Thursday, March 31, 2011

ಜತನಿ ಸಾಯಿಬಾಬಾ ಮಂದಿರದ ವತಿಯಿಂದ ಸಾಯಿ ಸಚ್ಚರಿತ್ರೆ ಆಧಾರಿತ  ಕ್ವಿಜ್ ಕಾರ್ಯಕ್ರಮ - 31ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ   

ಒರಿಸ್ಸಾದ ಜತನಿ ಸಾಯಿಬಾಬಾ ಮಂದಿರದ ವತಿಯಿಂದ ಮುಂದಿನ ತಿಂಗಳ 24ನೇ ಏಪ್ರಿಲ್  2011, ಭಾನುವಾರದಂದು ಸಂಜೆ 6 :30 ರಿಂದ ಶ್ರೀ ಸಾಯಿ ಸಚ್ಚರಿತೆ ಆಧಾರಿತ ಕ್ವಿಜ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ವಿಜ್ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬಹುದಾಗಿದೆ. 

ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ತಮ್ಮ ಹೆಸರನ್ನು 20ನೇ ಏಪ್ರಿಲ್ 2011 ರ ಒಳಗಾಗಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಟ್ರಾಫಿಕ್ ಕಾಲೋನಿ, ಜತನಿ, ಕುರ್ದಾ ರಸ್ತೆ, ಒರಿಸ್ಸಾ ರವರ ಹತ್ತಿರ ನೊಂದಾಯಿಸಬಹುದಾಗಿದೆ. 

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 9178265499, 9658939740, 9861891152 & 9861709599 ಅಥವಾ ಈ ಮೇಲ್ ವಿಳಾಸ csai@saimail.com ವನ್ನು ಸಂಪರ್ಕಿಸಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, March 30, 2011

ಸಾಯಿ ಭಜನ ಗಾಯಕಿ - ಶ್ರೀಮತಿ.ಹರ್ಲೀನ್ ಕೊಹ್ಲಿ  - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಖ್ಯಾತ ಸಾಯಿ ಭಜನ ಗಾಯಕಿ ಮತ್ತು ಗಜಲ್ ಗಾಯಕಿ. ಇವರು ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಪ್ರಖ್ಯಾತ ಗಾಯಕಿಯಾಗಿ ಹೆಸರು ಮಾಡಿದ್ದಾರೆ. ಇವರು ೨೧ ನೆ ಸೆಪ್ಟೆಂಬರ್ ೧೯೭೬ ರಂದು ಪಂಜಾಬ್ ನ ಸಂಗ್ರುರ್ ನಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಎಸ್.ಪಿ.ಎಸ್.ಕೊಹ್ಲಿ ಮತ್ತು ತಾಯಿಯವರು ಶ್ರೀಮತಿ.ಗುರುಚರಣ್. ಪ್ರಸ್ತುತ ಇವರು ತಮ್ಮ ಪತಿ ಶ್ರೀ.ಪ್ರದೀಪ್ ಸಿಂಗ್ ಮತ್ತು ಮಗಳು ಕುಮಾರಿ.ರಿಯಾಜ್ ರೊಂದಿಗೆ ದೆಹಲಿಯಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. ಇವರು ತಮ್ಮ ಗಾಯನ ವೃತ್ತಿಯನ್ನು ಮುಂದುವರಿಸುತ್ತಿರುವುದೇ ಅಲ್ಲದೇ ದೆಹಲಿಯ ಪ್ರತಿಷ್ಟಿತ ಶಾಲೆ ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆಯನ್ನು ಕೂಡ ಸಲ್ಲಿಸುತ್ತಿದ್ದಾರೆ. 

ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಸಂಗೀತದಲ್ಲಿ ಬಿ.ಎ.ಹಾನರ್ಸ್ ಪದವಿಯನ್ನು ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 

ಶ್ರೀಮತಿ.ಹರ್ಲೀನ್ ರವರಿಗೆ ಸಂಗೀತ ರಕ್ತಗತವಾಗಿ ಬಂದಿದೆ. ಇವರು ತಮ್ಮ ಸಂಗೀತ ಶಿಕ್ಷಣವನ್ನು ಪಂಡಿತ್ ಭೀಮಸೇನ ಶರ್ಮ ಮತ್ತು ಪಂಜಾಬ್ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದ ನಿವೃತ್ತ ಚೇರ್ಮೆನ್ ಶ್ರೀ.ಯಶಪಾಲ್ ಶರ್ಮರವ ಬಳಿ ಪಡೆದಿರುತ್ತಾರೆ. 

ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಅನೇಕ ಸಾಯಿ ಭಜನೆ ಮತ್ತು ಗಜಲ್ ನೇರ ಪ್ರಸಾರದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಿಂದಿ, ಪಂಜಾಬಿ, ಪಾಕಿಸ್ತಾನಿ ಭಾಷೆಗಳಲ್ಲಿ ಅನೇಕ ವೀಡಿಯೋ ಆಲ್ಬಮ್ ಗಳಲ್ಲಿ ಹಾಡಿದ್ದಾರೆ. ಅಲ್ಲದೇ, ಇವರು ಅನೇಕ ಸೂಫಿ ಗೀತೆಗಳನ್ನು ಕೂಡ ಹಾಡಿದ್ದಾರೆ. 
ಶ್ರೀಮತಿ.ಹರ್ಲೀನ್ ಕೊಹ್ಲಿಯವರು ಪಂಜಾಬಿ ಭಾಷೆಯ ಅನೇಕ ವೀಡಿಯೋ ಅಲ್ಬಮ್ ಗಳನ್ನು ಹೊರತಂದಿದ್ದಾರೆ. ಅಷ್ಟೇ ಅಲ್ಲಾ, ಇವರು ಶಿರಡಿ ಸಾಯಿಬಾಬಾರವರ ಮೇಲೆ ಎರಡು ಧ್ವನಿಸುರಳಿಗಳನ್ನು ಹೊರತಂದಿದ್ದಾರೆ. 

ಶ್ರೀಮತಿ.ಹರ್ಲೀನ್ ಕೊಹ್ಲಿಯವರ ಸಾಧನೆಯ ಮೈಲಿಗಲ್ಲುಗಳನ್ನು ಈ ಕೆಳಗೆ ಕೊಡಲಾಗಿದೆ: 

ಸಾಧನೆಯ ಹೆಜ್ಜೆಗುರುತುಗಳು: 
  1. ಇವರು ತಮ್ಮ ಮೊದಲ ಆಲ್ಬಮ್ "ಸಮ್ ದಿ ದೌರಾಲ್ಯ" ವನ್ನು ಪ್ರಾಂತೀಯ ಭಾಷೆಯಾದ ಗರ್ವಾಲಿ ಭಾಷೆಯಲ್ಲಿ ಮಾಡಿದ್ದಾರೆ. 
  2. ಟೀ-ಸೀರಿಸ್ ನವರು ಪಂಜಾಬಿ ಭಾಷೆಯಲ್ಲಿ ಹೊರತಂದಿರುವ "ಇಶ್ಕ್ ಇಶ್ಕ್" ನಲ್ಲಿ ಹಾಡಿದ್ದಾರೆ. 
  3. ಬೈಸಾಕಿಯ ಅಂಗವಾಗಿ ಹೊರತಂದ ಪಂಜಾಬಿ ಆಲ್ಬಮ್ "ಪಂಜಾಬಿಯಾನ್ ದಿ ಶಾನ್ ವಕ್ರಿ"ಯಲ್ಲಿ ಹಾಡಿದ್ದಾರೆ. 
  4. ಸಹಾರಾ ಏನ್.ಸಿ.ಆರ್ ನ ಟಿವಿ ಷೋ "ಶಿಕಾರ್ ತಕ್" ನಲ್ಲಿ ಹಾಡಿದ್ದಾರೆ. 
  5. ಸಾಯಿಬಾಬಾ ರವರ ಮೇಲೆ ಹೊರತಂದ "ಸಾಯಿ ನೇ ಕಹಾ ಮೇ ಹೂ ನಾ" ನಲ್ಲಿ ಹಾಡಿದ್ದಾರೆ. 
  6. ಸಾಯಿಬಾಬಾರವರ ಮೇಲೆ ಹೊರತಂದ "ಸಾಯಿ ದೇಖ್ ರಹಾ ಹೇ" ದ ಎಲ್ಲ ಹಾಡುಗಳನ್ನು ಹಾಡಿದ್ದಾರೆ. 
ನೇರ ಪ್ರಸಾರದ ಕಾರ್ಯಕ್ರಮಗಳು:

  1. ಟಾಗೋರ್ ರಂಗಮಂದಿರ, ಚಂಡೀಘಡ ದಲ್ಲಿ ನಡೆದ ಅನೇಕ ಸಂಗೀತ ಸಂಜೆಗಳಲ್ಲಿ ಲತಾ ಮಂಗೇಶ್ಕರ್, ಮುಕೇಶ್, ಶಿವಕುಮಾರ್ ಬತಾಲ್ವಿ, ಲಕ್ಷ್ಮಿಕಾಂತ್ ಪ್ಯಾರೇಲಾಲ್ ಮತ್ತು ಇನ್ನು ಅನೇಕ ಚಿತ್ರ ಜಗತ್ತಿನ ಖ್ಯಾತನಾಮರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 
  2.  ಚಂಡೀಘಡದ ಸುಖ್ನಾ ಲೇಕ್ ನಲ್ಲಿ ನಡೆದ ನೇರಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
  3. ಚಂಡೀಘಡ ಕಾರ್ನಿವಲ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
  4. ಚಂಡೀಘಡದ ಪೆರೇಡ್ ಮೈದಾನದಲ್ಲಿ ನಡೆದ ಬೇಸಿಗೆಯ ಕಾರ್ನಿವಲ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
  5. ಚಂಡೀಘಡದ ರೋಸ್ ಗಾರ್ಡನ್ ನಲ್ಲಿ ನಡೆದು ಪಂಜಾಬ್ ನ ಲಷ್ಕಾರ ವಾಹಿನಿ ನೇರಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
  6. ರಾಕ್ ಗಾರ್ಡನ್ ನಲ್ಲಿ ನಡೆದು ಲಷ್ಕಾರ ವಾಹಿನಿ ನೇರಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
  7. ಗಿಲ್ ಎಸ್ಟೇಟ್ ನಲ್ಲಿ ನಡೆದ ಮತ್ತು ಲಷ್ಕಾರ ವಾಹಿನಿ ನೇರಪ್ರಸಾರ ಮಾಡಿದ "ಮಿಲಾನಿಯಂ ಮ್ಯುಸಿಕಲ್  ಬ್ಲಾಸ್ಟ್" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
  8. ಮೊಹಾಲಿ ಕಾರ್ನಿವಲ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
  9. ದಿ ಟ್ರಿಬ್ಯೂನ್ ಏರ್ಪಡಿಸಿದ್ದ ಮೊಹಾಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
  10. ಚಂಡೀಘಡದ ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
  11. ನಾರ್ತ್ ಜೋನ್ ಕಲ್ಚರಲ್ ಸೆಂಟರ್ ನವರು ಕಲಾಗ್ರಾಮ್, ಚಂಡೀಘಡದಲ್ಲಿ ಏರ್ಪಡಿಸಿದ್ದ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
  12. ಚಂಡೀಘಡದ ಪ್ರಾಚೀನ ಕಲಾ ಕೇಂದ್ರದಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
  13. ಹರಿಯಾಣ ಟೂರಿಸಂ ನವರು ಏರ್ಪಡಿಸಿದ್ದ ಮಾವಿನ ಹಣ್ಣಿನ ಮೇಳದಲ್ಲಿ 3 ಬಾರಿ ಕಾರ್ಯಕ್ರಮ ನೀಡಿದ್ದಾರೆ.  
  14. ನಾರ್ತ್ ಜೋನ್ ಕಲ್ಚರಲ್ ಸೆಂಟರ್ ನವರು ಶಿಮ್ಲಾದ ಗೈಟಿ ಥಿಯೇಟರ್ ನಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
  15. ನಾರ್ತ್ ಜೋನ್ ಕಲ್ಚರಲ್ ಸೆಂಟರ್ ನವರು ಚಂಬಾದಲ್ಲಿ 3 ದಿನಗಳ ಕಾಲ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 
  16. ಜೈಪುರ್ ಕ್ಲಬ್ ನವರು ಏರ್ಪಡಿಸಿದ್ದ ಮೇ ಕ್ವೀನ್ ಬಾಲ್ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
  17. ಘಾಯ್ ಫಿಲಂಸ್ ನವರು ಗುರ್ ಗಾವ್ ನಲ್ಲಿ ಏರ್ಪಡಿಸಿದ್ದ ದೀಪಾವಳಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
  18. ಅನೇಕ ಸಾಯಿ ಭಜನ ಸಂಧ್ಯಾ ನೇರ ಪ್ರಸಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 
ಇಷ್ಟೇ ಅಲ್ಲದೇ, ಇನ್ನು ಅನೇಕ ನೇರ ಪ್ರಸಾರದ ಕಾರ್ಯಕ್ರಮಗಳು, ದೂರದರ್ಶನ ಮತ್ತು ಖಾಸಾಗಿ ವಾಹಿನಿಗಳ ಸಂದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಶ್ರೀಮತಿ.ಹರ್ಲೀನ್ ಕೊಹ್ಲಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ವಿಳಾಸ:
ಆಶೀರ್ವಾದ್ ಅಪಾರ್ಟ್ ಮೆಂಟ್ಸ್, 
ಪ್ಲಾಟ್ ನಂ.11, ಬಿ-63, ಸೆಕ್ಟರ್ 12, 
ದ್ವಾರಕ ,ನವದೆಹಲಿ- 110 075.

ದೂರವಾಣಿ ಸಂಖ್ಯೆಗಳು: 
+91 11 2803 5002/+91 98919 77624/+91 98919 77258

ಈ ಮೇಲ್ ವಿಳಾಸ: 
harleen_music@yahoo.comriyaazproduction@gmail.com, riyaaz.harleen@gmail.com, saiharleen@gmail.com
  
ಅಲ್ಬಮ್ ಗಳು:
ಸಾಯಿ ನೇ ಕಹಾ ಮೇ ಹೂ ನಾ, ಸಾಯಿ ದೇಖ್ ರಹಾ ಹೇ

ಭಜನೆಗಳು: 






ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶಿರಡಿ ಸಾಯಿಬಾಬಾರವರ  ಹಿಂದಿ  ಭಕ್ತಿ  ಗೀತೆಗಳ ಧ್ವನಿಸುರಳಿ "ಸಾಯಿ ದೇಖ್ ರಹಾ ಹೈ" ಬಿಡುಗಡೆ ಸಮಾರಂಭದ ಒಂದು ವರದಿ - 30ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಶಿರಡಿ ಸಾಯಿಬಾಬಾರವರ ಮೇಲೆ ರಚಿಸಿದ ಹಿಂದಿ ಭಕ್ತಿ ಗೀತೆಗಳ ಧ್ವನಿಸುರಳಿ "ಸಾಯಿ ದೇಖ್ ರಹಾ ಹೈ" ನ್ನು  ಕಳೆದ ತಿಂಗಳ 10ನೇ ಫೆಬ್ರವರಿ 2011 ರಂದು ದೆಹಲಿಯ ಲೋಧಿ ರಸ್ತೆಯ ಸಾಯಿಬಾಬಾ ಮಂದಿರದ ಕಾರ್ಯದರ್ಶಿ ಶ್ರೀ.ಹರೀಶ್ ಅಬ್ರೊಲ್ ರವರು ಬಿಡುಗಡೆಗೊಳಿಸಿದರು. 


ಈ ಸಂದರ್ಭದಲ್ಲಿ ಶ್ರೀಮತಿ.ಹರ್ಲೀನ್ ಕೊಹ್ಲಿಯವರು ತಾವೇ ರಚಿಸಿದ  "ಸಾಯಿ ಆರ್ದಾಸ್" ಎಂಬ ಭಕ್ತಿ ಗೀತೆಯನ್ನು ಹಾಡಿ ನೆರೆದಿದ್ದ ಸಾಯಿಭಕ್ತರನ್ನು ರಂಜಿಸಿದರು. 

ಈ ಧ್ವನಿಸುರಳಿಯಲ್ಲಿ ಸಾಯಿಬಾಬಾರವರ ಮೇಲೆ ರಚಿಸಿದ 8 ಭಕ್ತಿಗೀತೆಗಳಿದ್ದು ಶ್ರೀ.ಪ್ರದೀಪ್ ಸಿಂಗ್ ಮತ್ತು ಶ್ರೀ.ಸಿದ್ದಾರ್ಥ್ ಸೌರಭಸಿಂಗ್ ರವರುಗಳು ಜಂಟಿಯಾಗಿ ಹೊರತಂದಿದ್ದಾರೆ. ಧ್ವನಿಸುರಳಿಗೆ ಸಂಗೀತವನ್ನು  ಮುಂಬೈನ ರಿಂಕು ಮತ್ತು ಶಂಕರ್ ರವರು ಸಂಯೋಜಿಸಿದ್ದಾರೆ. ಈ ಧ್ವನಿಸುರಳಿಯನ್ನು ಸಾಯಿಕೃಪ ಮ್ಯುಸಿಕ್ ನವರು ಬಿಡುಗಡೆಗೊಳಿಸಿದ್ದಾರೆ. 

ಈ ಧ್ವನಿಸುರಳಿಯು ಎಲ್ಲಾ ಸಾಯಿಬಾಬಾ  ಮಂದಿರಗಳಲ್ಲಿ ಮತ್ತು ಮ್ಯೂಸಿಕ್ ಸ್ಟೋರ್ ಗಳಲ್ಲಿ ಲಭ್ಯವಿದೆ. 

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಿ: 

ಶ್ರೀ.ಪ್ರದೀಪ್ ಸಿಂಗ್- +91 98919 77258
ಶ್ರೀ.ಸಿದ್ದಾರ್ಥ್ ಸೌರಭಸಿಂಗ್ - +91 98100 50738
ಶ್ರೀ.ಎಸ್.ಗುಪ್ತಾ - +91 98113 95479
ಈ ಮೇಲ್ ವಿಳಾಸ:  riyaazproduction@gmail.com / saikripa@mail.usa.com


ಕನ್ನಡ ಅನುವಾದ: ಶ್ರೀಕಂಠ ಶರ್ಮ 
   
ರಾಮನಗರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಕೋದಂಡ ರಾಮ ಸ್ವಾಮಿ ದೇವಸ್ಥಾನ, ಬಿಡದಿ ಮುಖ್ಯ ರಸ್ತೆ, ಬಿಡದಿ-562 109, ರಾಮನಗರ ಜಿಲ್ಲೆ, ಕರ್ನಾಟಕ  - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ದೇವಾಲಯ ಮತ್ತು ವಿಮಾನಗೋಪುರವನ್ನು 4ನೇ ಫೆಬ್ರವರಿ 2004 ರಂದು ಕರ್ನಾಟಕ ವಿಧಾನ ಪರಿಷತ್ ನ ಅಂದಿನ ಉಪ ಸಭಾಪತಿಯಾದ ಶ್ರೀ.ವಿ.ಆರ್.ಸುದರ್ಶನ್ ರವರು ಉದ್ಘಾಟಿಸಿದರು. 

ಕಪ್ಪು ಶಿಲೆಯ ಗಣಪತಿ, ಶ್ರೀರಾಮ ಪರಿವಾರ, ನಾಗದೇವರುಗಳು, ಅಶ್ವಥನಾರಾಯಣ, ನವಗ್ರಹ, ವೆಂಕಟೇಶ್ವರ, ಅಯ್ಯಪ್ಪ ಮತ್ತು ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹಗಳನ್ನು ದೇವಾಲಯದಲ್ಲಿ ನೋಡಬಹುದು. 

ದಶಾವತಾರ ವಿಗ್ರಹಗಳನ್ನು ದೇವಾಲಯದ ವಿಮಾನಗೋಪುರದ ಮೇಲೆ ಬಹಳ ಸುಂದರವಾಗಿ ಕೆತ್ತಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ದೇವಾಲಯದ ಸಮಯ
ಬೆಳಿಗ್ಗೆ: 6:30 AM ಇಂದ 8:30 AM ವರೆಗೆ  
ಸಂಜೆ: 6:30 PM ಇಂದ 8:00 PM ವರೆಗೆ

ಪ್ರತಿ ಶನಿವಾರ ಬೆಳಿಗ್ಗೆ 7 ಘಂಟೆಗೆ  ಕೋದಂಡರಾಮ ದೇವರಿಗೆ ಮತ್ತು ಶಿರಡಿ ಸಾಯಿಬಾಬಾರವರಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:

ಬಿಡದಿ ಮುಖ್ಯ ರಸ್ತೆ, ಬಿಡದಿ ಬಸ್ ನಿಲ್ದಾಣದ ಬಳಿ. 

ವಿಳಾಸ: 

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ, 
ಬಿಡದಿ ಮುಖ್ಯ ರಸ್ತೆ, ಬಿಡದಿ-562 109, 
ರಾಮನಗರ ಜಿಲ್ಲೆ, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಶ್ರೀನಿವಾಸ್ ಆಚಾರ್ - ಅರ್ಚಕರು. 

ದೂರವಾಣಿ ಸಂಖ್ಯೆ: 

+91 80 7282042 
ಮಾರ್ಗಸೂಚಿ: 

ಬಿಡದಿ ಬಸ್ ನಿಲ್ದಾಣದಲ್ಲಿ ಇಳಿದು ಹಿಂಭಾಗದ ಬಿಡದಿ ಮುಖ್ಯ ರಸ್ತೆಯಲ್ಲಿ 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಮೆಜಿಸ್ಟಿಕ್, ಮಾರುಕಟ್ಟೆ ಮತ್ತು ಶಿವಾಜಿನಗರದಿಂದ ಬಿಡದಿಗೆ ಹೋಗುವ ಎಲ್ಲ ಬಸ್ ಗಳು ಬಿಡದಿ ಬಸ್ ನಿಲ್ದಾಣದಲ್ಲಿ ನಿಲ್ಲುತ್ತವೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, March 29, 2011

ಚಿತ್ತೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್, ಕರ್ವೇಟ್   ನಗರ-517 582,  ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ಸಾಯಿಬಾಬಾ ಮಂದಿರವನ್ನು 1998 ರ ವಿಜಯದಶಮಿಯಂದು ಸಾಯಿಬಾಬಾರವರ ದೊಡ್ಡ ಚಿತ್ರಪಟವನ್ನು ಕರ್ವೇಟ್ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತಂದು ಸಾಯಿಬಾಲಾಜಿ ನಗರದ ಒಂದು ಸಣ್ಣ ಜೋಪಡಿಯಲ್ಲಿ ಸ್ಥಾಪಿಸುವ ಮುಖಾಂತರ ಪ್ರಾರಂಭಿಸಲಾಯಿತು. 

ಪ್ರಪ್ರಥಮವಾಗಿ ಶ್ರೀ.ಆರ್.ಎಸ್.ಸಿ.ಬೋಸ್ ರವರು ಅಧ್ಯಕ್ಷರಾಗಿ  ಮತ್ತು ಅಣ್ಣಮ್ ದಾಮೋದರಂ ರವರು ಕಾರ್ಯದರ್ಶಿಗಳಾಗಿ ಈ ಮಂದಿರವನ್ನು ಸ್ಥಳೀಯ ಸಾಯಿಭಕ್ತರ ಸಹಕಾರದೊಂದಿಗೆ ದಿನದಿಂದ ದಿನಕ್ಕೆ ಅಭಿವೃದ್ದಿ ಪಥದಲ್ಲಿ ಕೊಂಡೊಯ್ದರು. ಹಿಂದೆ ಇದ್ದ ಸಣ್ಣ ಮಂದಿರದ ಪಕ್ಕದಲ್ಲಿ ಇದ್ದ ಸ್ಥಳವನ್ನು ಖರೀದಿಸಿ ಒಂದು ಪ್ರಾರ್ಥನಾ ಮಂದಿರ, ಸತ್ಸಂಗ ಸ್ಥಳ ಮತ್ತು ಇತರ ಸೌಕರ್ಯಗಳನ್ನು ಒದಗಿಸಿದರು. 

ಈ ಮಂದಿರದಲ್ಲಿ ನಿಯಮಿತವಾಗಿ ಪ್ರತಿದಿನ 4 ಆರತಿಗಳನ್ನು, ಸಾಮುಹಿಕ ಸಾಯಿ ಸಚ್ಚರಿತ್ರೆ ಪಾರಾಯಣ, ಸಾಯಿ ಭಜನೆ, ನಿತ್ಯ ಅನ್ನದಾನ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 

2006ನೇ ಇಸವಿಯಲ್ಲಿ ಶ್ರೀ.ಆರ್.ಶ್ರೀರಾಮುಲು ನಾಯ್ಡು ಆವರು ಅಧ್ಯಕ್ಷರಾಗಿ, ಶ್ರೀ.ಎಸ್.ಎಸ್.ವರ್ಮರವರು ಕಾರ್ಯದರ್ಶಿಗಳಾಗಿ ಮತ್ತು ಅಣ್ಣಮ್ ದಾಮೋದರಂ ರವರು ಜಂಟಿ ಕಾರ್ಯದರ್ಶಿಗಳಾಗಿ ಹೊಸ ದೇವಸ್ಥಾನದ ಕಮಿಟಿಯೊಂದನ್ನು ರಚಿಸಿದರು. ಈ ಹೊಸ ಕಮಿಟಿಯು ಸಾಯಿಬಾಬಾರವರಿಗೆ ದೊಡ್ಡ ದೇವಾಲಯವನ್ನು ನಿರ್ಮಿಸುವಲ್ಲಿ ಯಶಸ್ವಿಯಾಯಿತು. ನಿತ್ಯ ಅನ್ನದಾನವನ್ನು ಕೂಡ ಪ್ರಾರಂಭಿಸಲಾಯಿತು. ಮಂದಿರದಲ್ಲಿ ಮಖರಾನಿ ಅಮೃತ ಶಿಲೆಯಿಂದ ಮಾಡಿದ ಆಳೆತ್ತರದ ಸಾಯಿಬಾಬಾ ವಿಗ್ರಹ, ಗಣಪತಿ, ದತ್ತಾತ್ರೇಯ, ನಂದಿ ಮತ್ತು ಕೂರ್ಮದ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಈ ಮಹೋನ್ನತ ಕಾರ್ಯಕ್ಕೆ ಸ್ಥಳೀಯ ಸಾಯಿಭಕ್ತರು ಉದಾರವಾಗಿ ದೇಣಿಗೆ ನೀಡಿ ಸಹಕಾರ ನೀಡಿದ್ದಾರೆ. 

ದೇವಾಲಯದ ಗೋಡೆಗಳ ಮೇಲೆ ಸಾಯಿಬಾಬಾರವರ ವಿವಿಧ ಭಂಗಿಗಳ ಆಳೆತ್ತರದ ಚಿತ್ರಪಟಗಳನ್ನು ತೂಗುಹಾಕಲಾಗಿದೆ. 

ದೇವಾಲಯದ ಮಹಾ ಕುಂಭಾಭಿಷೇಕವನ್ನು ಮತ್ತು ಸಾಯಿಬಾಬಾ ವಿಗ್ರಹದ ಪ್ರಾಣಪ್ರತಿಷ್ಟಾಪನೆಯನ್ನು ದೆಹಲಿಯ ಪರಮ ಪೂಜ್ಯ ಗುರೂಜಿ ಶ್ರೀ.ಚಂದ್ರ ಭಾನು ಸತ್ಪತಿಯವರು 26ನೇ ಆಗಸ್ಟ್ 2007 ರಂದು ಅತ್ಯಂತ ವೈಭವದಿಂದ ನೆರವೇರಿಸಿದರು. ತಿರುಪತಿಯ ಎಸ್.ವಿ.ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಪಿ.ರಘುನಾಥ ರೆಡ್ಡಿ, ತಿರುಪತಿಯ ಶ್ರೀ.ಶಿರಡಿ ಸಾಯಿ ಕಲ್ಯಾಣಂ ಟ್ರಸ್ಟ್ ನ ಶ್ರೀ.ಪಿ.ಜಿ.ಪ್ರಸುನ ರವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. 








ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ
ಮಂಗಳಾರತಿ (ಛೋಟಾ ಆರತಿ): ಬೆಳಿಗ್ಗೆ 8 ಘಂಟೆಗೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12:30 ಕ್ಕೆ
ಧೂಪಾರತಿ: ಸಂಜೆ 6:30 ಕ್ಕೆ
ಶೇಜಾರತಿ: ರಾತ್ರಿ 8 ಘಂಟೆಗೆ

ಪ್ರತಿನಿತ್ಯ ಬೆಳಗಿನ ಜಾವ 7:00 ಘಂಟೆಗೆ  ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. 
ಪ್ರತಿ ತಿಂಗಳ ಮೊದಲ ಗುರುವಾರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. 
ಪ್ರತಿ ಗುರುವಾರ ಧೂಪಾರತಿಯ ನಂತರ ಸಾಯಿಭಜನೆಯ ಕಾರ್ಯಕ್ರಮವಿರುತ್ತದೆ. 
ಪ್ರತಿದಿನ ಮಧ್ಯಾನ್ಹ ಆರತಿಯ ನಂತರ ಅನ್ನದಾನ ಕಾರ್ಯಕ್ರಮವಿರುತ್ತದೆ. 
ಪ್ರತಿದಿನ ಮಂದಿರದಲ್ಲಿ ಸಾಯಿ ಸಚ್ಚರಿತ್ರೆ ಮತ್ತು ಗುರುಚರಿತ್ರೆಯ ಪಾರಾಯಣವನ್ನು ಮಾಡಲಾಗುತ್ತದೆ. 
ಪ್ರತಿದಿನ ಸಂಜೆ 5 ಘಂಟೆಯಿಂದ 6 ಘಂಟೆಯವರೆಗೆ ಧ್ಯಾನ ತರಗತಿಯನ್ನು ನೆಡೆಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:
  1. ಪ್ರತಿ ವರ್ಷದ 1ನೇ ಜನವರಿ - ಸಾಯಿಬಾಬಾರವರಿಗೆ ಹೂವಿನ ಅಲಂಕಾರ ಮತ್ತು ಅನ್ನದಾನ ಕಾರ್ಯಕ್ರಮ.
  2. ಯುಗಾದಿ - ಪಂಚಾಂಗ ಶ್ರವಣ, ಶ್ರೀ ಸಾಯಿ ಸಚ್ಚರಿತ್ರ ಪಾರಾಯಣ. 
  3. ಶ್ರೀರಾಮನವಮಿ - ಭಜನೆಯೊಂದಿಗೆ ಮೆರವಣಿಗೆ ಮತ್ತು ಚಂದನೋತ್ಸವ. 
  4. ಮಹಾಶಿವರಾತ್ರಿ - ಸತತ 24 ಘಂಟೆಗಳ ಕಾಲ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ನಾಮ ಜಪ ಸಂಕೀರ್ತನ. 
  5. ಜುಲೈ ತಿಂಗಳ ಮೊದಲನೇ ಗುರುವಾರ - ಸಾಯಿ ಭಕ್ತರಿಂದ ಹಾಲಿನ ಅಭಿಷೇಕ. 
  6. 26ನೇ ಆಗಸ್ಟ್ - ದೇವಾಲಯದ ವಾರ್ಷಿಕೋತ್ಸವ, ಹೋಮ, ಹವನ ಕಾರ್ಯಕ್ರಮ, ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮ, ಸಾಯಿಬಾಬಾ ಭಜನೆ ಮತ್ತು ಸತ್ಸಂಗ. 
  7. ಗುರುಪೂರ್ಣಿಮೆ - ಗುರುಗೀತಾ ಪಾರಾಯಣ, ದಂಪತಿಗಳಿಂದ ಸಾಯಿ ಸತ್ಯವ್ರತದ ಆಚರಣೆ. 
  8. ಶ್ರೀ ಕೃಷ್ಣ ಜನ್ಮಾಷ್ಟಮಿ - ಶ್ರೀ ಸಾಯಿ ಸಚ್ಚರಿತ್ರ ಪಾರಾಯಣ, ಉಟ್ಟಿ ಉತ್ಸವ. 
  9. ಶ್ರೀ ವಿನಾಯಕ ಚತುರ್ಥಿ. 
  10. ವಿಜಯದಶಮಿ - ಶ್ರೀ ಸಾಯಿ ಸಚ್ಚರಿತ್ರ ಪಾರಾಯಣ ಮತ್ತು ಅನ್ನದಾನ ಕಾರ್ಯಕ್ರಮ. 
  11. ದತ್ತ ಜಯಂತಿ - ಶ್ರೀ ದತ್ತ ಚರಿತ್ರ ಪಾರಾಯಣ. 
  12. ಮುಕ್ಕೋಟಿ ಏಕಾದಶಿ - ವೈಕುಂಟ ದ್ವಾರ ಪ್ರವೇಶ, 24 ಘಂಟೆಗಳ ಕಾಲ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ನಾಮ ಜಪ ಸಂಕೀರ್ತನ. 
ಸಾಮಾಜಿಕ ಕಾರ್ಯಚಟುವಟಿಕೆಗಳು: 
  1. ನಿಯಮಿತವಾಗಿ ದೇವಾಲಯದಲ್ಲಿ ಉಚಿತ ವೈದ್ಯಕೀಯ ಮತ್ತು ಕಣ್ಣಿನ ತಪಾಸಣೆಯ ಶಿಬಿರಗಳನ್ನು ಚೆನ್ನೈನ ಪ್ರತಿಷ್ಟಿತ ಶಂಕರ ನೇತ್ರಾಲಯದ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. 
  2. ದೇವಾಲಯದಲ್ಲಿ ಪ್ರತಿನಿತ್ಯ ಬಡವರಿಗೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ದೇಣಿಗೆಗೆ ಮನವಿ: 

ದೇವಾಲಯದ ಕಾರ್ಯಕಾರಿ ಸಮಿತಿಯವರು ಸಾಯಿಬಾಬಾ ದೇವಾಲಯದ ಪಕ್ಕದಲ್ಲಿ ಅನ್ನದಾನ ಮಂಟಪ ಮತ್ತು ಧ್ಯಾನ ಮಂದಿರವನ್ನು ನಿರ್ಮಿಸಲು ಆಲೋಚನೆಯನ್ನು ಮಾಡಿರುತ್ತಾರೆ. ಈ ಒಳ್ಳೆಯ ಕಾರ್ಯಕ್ಕಾಗಿ ದೇವಾಲಯಕ್ಕೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್, ಕರ್ವೇಟ್ ನಗರ" ಇವರಿಗೆ ಸಂದಾಯವಾಗುವಂತೆ ನೀಡಬಹುದಾಗಿದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ ಮತ್ತು ಮಾರ್ಗಸೂಚಿ: 
ಪುತ್ತೂರಿನಿಂದ ಚಿತ್ತೂರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ 12 ಕಿಲೋಮೀಟರ್ ಗಳ ದೂರದಲ್ಲಿ ಸಾಯಿಮಂದಿರವಿದೆ. 

ವಿಳಾಸ: 
ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್, 
ಸಾಯಿ ಬಾಲಾಜಿ ನಗರ, ಬ್ರಾಹ್ಮಣರ ಬೀದಿ, 
ಕರ್ವೇಟ್   ನಗರ-517 582, 
ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಆರ್.ಶ್ರೀರಾಮುಲು ನಾಯ್ದು / ಶ್ರೀ.ಅಣ್ಣಂ ದಾಮೋದರಂ

ದೂರವಾಣಿ ಸಂಖ್ಯೆ: 
+91 97031 27803

ಈ ಮೇಲ್ ವಿಳಾಸ:
saidamuknr@yahoo.com


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, March 26, 2011

ಮೊದಲನೇ ವಾರ್ಷಿಕೋತ್ಸವ ಆಚರಿಸಿಕೊಂಡ ಬೆಂಗಳೂರಿನ ಶ್ರೀ ಸಾಯಿ ಧನ್ವಂತರಿ ಧ್ಯಾನ ಮಂದಿರ - 26ನೇ ಮಾರ್ಚ್ 2011   ಕೃಪೆ: ಸಾಯಿಅಮೃತಧಾರಾ.ಕಾಂ 

ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಸಾಯಿ ಧನ್ವಂತರಿ ಧ್ಯಾನ ಮಂದಿರವು ತನ್ನ ಪ್ರಥಮ ವಾರ್ಷಿಕೋತ್ಸವವನ್ನು  ಇದೇ ತಿಂಗಳ 19 ಮತ್ತು 20ನೇ ಮಾರ್ಚ್ 2011 ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡಿತು. 19ನೇ ಮಾರ್ಚ್ 2011 ರಂದು ಬೆಳಗಿನ ಕಾಕಡಾ ಆರತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆರತಿಯ ನಂತರ ಸಾಯಿಭಕ್ತರು ವಿವಿಧ ಭಾಷೆಗಳ ಸಾಯಿ ಸಚ್ಚರಿತೆಯ ಪಾರಾಯಣವನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಮಾಡಿದರು. ಸಂಜೆ ಪಾರಾಯಣ ಮುಕ್ತಾಯವಾದ ನಂತರ ಸಾಯಿಬಾಬಾರವರ ಪಲ್ಲಕ್ಕಿಯ ಉತ್ಸವವನ್ನು ಆಯೋಜಿಸಲಾಗಿತ್ತು. ಮಾರನೇ ದಿವಸ ಅಂದರೆ 20 ನೇ ಮಾರ್ಚ್ 2011 ರಂದು ಬೆಳಿಗ್ಗೆ 8 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಅಖಂಡ ಸಾಯಿ ನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, March 24, 2011

ರಂಗಪಂಚಮಿಯ ಅಂಗವಾಗಿ ಶಿರಡಿಯಲ್ಲಿ ಸಾಯಿಬಾಬಾ ರಥಯಾತ್ರೆ - 24ನೇ ಮಾರ್ಚ್ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ  

ರಂಗಪಂಚಮಿಯ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸಾಯಿಬಾಬಾರವರ ರಥಯಾತ್ರೆಯನ್ನು ಇದೇ ತಿಂಗಳ 24ರಂದು  ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಿರಡಿಯ ಗ್ರಾಮದ ಸುತ್ತಾ ಸಾಯಿಬಾಬಾರವರ ರಥವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ರಥಯಾತ್ರೆಯಲ್ಲಿ ಸಾವಿರಾರು ಸಾಯಿಭಕ್ತರು ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, March 22, 2011



ಸಾಯಿ ಭಜನ ಗಾಯಕ - ಶ್ರೀ.ಸಂದೀಪ್ ಪಾಂಡ್ಯ - ಕೃಪೆ: ಸಾಯಿಅಮೃತಧಾರಾ.ಕಾಂ  


 ಶ್ರೀ.ಸಂದೀಪ್ ಪಾಂಡ್ಯರವರು ಸಂಸ್ಕಾರ್ ಖಾಸಾಗಿ ವಾಹಿನಿಯ ಅಧಿಕೃತ ಭಜನ ಗಾಯಕರು, ಗಜಲ್ ಗಾಯಕರು ಮತ್ತು ಸಂಗೀತಗಾರರಾಗಿರುತ್ತಾರೆ. ಇವರು 15ನೇ ಜನವರಿ 1975 ರಂದು ರಾಜಸ್ಥಾನದ ಬನ್ಸ್ವಾರ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಪಿ.ರಾಜೇಂದ್ರ ಪಾಂಡ್ಯ ಮತ್ತು ತಾಯಿಯವರು ಶ್ರೀಮತಿ.ಹೇಮಸುತ ಪಾಂಡ್ಯ. ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯವರು ಸರ್ಕಾರಿ ಶಾಲೆಯಲ್ಲಿ ಉಪಾಧ್ಯಾಯರು  ಮತ್ತು ತಾಯಿಯವರು ಗೃಹಿಣಿ. ಶ್ರೀ.ಸಂದೀಪ್ ಪಾಂಡ್ಯರವರು ಗುಜರಾತ್ ನವರಾದರೂ ಕೂಡ ಬಹಳ ವರ್ಷಗಳಿಂದ ರಾಜಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಇವರು ಶ್ರೀಮತಿ.ರಾಧಿಕ ಪಾಂಡ್ಯರವರನ್ನು ವಿವಾಹವಾಗಿ ರಾಜಸ್ಥಾನದ ಬನ್ಸ್ವಾರದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ.ಸಂದೀಪ್ ಪಾಂಡ್ಯರವರು ವಿಜ್ಞಾನದಲ್ಲಿ ಪದವಿಯನ್ನು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೆ, ಮಹಾರಾಷ್ಟ್ರದ ಮೀರಜ್ ನ "ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ" ದಿಂದ  "ಸಂಗೀತ ವಿಶಾರದ" ಪದವಿಯನ್ನು ಕೂಡ ಗಳಿಸಿರುತ್ತಾರೆ. 

ಶ್ರೀ.ಸಂದೀಪ್ ಪಾಂಡ್ಯರವರು ಸಂಗೀತಗಾರರ ಮತ್ತು ಸಂಗೀತ ಪ್ರೇಮಿಗಳ ಕುಟುಂಬದಲ್ಲಿ ಜನಿಸಿದರು. ಇವರ ಮನೆಯವರೆಲ್ಲರೂ ಭಕ್ತಿ ಸಂಗೀತದಲ್ಲಿ ತಮ್ಮನ್ನು ತಾವೇ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದಲೇ ಇವರಿಗೆ ಸಹಜವಾಗಿ ಬಾಲ್ಯದಿಂದಲೇ ಸಂಗೀತದ ಬಗ್ಗೆ ಒಲವು ಬೆಳೆಯಿತು ಎಂದರೆ ತಪ್ಪಾಗಲಾರದು. ಆದರೆ ಶ್ರೀ.ಸಂದೀಪ್ ಪಾಂಡ್ಯರವರು ಬನ್ಸ್ವಾರ ದಂತಹ ಒಂದು ಸಣ್ಣ ಊರಿನಲ್ಲಿ ವಾಸಿಸುತ್ತಿದ್ದರಿಂದ ಸಂಗೀತ ಕಲಿಯಲು ಸಣ್ಣ ವಯಸ್ಸಿನಲ್ಲಿ ಬಹಳ ತೊಂದರೆಯಾಯಿತು. ಆದುದರಿಂದ ಶ್ರೀ.ಸಂದೀಪ್ ಪಾಂಡ್ಯರವರು ತಮ್ಮ ಓದಿನ ಕಡೆ ಹೆಚ್ಚಿನ ಗಮನವನ್ನು ಹರಿಸಿದರು. ನಂತರ ತಮ್ಮ ಹೈಸ್ಕೂಲ್ ಮತ್ತು ಕಾಲೇಜ್ ದಿನಗಳಲ್ಲಿ ಸಂಗೀತ ಶಿಕ್ಷಣವನ್ನು ಕ್ರಮಬದ್ಧವಾಗಿ ಕಲಿತು ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭ ಮಾಡಿದರು. ಇವರು ಅಂತರ ಶಾಲಾ, ಅಂತರ ಕಾಲೇಜು,  ಜಿಲ್ಲಾ ಮಟ್ಟದಲ್ಲಿ, ರಾಜ್ಯ  ಮಟ್ಟದಲ್ಲಿ ಮತ್ತು  ಅಂತರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಇವರು 1990ನೇ ಇಸವಿಯಲ್ಲಿ ಇನ್ನೂ ಹತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ "ಸುರ ಸಂಗಮ್" ಎಂಬ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ "ಧ್ವನಿಮುದ್ರಿತ ಗೀತೆ" ಮತ್ತು "ಧ್ವನಿ ಮುದ್ರಿತವಲ್ಲದ ಗೀತೆ" ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸುವುದರಲ್ಲಿ ಯಶಸ್ವಿಯಾದರು. 

ಈ ಪ್ರಶಸ್ತಿಯು ಶ್ರೀ.ಸಂದೀಪ್ ಪಾಂಡ್ಯರವರಿಗೆ ಸಂಗೀತ ಶಿಕ್ಷಣ ಕಲಿಯುವಂತೆ ಇನ್ನಷ್ಟು ಹೆಚ್ಚು ಉತ್ಸಾಹವನ್ನು ತುಂಬಿತು. 1995 ನೇ ಇಸವಿಯಲ್ಲಿ ಆಕಾಶವಾಣಿಯ ಧ್ವನಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂದಿನಿಂದ ಇಂದಿನವರೆಗೂ ಆಕಾಶವಾಣಿಯ ಕಾಯಂ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

2001 ರಲ್ಲಿ ದಾಹೋಡ್, ಗುಜರಾತ್ ನ  ಖ್ಯಾತ ಸಂಗೀತ ವಿದ್ವಾಂಸರಾದ ಶ್ರೀ.ಕಪಿಲ್ ದೇವ್ ತ್ರಿವೇದಿಯವರ ಪರಿಚಯವಾಯಿತು. ಶ್ರೀ.ಸಂದೀಪ್ ಪಾಂಡ್ಯರವರು ತಮ್ಮನ್ನು ಗುರು ಶಿಷ್ಯ ಪರಂಪರೆಯ ಅಡಿಯಲ್ಲಿ ಶಿಷ್ಯರನ್ನಾಗಿ ಸ್ವೀಕರಿಸುವಂತೆ ಶ್ರೀ.ಕಪಿಲ್ ದೇವ್ ತ್ರಿವೇದಿಯವನ್ನು ಕೋರಿಕೊಂಡರು. ಶ್ರೀ.ತ್ರಿವೇದಿಯವರು ಇವರನ್ನು ಸಂತೋಷದಿಂದ ತಮ್ಮ ಶಿಷ್ಯನನ್ನಾಗಿ ಸ್ವೀಕಾರ ಮಾಡಿದರು. ಶ್ರೀ.ಸಂದೀಪ್ ಪಾಂಡ್ಯರವರು ಬನ್ಸ್ವಾರದಿಂದ ಸುಮಾರು 100 ಕಿಲೋಮೀಟರ್ ದೂರವಿದ್ದ ದಾಹೋಡ್ ಗೆ ವಾರಕ್ಕೊಂದು ಬಾರಿ ಹೋಗಿ ಸಂಗೀತ ಶಿಕ್ಷಣವನ್ನು ಅಭ್ಯಾಸ ಮಾಡಿ ಬರುತ್ತಿದ್ದರು. ಹೀಗೆ ಸುಮಾರು 10 ವರ್ಷಗಳ ಕಾಲ ಸಂಗೀತ ಶಿಕ್ಷಣವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿದರು. ಹೀಗೆ ಸಂಗೀತ ಶಿಕ್ಷಣವನ್ನು ಕಲಿಯುತ್ತಿರುವಾಗಲೇ ಹಲವು ಕಾರ್ಯಕ್ರಮಗಳನ್ನೂ ಕೂಡ ನೀಡಿದರು. 2008 ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಯವರು ಏರ್ಪಡಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ "ಯುವ  ಗಾಯಕ"  ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

ನಂತರದ ದಿನಗಳಲ್ಲಿ ಶ್ರೀ.ಸಂದೀಪ್ ಪಾಂಡ್ಯರವರು ಸಂಸ್ಕಾರ್ ವಾಹಿನಿಯ ಸಂಪರ್ಕದಲ್ಲಿ ಬಂದು ಅನೇಕ ಸಂಗೀತ, ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಸಂಸ್ಕಾರ್ ವಾಹಿನಿಯ ಖಾಯಂ ಗಾಯಕರಾಗಿರುತ್ತಾರೆ. 

ಬನ್ಸ್ವಾರದ ಸಾಯಿಬಾಬಾ ಮಂದಿರದ ಮುಖಾಂತರ 2005 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡ ಶ್ರೀ.ಸಂದೀಪ್ ಪಾಂಡ್ಯರವರು ಪ್ರತಿ ಭಾನುವಾರ ತಪ್ಪದೇ ಸಾಯಿಮಂದಿರಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಇವರು 2005 ರ ಗುರುಪೂರ್ಣಿಮೆಯಂದು ತಮ್ಮ ಪ್ರಪ್ರಥಮ ಸಾಯಿ ಭಜನೆಯ ಕಾರ್ಯಕ್ರಮವನ್ನು ಬನ್ಸ್ವಾರದ ಸಾಯಿಮಂದಿರದಲ್ಲಿ ನೀಡಿದರು. ನಂತರದ ದಿನಗಳಲ್ಲಿ ಇವರು ಖ್ಯಾತ ಸಾಯಿ ಬಂಧುಗಳಾದ ಶ್ರೀ.ದೀಪಕ್ ತನೇಜ ಮತ್ತು ಶ್ರೀ.ನವನೀತ್ ಅಗ್ನಿಹೋತ್ರಿಯವರ ಸಂಪರ್ಕಕ್ಕೆ ಬಂದು ಸಾಯಿಬಾಬಾರವರ ಬಗ್ಗೆ ಒಂದು ಧ್ವನಿಸುರಳಿಯನ್ನು ಮಾಡಲು ಪ್ರೇರೇಪಣೆಯಾಯಿತು. ಈ ಧ್ವನಿಸುರುಳಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. 

ಶ್ರೀ.ಸಂದೀಪ್ ಪಾಂಡ್ಯರವರು ಬನ್ಸ್ವಾರದಲ್ಲಿ "ಸರಸ್ವತಿ ಸಂಗೀತ ಕಲಾ ಸಂಸ್ಥಾನ" ಎಂಬ ಸಂಗೀತ ಶಾಲೆಯನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಭಕ್ತಿ ಸಂಗೀತ ಮತ್ತು ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಸುವ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. 

ಶ್ರೀ.ಸಂದೀಪ್ ಪಾಂಡ್ಯರವರು ಅನೇಕ ಸಾಯಿ ಭಜನ ಸಂಧ್ಯಾ, ಆರ್ಟ್ ಆಫ್ ಲೀವಿಂಗ್ ಸತ್ಸಂಗ ಮತ್ತು ಶಾಮ್ ಎ ಗಜಲ್ ಕಾರ್ಯಕ್ರಮಗಳನ್ನು ದೇಶದಾದ್ಯಂತ ನೀಡುತ್ತಾ ಬಂದಿದ್ದಾರೆ. 

ಶ್ರೀ.ಸಂದೀಪ್ ಪಾಂಡ್ಯರವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಯಾವುವೆಂದರೆ : ಅಂತರ ರಾಜ್ಯ ರಾಷ್ಟ್ರೀಯ ಭಾವೈಕ್ಯತ ಶಿಬಿರದ ಕಾರ್ಯಕ್ರಮ, ಫಿರೋಜಪುರ-1993, ರಾಜಸ್ಥಾನ ಸರ್ಕಾರದ ಯುವ ಉತ್ಸವ -1994,1995, 12ನೇ ಅಖಿಲ ಭಾರತ ಭಾವಗೀತೆ ಮತ್ತು ಜಾನಪದ ಗೀತೆಗಳ ಸ್ಪರ್ಧೆ-1989, ರಾಷ್ಟ್ರೀಯ ಮಾನವ ಸಂಪನ್ಮೂಲ ಮಂತ್ರಾಲಯದ ಕಾರ್ಯಕ್ರಮ-1990, ಜವಾಹರ್ ಕಲಾ ಕೇಂದ್ರದ ಕಾರ್ಯಕ್ರಮ-1992,1997 ಮತ್ತು 12ನೇ ರಾಷ್ಟ್ರೀಯ ಯುವ ಉತ್ಸವ, ಪುಣೆ-2007. 2008 ರಲ್ಲಿ ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ಜೋಧಪುರದ ಮಹಾರಾಣಿಯವರಿಂದ "ಯುವ ಪುರಸ್ಕಾರ" ಪ್ರಶಸ್ತಿ, ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತಕ್ಕೆ ಇವರು ನೀಡಿದ ಕೊಡುಗೆಗೆ ರಾಜಸ್ಥಾನ ರೋಟರಿ ಸಂಸ್ಥೆಯವರಿಂದ 2011 ರಲ್ಲಿ ಸನ್ಮಾನ.

  ದುರ್ಗಾ ಮಾತಾ ಮೇಲೆ ಹಾಡಿದ ಧ್ವನಿಸುರಳಿ ಬಿಡುಗಡೆ 2010 

ಜೋಧಪುರ ಮಹಾರಾಣಿಯವರಿಂದ ಯುವ ಪುರಸ್ಕಾರ 2008

ಬನ್ಸ್ವಾರಾದ ರೋಟರಿ ಕ್ಲಬ್ ನಿಂದ 2011 ರಲ್ಲಿ ಸನ್ಮಾನ 

ಪ್ರಪಂಚದಾದ್ಯಂತ ಸಾಯಿಬಾಬಾ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಸಾಯಿ ಭಜನೆಯ ಮುಖಾಂತರ ಸಾಯಿ ಪ್ರಚಾರವನ್ನು ಮಾಡಬೇಕೆಂಬ ಹೆಬ್ಬಯಕೆ ಶ್ರೀ.ಸಂದೀಪ್ ಪಾಂಡ್ಯರವರದು.

ಶ್ರೀ.ಸಂದೀಪ್ ಪಾಂಡ್ಯರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 


ವಿಳಾಸ:

ನಿರ್ದೇಶಕರು, ಸರಸ್ವತಿ ಸಂಗೀತ ಕಲಾ ಸಂಸ್ಥಾನ, ನಾಗವಾರ, ಬನ್ಸ್ವಾರ , ರಾಜಸ್ಥಾನ.

ದೂರವಾಣಿ ಸಂಖ್ಯೆ:
+91 94133 05874

ಈ ಮೇಲ್ ವಿಳಾಸ:
Sandycom.pandya356@gmail.com

ಅಂತರ್ಜಾಲ ತಾಣ:
http://www.sandeeppandya.com

ಭಜನೆ ವೀಡಿಯೋಗಳು:







ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿ ಭಜನ ಗಾಯಕ - ಶ್ರೀ.ರವಿರಾಜ್ ನಸೇರಿ - ಕೃಪೆ: ಸಾಯಿಅಮೃತಧಾರಾ.ಕಾಂ  


ಶ್ರೀ.ರವಿರಾಜ್ ನಸೇರಿ ಯವರು ಮಧ್ಯಪ್ರದೇಶದ ಚಿನ್ದ್ವಾರಾ ದಲ್ಲಿ 2ನೇ ಜೂನ್ 1957 ರಂದು ಜನಿಸಿದರು. ಇವರ ತಂದೆ ದಿವಂಗತ ಶ್ರೀ.ನೀಲಕಂಠ ರೈ ಆತ್ಮರಾಮ ನಸೇರಿ ಮತ್ತು ತಾಯಿ ದಿವಂಗತ ಶ್ರೀಮತಿ.ವಿಮಲಾ ನಸೇರಿಯವರು. ಇವರು ಬಹಳ ದೊಡ್ಡ ಕುಟುಂಬದಲ್ಲಿ ಜನಿಸಿದರು. ಇವರಿಗೆ ಆರು ಜನ ಸಹೋದರರು ಮತ್ತು ಒಬ್ಬಳು ಸಹೋದರಿ. ಇವರ ಸಹೋದರ ಮತ್ತು ಸಹೋದರಿಯ ಕುಟುಂಬ ವರ್ಗದವರು ನಾಗಪುರ ಮತ್ತು ಚಿನ್ದ್ವಾರದಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಇವರು ಎಂ.ಕಾಂ ಮತ್ತು ಎಂ.ಎ.ಎಕನಾಮಿಕ್ಸ್ ವಿಭಾಗದಲ್ಲಿ ಪದವಿಯನ್ನು ಚಿನ್ದ್ವಾರದಲ್ಲಿ ಅಭ್ಯಾಸ ಮಾಡಿ ಗಳಿಸಿರುತ್ತಾರೆ. 

ಇವರ ಕುಟುಂಬದವರೆಲ್ಲ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರ ಕುಟುಂಬದಲ್ಲಿ ಇವರೊಬ್ಬರೇ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುತ್ತಾರೆ. ಈ ದಿನ ತಾವು ಏನೇ ಸಾಧನೆ ಅಥವಾ ಯಶಸ್ಸನ್ನು ಗಳಿಸಿದ್ದರೂ ಅದರ ಕೀರ್ತಿ ತಮ್ಮ ತಂದೆ ತಾಯಿಗಳಿಗೆ ಮತ್ತು ಶಿರಡಿ ಸಾಯಿಬಾಬಾರವರಿಗೆ ಸಲ್ಲಬೇಕು ಎಂದು ಅತ್ಯಂತ ವಿನಯಪೂರ್ವಕವಾಗಿ ಶ್ರೀ.ರವಿರಾಜ್ ನಸೇರಿಯವರು ಹೇಳುತ್ತಾರೆ. 

ಶ್ರೀ.ರವಿರಾಜ್ ನಸೇರಿಯವರು ಕಳೆದ 28 ಕ್ಕೂ ಹೆಚ್ಚು ವರ್ಷಗಳಿಂದ ಪ್ರಪಂಚದಾದ್ಯಂತ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.ಸ್ವತಃ ತಾವೇ ಹಾಡುಗಳನ್ನು ರಚಿಸಿ, ಅದಕ್ಕೆ ರಾಗಗಳನ್ನು ಹಾಕಿ ಹಾಡುವುದು ಶ್ರೀ.ರವಿರಾಜ್ ನಸೇರಿಯವರಿಗೆ ದೈವದತ್ತವಾಗಿ ಬಂದಿರುವ ಒಂದು ಕಲೆ ಎಂದರೆ ತಪ್ಪಾಗಲಾರದು. 


ಪ್ರಸ್ತುತ ಶ್ರೀ.ರವಿರಾಜ್ ನಸೇರಿಯವರು ತಮ್ಮ ಧರ್ಮಪತ್ನಿ ಶ್ರೀಮತಿ.ಅರ್ಚನ ರವಿರಾಜ್ ನಸೇರಿ, ಮಗ ಸಾಯಿ ಕಿರಣ್ ಮತ್ತು ಮಗಳು ಸೈಲಿಯೊಂದಿಗೆ ಚಿನ್ದ್ವಾರದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 


ಶ್ರೀ.ರವಿರಾಜ್ ನಸೇರಿಯವರು ಪ್ರಖ್ಯಾತ ಗಜಲ್ ಮತ್ತು ಸಾಯಿ ಭಜನ ಗಾಯಕರು. ಇವರು ಭಾರತದ ಅನೇಕ ಕಡೆಗಳಲ್ಲಷ್ಟೇ ಅಲ್ಲದೆ ಅಮೇರಿಕ, ಇಂಗ್ಲೆಂಡ್, ಕೆನಡ, ಮಲೇಶಿಯ, ಮಾರಿಷಸ್, ಸೌತ್ ಆಫ್ರಿಕಾ, ಟಾನ್ಜೇನಿಯ ಮತ್ತು ನೇಪಾಳ್ ದೇಶಗಳಲ್ಲಿ ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿ ಜನರನ್ನು ರಂಜಿಸಿದ್ದಾರೆ. 

ಶ್ರೀ.ರವಿರಾಜ್ ನಸೇರಿಯವರು ಮುಂಬೈ ದೂರದರ್ಶನ, ಸಂಸ್ಕಾರ್, ಸೋನಿ ಮತ್ತಿತರ ಪ್ರತಿಷ್ಟಿತ ವಾಹಿನಿಗಳಲ್ಲಿ ತಮ್ಮ ಭಜನೆ ಮತ್ತು ಗಜಲ್ ಕಾರ್ಯಕ್ರಮಗಳನ್ನು ತಪ್ಪದೆ ನೀಡುತ್ತಾ ಬಂದಿದ್ದಾರೆ. ಶ್ರೀ.ರವಿರಾಜ್ ನಸೇರಿಯವರು ಇದುವರೆವಿಗೂ ಸುಮಾರು 500ಕ್ಕೂ ಹೆಚ್ಚು ಭಜನೆಗಳನ್ನು ರಚಿಸಿದ್ದಾರೆ ಮತ್ತು 120ಕ್ಕೂ ಹೆಚ್ಚು ದೇಶಗಳಲ್ಲಿ ಇವರ ಭಜನೆಯ ಕೇಳುಗರನ್ನು ಹೊಂದಿದ್ದಾರೆ. ಶ್ರೀ.ರವಿರಾಜ್ ನಸೇರಿಯವರು ಇದುವರೆವಿಗೂ ಸುಮಾರು 25ಕ್ಕೂ ಹೆಚ್ಚು ಸಾಯಿ ಭಜನೆಯ ಸಿಡಿಗಳು ಮತ್ತು 5 ಡಿವಿಡಿ ಗಳನ್ನೂ ಕೂಡ ಹೊರತಂದಿದ್ದಾರೆ. 

ಶ್ರೀ.ರವಿರಾಜ್ ನಸೇರಿಯವರು ಶಿರಡಿ ಸಾಯಿಬಾಬಾ ಸಂಸ್ಥಾನ, ಮುಂಬೈನ ಸಿದ್ಧಿ ವಿನಾಯಕ ಮಂದಿರ, ತುಳಜಾಪುರ ಭವಾನಿ ದೇವಾಲಯಗಲ್ಲಿ ಅನೇಕ ಬಾರಿ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ, ಪುಟ್ಟಪರ್ತಿಯ ಪ್ರಶಾಂತಿ ನಿಲಯಂ ನಲ್ಲಿ ಕೂಡ ಅನೇಕ ಕಾರ್ಯಕ್ರಮಗಳನ್ನು ನೀಡಿ ಸತ್ಯ ಸಾಯಿಬಾಬಾ ರವರ ಕೃಪೆಗೆ ಪಾತ್ರರಾಗಿದ್ದಾರೆ. 

ಪ್ರಸ್ತುತ ಶ್ರೀ.ರವಿರಾಜ್ ನಸೇರಿಯವರು 1008 ಸಾಯಿ ಭಜನೆಗಳನ್ನು ರಚಿಸಿ ಅದಕ್ಕೆ ಸಂಗೀತ ಸಂಯೋಜನೆ ಮಾಡುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ 1008  ಸಾಯಿ ಭಜನೆಗಳನ್ನು ಅತಿ ಶೀಘ್ರದಲ್ಲಿ ಸಿ.ಡಿ.ರೂಪದಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಬಿಡುಗಡೆ ಮಾಡುವ ಯೋಚನೆ ಶ್ರೀ.ರವಿರಾಜ್ ನಸೇರಿಯವರದು. 

ಇವರ ಕೆಲವು ಸಾಧನೆಯ ಮೈಲಿಗಲ್ಲುಗಳನ್ನು ಈ ಕೆಳಗೆ ನೀಡಲಾಗಿದೆ. 
  1. 21ನೇ ನವೆಂಬರ್ 2008 ರಿಂದ 27ನೇ ನವೆಂಬರ್ 2008 ರವರೆಗೆ ಇಂಗ್ಲೆಂಡ್ ನಲ್ಲಿ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಸಾವಿರಾರು ಸಾಯಿ ಭಕ್ತರು ವೀಕ್ಷಿಸಿದರು. 
  2. 5ನೇ ಏಪ್ರಿಲ್ 2008 ರಂದು ಚಂಡಿಘಡದಲ್ಲಿ ಅನೇಕ ಪ್ರತಿಷ್ಟಿತ ವ್ಯಕ್ತಿಗಳ ಸಮ್ಮುಖದಲ್ಲಿ ವಿಶೇಷ ಗಜಲ್ ಕಾರ್ಯಕ್ರಮ.
  3. 17ನೇ ಮಾರ್ಚ್ 2008 ರಿಂದ 24ನೇ ಮಾರ್ಚ್ 2008 ರ ವರೆಗೆ ಡರ್ಬಾನ್ ನಲ್ಲಿ ನಡೆದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಾರು 9000 ಕ್ಕೂ ಹೆಚ್ಚು ಸಭಿಕರನ್ನು ರಂಜಿಸಿದರು. 
  4. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ರವರಿಂದ ಸನ್ಮಾನಿತರಾಗಿರುತ್ತಾರೆ. 
  5. ಸೆಪ್ಟೆಂಬರ್ 2000 ಇಸವಿಯಲ್ಲಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ನಡೆದ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ನಲ್ಲಿ ತಮ್ಮ ಕಾರ್ಯಕ್ರಮವನ್ನು ನೀಡಿ ಸಭಿಕರನ್ನು ರಂಜಿಸಿದ್ದಾರೆ. 
  6.  1987 ರಲ್ಲಿ ಅಂದಿನ ರಾಷ್ಟ್ರಪತಿ ಶ್ರೀ.ಗ್ಯಾನಿ ಜೈಲ್ ಸಿಂಗ್ ರವರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದಲ್ಲಿ ಒರಿಸ್ಸಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭಿಕರನ್ನು ರಂಜಿಸಿರುತ್ತಾರೆ.
 
ಶ್ರೀ.ರವಿರಾಜ್ ನಸೇರಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 
ಗಾಯಕರ ಹೆಸರು  ಶ್ರೀ.ರವಿರಾಜ್ ನಸೇರಿ
ವಿಳಾಸ 
ಡಿ-702,  ಸಿಲ್ವರ್ ಟವರ್, ಟಾಕುರ್ ಬಹುಮಹಡಿ ಕಟ್ಟಡ, ಕಂಡಿವ್ಲಿ (ಪೂರ್ವ ), ಮುಂಬೈ-400  101, ಮಹಾರಾಷ್ಟ್ರ, ಭಾರತ.
ದೂರವಾಣಿ  (R) +91 022 2854 4001
(Cell) +91 098923 06173
ಈಮೈಲ್  naseryravi@hotmail.com, rssr_002@yahoo.co.in
ಅಂತರ್ಜಾಲ ಇಲ್ಲ. 
ಅಲ್ಬಮ್ ಗಳು
ಮುಖ ದರ್ಶನ, ಸಾಯಿ ಅಭಿಲಾಷ,ಗಾಡ್  ಇನ್ ಇಂಡಿಯ, ಸಾಯಿ  ಪಾದುಕ, ಸತ್ಯ ದೀಪ ,ಪ್ರೇಮದಕ್ಷಿಣಾ, ಭಕ್ತಿ ಸಮರ್ಪಣ ಮತ್ತು ಇನ್ನು ಹಲವಾರು ಆಲ್ಬಮ್ ಗಳು.
ಭಜನೆಗಳು   
ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, March 21, 2011

ಹುಬ್ಬಳ್ಳಿಯ ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ (ನೋಂದಣಿ) ಯವರಿಂದ 4ನೇ  ಏಪ್ರಿಲ್ 2011 ರಿಂದ 13ನೇ ಏಪ್ರಿಲ್ 2011ರ ವರೆಗೆ ಶ್ರೀರಾಮನವಮಿ ಉತ್ಸವ ಮತ್ತು ದೇವಾಲಯದ ಬೆಳ್ಳಿ ಹಬ್ಬದ ಆಚರಣೆ - ಕೃಪೆ: ಸಾಯಿ ಅಮೃತಧಾರಾ.ಕಾಂ  

ಹುಬ್ಬಳ್ಳಿಯ ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ ಮುಂದಿನ ತಿಂಗಳ 4ನೇ  ಏಪ್ರಿಲ್ 2011 ರಿಂದ 13ನೇ ಏಪ್ರಿಲ್ 2011ರ ವರೆಗೆ ಶ್ರೀರಾಮನವಮಿ ಉತ್ಸವ ಮತ್ತು ದೇವಾಲಯದ ಬೆಳ್ಳಿ ಹಬ್ಬದ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಆಮಂತ್ರಣ ಪತ್ರಿಕೆಯನ್ನು ಈ ಕೆಳಗೆ ಲಗ್ಗತಿಸಲಾಗಿದೆ. ಸಾಯಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಈ ಮುಖಾಂತರ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತದೆ. 

ಕಾರ್ಯಕ್ರಮ ವಿವರಗಳು
ಕನ್ನಡ ಅನುವಾದ:ಶ್ರೀಕಂಠ ಶರ್ಮ 

Saturday, March 19, 2011

ಶಿರಡಿ ಸಮಾಧಿ ಮಂದಿರದಲ್ಲಿ ಹೋಳಿ ಹಬ್ಬದ ಆಚರಣೆ - 19ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಶಿರಡಿ ಸಮಾಧಿ ಮಂದಿರದ ಪ್ರಾಂಗಣದಲ್ಲಿ ಇಂದು ಹೋಳಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಹೋಳಿ ಪೂಜಾ ವಿಧಿ ವಿಧಾನಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆಯವರು ನೆರವೇರಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, March 11, 2011

ಖ್ಯಾತ ತೆಲುಗು ಚಲನಚಿತ್ರ ನಟ ನಾಗಾರ್ಜುನ ಶಿರಡಿ ಭೇಟಿ - 11ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಖ್ಯಾತ ತೆಲುಗು ಚಲನಚಿತ್ರ ನಟ ಶ್ರೀ.ಅಕ್ಕಿನೇನಿ ನಾಗಾರ್ಜುನರವರು ಇತ್ತೀಚಿಗೆ ತಮ್ಮ ತಾರಾಪತ್ನಿ ಶ್ರೀಮತಿ.ಅಮಲರವರೊಂದಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ತಾರಾದಂಪತಿಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ಮಾನೆಯವರು ಸತ್ಕರಿಸಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, March 10, 2011

ಮೊದಲನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಬೆಂಗಳೂರಿನ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ - 10ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಬೆಂಗಳೂರಿನ ಜಯನಗರದಲ್ಲಿರುವ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರವು ತನ್ನ ಮೊದಲನೇ ವಾರ್ಷಿಕೋತ್ಸವವನ್ನು ಇದೇ ತಿಂಗಳ 19 ಮತ್ತು 20ನೇ ಮಾರ್ಚ್ 2011 ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. 

ಕಾರ್ಯಕ್ರಮ ವಿವರಗಳು ಈ ಕೆಳಕಂಡಂತೆ ಇವೆ: 

19ನೇ  ಮಾರ್ಚ್ 2011, ಶನಿವಾರ 

ಬೆಳಿಗ್ಗೆ 7 ಘಂಟೆಯಿಂದ 52 ಅಧ್ಯಾಯಗಳು ಮುಗಿಯುವವರೆಗೆ ಅಖಂಡ ಸಾಯಿ  ಸಚ್ಚರಿತ ಪಾರಾಯಣ (ಬೇರೆ ಬೇರೆ ಭಾಷೆಗಳಲ್ಲಿ)

20ನೇ  ಮಾರ್ಚ್ 2011, ಭಾನುವಾರ 

ಬೆಳಿಗ್ಗೆ 8 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಅಖಂಡ ಸಾಯಿ ನಾಮಜಪ ( ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ).

ಸ್ಥಳ: 
ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ 
ಶ್ರೀ ಸಾಯಿ ಅಮೃತಂ, 3ನೇ ಮಹಡಿ, (ಕೆಫೆ ಕಾಫಿ ಡೇ ಮೇಲೆ)
ನಂ.1481, ಸೌತ್ ಎಂಡ್ "ಬಿ" ಅಡ್ಡರಸ್ತೆ, 28ನೇ ಮುಖ್ಯರಸ್ತೆ, 
9ನೇ ಬ್ಲಾಕ್, ರಾಗಿಗುಡ್ಡ ದೇವಾಲಯದ ಬಳಿ, 
ಜಯನಗರ, ಬೆಂಗಳೂರು-560 069.
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀಮತಿ.ಇಂದು ಮತ್ತು ಶ್ರೀ.ಆರ್.ಸತೀಶ್ 
ದೂರವಾಣಿ ಸಂಖ್ಯೆ: +91 93412 64696 
ಮಾರ್ಗಸೂಚಿ: ಜಯನಗರ ಈಸ್ಟ್ ಎಂಡ್ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ಧ್ಯಾನಮಂದಿರ ಸಿಗುತ್ತದೆ. 

ಎಲ್ಲ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಧ್ಯಾನ ಮಂದಿರದ ಕಾರ್ಯಕಾರಿ ಸಮಿತಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, March 9, 2011

ಸಾಯಿ ಭಜನ ಗಾಯಕಿ - ಶ್ರೀಮತಿ.ಮಾಲಿನಿ ಆನಪ್ಪ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀಮತಿ.ಮಾಲಿನಿ ಆನಪ್ಪರವರು 20ನೇ ಅಕ್ಟೋಬರ್ 1957 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ಪಿ.ಚೆನ್ನಕೇಶವಯ್ಯನವರು ಮತ್ತು ತಾಯಿ ಶ್ರೀಮತಿ.ನಾಗಮ್ಮ. ಇವರು ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿರುತ್ತಾರೆ ಮತ್ತು ವೀಣಾ ವಾದನದಲ್ಲಿ ಪ್ರಾಥಮಿಕ ತರಬೇತಿಯನ್ನು ವೀಣಾ ವಿದ್ವಾನ್ ಶ್ರೀಮತಿ.ಇಂದಿರಾ ಅವರಿಂದ ಕಲಿತಿರುತ್ತಾರೆ. ಇವರು 1999 ರಿಂದ ಸಾಯಿಬಾಬಾರವರ ಭಕ್ತೆಯಾಗಿರುತ್ತಾರೆ. 

ಶ್ರೀಮತಿ.ಮಾಲಿನಿ ಆನಪ್ಪನವರು 1999 ರಲ್ಲಿ "ಶ್ರೀ ಸಾಯಿ ಕಾಳಿಕಾ ಭಜನ ಮಂಡಳಿ" ಯನ್ನು ಪ್ರಾರಂಭಿಸಿ ಅದರ ಮುಖಾಂತರ ಬೆಂಗಳೂರಿನ ಪದ್ಮನಾಭನಗರದ ಶ್ರೀ.ಕಾಳಿಕಾಂಬ ದೇವಾಲಯದಲ್ಲಿ ನಿಯಮಿತವಾಗಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೆ, ಬೆಂಗಳೂರಿನ ಮತ್ತು ಮೈಸೂರಿನ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಮತ್ತು ಸಾಯಿಭಕ್ತರ ಮನೆಗಳಲ್ಲಿ ಸಾಯಿಭಜನೆಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುತ್ತಾರೆ. ಶ್ರೀಮತಿ.ಮಾಲಿನಿಯವರು ಇಲ್ಲಿಯವರೆಗೂ ಸರಿ ಸುಮಾರು 500ಕ್ಕೂ ಹೆಚ್ಚು ಸಾಯಿಭಜನೆಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. 

ಶ್ರೀಮತಿ.ಮಾಲಿನಿಯವರು ಬೆಂಗಳೂರಿನ ಚಿನ್ಮಯಿ ವಾಸವಿ ಆರ್ಯ ವೈಶ್ಯ ಟ್ರಸ್ಟ್, ರಾಮಕೃಷ್ಣ ಆಶ್ರಮ ಮತ್ತು ಕಾಳಿಕಾಂಬ ಮಂದಿರಗಳಲ್ಲಿ ನೀಡಿದ ಕಾರ್ಯಕ್ರಮಗಳಿಗಾಗಿ ಪ್ರಶಂಸೆಯನ್ನು ಗಳಿಸಿರುತ್ತಾರೆ. 

ಪ್ರಸ್ತುತ ಶ್ರೀಮತಿ ಮಾಲಿನಿಯವರು ಪತಿ ಶ್ರೀ.ಆನಪ್ಪ ಮತ್ತು ಮಗ ಮತ್ತು ಸೊಸೆಯೊಂದಿಗೆ ಬೆಂಗಳೂರಿನ ರಾಜೀವ್ ನಗರದ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀಮತಿ.ಮಾಲಿನಿ ಆನಪ್ಪನವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ. 

ವಿಳಾಸ:
ನಂ.49, 7ನೇ ಮುಖ್ಯರಸ್ತೆ,7ನೇ ಬ್ಲಾಕ್, 
4ನೇ ಹಂತ , “ಇ” ಅಡ್ಡರಸ್ತೆ, ರಾಜೀವ್ ನಗರ, 
ಬನಶಂಕರಿ 3ನೇ  ಹಂತ, ಬೆಂಗಳೂರು-560 085, ಕರ್ನಾಟಕ.

ದೂರವಾಣಿ ಸಂಖ್ಯೆಗಳು:
+91 80 2669 1051 / +91 98458 99495


 ಕನ್ನಡ ಅನುವಾದ: ಶ್ರೀಕಂಠ ಶರ್ಮ
ಖ್ಯಾತ ಹಿಂದಿ ಅಭಿನೇತ್ರಿ ಮಾಧುರಿ ದೀಕ್ಷಿತ್ ಶಿರಡಿ ಭೇಟಿ - 8ನೇ ಮಾರ್ಚ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಖ್ಯಾತ ಹಿಂದಿ ಅಭಿನೇತ್ರಿ ಶ್ರೀಮತಿ.ಮಾಧುರಿ ದೀಕ್ಷಿತ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, March 7, 2011

ಸಾಯಿ ಭಜನ ಗಾಯಕಿ - ಶ್ರೀಮತಿ.ಮೈತ್ರಿ ಶಾಂತೇಶ್ - ಕೃಪೆ: ಸಾಯಿಅಮೃತಧಾರಾ.ಕಾಂ 



ಶ್ರೀಮತಿ.ಮೈತ್ರಿ ಶಾಂತೇಶ್ ರವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ  20ನೇ ಜನವರಿ 1956 ರಂದು ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ಅಣ್ಣಪ್ಪ ಗುಡಿಗಾರ್ ಮತ್ತು ತಾಯಿಯವರು ದಿವಂಗತ ಶ್ರೀಮತಿ.ಕಮಲರವರು. ಇವರು ತಮ್ಮ ಹೈಸ್ಕೂಲ್ ವ್ಯಾಸಂಗವನ್ನು ಮುಗಿಸಿರುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಇವರ ಮನಸ್ಸು ಸಾಯಿಬಾಬಾರವರ ಕಡೆಗೆ ಸೆಳೆಯಿತು. 

ಶ್ರೀಮತಿ.ಮೈತ್ರಿ ಶಾಂತೇಶ್ ರವರು 5ನೇ ನವೆಂಬರ್ 2006 ರಿಂದ ತಮ್ಮ ಮಗಳ ಜೊತೆಗೂಡಿ ಸಾಯಿಭಜನೆಯನ್ನು ಹಾಡಲು ಪ್ರಾರಂಭಿಸಿದರು. ಇವರು ಬೆಂಗಳೂರಿನ ಮೈಸೂರು ರಸ್ತೆಯ ಹುಣಸೆಮರದಪಾಳ್ಯದಲ್ಲಿರುವ ಶಿರಡಿ ಸಾಯಿ ಅನಂದಮಯಿ ಮಂದಿರ ಮತ್ತು ಬೆಂಗಳೂರಿನ ದೊಡ್ಡಬಸ್ತಿಯಲ್ಲಿರುವ ಶಿರಡಿ ಸಾಯಿ ಜ್ಯೋತಿಮಯಿ ಮಂದಿರದಲ್ಲಿ ಸಾಯಿಭಜನೆಯನ್ನು ನಿರಂತರವಾಗಿ ತಪ್ಪದೆ ಮಾಡುತ್ತಾ ಬಂದಿರುತ್ತಾರೆ. 

ಪ್ರಸ್ತುತ ಇವರು ತಮ್ಮ ಪತಿ, ಮಗ ಮತ್ತು ಮಗಳೊಡನೆ ಬೆಂಗಳೂರಿನ ಕೆಂಗೇರಿ ಉಪನಗರದ ನಿವಾಸದಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಾ ಇದ್ದಾರೆ. 

ಶ್ರೀಮತಿ.ಮೈತ್ರಿ ಶಾಂತೇಶ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ: 
ನಂ.672/1, 1ನೇ  ಮಹಡಿ, 
7ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, 
ಕೆಂಗೇರಿ ಉಪನಗರ, ಬೆಂಗಳೂರು-560 060. ಕರ್ನಾಟಕ.

ದೂರವಾಣಿ: 
+91 84533 36959 /+91 92417 75580

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, March 4, 2011

ಬೆಂಗಳೂರಿನ ಸಾಯಿಬಾಬಾ ಸತ್ಸಂಗ ಕೇಂದ್ರ - ಶ್ರೀ.ಶಿರಡಿ ಸಾಯಿಬಾಬಾ ಸತ್ಸಂಗ, ಓಂ ರಾಜರಾಜೇಶ್ವರಿ ಡಿವೈನ್ ಎನರ್ಜಿ ಹೀಲಿಂಗ್ ಸೆಂಟರ್, ನಂ.115, 80 ಅಡಿ ರಸ್ತೆ, ಸೀತಾ ವೃತ್ತದ ಬಳಿ, ಎಸ್.ಬಿ.ಎಂ.ಕಾಲೋನಿ, ಬೆಂಗಳೂರು-560 050. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಸತ್ಸಂಗದ ವಿಶೇಷತೆಗಳು: 

ಈ ಸತ್ಸಂಗ ಕೇಂದ್ರವನ್ನು ಅಕ್ಟೋಬರ್ 2002 ರಲ್ಲಿ ಪ್ರಾರಂಭಿಸಲಾಯಿತು. 

ಸಾಯಿಬಾಬಾರವರ ಒಂದು ದೊಡ್ಡದಾದ ಮತ್ತು ಮತ್ತೊಂದು ಚಿಕ್ಕದಾದ ಸುಂದರ ಅಮೃತ ಶಿಲೆಯ ವಿಗ್ರಹಗಳು, ಸಾಯಿಬಾಬಾರವರ ಪಾದುಕೆಗಳು (ಸಾಂಕೇತಿಕ) ಮತ್ತು ಪಲ್ಲಕ್ಕಿಯನ್ನು ಸತ್ಸಂಗ ಕೇಂದ್ರದಲ್ಲಿ ನೋಡಬಹುದು. 









ಸತ್ಸಂಗ ಕೇಂದ್ರದ ಕಾರ್ಯ ಚಟುವಟಿಕೆಗಳು: 

ಕಾರ್ಯಕ್ರಮ ವಿವರ: 

ಪ್ರತಿ ಗುರುವಾರ ಸಂಜೆ 7 ಘಂಟೆಯಿಂದ 8:30 ರವರೆಗೆ ಸಾಯಿಬಾಬಾ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ವಿಶೇಷ ಉತ್ಸವದ ದಿನಗಳು: 

ಈ ಸತ್ಸಂಗ ಕೇಂದ್ರದಲ್ಲಿ ಗುರುಪೂರ್ಣಿಮೆಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. 

ಸಾಮಾಜಿಕ ಕಾರ್ಯಚಟುವಟಿಕೆಗಳು: 

ಈ ಸತ್ಸಂಗ ಕೇಂದ್ರದ ಮೇಲ್ವಿಚಾರಕಿಯಾದ ಶ್ರೀಮತಿ.ಎಸ್.ಎ.ರಾಜರಾಜೇಶ್ವರಿಯವರು ಖ್ಯಾತ ರೇಕಿ ಶಾಸ್ತ್ರ ತಜ್ಞೆ / ಪರ್ಯಾಯ ಚಿಕಿತ್ಸಾ ಪದ್ಧತಿ ಚಿಕಿತ್ಸಕರು / ಮಕ್ಕಳ ಮತ್ತು ತಂದೆ ತಾಯಿಯರ ಸಲಹೆಗಾರ್ತಿ ಯಾಗಿದ್ದು ಈ ಸತ್ಸಂಗಕ್ಕೆ ಬರುವ ಅನೇಕ ಮಕ್ಕಳು, ತಂದೆ ತಾಯಿಯರು ಮತ್ತು ಸಾಯಿ ಭಕ್ತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಕಳೆದ ಹತ್ತು ವರ್ಷಗಳಿಂದ ನೀಡುತ್ತಾ ಬಂದಿರುತ್ತಾರೆ. 

ಸತ್ಸಂಗದ ವಿಳಾಸ ಮತ್ತು ಮಾರ್ಗಸೂಚಿ

ಸ್ಥಳ: 
ಸೀತಾ ವೃತ್ತದ ಬಸ್ ನಿಲ್ದಾಣದ ಎದುರುಗಡೆ

ವಿಳಾಸ: 
ಶ್ರೀ.ಶಿರಡಿ ಸಾಯಿಬಾಬಾ ಸತ್ಸಂಗ,
ಓಂ ರಾಜರಾಜೇಶ್ವರಿ ಡಿವೈನ್ ಎನರ್ಜಿ ಹೀಲಿಂಗ್ ಸೆಂಟರ್,
ನಂ.115, 80 ಅಡಿ ರಸ್ತೆ, ಸೀತಾ ವೃತ್ತದ ಬಳಿ,
ಎಸ್.ಬಿ.ಎಂ.ಕಾಲೋನಿ, ಬೆಂಗಳೂರು-560 050. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀಮತಿ.ಎಸ್.ಎ.ರಾಜರಾಜೇಶ್ವರಿ

ದೂರವಾಣಿ ಸಂಖ್ಯೆ:
+91 80 2679 9192 / +91 81234 56009

ಈ ಮೇಲ್ ವಿಳಾಸ:
ordehc@yahoo.co.in

ಮಾರ್ಗಸೂಚಿ:
ಸೀತಾ ವೃತ್ತದ ಬಸ್ ನಿಲ್ದಾಣದಲ್ಲಿ ಇಳಿಯುವುದು. ಸತ್ಸಂಗ ಕೇಂದ್ರವು ಬಸ್ ನಿಲ್ದಾಣದ ಎದುರುಗಡೆ ಇದೆ . ಹೊಸಕೆರೆ ಹಳ್ಳಿ ಮತ್ತು ಕತ್ತರಿಗುಪ್ಪೆಗೆ ತೆರಳುವ ಎಲ್ಲ ಬಸ್ ಗಳು ಇಲ್ಲಿ ನಿಲ್ಲುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿ ಭಜನ ಗಾಯಕಿ - ಶ್ರೀಮತಿ.ಆರ್.ಸತ್ಯಲಕ್ಷ್ಮಿ - ಕೃಪೆ: ಸಾಯಿಅಮೃತಧಾರಾ.ಕಾಂ 



ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು 6ನೇ ಡಿಸೆಂಬರ್ 1949 ರಂದು ಕರ್ನಾಟಕದ ಹಾಸನ ಜಿಲ್ಲೆಯ ಅರಕಲಗೂಡು ಗ್ರಾಮದಲ್ಲಿ ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ಹೆಚ್.ಎಂ.ಗೋಪಾಲಕೃಷ್ಣ ಶೆಟ್ಟಿ ಮತ್ತು ತಾಯಿಯವರು ಶ್ರೀಮತಿ.ಗೌರಮ್ಮ. 

ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು 29ನೇ ಜೂನ್ 2003 ರಿಂದ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭ ಮಾಡಿದ್ದು ಬೆಂಗಳೂರು, ಚಿಕ್ಕಬಳ್ಳಾಪುರ, ಹಿಂದೂಪುರದ ಅನೇಕ ಸಾಯಿಬಾಬಾ ಮಂದಿರಗಳಲ್ಲಿ  ಮತ್ತು  ಸಾಯಿ ಭಕ್ತರ ಮನೆಗಳಲ್ಲಿ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದುವರೆವಿಗೂ ಇವರು ಸರಿ ಸುಮಾರು 600 ಕ್ಕೂ ಹೆಚ್ಚು ಸಾಯಿಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು ಬೆಂಗಳೂರಿನ ಬಳಿಯ ಮಾಗಡಿಯ ಶ್ರೀ.ರಾಘವೇಂದ್ರ ಸ್ವಾಮಿ ದೇವಾಲಯ ಮತ್ತು ಶ್ರೀ.ಶನಿ ಮಹಾತ್ಮ ದೇವಾಲಯಗಳಲ್ಲಿ ನೀಡಿದ ಭಜನೆಯ ಕಾರ್ಯಕ್ರಮಗಳಿಗಾಗಿ ಪುರಸ್ಕಾರವನ್ನು ಪಡೆದಿರುತ್ತಾರೆ. 

ಅಷ್ಟೇ ಅಲ್ಲದೆ, ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು ಇತ್ತೀಚಿಗೆ 2011 ರಲ್ಲಿ "ಸರ್ವಂ ಸಾಯಿ ಮಂದಿರಂ ಟ್ರಸ್ಟ್" ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಈ ಸಂಸ್ಥೆಯ ಮುಖಾಂತರ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಲ್ಲಿ ಭವ್ಯ ಸಾಯಿ ಮಂದಿರವನ್ನು ಕಟ್ಟಿಸಿ ಅದರ ಮುಖಾಂತರ ಸಾಯಿ ಪ್ರಚಾರವನ್ನು ಇನ್ನಷ್ಟು ಹೆಚ್ಚಾಗಿ ಮಾಡಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ. 

ಪ್ರಸ್ತುತ ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು ತಮ್ಮ ಪತಿ ಶ್ರೀ.ಎಲ್.ರಾಜರತ್ನಂ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ತಮ್ಮ ಹೊಸ ಗುಡ್ಡದಹಳ್ಳಿಯ ನಿವಾಸದಲ್ಲಿ ವಾಸ ಮಾಡುತ್ತಿದ್ದಾರೆ. 

ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ವಿಳಾಸ: 
ನಂ.2/2, ಮೊದಲನೇ ಮಹಡಿ, 
ಶ್ರೇಯಶ್ರೀ ಬಹುಮಹಡಿ ಸಂಕೀರ್ಣ, ನೆಹರು ರಸ್ತೆ, 
ಹೊಸ ಗುಡ್ಡದಹಳ್ಳಿ, ಬೆಂಗಳೂರು-560 026, ಕರ್ನಾಟಕ.

ದೂರವಾಣಿ:
+91 91413 88096 / +91 96630 85093

ಈ ಮೇಲ್ ವಿಳಾಸ: 
irsrinath@yahoo.com


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿ ಭಜನ ಗಾಯಕ - ಶ್ರೀ.ಎಸ್.ರಾಜಾ ದಂಡಪಾಣಿ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಎಸ್.ರಾಜಾ ದಂಡಪಾಣಿಯವರು 15ನೇ ಜುಲೈ 1962 ರಂದು ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಎಸ್.ಆರ್.ಸುಂದರ್ ರವರು ಮತ್ತು ತಾಯಿ ಶ್ರೀಮತಿ.ನಾರಾಯಣಮ್ಮ ನವರು. ಇವರು ಬಿ.ಕಾಂ (ಎಲ್.ಎಲ್.ಬಿ) ಪದವಿಯನ್ನು ಗಳಿಸಿರುತ್ತಾರೆ. ಇವರು ತಮ್ಮ ಸಂಗೀತದ ಪಯಣವನ್ನು 16ನೇ ವಯಸ್ಸಿನಲ್ಲೇ ಪ್ರಾರಂಭಿಸಿದರು. ಇವರ ತಂದೆಯವರು ಖ್ಯಾತ ಹಾರ್ಮೋನಿಯಂ ವಿದ್ವಾಂಸರಾಗಿದ್ದರು ಮತ್ತು ಇವರಿಗೆ ಸಂಗೀತದ ಮೊದಲ ಶಿಕ್ಷಣವನ್ನು ನೀಡಿದರು. ನಂತರ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳನ್ನು ಸಂಗೀತ ವಿದ್ವಾನ್ ಶ್ರೀ.ಜನಾರ್ದನ್ ರವರ ಬಳಿ ಕಲಿತರು. ನಂತರದ ದಿನಗಳಲ್ಲಿ ಹಾರ್ಮೋನಿಯಂ ವಾದನ ಮತ್ತು ಭಜನ ಗಾಯನವನ್ನು ಮತ್ತೊಬ್ಬ ಸಂಗೀತ ವಿದ್ವಾಂಸರಾದ ಶ್ರೀ.ನಾರಾಯಣಸ್ವಾಮಿಯವರ ಬಳಿ ಕಲಿತರು. 

ಶ್ರೀ.ಎಸ್.ರಾಜಾ ದಂಡಪಾಣಿಯವರು 8 ಭಾರತೀಯ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಪಂಜಾಬಿ ಭಾಷೆಗಳಲ್ಲಿ ಸಾಯಿ ಭಜನೆಗಳನ್ನು ನಿರರ್ಗಳವಾಗಿ ಮತ್ತು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದಾರೆ.

ಶ್ರೀ.ಎಸ್.ರಾಜಾ ದಂಡಪಾಣಿಯವರು 1981ನೇ ಇಸವಿಯಿಂದ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಬೆಂಗಳೂರು, ಮೈಸೂರು, ಚೆನ್ನೈ ಮತ್ತು ಮುಂಬೈ ನಗರಗಳ ಅನೇಕ ಸಾಯಿ ಮಂದಿರಗಳಲ್ಲಿ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಶ್ರೀ.ಎಸ್.ರಾಜಾ ದಂಡಪಾಣಿಯವರು ಚೆನ್ನೈನ ವಂಡವಾಸಿಯ ಕಾಳಿಯಮ್ಮ ದೇವಸ್ಥಾನ ಮತ್ತು ಚೆನ್ನೈನ ಸಾಯಿ ಬಾಬಾ ಮಂದಿರಗಳಲ್ಲಿ ನೀಡಿದ ಭಜನೆ ಕಾರ್ಯಕ್ರಮಕ್ಕಾಗಿ ಪುರಸ್ಕಾರವನ್ನು ಪಡೆದಿರುತ್ತಾರೆ. 

ಶ್ರೀ.ಎಸ್.ರಾಜಾ ದಂಡಪಾಣಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ವಿಳಾಸ: 
ನಂ.37,ಚಿಕ್ಕ ಬಜಾರ್ ರಸ್ತೆ, 
ಶಿವಾಜಿನಗರ ,ಬೆಂಗಳೂರು-560 051, ಕರ್ನಾಟಕ.

ದೂರವಾಣಿ: 
+91 98862 77790


ಕನ್ನಡ ಅನುವಾದ:ಶ್ರೀಕಂಠ ಶರ್ಮ

Thursday, March 3, 2011

ಶ್ರೀ ಶಿರಡಿ ಸಾಯಿಬಾಬಾ ಮಂದಿರ (ನೋಂದಣಿ), ಈಶ್ವರ ಮನೋಹರಿ ಸಂಘ, ನಂ.37, ಶಿವಾಜಿ ರಸ್ತೆ, ಎಲ್ಜಿನ್ ಚಿತ್ರಮಂದಿರದ ಹಿಂಭಾಗ, ಶಿವಾಜಿನಗರ, ಬೆಂಗಳೂರು-560 052 ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ - 16.03.2011 ರಿಂದ 18 -03 -2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಸಂಗ್ರಹ: ಶ್ರೀಕಂಠ ಶರ್ಮ 
ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ (ನೋಂದಣಿ), ಈಶ್ವರ ಮನೋಹರಿ ಸಂಘ, ನಂ.37, ಶಿವಾಜಿ ರಸ್ತೆ, ಎಲ್ಜಿನ್ ಚಿತ್ರಮಂದಿರದ ಹಿಂಭಾಗ, ಶಿವಾಜಿನಗರ, ಬೆಂಗಳೂರು-560 052. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು:

ಈ ಮಂದಿರವನ್ನು 26ನೇ ಫೆಬ್ರವರಿ 1966 ರಂದು ಶ್ರೀ.ಗುರೂಜೀ ರಾಮಸ್ವಾಮಿಯವರು ಪ್ರಾರಂಭಿಸಿದರು. ಮೊದಲು ಈ ಮಂದಿರದಲ್ಲಿ ಸಾಯಿ ಸಮಾಜ, ಮೈಲಾಪುರದಿಂದ ತಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಲ್ಪಟ್ಟ ಪುಟ್ಟದಾದ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿತ್ತು.

ಮಂದಿರವನ್ನು ಹೊಸದಾಗಿ ನವೀಕರಿಸಿ ಅಲ್ಲಿ ದೊಡ್ಡದಾದ ಅಮೃತ ಶಿಲೆಯ ಸಾಯಿಬಾಬಾ ವಿಗ್ರಹವನ್ನು 26ನೇ ಫೆಬ್ರವರಿ 2002 ರಂದು ಕರ್ನಾಟಕದ ತುಮಕೂರು ಜಿಲ್ಲೆಯ ಸಿದ್ದಗಂಗಾ ಕ್ಷೇತ್ರದ "ನಡೆದಾಡುವ ದೇವರು" ಎಂದೇ ಪ್ರಸಿದ್ದರಾದ ಡಾ.ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರು ಪ್ರತಿಷ್ಟಾಪಿಸಿದರು.

ಮಂದಿರದಲ್ಲಿ ಅಮೃತ ಶಿಲೆಯ ಸಾಯಿಬಾಬಾ, ಗಣೇಶ, ಕೃಷ್ಣ ದೇವರುಗಳ ವಿಗ್ರಹಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಲ್ಪಟ್ಟ ಪುಟ್ಟದಾದ ಸಾಯಿಬಾಬಾರವರ ವಿಗ್ರಹವನ್ನು ನೋಡಬಹುದು.

ಸಾಯಿಬಾಬಾರವರ ಅಮೃತ ಶಿಲೆಯ ಪಾದುಕೆಗಳನ್ನು ಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ.

ಧ್ಯಾನ ಮಂದಿರವನ್ನು ಮಂದಿರದ ಮೊದಲನೇ ಮಹಡಿಯಲ್ಲಿ ಸ್ಥಾಪಿಸಲಾಗಿದೆ.








ದೇವಾಲಯದ ಕಾರ್ಯಚಟುವಟಿಕೆಗಳು:

ಪ್ರತಿನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ
ಬೆಳಿಗ್ಗೆ      : 9:00 ಘಂಟೆ 
ಮಧ್ಯಾನ್ಹ : 12:00 ಘಂಟೆ 
ರಾತ್ರಿ      : 9:00 ಘಂಟೆ  

ಗುರುವಾರಗಳಂದು ಮತ್ತು ವಿಶೇಷ ಉತ್ಸವದ ದಿನಗಳಂದು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 251/- ರುಪಾಯಿಗಳು.  

ಗುರುವಾರಗಳಂದು ಮತ್ತು ವಿಶೇಷ ಉತ್ಸವದ ದಿನಗಳಂದು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಅಭಿಷೇಕ ಮತ್ತು ಪ್ರಸಾದ ಸೇವೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 501/-ರುಪಾಯಿಗಳು.

ವಿಶೇಷ ಉತ್ಸವದ ದಿನಗಳು:
  1. ಶ್ರೀರಾಮನವಮಿ.
  2. ದೇವಾಲಯದ ವಾರ್ಷಿಕೋತ್ಸವ 26ನೇ ಫೆಬ್ರವರಿ ಯಂದು.
  3. ಗುರುಪೂರ್ಣಿಮೆ.
  4. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ: 
ಶಿವಾಜಿ ರಸ್ತೆ, ಎಲ್ಜಿನ್ ಚಿತ್ರಮಂದಿರದ ಹಿಂಭಾಗ

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ (ನೋಂದಣಿ),
ಈಶ್ವರ ಮನೋಹರಿ ಸಂಘ, ನಂ.37, ಶಿವಾಜಿ ರಸ್ತೆ,
ಎಲ್ಜಿನ್ ಚಿತ್ರಮಂದಿರದ ಹಿಂಭಾಗ, ಶಿವಾಜಿನಗರ,
ಬೆಂಗಳೂರು-560 052. ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಸ್.ಓ.ನಾಮದೇವ ರಾವ್ / ಶ್ರೀ.ಪಿ.ಎಸ್.ಚಂದ್ರಶೇಖರ್ / ಶ್ರೀ.ಎಂ.ಬಿ.ವೇಣುಗೋಪಾಲ್ / ಶ್ರೀ.ಆರ್.ಸಾಯಿಕುಮಾರ್ / ಶ್ರೀ.ದೇವಾನಂದ್ 

ದೂರವಾಣಿ:
+91 98868 16607 / +91 98440 69619 / +91 97402 57744 / +91 98867 51330 / +91 98440 58558

ಮಾರ್ಗಸೂಚಿ: 
ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಇಳಿಯುವುದು. 5 ನಿಮಿಷ ನಡೆದರೆ ಸಾಯಿಮಂದಿರ ಸಿಗುತ್ತದೆ. ದೇವಾಲಯವು ಎಲ್ಜಿನ್ ಚಿತ್ರಮಂದಿರದ ಹಿಂಭಾಗದಲ್ಲಿ ಶಿವಾಜಿ ರಸ್ತೆಯಲ್ಲಿ ಇರುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ