Tuesday, January 18, 2011

11 ಲಕ್ಷ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಯಜ್ಞ - 18ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ

ಸುಮಾರು 60 ವರ್ಷಗಳ ಹಿಂದೆ, ಪ್ರೇಮದೂತ ಮತ್ತು ಶಿರಡಿ ಸಾಯಿಬಾಬಾರವರ ಪ್ರಿಯ ಶಿಷ್ಯರಾದ ಸಾಯಿಪಾದಾನಂದ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಬೆಂಗಳೂರಿನಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವನ್ನು ಪ್ರಚಾರ ಮಾಡಿದರು. 

ಪರಮ ಪುರುಷೋತ್ತಮ ಪರಮಾತ್ಮನ ಮತ್ತು ಗುರುದೇವರ ದಿವ್ಯಾನುಗ್ರಹಗಳಿಂದಾಗಿ ಶ್ರೀ ಸಾಯಿಪಾದಾನಂದ ಸತ್ಸಂಗವು 15ನೇ ಆಗಸ್ಟ್ 2007 ರಿಂದ 28ನೇ ಫೆಬ್ರವರಿ 2009 ರ ವರೆಗೆ ಸಹಸ್ರಾರು ಸದ್ಭಕ್ತರ ಸಹಕಾರದಿಂದಾಗಿ 11,49,625 ಪಾರಾಯಣಗಳಾಗಿ, ಇದೀಗ ಮತ್ತೆ 11 ಲಕ್ಷ ಪಾರಾಯಣಗಳನ್ನು ಭಕ್ತಕೋಟಿಯ ತೀವ್ರಾಪೇಕ್ಷೆಯಂತೆ ಸಂಕಲ್ಪಿಸಿ 1ನೇ ಮಾರ್ಚ್ 2009 ರಿಂದ ಮಾಡುತ್ತಾ ಬಂದಿದೆ, ಅಲ್ಲದೇ, 31ನೇ ಆಗಸ್ಟ್ 2011ರ ಒಳಗಾಗಿ ಪೂರ್ಣಗೊಳಿಸುವ ಇಚ್ಛೆಯನ್ನು ಕೂಡ ಹೊಂದಿದೆ.

ಈ ಯಜ್ಞ ಸಫಲವಾಗಲು, ಪ್ರತಿಯೊಬ್ಬ ಭಕ್ತರೂ ತಮ್ಮ ತಮ್ಮ ಮನೆಗಳಲ್ಲೇ ಪ್ರತಿದಿನವೂ ಕನಿಷ್ಠ 3 ಬಾರಿಯಾದರೂ (ಇನ್ನು ಹೆಚ್ಚು ಸಾರಿ ಹೇಳಿದರೂ ಸರಿಯೇ) ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಿ, ತಮಗೆ ಕೊಡುವ ಸಣ್ಣ ಪುಸ್ತಕದಲ್ಲಿ ಪಾರಾಯಣ ಸಂಖ್ಯೆಯನ್ನು ಬರೆದುಕೊಂಡು ನಂತರ ತಿಂಗಳಿಗೊಮ್ಮೆಯಾದರೂ, ತಾವು ಮಾಡಿದ ಒಟ್ಟು ಪಾರಾಯಣಗಳ ಸಂಖ್ಯೆಯನ್ನು ಸತ್ಸಂಗಕ್ಕೆ ದೂರವಾಣಿ ಅಥವಾ ಅಂಚೆಯ ಕಾರ್ಡ್ ಮುಖಾಂತರ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಡನೆ ತಿಳಿಸುವುದು. 

ಗುರು ಕಾಣಿಕೆಯಾಗಿ ಅರ್ಪಿಸುತ್ತಿರುವ ಈ ದೈವಿಕ ಕಾರ್ಯಕ್ರಮದಲ್ಲಿ ಭಕ್ತ ಬಾಂಧವರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿಪಾದಾನಂದ ಸತ್ಸಂಗವು ಮನವಿ ಮಾಡಿಕೊಳ್ಳುತ್ತದೆ. 

ಶ್ರೀ ಸಾಯಿಪಾದಾನಂದ ಸತ್ಸಂಗದ ಸಂಪರ್ಕದ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ:

ಶ್ರೀ ಸಾಯಿಪಾದಾನಂದ ಸತ್ಸಂಗ
ನಂ.29/1, ಭಗವತಿ ನಿಲಯ, 6ನೇ ಮುಖ್ಯರಸ್ತೆ,
8ನೇ ಮತ್ತು 9ನೇ ಅಡ್ಡ ರಸ್ತೆ ನಡುವೆ,
ನರಸಿಂಹರಾಜ ಕಾಲೋನಿ,
ಬೆಂಗಳೂರು-560 019.
ಕರ್ನಾಟಕ
ದೂರವಾಣಿ: 2677 0695
ಈ ಮೇಲ್: saipadananda@gmail.com

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment