾಬಾರವರ ಸಮಾಧಿ  ಮತ್ತು ಪಾದುಕೆಗಳ ಪೂಜೆಯನ್ನು ಕೂಡ ಮೋರೆ ದಂಪತಿಗಳು ನೆರವೇರಿಸಿದರು. 
 
 
 


 
ಈ ಸಂದರ್ಭದಲ್ಲಿ ಕಲ್ಕತ್ತಾದ ಸಾಯಿಭಕ್ತ ಶ್ರೀ.ಅಶೋಕ್ ಜೈಸ್ವಾಲ್ ರವರು ಸಮಾಧಿ ಮಂದಿರವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಿದರು. 
 




 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, March 21, 2012

ಮಹಾರಾಷ್ಟ್ರ ಕೈಗಾರಿಕೆ, ಬಂದರು, ಉದ್ಯೋಗ ಮತ್ತು ಸ್ವಯಂ ಉದ್ಯೋಗ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ   

ಮಹಾರಾಷ್ಟ್ರ ಸರ್ಕಾರದ ಕೈಗಾರಿಕೆ, ಬಂದರು, ಉದ್ಯೋಗ ಮತ್ತು ಸ್ವಯಂ ಉದ್ಯೋಗ ಸಚಿವರಾದ ಶ್ರೀ.ನಾರಾಯಣ್ ರಾಣೆಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ಇದೇ ತಿಂಗಳ 21ನೇ ಮಾರ್ಚ್ 2012, ಬುಧವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ನಗರಪಾಲಿಕೆಯ ಅಧ್ಯಕ್ಷೆಯಾದ ಶ್ರೀಮತಿ.ಸುಮಿತ್ರಾ ಕೋತೆಯವರು ಕೂಡ ಉಪಸ್ಥಿತರಿದ್ದರು. 


ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಸಚಿವರನ್ನು ಶಿರಡಿ ನಗರಪಾಲಿಕೆಯ ಅಧ್ಯಕ್ಷೆಯಾದ ಶ್ರೀಮತಿ.ಸುಮಿತ್ರಾ ಕೋತೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, March 13, 2012

ಕೋಲಾರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ (ನೋಂದಣಿ), ಅರಳೇರಿ ಮುಖ್ಯರಸ್ತೆ, ಅದರ್ಶನಗರ, ಮಾಲೂರು-563 130, ಕೋಲಾರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಕೋಲಾರ ಜಿಲ್ಲೆಯಲ್ಲಿರುವ ಮಾಲೂರು ಪಟ್ಟಣದ ಅರಳೇರಿ ಮುಖ್ಯರಸ್ತೆಯಲ್ಲಿರುವ ಆದರ್ಶನಗರದಲ್ಲಿರುತ್ತದೆ. ದೇವಾಲಯವು ಮಾಲೂರು ತಾಲ್ಲೂಕು ಕಚೇರಿಯ ಪಕ್ಕದಲ್ಲಿದ್ದು ಮಾಲೂರು ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಗಳ ಅಂತರದಲ್ಲೂ ಹಾಗೂ ಮಾಲೂರು ರೈಲು ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ಗಳ ಅಂತರದಲ್ಲೂ ಇರುತ್ತದೆ. 

ಈ ದೇವಾಲಯದ ಭೂಮಿ ಪೂಜೆಯನ್ನು ಫೆಬ್ರವರಿ 2008 ರಲ್ಲಿ ಮಾಡಲಾಯಿತು.  

ದೇವಾಲಯವಿರುವ ಸ್ಥಳ ಮತ್ತು ದೇವಾಲಯದ ಪಕ್ಕದಲ್ಲಿರುವ ಉದ್ಯಾನವನವಿರುವ ಸುಮಾರು 4500 ಚದರ ಅಡಿ ಸ್ಥಳವನ್ನು ಮಾಲೂರು ನಗರಸಭೆಯವರು ದೇವಾಲಯದ ಟ್ರಸ್ಟ್ ಗೆ ಮಂಜೂರು ಮಾಡಿರುತ್ತಾರೆ. 

ಈ ದೇವಾಲಯವನ್ನು 12ನೇ ಫೆಬ್ರವರಿ 2009 ರಂದು ಸಿದ್ಧಗಂಗಾ ಮಠದ ಸ್ವಾಮೀಜಿಗಳಾದ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ  ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿರುತ್ತಾರೆ. 

ಶ್ರೀ.ಶ್ರೀನಿವಾಸ ಮುರ್ತಿಯವರು ಈ ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ದಿನನಿತ್ಯದ ಆಗು ಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯದಲ್ಲಿ ಸುಮಾರು 5 1/2  ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು  ಪ್ರತಿಷ್ಟಾಪಿಸಲಾಗಿದೆ. ಸುಮಾರು 3  ಅಡಿ ಎತ್ತರದ ಪಂಚ ಲೋಹದ ಸಾಯಿಬಾಬಾ ವಿಗ್ರಹವನ್ನು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಪಕ್ಕದಲ್ಲಿ ಇರಿಸಲಾಗಿದ್ದು ಇದನ್ನು ವಿಶೇಷ ದಿನಗಳಲ್ಲಿ ಮತ್ತು ಉತ್ಸವದ ದಿನಗಳಲ್ಲಿ ಉತ್ಸವ ಮುರ್ತಿಯಂತೆ ಬಳಸಲಾಗುತ್ತಿದೆ. ಸುಮಾರು 1 1/2 ಅಡಿ ಎತ್ತರದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ, ಜರ್ಮನ್ ಬೆಳ್ಳಿಯಲ್ಲಿ ಮಾಡಿದ ಗಣಪತಿ ಮತ್ತು ರಾಧಾಕೃಷ್ಣ ದೇವರ ವಿಗ್ರಹಗಳು ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸಾಯಿಭಕ್ತರು ನೋಡಬಹುದಾಗಿದೆ. 

ದೇವಾಲಯದ ಗರ್ಭಗುಡಿಯಲ್ಲಿ ಪಂಚಲೋಹದಲ್ಲಿ ಮಾಡಿದ ಸುಮಾರು 1 ಅಡಿ ಎತ್ತರದ  ಮಹಾವಿಷ್ಣುವಿನ ವಿಗ್ರಹವನ್ನು  ಇರಿಸಲಾಗಿದ್ದು ಇದನ್ನು ಪ್ರತಿ ತಿಂಗಳ ಹುಣ್ಣಿಮೆಯ ದಿನ ಶ್ರೀ.ಸಾಯಿ ಸತ್ಯನಾರಾಯಣ ವ್ರತದ ಸಂದರ್ಭದಲ್ಲಿ ಸಾಯಿಬಾಬಾರವರ ವಿಗ್ರಹದ ಜೊತೆಗೆ ಪೂಜೆಗೆ ಇರಿಸಲಾಗುತ್ತದೆ. 

ದೇವಾಲಯದ ಪ್ರವೇಶ ದ್ವಾರದ ಎಡಭಾಗದಲ್ಲಿ ಸುಮಾರು 2 1/2 ಅಡಿ ಎತ್ತರದ  ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 












ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ: 

ಬೆಳಿಗ್ಗೆ: 6 ರಿಂದ 11 ರವರೆಗೆ.   
ಸಂಜೆ: 5:30 ರಿಂದ 9 ರವರೆಗೆ.  

ಆರತಿಯ ಸಮಯ: 

ಬೆಳಿಗ್ಗೆ: 8 ಘಂಟೆಗೆ   
ಸಂಜೆ: 7:30 ಕ್ಕೆ  

ಪ್ರತಿದಿನ ಬೆಳಿಗ್ಗೆ 6:30 ರಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರುಪಾಯಿಗಳು.  

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಸಂಜೆ 6 ಘಂಟೆಯಿಂದ 8 ಘಂಟೆಯವರೆಗೆ  ಶ್ರೀ ಸಾಯಿ ಸತ್ಯನಾರಾಯಣ ವ್ರತವನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 21/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು: 

ಪ್ರತಿ ವರ್ಷದ 12ನೇ ಫೆಬ್ರವರಿ ಯಂದು ದೇವಾಲಯದ ವಾರ್ಷಿಕೋತ್ಸವ. 
ಗುರುಪೂರ್ಣಿಮೆ. 
ವಿಜಯದಶಮಿ. 

ದೇಣಿಗೆಗೆ ಮನವಿ: 

ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್" ಉಳಿತಾಯ ಖಾತೆ ಸಂಖ್ಯೆ: 5907, ಕಾರ್ಪೋರೇಶನ್ ಬ್ಯಾಂಕ್, ಯಶವಂತಪುರ ಶಾಖೆ, ಶಾಖೆ ಸಂಖ್ಯೆ:0431, ಮಾಲೂರು, ಇವರಿಗೆ ಸಂದಾಯವಾಗುವಂತೆ ಹಣವನ್ನು ಸಂದಾಯ ಮಾಡಬಹುದಾಗಿದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ತಾಲ್ಲೂಕು ಕಚೇರಿ ಪಕ್ಕದಲ್ಲಿ, ಆದರ್ಶ ನಗರ, ಅರಳೇರಿ ಮುಖ್ಯರಸ್ತೆ, ಮಾಲೂರು. 

ವಿಳಾಸ: 

ಶ್ರೀ.ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ (ನೋಂದಣಿ), 
ಅರಳೇರಿ ಮುಖ್ಯರಸ್ತೆ, ಅದರ್ಶನಗರ, 
ಮಾಲೂರು-563 130, 
ಕೋಲಾರ ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಶ್ರೀನಿವಾಸ ಮುರ್ತಿ - ಅಧ್ಯಕ್ಷರು / ಶ್ರೀ.ಸುಬ್ರಮಣ್ಯ ರೆಡ್ಡಿ - ಖಚಾಂಚಿ / ಶ್ರೀ.ಅಮರ್ ಸಿಂಗ್ - ಕಾರ್ಯದರ್ಶಿ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

+ 91 94481 51475  - ಶ್ರೀನಿವಾಸ ಮುರ್ತಿ / +91 94480 19116 - ಅಮರ್ ಸಿಂಗ್ / +91 98458 74776 – ಸುಬ್ರಮಣ್ಯ ರೆಡ್ಡಿ.

ಮಾರ್ಗಸೂಚಿ: 

ನೀವು ಬಸ್ ನಲ್ಲಿ ಬಂದರೆ, ಮಾಲೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಗಳ ಅಂತರದಲ್ಲಿದೆ. ರೈಲಿನಲ್ಲಿ ಬರುವುದಾದರೆ, ಮಾಲೂರು ರೈಲು ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಮಾಲೂರು ರೈಲು ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ಗಳ ಅಂತರದಲ್ಲಿರುತ್ತದೆ. ರೈಲು ನಿಲ್ದಾಣದಿಂದ ಹೇರಳವಾಗಿ ಆಟೋಗಳು ಸಿಗುತ್ತವೆ. ದೇವಾಲಯವು ಕೋಲಾರ ಜಿಲ್ಲೆಯಲ್ಲಿರುವ ಮಾಲೂರು ಪಟ್ಟಣದ ಅರಳೇರಿ ಮುಖ್ಯರಸ್ತೆಯಲ್ಲಿರುವ ಆದರ್ಶನಗರದಲ್ಲಿರುತ್ತದೆ ಮತ್ತು ತಾಲ್ಲೂಕು ಕಚೇರಿಯ ಪಕ್ಕದಲ್ಲಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

 

Monday, March 12, 2012

ರಂಗಪಂಚಮಿಯ ಅಂಗವಾಗಿ ಶಿರಡಿಯಲ್ಲಿ ಸಾಯಿಬಾಬಾರವರ ಚಿನ್ನದ ರಥದ ಮೆರವಣಿಗೆ - ಕೃಪೆ: ಸಾಯಿಅಮೃತಧಾರಾ.ಕಾಂ 

ರಂಗಪಂಚಮಿಯ ಅಂಗವಾಗಿ ಇದೇ ತಿಂಗಳ 12ನೇ ಮಾರ್ಚ್ 2012, ಸೋಮವಾರ ದಂದು ಶಿರಡಿಯ ಗ್ರಾಮದ ಸುತ್ತಲೂ ಸಾಯಿಬಾಬಾರವರ ಚಿನ್ನದ ರಥದ ಮೆರವಣಿಗೆಯನ್ನು ಕೊಂಡೊಯ್ಯಲಾಯಿತು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, March 10, 2012

ಶ್ರೀ.ದೇವಿಸಿಂಗ್ ಶೇಕಾವತ್  ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹಿರಿಯ ಸದಸ್ಯರು ಹಾಗೂ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ.ಪ್ರತಿಭಾ ಪಾಟೀಲ್ ರವರ ಪತಿ ಶ್ರೀ.ದೇವಿಸಿಂಗ್ ಶೇಕಾವತ್ ರವರು ಇದೇ ತಿಂಗಳ 10ನೇ ಮಾರ್ಚ್ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀ.ದೇವಿಸಿಂಗ್ ಶೇಕಾವತ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. 


 ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಮಹಾರಾಷ್ಟ್ರ ಶಿಕ್ಷಣ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಶಿಕ್ಷಣ ಸಚಿವರಾದ ಶ್ರೀ.ರಾಜೇಂದ್ರ ದರ್ದಾರವರು ಇದೇ ತಿಂಗಳ 10ನೇ ಮಾರ್ಚ್ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ  
ಹಿಮಾಚಲ ಪ್ರದೇಶದ ರಾಜ್ಯಪಾಲರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ.ಊರ್ಮಿಳಾ ಸಿಂಗ್ ರವರು ಇದೇ ತಿಂಗಳ 10ನೇ ಮಾರ್ಚ್ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ರಾಜ್ಯಪಾಲರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, March 7, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಇದೇ ತಿಂಗಳ 7ನೇ ಮಾರ್ಚ್ 2012, ಬುಧವಾರ ದಂದು ಗುರುಸ್ಥಾನ ಮಂದಿರದ ಬಳಿ ಹೋಳಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆ ಯವರು ವಿಶೇಷ ಪೂಜೆಯನ್ನು ನೆರವೇರಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, March 6, 2012

10ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ - ಕೃಪೆ: ಸಾಯಿಅಮೃತಧಾರಾ.ಕಾಂ  

ಬೆಂಗಳೂರಿನ ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರವು ತನ್ನ 10ನೇ ವಾರ್ಷಿಕೋತ್ಸವವನ್ನು ಇದೇ ತಿಂಗಳ 9ನೇ ಮಾರ್ಚ್ 2012, ಶುಕ್ರವಾರ ಮತ್ತು 10ನೇ ಮಾರ್ಚ್ 2012, ಶನಿವಾರ ದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. 

ಕಾರ್ಯಕ್ರಮದ ವಿವರ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದ ಮಾಹಿತಿಗಾಗಿ ಈ ಕೆಳಗೆ ಲಗತ್ತಿಸಿರುವ ಆಮಂತ್ರಣ ಪತ್ರವನ್ನು ಸಾಯಿಭಕ್ತರು ನೋಡಬಹುದು. 



ಮೇಲಿನ 10ನೇ ವಾರ್ಷಿಕೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಸಾಯಿ ಮಂದಿರದ ಆಡಳಿತ ಮಂಡಳಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ   
ಖ್ಯಾತ ಹಿಂದಿ ಚಿತ್ರನಟ ಅಶುತೋಷ್ ರಾಣಾ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಖ್ಯಾತ ಹಿಂದಿ ಚಿತ್ರನಟ ಅಶುತೋಷ್ ರಾಣಾ ಇದೇ ತಿಂಗಳ 6ನೇ ಮಾರ್ಚ್ 2012, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು.


 ಕನ್ನಡ ಅನುವಾದ: ಶ್ರೀಕಂಠ ಶರ್ಮ