Tuesday, January 18, 2011

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ (ನೋಂದಣಿ), ನಂ.4 ಮತ್ತು 5, ಎಸ್.ಎಲ್.ಹೆಚ್.ನಿಲಯ, ಸಾಯಿ ಮಂದಿರ ರಸ್ತೆ, ಕಾವೇರಿ ಬಡಾವಣೆ, ಕಾಫಿ ಬೋರ್ಡ್ ಲೇಔಟ್ ಹತ್ತಿರ, ಹೆಚ್.ಎ.ಫಾರಂ ಅಂಚೆ, ಬೆಂಗಳೂರು-560 024. ಕರ್ನಾಟಕ- ಕೃಪೆ: ಸಾಯಿಅಮೃತಧಾರಾ.ಕಾಂ

ಈ ಸಾಯಿ ಮಂದಿರವು ಬೆಂಗಳೂರಿನ ಹೆಬ್ಬಾಳದ ಬಳಿಯಲ್ಲಿರುವ ಕಾವೇರಿ ಬಡಾವಣೆಯಲ್ಲಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು 

  • ಈ ಮಂದಿರದ ಭೂಮಿಪೂಜೆಯನ್ನು ಮೇ 2001 ರಲ್ಲಿ ಮಾಡಲಾಯಿತು. 
  • ಈ ಮಂದಿರದ ಪ್ರತಿಷ್ಟಾಪನೆಯನ್ನು ಸಾಯಿಭಕ್ತರು ಮತ್ತು ಟ್ರಸ್ಟ್ ನ ಸದಸ್ಯರ ಸಹಯೋಗದೊಂದಿಗೆ 9 ಮತ್ತು 10ನೇ ಮಾರ್ಚ್ 2002 ರಂದು ನೆರವೇರಿಸಲಾಯಿತು. 
  • ಮಂದಿರದ ಹೊರ ಆವರಣದಲ್ಲಿರುವ ತುಳಸಿ ಬೃಂದಾವನವನ್ನು 8ನೇ ಮಾರ್ಚ್ 2002 ರಂದು ಸ್ಥಾಪಿಸಲಾಯಿತು. 
  • ಗುರುಸ್ಥಾನವನ್ನು ಜುಲೈ 2002 ರಲ್ಲಿ ಪ್ರಾರಂಭಿಸಲಾಯಿತು. ಸರ್ವಧರ್ಮ ಸಮನ್ವಯವನ್ನು ಸೂಚಿಸುವ ಎಲ್ಲಾ ಧರ್ಮಗಳ ಚಿನ್ಹೆಗಳನ್ನು ಒಳಗೊಂಡಿರುವ ಅಮೃತ ಶಿಲೆಯ ಪವಿತ್ರ ಪಾದುಕೆಗಳನ್ನು,ದತ್ತಾತ್ರೇಯ ಮತ್ತು ಸಾಯಿಬಾಬಾರವರ ಪುಟ್ಟ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಪವಿತ್ರ ಬೇವಿನ ಮರವನ್ನು ಕೂಡ ಇಲ್ಲಿ ಸಾಯಿಭಕ್ತರು ನೋಡಬಹುದು. 
  • ಅಮೃತ ಶಿಲೆಯಲ್ಲಿ ಮಾಡಿರುವ ಕಮಲದ ಎಲೆಯ ಮೇಲೆ ನಿಂತಿರುವ ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿಬಾಬಾರವರ ಸುಂದರ ವಿಗ್ರಹವನ್ನು 14ನೇ ಜೂನ್ 2007 ರಂದು ಪ್ರತಿಷ್ಟಾಪಿಸಲಾಯಿತು. 
  • ಗಣೇಶ ಮತ್ತು ಸುಬ್ರಮಣ್ಯ ದೇವರುಗಳು ಪರಸ್ಪರ ಆಲಿಂಗನ ಮಾಡಿಕೊಂಡಿರುವಂತೆ ಕಾಣುವ ಸುಂದರ ಕಪ್ಪು ಶಿಲೆಯ ವಿಗ್ರಹವನ್ನು 15ನೇ ಸೆಪ್ಟೆಂಬರ್ 2010 ರಂದು ಪ್ರತಿಷ್ಟಾಪಿಸಲಾಯಿತು. 






ಮಂದಿರದ ಕಾರ್ಯಚಟುವಟಿಕೆಗಳು:

ಮಂದಿರದ ಪೂಜಾ ಸಮಯ:
ಗುರುವಾರ: ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿ. ರಾತ್ರಿ  7:30 ಕ್ಕೆ ಪೂಜೆ ಮತ್ತು ಶೇಜಾರತಿ. 
ಭಾನುವಾರ : ಬೆಳಿಗ್ಗೆ  5:15 ಕ್ಕೆ ಕಾಕಡಾ ಆರತಿ. ರಾತ್ರಿ  8:00 ಕ್ಕೆ ಪೂಜೆ ಮತ್ತು ಭಜನೆ ಕಾರ್ಯಕ್ರಮ.


ವಿಶೇಷ ಉತ್ಸವದ ದಿನಗಳು: 
  1. ಮಕರ ಸಂಕ್ರಾಂತಿ 
  2. ಆದಿಶೇಷ ದರ್ಶನ 3ನೇ ಫೆಬ್ರವರಿಯಂದು. 
  3. ಮಹಾಶಿವರಾತ್ರಿ.
  4. ಮಂದಿರ ಪ್ರತಿಷ್ಠಾಪನಾ ದಿವಸ ಪ್ರತಿ ವರ್ಷ 9 ಮತ್ತು 10ನೇ ಮಾರ್ಚ್.
  5. ಯುಗಾದಿ.
  6. ಶ್ರೀರಾಮನವಮಿ. 
  7. ನರಸಿಂಹ ಜಯಂತಿ. 
  8. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷ 12, 13 ಮತ್ತು 14ನೇ ಜೂನ್.
  9. ಗುರುಪೂರ್ಣಿಮೆ. 
  10. ಗೋಕುಲಾಷ್ಟಮಿ. 
  11. ಗಣೇಶ ಚತುರ್ಥಿ.
  12. ವಿಜಯದಶಮಿ. 
  13. ದೀಪಾವಳಿ. 
  14. ಸುಬ್ರಮಣ್ಯ ಷಷ್ಠಿ. 
  15. ಹನುಮಾನ್ ಜಯಂತಿ. 
  16. ದತ್ತಾತ್ರೇಯ ಜಯಂತಿ. 
  17. ವೈಕುಂಠ ಏಕಾದಶಿ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಕಾವೇರಿ ಬಡಾವಣೆ, ಕಾಫಿ ಬೋರ್ಡ್ ಲೇಔಟ್ ಹತ್ತಿರ.

ವಿಳಾಸ:  
ಶ್ರೀ ಶ್ರೀ ಶ್ರೀ ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ (ನೋಂದಣಿ), 
ನಂ.4 ಮತ್ತು 5, ಎಸ್.ಎಲ್.ಹೆಚ್.ನಿಲಯ, ಸಾಯಿ ಮಂದಿರ ರಸ್ತೆ, ಕಾವೇರಿ ಬಡಾವಣೆ, 
ಕಾಫಿ ಬೋರ್ಡ್ ಲೇಔಟ್ ಹತ್ತಿರ, ಹೆಚ್.ಎ.ಫಾರಂ ಅಂಚೆ, 
ಬೆಂಗಳೂರು-560 024. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ:  
ಶ್ರೀ.ಹೆಚ್.ಪಿ.ರಾಮದಾಸ್.

ದೂರವಾಣಿ ಸಂಖ್ಯೆ: 
+91 80 2233 0963 / +91 99001 72963 

ಈ ಮೇಲ್ ವಿಳಾಸ:

ಮಾರ್ಗಸೂಚಿ: 
ಮೆಜಿಸ್ಟಿಕ್ ನಿಂದ – ಯಲಹಂಕ, ಜಕ್ಕುರ್ ಗೆ ತೆರಳುವ ಎಲ್ಲಾ ಬಸ್ ಗಳು -  ಹೆಬ್ಬಾಳ್ ಡೈರಿ ಗೇಟ್ ಬಸ್ ನಿಲ್ದಾಣದ ಬಳಿ ಇಳಿಯುವುದು, ಎಸ್ಟೀಮ್ ಮಾಲ್ ಎದುರು ಸುಮಾರು ಎರಡು ಕಿಲೋಮೀಟರ್ ಒಳಗಡೆ ನಡೆಯಬೇಕು. 
-         287 C – ಕೆಂಪಾಪುರ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 1 ಕಿಲೋಮೀಟರ್ ಒಳಗಡೆ ನಡೆಯಬೇಕು. 
-         287 G – ಕಾಫಿ ಬೋರ್ಡ್ ಲೇಔಟ್ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು ಅರ್ಧ ಕಿಲೋಮೀಟರ್ ಒಳಗಡೆ ನಡೆಯಬೇಕು.
ವಿಜಯನಗರದಿಂದ - 287 S – ಭುವನೆಶ್ವರಿನಗರ ದೇವಸ್ಥಾನ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 1 ಕಿಲೋಮೀಟರ್ ಒಳಗಡೆ ನಡೆಯಬೇಕು. 
ಮಾರ್ಕೆಟ್ ನಿಂದ – 287 H – ಕೆಂಪಾಪುರ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 1 ಕಿಲೋಮೀಟರ್ ಒಳಗಡೆ ನಡೆಯಬೇಕು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment