Tuesday, November 30, 2010

ಸಾಯಿ ಭಜನ ಗಾಯಕರು ಮತ್ತು ನಾಟಕಕಾರರು - ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ಮತ್ತು ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ - ಕೃಪೆ: ಸಾಯಿ ಅಮೃತಧಾರಾ.ಕಾಂ

ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ಮತ್ತು ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ ಸಹೋದರರು ಅನನ್ಯ ಸಾಯಿಭಕ್ತರು. ಇವರಿಬ್ಬರು ತಮ್ಮ ಕೆಲಸಗಳನ್ನು ತೊರೆದು 1987ನೇ ಇಸವಿಯಿಂದ ಜೊತೆಗೂಡಿ ಜಯ ಮಾತಾ ದಿ ಜಾಗರಣ ಮಂಡಲ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಅಡಿಯಲ್ಲಿ ಶಿರಡಿ ಸಾಯಿಬಾಬಾ ರವರ ಸಾಯಿ ಸಚ್ಚರಿತೆ ಆಧಾರಿತ ಹಿಂದಿ ನಾಟಕವನ್ನು ಪ್ರಪಂಚದಾದ್ಯಂತ ಪ್ರಸ್ತುತಪಡಿಸುತ್ತಾ ಶಿರಡಿ ಸಾಯಿಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಪವಾಡಗಳನ್ನು, ಅವರ ಉಪದೇಶಗಳನ್ನು ಜನರಿಗೆ ಮುಟ್ಟಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. 

ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ರವರು ಪಂಜಾಬಿ ಕುಟುಂಬದಲ್ಲಿ ಜನಿಸಿದ್ದು ಅಡಿಗೆ ಮಾಡುವುದು, ಹಾಡುವುದು ಮತ್ತು ಸಮಾಜ ಸೇವೆ ಮಾಡುವ ಹವ್ಯಾಸಗಳನ್ನು ಹೊಂದಿದ್ದಾರೆ. ಇವರು ಸುಶ್ರಾವ್ಯವಾದ ಕಂಠ ಸಿರಿಯನ್ನು ಹೊಂದಿದ್ದು ಸಾಯಿ ಸಚ್ಚರಿತೆಯ ಘಟನಾವಳಿಗಳನ್ನು ಉತ್ತಮವಾದ ಹಿಂದಿ ಸಾಯಿ ಭಜನೆಗಳ ಸಹಾಯದಿಂದ ಸೊಗಸಾಗಿ ನಿರೂಪಣೆ ಮಾಡುವುದರಲ್ಲಿ ಸಿದ್ಧಹಸ್ತರು. ಅವರ ನಿರೂಪಣಾ ಶೈಲಿ ಮತ್ತು ಸಾಯಿ ಭಜನೆಗಳನ್ನು ಹಾಡುವ ರೀತಿ ಸಾಯಿ ಭಕ್ತರನ್ನು ಮಂತ್ರಮುಗ್ಧರನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ. 

ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ಬೆಂಗಳೂರಿನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿರುವುದು 

ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ ರವರು ಕೂಡ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದು ತಮ್ಮ ಸಹೋದರನಂತೆ ಅವರು ಕೂಡ ಸಮಾನ ಹವ್ಯಾಸಗಳನ್ನು ಹೊಂದಿದ್ದಾರೆ. ಇವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಆ ವೃತ್ತಿಯನ್ನೇ ತೊರೆದು ತಮ್ಮ ಸಹೋದರ ನಿರೂಪಿಸುವ ಸಾಯಿಬಾಬಾರವರ ನಾಟಕಗಳಲ್ಲಿ ಶಿರಡಿ ಸಾಯಿಬಾಬಾರವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ತಮ್ಮ ಮನೋಜ್ಞ ನಟನಾ ಕೌಶಲ್ಯದಿಂದ ಸಾಯಿಭಕ್ತರನ್ನು ತಮ್ಮೆಡೆ ಸೆಳೆಯುತ್ತಾರೆ. 

 ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ ಶಿರಡಿ ಸಾಯಿಬಾಬಾರವರ ಪಾತ್ರದಲ್ಲಿ 

ಈ ಇಬ್ಬರು ಸಹೋದರರು ಜೊತೆಗೂಡಿ ಸಾಯಿ ಜಾಗರಣೆ, ಸಾಯಿ ಸಚ್ಚರಿತೆ ಆಧಾರಿತ ನಾಟಕ ಮತ್ತು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಭಾರತದ ಅನೇಕ ರಾಜ್ಯಗಳಾದ ಮಹಾರಾಷ್ಟ್ರ, ಪಂಜಾಬ್, ದೆಹಲಿ, ಅಸ್ಸಾಂ, ಗುಜರಾತ್, ಕರ್ನಾಟಕ ಗಳಲ್ಲಿ ಅಷ್ಟೇ ಅಲ್ಲದೇ ನಮ್ಮ ನೆರೆಯ ದೇಶವಾದ ನೇಪಾಳ ದಲ್ಲಿ ಕೂಡ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂಗವಿಕಲರಿಗೆ ಮತ್ತು ಕಡುಬಡವರಿಗೆ ಸಹಾಯ ಹಸ್ತ ನೀಡುವ ಒಳ್ಳೆಯ ಉದ್ದೇಶವನ್ನು ದುಗ್ಗಲ್ ಸಹೋದರರು ಹೊಂದಿದ್ದಾರೆ. ಇವರ ತಂಡವು ಶಿರಡಿ ಸಾಯಿಬಾಬಾರವರು ಸಾಯಿ ಸಚ್ಚರಿತೆಯಲ್ಲಿ ತಮ್ಮ ಭಕ್ತರಿಗೆ ನೀಡಿರುವ ಸಂದೇಶವನ್ನು ಜಗತ್ತಿನಾದ್ಯಂತ ತಲುಪಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. 

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ:
ಜಯ ಮಾತಾ ದಿ ಜಾಗರಣ ಮಂಡಲ,
ಅಶೋಕ  ರೆಸಿಡೆನ್ಸಿ,ವಾರ್ಡ್ ಸಂಖ್ಯೆ-6, ಫ್ಲಾಟ್  ಸಂಖ್ಯೆ-ಎ/5,
ಉತ್ಸವ ಮಂಗಳ ಕಾರ್ಯಾಲಯದ ಹತ್ತಿರ ,
ಫೋಪ್ಲೆ ಚಾವಲ್ ಹತ್ತಿರ,
ಶ್ರೀರಾಮಪುರ-413 709. ಮಹಾರಾಷ್ಟ್ರ, ಭಾರತ. 


ದೂರವಾಣಿ ಸಂಖ್ಯೆಗಳು:
+91 2422-225624 / 225024 / 225660 / +91 9422235518 / +91 9822780608 / +91 9822531321

ಈ ಮೇಲ್ ವಿಳಾಸ:
dr.rohitduggal@rediffmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಬೆಂಗಳೂರಿನಲ್ಲಿ ನಡೆದ ಅಖಂಡ ಸಾಯಿನಾಮ ಜಪ ಕಾರ್ಯಕ್ರಮದ ಒಂದು ವರದಿ - 28ನೇ ನವೆಂಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ 

ಇದೇ ತಿಂಗಳ 28ನೇ ನವೆಂಬರ್ 2010, ಭಾನುವಾರದಂದು ಅನನ್ಯ ಸಾಯಿಭಕ್ತರಾದ ಡಾ.ಗಂಗಾಧರ ಶೆಟ್ಟಿಯವರ ವಿವೇಕಾನಂದ ನಗರದ  ನಿವಾಸದಲ್ಲಿ ಅಖಂಡ ಸಾಯಿನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಗುಂಟೂರಿನಿಂದ ಸಾಯಿಭಾಜನಾ ಮಂಡಳಿಯವರು ಬಂದು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಅನೇಕ ಸಾಯಿಭಕ್ತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಾಯಿಭಕ್ತ ಮತ್ತು ದಕ್ಷಿಣ ಭಾರತದಲ್ಲಿ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ತಾರಕ ಮಂತ್ರ ವನ್ನು ಅತ್ಯಂತ ಜನಪ್ರಿಯಗೊಳಿಸುವುದರಲ್ಲಿ ಕಾರಣೀಭೂತರಾದ ಶ್ರೀ.ಡಿ.ಶಂಕರಯ್ಯ ಮತ್ತು ಆಂಧ್ರಪ್ರದೇಶದ ಅತ್ಯಂತ ಜನಪ್ರಿಯ ಸಾಯಿ ಮಾಸ ಪತ್ರಿಕೆಯಾದ "ಶ್ರೀ ಸಾಯಿ ದರ್ಶನ" ದ ಸಂಪಾದಕರಾದ ಶ್ರೀ.ರಾವ್ ಜಿ ಯವರು ಭಾಗವಹಿಸಿದ್ದರು. 

 ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟ 

 ಸಾಯಿ ನಾಮ ಜಪದಲ್ಲಿ ನಿರತರಾಗಿರುವ ಗುಂಟೂರಿನ ಭಜನಾ ತಂಡ

ಶ್ರೀ.ಡಿ.ಶಂಕರಯ್ಯ ನವರು ಡಾ.ಗಂಗಾಧರ ಶೆಟ್ಟಿಯವರ ಕುಟುಂಬ ಮತ್ತು ಗಣ್ಯರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ!!!!

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, 2509 , 26ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ, 2ನೇ ಹಂತ, ಬೆಂಗಳೂರು-560 070. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ಮಂದಿರವು ಬೆಂಗಳೂರು ದಕ್ಷಿಣ ಭಾಗದ ಪ್ರತಿಷ್ಟಿತ ಬಡಾವಣೆಗಳಲ್ಲಿ ಒಂದಾದ ಬನಶಂಕರಿ ಬಡಾವಣೆಯಲ್ಲಿ ಇರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯವನ್ನು 31ನೇ ಮೇ 2009 ರಂದು ಪ್ರಾರಂಭಿಸಲಾಯಿತು. 
  • ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. 
  • ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
  • ದ್ವಾರಕಾಮಾಯಿ ಸಾಯಿಬಾಬಾ ಮತ್ತು ಚಿನ್ನದ ಸಾಯಿಬಾಬಾ ಆಳೆತ್ತರದ ಚಿತ್ರಪಟಗಳನ್ನು ದೇವಾಲಯದಲ್ಲಿ ತೂಗುಹಾಕಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು: 

ದೈನಂದಿನ ಕಾರ್ಯಕ್ರಮಗಳು 

ಆರತಿಯ ಸಮಯ

ಆರತಿ
ಸಮಯ
ಕಾಕಡಾ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
5:30 PM
ಶೇಜಾರತಿ
8:30 PM

ಪ್ರತಿ ಗುರುವಾರ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಸಾಯಿ ಸಹಸ್ರನಾಮ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ತಿಂಗಳ ಕಡೆಯ ಗುರುವಾರದಂದು ಸಂಜೆ 5 ಘಂಟೆಯಿಂದ 6 ಘಂಟೆಯವರೆಗೆ ಭಜನ ಸತ್ಸಂಗ ಕಾರ್ಯಕ್ರಮವಿರುತ್ತದೆ. ಪ್ರತಿ ವರ್ಷ ಗುರುಪೂರ್ಣಿಮೆಯ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ವಿಳಾಸ: 

ಶ್ರೀ ಶಿರಡಿ ಸಾಯಿ ಮಂದಿರ
2509 , 26ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ,
ಬನಶಂಕರಿ, 2ನೇ ಹಂತ, ಬೆಂಗಳೂರು-560 070. ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಹೆಚ್.ಪರಮೇಶ್ವರ / ಶ್ರೀಮತಿ.ಪಿ.ಕನ್ಯಾಕುಮಾರಿ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


098440 09698

ಈ ಮೇಲ್ ವಿಳಾಸ: 



ಮಾರ್ಗಸೂಚಿ: 

ಬನಶಂಕರಿ ಬಿ.ಡಿ.ಎ. ವಾಣಿಜ್ಯ ಸಂಕೀರ್ಣದ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ಈ ಮಂದಿರ ಸಿಗುತ್ತದೆ. ಈ ಮಂದಿರವು ಬನಶಂಕರಿ 2ನೇ ಹಂತದ ಪೋಲಿಸ್ ಸ್ಟೇಷನ್ ಹಿಂಭಾಗದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಚಾವಡಿಯಲ್ಲಿ ಸಾಯಿಬಾಬಾರವರ ರಾತ್ರಿ ಆರತಿ ಪ್ರಾರಂಭದ ಶತಮಾನೋತ್ಸವ (1910 - 2010) - ಕೃಪೆ: ಸಾಯಿಅಮೃತಧಾರಾ.ಕಾಂ

ಸಾಯಿ ಬಂಧುಗಳೇ, ಶಿರಡಿಯ ಚಾವಡಿಯಲ್ಲಿ ರಾತ್ರಿ ಆರತಿಯು ಪ್ರಾರಂಭವಾಗಿ 100 ವರ್ಷಗಳು ಸಂದಿವೆ. 10ನೇ ಡಿಸೆಂಬರ್ 1910 ರ ಶನಿವಾರದಂದು ಶಿರಡಿಯಲ್ಲಿ ಮೊದಲ ಬಾರಿಗೆ ಚಾವಡಿಯಲ್ಲಿ ರಾತ್ರಿ ಆರತಿ ಪ್ರಾರಂಭವಾಯಿತು. ಈ ವಿವರವನ್ನು ಸಾಯಿಭಕ್ತರು ಸಾಯಿ ಸಚ್ಚರಿತೆಯ 4ನೇ ಅಧ್ಯಾಯದಲ್ಲಿ ನೋಡಬಹುದು. ಸಮಾಧಿ ಮಂದಿರದಲ್ಲಿ ನಡೆಯುವ ಶೇಜಾರತಿಯಲ್ಲದೆ ಈ ಕೆಳಗೆ ಕೊಟ್ಟಿರುವ  5 ಆರತಿಯ ಹಾಡುಗಳನ್ನು ಪ್ರತಿ ಗುರುವಾರದಂದು ಶಿರಡಿಯಲ್ಲಿ ಚಾವಡಿ ಉತ್ಸವದ ಸಂದರ್ಭದಲ್ಲಿ ಚಾವಡಿಯಲ್ಲಿ ಹಾಡುತ್ತಾರೆ. ಅವುಗಳು ಯಾವುವೆಂದರೆ: 

  1. ಘೇವುನಿಯಾ ಪಂಚಾರತಿ 
  2. ಆರತಿ ಸಾಯಿಬಾಬಾ 
  3. ಶಿರಡಿ ಮಾಜೆ ಪಂಡರಪುರ 
  4. ಘಾಲೀನ ಲೋಟಾಂಗಣ
  5. ಹರೇ ರಾಮ ಹರೇ ರಾಮ 
ಈ ವಿಶೇಷ ಶತಮಾನೋತ್ಸವದ ನೆನಪಿಗಾಗಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ , ಪ್ರಪಂಚದಾದ್ಯಂತ ಇರುವ ಸಾಯಿ ಮಂದಿರಗಳಲ್ಲಿ  10ನೇ ಡಿಸೆಂಬರ್ 2010 ರ ರಾತ್ರಿಯಂದು ಸಾಯಿಬಾಬಾರವರ ಆರತಿಯನ್ನು ಹಾಡಬೇಕೆಂದು ಮತ್ತು ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಈ ಅಂತರ್ಜಾಲ ತಾಣದ ಪರವಾಗಿ ನಾವುಗಳು ಮನವಿ ಮಾಡಿಕೊಳ್ಳುತ್ತೇವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಅಕ್ಷಯ ಶಿರಡಿ ಸಾಯಿ ಮಂದಿರ, ನಂ.43,  1ನೇ "ಬಿ" ಅಡ್ಡ ರಸ್ತೆ, ಅರೇಹಳ್ಳಿ, ಏಜೀಸ್ ಬಡಾವಣೆ, ಸುಬ್ರಮಣ್ಯಪುರ ಪೋಸ್ಟ್, ಬೆಂಗಳೂರು-560 061. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ಮಂದಿರವು ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ-ಕೆಂಗೇರಿ ಮುಖ್ಯ ರಸ್ತೆಯ ಸುಬ್ರಮಣ್ಯಪುರದ ಬಳಿ ಬರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿ ಪೂಜೆಯನ್ನು 23ನೇ ಮಾರ್ಚ್ 1990 ರಂದು ನೆರವೇರಿಸಲಾಯಿತು. 
  • ಈ ದೇವಾಲಯವನ್ನು 28ನೇ ಫೆಬ್ರವರಿ 1995 ರಂದು ಹೆಬ್ಬೂರು ಕೋದಂಡಾಶ್ರಮ ಮಠ ಮತ್ತು ಕಾಮಾಕ್ಷಿ ಮಹಾಸನ್ನಿಧಾನದ ಶ್ರೀಗಳಾದ ದಿವಂಗತ ಶ್ರೀ.ಶ್ರೀ.ಶ್ರೀ.ಗಣಪತಿ ಸೋಮಯಾಜಿಗಳು ಉದ್ಘಾಟಿಸಿದರು. 
  • ಈ ದೇವಾಲಯದಲ್ಲಿ ಸದ್ಗುರು ದತ್ತಾತ್ರೇಯ, ಗಣಪತಿ, ಸುಬ್ರಮಣ್ಯ,ಈಶ್ವರ, ಲಕ್ಷ್ಮೀನಾರಾಯಣ, ವರಮಹಾಲಕ್ಷ್ಮಿ, ಪಂಚಮುಖಿ ಆಂಜನೇಯ, ನವಗ್ರಹ ದೇವರುಗಳ ವಿಗ್ರಹವಿದೆ. ಅಲ್ಲದೇ, ಸುಂದರವಾದ ಅಮೃತಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು 3 ಮೆಟ್ಟಿಲುಗಳ ಮೇಲೆ ಪ್ರತಿಷ್ಟಾಪಿಸಲಾಗಿದೆ. 
  • ಈ ಮಂದಿರದಲ್ಲಿ ಶಿರಡಿ ಸಾಯಿಬಾಬಾರವರ ವಿವಿಧ ಭಂಗಿಯ ಚಿತ್ರಗಳನ್ನು ಕೂಡ ಸಾಯಿಭಕ್ತರು ನೋಡಬಹುದು. 

 ದೇವಾಲಯದ ಹೊರನೋಟ 
 
 ದೇವಾಲಯದ ರಾಜಗೋಪುರ 
 
 ಸದ್ಗುರು ದತ್ತಾತ್ರೇಯ, ಗಣಪತಿ, ಸುಬ್ರಮಣ್ಯ,ಈಶ್ವರ ದೇವರ ವಿಗ್ರಹಗಳು 

 ಲಕ್ಷ್ಮೀನಾರಾಯಣ, ವರಮಹಾಲಕ್ಷ್ಮಿ, ಪಂಚಮುಖಿ ಆಂಜನೇಯ ದೇವರ ವಿಗ್ರಹಗಳು 

 3 ಮೆಟ್ಟಿಲುಗಳ ಮೇಲೆ ಸ್ಥಾಪಿಸಲಾದ ಶಿರಡಿ ಸಾಯಿಬಾಬಾರವರ ವಿಗ್ರಹ 

ಶಿರಡಿ ಸಾಯಿಬಾಬಾರವರ ವಿಗ್ರಹದ ಮತ್ತೊಂದು ನೋಟ 

ನವಗ್ರಹ ದೇವರುಗಳ ವಿಗ್ರಹ


ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು 

ಆರತಿಯ ಸಮಯ: 


ಆರತಿ
ಪ್ರತಿದಿನ
ಗುರುವಾರ 
Morning
6:00 AM
5:30 AM
Afternoon
12:00 PM
1:00 PM
Evening
-
4:30 PM
Night
9:00 PM
9:30 PM

  • ದೇವಾಲಯದಲ್ಲಿ ಪ್ರತಿ ತಿಂಗಳು ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು ಅದರ ಸೇವಾ ಶುಲ್ಕ 30/- ರುಪಾಯಿಗಳಾಗಿರುತ್ತದೆ. 
  •  ದೇವಾಲಯದಲ್ಲಿ ಪ್ರತಿನಿತ್ಯ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳಾಗಿರುತ್ತದೆ. 
  • ವಿಶೇಷ ಉತ್ಸವದ ದಿನಗಳಲ್ಲಿ ಶಿರಡಿ ಸಾಯಿಬಾಬಾರವರಿಗೆ "ಬೆಳ್ಳಿಯ ಕವಚ ಧಾರಣೆ" ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

  1. ಪ್ರತಿ ವರ್ಷದ 28ನೇ ಫೆಬ್ರವರಿ ಯಂದು ವಾರ್ಷಿಕೋತ್ಸವ.
  2. ಗುರು ಪೂರ್ಣಿಮಾ. 
  3. ವಿಜಯದಶಮಿ (10 ದಿನಗಳೂ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ).
  4. ಶ್ರೀರಾಮನವಮಿ. 
  5. ದತ್ತಜಯಂತಿ. 
  6. ಶಿವರಾತ್ರಿ (ರಾತ್ರಿಯಿಂದ ಬೆಳಗಿನ ಜಾವದ ತನಕ ನಿರಂತರವಾಗಿ 4 ಯಾಮ ವಿಶೇಷ ರುದ್ರಾಭಿಷೇಕ)

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

ಅಕ್ಷಯ ಶಿರಡಿ ಸಾಯಿ ಮಂದಿರ,
ನಂ.43,  1ನೇ "ಬಿ" ಅಡ್ಡ ರಸ್ತೆ,
ಅರೇಹಳ್ಳಿ, ಏಜೀಸ್ ಬಡಾವಣೆ,
ಸುಬ್ರಮಣ್ಯಪುರ ಪೋಸ್ಟ್,
ಬೆಂಗಳೂರು-560 061. ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಬಿ.ಕೆ.ಸುಬ್ಬರಾಯಸ್ವಾಮಿ / ಶ್ರೀ.ಬಿ.ಎಸ್.ಕೇಶವಮುರ್ತಿ

ದೂರವಾಣಿ ಸಂಖ್ಯೆಗಳು: 


080-3295 6257 / 97410 79671 / 97410 76503

ಮಾರ್ಗಸೂಚಿ: 

ಏಜೀಸ್ ಬಡಾವಣೆ, ಇಟ್ಟಮಡು ಕೊನೆ ಬಸ್ ನಿಲ್ದಾಣ. ಮಾರ್ಗ ಸಂಖ್ಯೆ: 45-D -ಬಸ್ ನಿಲ್ದಾಣದಿಂದ ಎರಡು ರಸ್ತೆ ಹಿಂದೆ ನಡೆದರೆ ದೇವಾಲಯಕ್ಕೆ ಎರಡು ನಿಮಿಷಗಳ ನಡಿಗೆ. ಮಾರ್ಗ ಸಂಖ್ಯೆಗಳು: 222-D, 222-G, 275 ಬಸ್ ಗಳಲ್ಲಿ ಪ್ರಯಾಣಿಸಿದರೆ ಉತ್ತರಹಳ್ಳಿ - ಕೆಂಗೇರಿ ಮುಖ್ಯ ರಸ್ತೆಯಲ್ಲಿ ಸಿಗುವ ಉತ್ತರಹಳ್ಳಿ ವಾಟರ್ ಟ್ಯಾಂಕ್ ಬಸ್ ನಿಲ್ದಾಣದಲ್ಲಿ ಇಳಿಯುವುದು. ಇಲ್ಲಿಂದ ದೇವಾಲಯಕ್ಕೆ ಕೇವಲ 5 ನಿಮಿಷಗಳ ನಡಿಗೆ.   

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 26, 2010

ಶಿರಡಿ ಸಾಯಿಬಾಬಾ ದರ್ಶನ ಪಡೆದ ಮಹಾರಾಷ್ಟ್ರ ರಾಜ್ಯಪಾಲ - 26ನೇ ನವೆಂಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ರಾಜ್ಯದ ಘನವೇತ್ತ  ರಾಜ್ಯಪಾಲ ಶ್ರೀ.ಕೆ.ಶಂಕರನಾರಾಯಣನ್ ರವರು ಇತ್ತೇಚೆಗೆ ಶಿರಡಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಶಿರಡಿ ಸಾಯಿಬಾಬಾರವರ ಸಮಾಧಿ ದರ್ಶನದ ನಂತರ ಅವರನ್ನು ಮಹಾರಾಷ್ಟ್ರ ಸರ್ಕಾರದ ಕೃಷಿ ಸಚಿವ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ರವರು ಸತ್ಕರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ, ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಅಶೋಕ್ ಕಂಬೇಕರ್, ಶ್ರೀ.ರಮಾಕಾಂತ್ ಕಾರ್ಣಿಕ್, ಶಿರಡಿ ನಗರ ಪಂಚಾಯತಿ ಅಧ್ಯಕ್ಷೆ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರು ಕೂಡ ಉಪಸ್ಥಿತರಿದ್ದರು. 

ಶಿರಡಿ ಸಾಯಿಬಾಬಾ ದರ್ಶನ ಪಡೆದ ಮಹಾರಾಷ್ಟ್ರ ರಾಜ್ಯಪಾಲ ಶ್ರೀ.ಕೆ.ಶಂಕರನಾರಾಯಣನ್ ಮತ್ತು ಅವರ ಕುಟುಂಬ ವರ್ಗ 

ರಾಜ್ಯಪಾಲರನ್ನು ಸತ್ಕರಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ಕೃಷಿ ಸಚಿವ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ 

ಕನ್ನಡ ಅನುವಾದ : ಶ್ರೀಕಂಠ ಶರ್ಮ 

Thursday, November 25, 2010

ತಮಿಳುನಾಡಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಶೋಲಿನ್ಗರ್ ಶ್ರೀ ಶಿರಡಿ ಸಾಯಿ ಸೇವಾ ಸಮಾಜ ಟ್ರಸ್ಟ್ (ನೋಂದಣಿ), ಶ್ರೀ ಸಾಯಿಬಾಬಾ ನಗರ, ಪದ್ಮಪುರಂ, ಶೋಲಿನ್ಗರ್-631 102, ತಮಿಳುನಾಡು - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿಪೂಜೆಯನ್ನು 10ನೇ ಜೂನ್ 2007 ರಂದು ನೆರವೇರಿಸಲಾಯಿತು. 
  • ಈ ದೇವಾಲಯವನ್ನು 21ನೇ ಜೂನ್ 2010 ರಂದು ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ಅಧ್ಯಕ್ಷ ಶ್ರೀ.ಕೆ.ವಿ.ರಮಣಿಯವರು ಉದ್ಘಾಟಿಸಿದರು. 
  • ಸಾಯಿಬಾಬಾರವರ ಅಮೃತಶಿಲೆಯ ಸುಂದರ ವಿಗ್ರಹವನ್ನು ಮಂದಿರದಲ್ಲಿ ಕಾಣಬಹುದು. ಸಾಯಿಬಾಬಾನ ವಿಗ್ರಹದ ಎದುರುಗಡೆಯಲ್ಲಿ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಬಲಭಾಗದಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
  • ಗುರುಸ್ಥಾನವನ್ನು ಸಾಯಿಬಾಬಾ ವಿಗ್ರಹದ ಎಡಭಾಗದಲ್ಲಿ ಸ್ಥಾಪಿಸಲಾಗಿದೆ. 
  • ಪವಿತ್ರ ಧುನಿಯನ್ನು ಸಾಯಿಬಾಬಾ ವಿಗ್ರಹದ ಬಲಭಾಗದಲ್ಲಿ ಸ್ಥಾಪಿಸಲಾಗಿದೆ. ಧುನಿಯ ಎದುರುಗಡೆಯಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ತೂಗುಹಾಕಲಾಗಿದೆ. 
  • ದೇವಾಲಯದ ಹೊರ ಆವರಣದಲ್ಲಿ ಸತ್ಯನಾರಾಯಣ ಸ್ವಾಮಿಯ ಸುಂದರ ಚಿತ್ರಪಟವನ್ನು ತೂಗುಹಾಕಲಾಗಿದೆ. 
  • ದೇವಾಲಯದ ಕೆಳಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಧ್ಯಾನಮಂದಿರವನ್ನು ನಿರ್ಮಿಸಲಾಗಿದೆ. ಈ ಧ್ಯಾನಮಂದಿರದಲ್ಲಿ ಸಾಯಿಬಾಬಾರವರ ಚಿತ್ರಪಟ, ಅಕ್ಕಲಕೋಟೆ ಶ್ರೀ.ಸ್ವಾಮಿ ಸಮರ್ಥರವರ ಚಿತ್ರಪಟ, ನಂದಿಯ ಅಮೃತಶಿಲೆಯ ವಿಗ್ರಹ, ಆಮೆಯ ಅಮೃತಶಿಲೆಯ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು. 
 ದೇವಾಲಯದ ಹೊರನೋಟ 

 ಸಾಯಿಬಾಬಾ ಮತ್ತು ನಂದಿಯ ವಿಗ್ರಹ 

ಧುನಿಯ ಎದುರುಗಡೆ ಇರುವ ದ್ವಾರಕಮಾಯಿ ಸಾಯಿಬಾಬಾರವರ ಚಿತ್ರಪಟ 

ಗುರುಸ್ಥಾನ 

ನೆಲಮಾಳಿಗೆಯಲ್ಲಿರುವ ಸಾಯಿಬಾಬಾರವರ ಧ್ಯಾನಮಂದಿರ 

ದೇವಾಲಯದ ಹೊರ ಆವರಣದಲ್ಲಿರುವ ಸತ್ಯನಾರಾಯಣ ಸ್ವಾಮಿಯ ಚಿತ್ರಪಟ 


ಪವಿತ್ರ ಧುನಿ ಮಾ 

ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 


ಆರತಿಯ ಸಮಯ

ಆರತಿ
ಸಮಯ
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM


ಪ್ರತಿನಿತ್ಯ ಸಾಯಿಬಾಬಾರವರಿಗೆ ಬೆಳಗಿನ ಜಾವ 8 ಘಂಟೆಯಿಂದ 8:30 ರ ವರೆಗೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಆಸಕ್ತಿಯುಳ್ಳ ಸಾಯಿ ಭಕ್ತರು 750/- ರುಪಾಯಿಗಳನ್ನು ನೀಡಿ ಅಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. 

ಪ್ರತಿ ಉತ್ಸವದ ದಿನಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸರಿ ಸುಮಾರು 1000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. 

ವಿಶೇಷ ಉತ್ಸವದ ದಿನಗಳು: 

  1. ಶ್ರೀರಾಮನವಮಿ 
  2. ಗುರುಪೂರ್ಣಿಮಾ 
  3. ವಿಜಯದಶಮಿ (ಸಾಯಿಬಾಬಾರವರ ಮಹಾಸಮಾಧಿ ದಿವಸ) 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

ಶ್ರೀ ಶಿರಡಿ ಸಾಯಿ ಮಂದಿರ
ಶೋಲಿನ್ಗರ್ ಶ್ರೀ ಶಿರಡಿ ಸಾಯಿ ಸೇವಾ ಸಮಾಜ ಟ್ರಸ್ಟ್ (ನೋಂದಣಿ),
ಶ್ರೀ ಸಾಯಿಬಾಬಾ ನಗರ, ಪದ್ಮಪುರಂ, ಶೋಲಿನ್ಗರ್-631 102, ತಮಿಳುನಾಡು.

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಎಸ್.ವಾಸುದೇವ ನಾಯ್ಡು

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


094429 74172 / 093805 87218 / 093815 40079

ಮಾರ್ಗಸೂಚಿ: 

ಶೋಲಿನ್ಗರ್ - ವಾಲಾಜ ರಸ್ತೆ, ಪರಪೇನ್ ಕೋಲಂ ಹತ್ತಿರ

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಚಿತ್ತೂರಿನ ಸಾಯಿಬಾಬಾ ಮಂದಿರ - ಶ್ರೀ. ಶಿರಡಿ ಸಾಯಿಬಾಬಾ ಸೇವಾ ಸಮಿತಿ, ಶೇಷಪಿಳ್ಳರ್ ರಸ್ತೆ, ಕೊಂಗರೆಡ್ಡಿಪಲ್ಲಿ, ಚಿತ್ತೂರು-517 001, ಆಂಧ್ರಪ್ರದೇಶ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು:
  • ಈ ದೇವಾಲಯದ ಭೂಮಿಪೂಜೆಯನ್ನು 1994 ನೇ ಇಸವಿಯಲ್ಲಿ ನೆರವೇರಿಸಲಾಯಿತು. 
  • ಈ ದೇವಾಲಯವನ್ನು 24ನೇ ಜನವರಿ 2005 ರಂದು ಉದ್ಘಾಟಿಸಲಾಯಿತು. 
  • ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. ಸಾಯಿಬಾಬಾರವರ ವಿಗ್ರಹದ ಹಿಂಭಾಗದ ಗೋಡೆಯಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ತೂಗುಹಾಕಲಾಗಿದೆ.  

ದೇವಾಲಯದ ಹೊರನೋಟ 
 ಸಾಯಿಬಾಬಾರವರ ವಿಗ್ರಹ 

ದೇವಾಲಯದ ಕಾರ್ಯಚಟುವಟಿಕೆಗಳು


ಆರತಿಯ ಸಮಯ
ಆರತಿ
ಸಮಯ
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM

ಸಾಯಿಬಾಬಾ ವಿಗ್ರಹಕ್ಕೆ ಪ್ರತಿನಿತ್ಯ ಅಭಿಷೇಕವನ್ನು ಮಾಡಲಾಗುತ್ತದೆ. ಸೇವೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 150/-  ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಭಾಗವಹಿಸಬಹುದು. 

ಪ್ರತಿ ಗುರುವಾರ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸುಮಾರು 200 ಜನ ಸಾಯಿಭಕ್ತರು ಇದರಲ್ಲಿ ಭಾಗವಹಿಸುತ್ತಾರೆ. 

ವಿಶೇಷ ಉತ್ಸವದ ದಿನಗಳು: 
  1. ಶ್ರೀರಾಮನವಮಿ 
  2. ಗುರುಪೂರ್ಣಿಮ 
  3. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ)
  4. ಉಗಾದಿ ಹಬ್ಬ 
  5. ವಿನಾಯಕ ಚತುರ್ಥಿ 
  6. ತಮಿಳು ಹೊಸ ವರ್ಷ 




 ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ : 

ಶ್ರೀ. ಶಿರಡಿ ಸಾಯಿಬಾಬಾ ಸೇವಾ ಸಮಿತಿ
ಶೇಷಪಿಳ್ಳರ್ ರಸ್ತೆ, ಕೊಂಗರೆಡ್ಡಿಪಲ್ಲಿ,
ಚಿತ್ತೂರು-517 001, ಆಂಧ್ರಪ್ರದೇಶ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಬಿ.ಶ್ರೀನಿವಾಸಲು ನಾಯ್ಡು

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


093479 99916

ಮಾರ್ಗಸೂಚಿ: 

ಶೇಷಪಿಳ್ಳರ್ ರಸ್ತೆ, ಕೊಂಗರೆಡ್ಡಿಪಲ್ಲಿ.

ಕನ್ನಡ ಅನುವಾದ: ಶ್ರೀಕಂಠ ಶರ್ಮ
ತಿರುವಣ್ಣಾಮಲೈನ ಸಾಯಿಬಾಬಾ ಮಂದಿರ - ಅಕ್ಷಯ ಶ್ರೀ ಸಾಯಿ ಧ್ಯಾನ ಸಭಾ, ಶಿರಡಿ ಸಾಯಿ ಪ್ರಚಾರ ಸೇವಾ ಕಮ್ಯುನಿಕೇಶನ್ ಸೆಂಟರ್, ಕೊಸಲೈ ಗ್ರಾಮ, ಕುಬೇರಮ್ಮನ್ ಪಿಳ್ಳೈ ಗಾರ್ಡನ್, ಗಿರಿವಾಲ ರಸ್ತೆ, ಆದಿ ಅಣ್ಣಾಮಲೈ, ತಿರುವಣ್ಣಾಮಲೈ - 606 601, ತಮಿಳುನಾಡು - ಕೃಪೆ : ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿಪೂಜೆಯನ್ನು 6ನೇ ಡಿಸೆಂಬರ್ 2008 ರಂದು ನೆರವೇರಿಸಲಾಯಿತು.
  • ಈ ದೇವಾಲಯವನ್ನು 26ನೇ ಏಪ್ರಿಲ್ 2009 ರಂದು ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ನ ಅಧ್ಯಕ್ಷ ಶ್ರೀ.ಕೆ.ವಿ.ರಮಣಿಯವರು ಉದ್ಘಾಟಿಸಿದರು. 
  • ಶಿರಡಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. 

ಶಿರಡಿ ಸಾಯಿಬಾಬಾರವರ ವಿಗ್ರಹ 

ದೇವಾಲಯದ ಕಾರ್ಯಚಟುವಟಿಕೆಗಳು: 

ದೇವಾಲಯದ ದೈನಂದಿನ ಕಾರ್ಯಕ್ರಮಗಳು: 


ಆರತಿಯ ಸಮಯ
ಆರತಿ
ಸಮಯ
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:40 PM
ಧೂಪಾರತಿ
6:40 PM
ಶೇಜಾರತಿ
8:40 PM

ದೇವಾಲಯದಲ್ಲಿ ಪ್ರತಿನಿತ್ಯ ಲೋಕಕಲ್ಯಾಣಾರ್ಥವಾಗಿ ಧುನಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಪ್ರತಿನಿತ್ಯ ಸಾಯಿಬಾಬಾರವರ ವಿಗ್ರಹಕ್ಕೆ ಪುಷ್ಪಾಭಿಷೇಕ ನೆರವೇರಿಸಲಾಗುತ್ತದೆ.
ಗ್ರಾಮದ ಬಡವರಿಗೆ ಉಚಿತವಾಗಿ ಪ್ರತಿ ವರ್ಷ ಶಿರಡಿ ಪ್ರವಾಸವನ್ನು ಮಂದಿರದ ವತಿಯಿಂದ ಆಯೋಜಿಸಲಾಗುತ್ತಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ : 

ಅಕ್ಷಯ ಶ್ರೀ ಸಾಯಿ ಧ್ಯಾನ ಸಭಾ
ಶಿರಡಿ ಸಾಯಿ ಪ್ರಚಾರ ಸೇವಾ ಕಮ್ಯುನಿಕೇಶನ್ ಸೆಂಟರ್,
ಕೊಸಲೈ ಗ್ರಾಮ, ಕುಬೇರಮ್ಮನ್ ಪಿಳ್ಳೈ ಗಾರ್ಡನ್,
ಗಿರಿವಾಲ ರಸ್ತೆ, ಆದಿ ಅಣ್ಣಾಮಲೈ,
ತಿರುವಣ್ಣಾಮಲೈ - 606 601, ತಮಿಳುನಾಡು.


ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಸೂರ್ಯಚಂದ್ರ / ಶ್ರೀ. ರವಿ ಮಾಧಿ ಅಗ್ನಿ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


099413 03389 / 094446 13745/

ಈ ಮೇಲ್ ವಿಳಾಸ: 



ಮಾರ್ಗಸೂಚಿ: 

ಗಿರಿವಾಲಾ ರಸ್ತೆ, ಆದಿ ಅಣ್ಣಾಮಲೈ, ತಿರುವಣ್ಣಾಮಲೈ

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಖ್ಯಾತ ಹಿಂದಿ ಗಾಯಕ ಕುಮಾರ್ ಸಾನು ಶಿರಡಿ ಭೇಟಿ - 25ನೇ ನವೆಂಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ 


ಖ್ಯಾತ ಹಿಂದಿ ಗಾಯಕ ಶ್ರೀ.ಕುಮಾರ್ ಸಾನು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಶ್ರೀ.ಕುಮಾರ್ ಸಾನು ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಮೋಹನ್ ಯಾದವ್ ಮತ್ತು ಶಿರಡಿಯ ಪೋಲಿಸ್ ಇನ್ಸ್ ಪೆಕ್ಟರ್ ಶ್ರೀ.ನವಲನಾಥ್ ಟಾಂಬೆಯವರು ಕೂಡ ಉಪಸ್ಥಿತರಿದ್ದರು. 

ಶಿರಡಿ ಸಾಯಿಬಾಬಾ ಸಮಾಧಿ ದರ್ಶನ ಪಡೆಯುತ್ತಿರುವ ಹಿಂದಿ ಗಾಯಕ ಕುಮಾರ್ ಸಾನು 

ಶ್ರೀ.ಕುಮಾರ್ ಸಾನು ಅವರನ್ನು ಸನ್ಮಾನಿಸುತ್ತಿರುವ ಶಿರಡಿ ಸಂಸ್ಥಾನದ ಅಧ್ಯಕ್ಷ ಶ್ರೀ.ಅಶೋಕ್ ಕಂಬೇಕರ್

ಕನ್ನಡ ಅನುವಾದ : ಶ್ರೀಕಂಠ ಶರ್ಮ

Monday, November 22, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ ಮತ್ತು ಶ್ರೀ ಶಿರಡಿ ಸಾಯಿಬಾಬಾ ಆಶ್ರಮ ಟ್ರಸ್ಟ್, ಅರಕೆರೆ ಗೇಟ್, ಬನ್ನೇರುಘಟ್ಟ ಮುಖ್ಯ ರಸ್ತೆ, ಐ.ಐ.ಎಂ.ಪೋಸ್ಟ್, ಬೆಂಗಳೂರು-560 076.- ಕೃಪೆ : ಸಾಯಿಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರಿನ ದಕ್ಷಿಣ ಭಾಗದ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಅರಕೆರೆ ಗೇಟ್ ನ ಬಳಿ ಇರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.


ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿಪೂಜೆಯನ್ನು 4ನೇ ಅಕ್ಟೋಬರ್ 1980 ರಂದು ನೆರವೇರಿಸಲಾಯಿತು. 
  • ಮೊದಲ ದೇವಾಲಯವಾದ ಶ್ರೀ ಆನೆಗುಡ್ಡೆ ವಿನಾಯಕ ದೇವಾಲಯವನ್ನು 22ನೇ ಮೇ 1985 ರಲ್ಲಿ ಪ್ರಾರಂಭಿಸಲಾಯಿತು. ಎರಡನೇ ಮಂದಿರವಾದ ಶಿರಡಿ ಸಾಯಿಬಾಬಾರವರ ಮಂದಿರವನ್ನು ಮಾರ್ಚ್ 2005 ರಲ್ಲಿ ಶ್ರೀ.ಸಿ.ನಾರಾಯಣ ರೆಡ್ಡಿ ಯವರು ಉದ್ಘಾಟಿಸಿದರು. 
  • ಈ ದೇವಾಲಯದ ಆವರಣದಲ್ಲಿ ಅನೇಕ ದೇವಾಲಯಗಳಿವೆ. ದೇವಾಲಯದ ಆವರಣದ ಮಧ್ಯಭಾಗದಲ್ಲಿ ಶ್ರೀ.ಆನೆಗುಡ್ಡೆ ವಿನಾಯಕ ದೇವರ ಆಲಯವಿದೆ. ಇಲ್ಲಿ ಕಪ್ಪು ಶಿಲೆಯ ಸುಂದರ ಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.ಗಣೇಶ ದೇವಾಲಯದ ಎದುರುಗಡೆ ಗರುಡಗಂಭವಿದೆ.
  • ಗಣೇಶ ದೇವಾಲಯದ ಬಲಭಾಗಕ್ಕೆ ಎಡಭಾಗಕ್ಕೆ ಶಿರಡಿ ಸಾಯಿಬಾಬಾರವರ ದೇವಾಲಯವಿದ್ದು ಇಲ್ಲಿ ಅಮೃತ ಶಿಲೆಯ ಸಾಯಿಬಾಬಾರವರ ಸುಂದರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 
  • ಗಣೇಶ ದೇವಾಲಯದ ಬಲಭಾಗಕ್ಕೆ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿ ಅಮ್ಮನವರ ಎರಡು ದೇವಾಲಯಗಳಿವೆ. 
  • ಕಾಶಿ ವಿಶ್ವನಾಥ ದೇವಾಲಯದ ಎದುರುಗಡೆ ದತ್ತಾತ್ರೇಯ, ವೀರಾಂಜನೇಯ ದೇವರ ಗುಡಿಗಳಿವೆ. 
  • ವೀರಾಂಜನೇಯ ದೇವಾಲಯದ ಎಡಭಾಗದಲ್ಲಿ ನಾಗ ದೇವರುಗಳು, ನಾಗ ದೇವತೆಗಳು, ಸಪ್ತ ಮಾತೃಕೆಯರು ಮತ್ತು ಸುಬ್ರಹ್ಮಣ್ಯೇಶ್ವರ ದೇವರುಗಳನ್ನು ಅರಳಿ ಮರದ ಕೆಳಗಡೆಯಲ್ಲಿ ಸ್ಥಾಪಿಸಲಾಗಿದೆ. 
  • ಗಣೇಶ ದೇವಾಲಯದ ಮತ್ತು ಸಾಯಿಬಾಬಾ ದೇವಾಲಯದ ಮಧ್ಯಭಾಗದಲ್ಲಿ ನವಗ್ರಹ ದೇವರುಗಳನ್ನು ಸ್ಥಾಪಿಸಲಾಗಿದೆ. 
  • ಕಾಶೀ ವಿಶಾಲಾಕ್ಷಿ ದೇವಾಲಯದ ಹಿಂಭಾಗದಲ್ಲಿ ದಕ್ಷಿಣಾಮುರ್ತಿ ಮತ್ತು ಕಾಲಭೈರವೇಶ್ವರ ದೇವರುಗಳನ್ನು ಒಟ್ಟಿಗೆ ಇರುವಂತೆ ಸ್ಥಾಪಿಸಲಾಗಿದೆ.
  • ಶನೇಶ್ವರ, ನಂದೀಶ ದೇವರ ದೇವಾಲಯವನ್ನು ಕೂಡ ಕಾಶೀ ವಿಶಾಲಾಕ್ಷಿ ದೇವಾಲಯದ ಹಿಂಭಾಗದಲ್ಲಿ ಸ್ಥಾಪಿಸಲಾಗಿದೆ.
  • ದೇವಾಲಯದ ಹಿಂಭಾಗದಲ್ಲಿ ಪವಿತ್ರ ಬನ್ನಿ ಮರವನ್ನು ಸ್ಥಾಪಿಸಲಾಗಿದೆ. 

ದೇವಾಲಯದ ನಾಮಫಲಕ

ದೇವಾಲಯದ ನಾಮಫಲಕ 

ದೇವಾಲಯದ ಹೊರನೋಟ

ದೇವಾಲಯದ ರಾಜಗೋಪುರ

ಆನೆಗುಡ್ಡೆ ವಿನಾಯಕನ ಸುಂದರ ವಿಗ್ರಹ

ಶಿರಡಿ ಸಾಯಿಬಾಬಾರವರ ಸುಂದರ ವಿಗ್ರಹ

ಸಾಯಿಬಾಬಾರವರ ಪವಿತ್ರ ಪಾದುಕೆಗಳು

ಕಾಶೀ ವಿಶ್ವನಾಥ

 
ವಿಶಾಲಾಕ್ಷಿ ಅಮ್ಮನವರು


ದತ್ತಾತ್ರೇಯ ದೇವರು

ವೀರಾಂಜನೇಯ ಸ್ವಾಮಿ

ಸಪ್ತಮಾತೃಕೆಯರು ಮತ್ತು ನಾಗ ದೇವರುಗಳು

ದೇವಾಲಯದ ಕಾರ್ಯಚಟುವಟಿಕೆಗಳು: 

ದೈನಂದಿನ ಕಾರ್ಯಕ್ರಮಗಳು: 

ಆರತಿಯ ಸಮಯ
ಆರತಿ
ಸಮಯ
ಬೆಳಿಗ್ಗೆ
6:45 AM
ಸಂಜೆ
6:00 PM


  1. ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯ ದಿನ ವಿಶೇಷ ಅಭಿಷೇಕವನ್ನು ಹಮ್ಮಿಕೊಳ್ಳಲಾಗುತ್ತದೆ. ಭಕ್ತರು 101 /- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
  2. ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯ ದಿನ ವಿಶೇಷ ಗಣಪತಿ ಹೋಮವನ್ನು ಹಮ್ಮಿಕೊಳ್ಳಲಾಗುತ್ತದೆ. ಭಕ್ತರು 51 /- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
  3. ಪ್ರತಿ ಶನಿವಾರ ರಾಹುಕಾಲದ ವೇಳೆಯಲ್ಲಿ ವೀರಾಂಜನೇಯನಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಭಕ್ತರು 101/- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
  4. ಪ್ರತಿ ಗುರುವಾರ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. 

ವಿಶೇಷ ಉತ್ಸವದ ದಿನಗಳು: 

  1. ಶಿವರಾತ್ರಿ 
  2. ಗಣೇಶ ಚತುರ್ಥಿ 
  3. ವಿಜಯದಶಮಿ 
  4. ಪ್ರತಿ ವರ್ಷದ 22ನೇ ಮೇ ದೇವಾಲಯದ ವಾರ್ಷಿಕೋತ್ಸವ 

 ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ : 

ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ ಮತ್ತು ಶ್ರೀ ಶಿರಡಿ ಸಾಯಿಬಾಬಾ ಆಶ್ರಮ ಟ್ರಸ್ಟ್,
ಅರಕೆರೆ ಗೇಟ್, ಬನ್ನೇರುಘಟ್ಟ ಮುಖ್ಯ ರಸ್ತೆ, ಐ.ಐ.ಎಂ.ಪೋಸ್ಟ್, ಬೆಂಗಳೂರು-560 076.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಎಲ್ಲಪ್ಪ / ಶ್ರೀ.ಸುರೇಶ ಭಟ್ / ಶ್ರೀ.ರಾಘವೇಂದ್ರ ಭಟ್


ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


080-4148 8840 / 95907 59918 / 94487 83415 / 94830 69189  

ಮಾರ್ಗಸೂಚಿ: 

ಬಿ.ಪಿ.ಎಲ್.ಗೇಟ್ ನ ಬಸ್ ನಿಲ್ದಾಣದ ಬಳಿ ಇಳಿದು 2 ನಿಮಿಷ ನಡೆದರೆ ಈ ದೇವಾಲಯ ಸಿಗುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, November 21, 2010

ಖ್ಯಾತ ಗಾಯಕ ಸುಖ್ ವಿಂದರ್ ಸಿಂಗ್ ಶಿರಡಿ ಭೇಟಿ - 21ನೇ ನವೆಂಬರ್ 2010 - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಗಾಯಕ ಸುಖ್ ವಿಂದರ್ ಸಿಂಗ್ ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನ ಪಡೆದ ಬಳಿಕ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆಯವರು ಸನ್ಮಾನಿಸಿದರು. 

 ಗಾಯಕ ಸುಖ್ ವಿಂದರ್ ಸಿಂಗ್ ರವರನ್ನು ಸನ್ಮಾನಿಸುತ್ತಿರುವ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆ

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, November 20, 2010


ಸಾಯಿ ಭಜನ ಗಾಯಕ - ಅನುಪ್ ಜಲೋಟ - ಕೃಪೆ - ಸಾಯಿ ಅಮೃತಧಾರಾ.ಕಾಂ 



ಅನುಪ್ ಜಲೋಟರವರು ತಮ್ಮ ಭಜನೆ ಹಾಗೂ ಘಜಲ್ ಗಳಿಗೆ ಪ್ರಪಂಚದಾದ್ಯಂತ ಮನೆಮಾತಾಗಿದ್ದಾರೆ. ಇವರು ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮೀಸಲಾಗಿಟ್ಟಿದ್ದಾರೆ. ಇವರ ತಂದೆಯವರಾದ ಶ್ರೀಯುತ ಪುರುಷೋತ್ತಮ್ ದಾಸ ಜಲೋಟರವರು ಕೂಡ ಒಳ್ಳೆಯ ಭಜನ ಗಾಯಕರಾಗಿದ್ದು ಇವರಿಗೆ ಮೊದಲ ಗುರುಗಳಾಗಿದ್ದರು. ಅನುಪ್ ಜಲೋಟರವರು ಹುಟ್ಟಿದ್ದು ನೈನಿಟಾಲ್ ನಲ್ಲಿ. ವ್ಯಾಸಂಗ ಮಾಡಿದ್ದು ಲಕ್ನೌ ನಲ್ಲಿ. ಇವರು ತಮ್ಮ ಸಂಗೀತ ಪಯಣವನ್ನು ಆಲ್ ಇಂಡಿಯಾ ರೇಡಿಯೋ ದಲ್ಲಿ ಗೋಷ್ಠಿ ಗಾಯಕರಾಗಿ ಪ್ರಾರಂಭಿಸಿದರು.

"ಭಾರತದ ಭಜನ್ ಸಾಮ್ರಾಟ್" ಎಂದು ಹೆಸರು ಪಡೆದಿರುವ ಅನುಪ್ ಜಲೋಟ ರವರು ತಮ್ಮ ದೈವಿಕ ಗಾಯನದಿಂದ ಎಲ್ಲ ಜನರನ್ನು ಹಾಗೂ ಭಕ್ತರನ್ನು ತಮ್ಮೆಡೆಗೆ ಸೆಳೆದಿದ್ದಾರೆ.

ಇವರ ಅನೇಕ ಸಂಗೀತದ ಆಲ್ಬಮ್ ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ಸೃಷ್ಟಿಸಿ ಬಹಳ ಒಳ್ಳೆಯ ಹೆಸರನ್ನು ಗಳಿಸಿವೆ. ಇವರು ಹಿಂದಿ, ಗುಜರಾತಿ ಮತ್ತು ಬೆಂಗಾಲಿ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುತ್ತಾರೆ.

ವೈವಿಧ್ಯಮಯ ಸಂಗೀತಕ್ಕೆ ಹೆಸರಾದ ಅನುಪ್ ಜಲೋಟ ರವರು ಸದಾ ನಗುಮುಖದಿಂದ ಕೂಡಿದ್ದು ಪರೋಪಕಾರಿಗಳಾಗಿರುತ್ತಾರೆ. ಅನುಪ್ ಜಲೋಟರವರು  ಭಜನೆ ಹಾಗೂ ಘಜಲ್ ಗಳನ್ನು ಬಹಳ ಸುಲಲಿತವಾಗಿ ಹಾಗೂ ಸುಂದರವಾಗಿ ಹಾಡುತ್ತಾರೆ. ಇವರು ತಮ್ಮ ಮಧುರವಾದ ಹಾಗೂ ಶಕ್ತಿಯುತವಾದ ದನಿಯಿಂದ ಭಕ್ತರನ್ನು ಮತ್ತು ಜನರನ್ನು ತಮ್ಮೆಡೆ ಆಕರ್ಷಿಸಿದ್ದಾರೆ. ಇವರ ಭಜನ ಶೈಲಿಯನ್ನು ಕಂಡು ಜನರು ದಿಗ್ಮೂಡರಾಗಿದ್ದಾರೆ. ಇವರ ಮಧುರ ಧ್ವನಿಯು ಜನರ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ.

ಸಂಪರ್ಕದ ವಿವರಗಳು

ಗಾಯಕರ ಹೆಸರು
ಶ್ರೀ.ಅನುಪ್ ಜಲೋಟ
ವಿಳಾಸ
ಮೋಹನ್ ನಿವಾಸ, ೫೬, ಕೇಲುಸ್ಕರ್ ರಸ್ತೆ, ಶಿವಾಜಿ ಪಾರ್ಕ್, ಮುಂಬೈ- ೪೦೦ ೦೨೮. ಮಹಾರಾಷ್ಟ್ರ.
ದೂರವಾಣಿ ಸಂಖ್ಯೆಗಳು
೯೧-೦೨೨-೨೪೪೫೩೨೩೨/೨೪೪೬೧೬೩೮,  ಶ್ರೀಯುತ ಭರತ್ ಓಜಾ - ಕಾರ್ಯದರ್ಶಿ - ೯೧-೯೭೦೨೨ ೮೮೩೭೭, ೯೧-೯೮೨೦೧ ೦೧೧೫೯ / ೦೯೮೨೧೦ ೬೯೮೦೯
ಈ ಮೇಲ್ ವಿಳಾಸ
ವೆಬ್ ಸೈಟ್
ಅಲ್ಬಮ್ ಗಳು
ಜೀವನ ನಯ್ಯ ಸಾಯಿ ಖಿವಯ್ಯ, ಮೇರೆ ಸಾಯಿ, ಸಾಯಿ ಪಾಲನ್ಹಾರ, ಸಾಯಿ ಸುಮಿರನ್, ಸಾಯಿ ಮಿಲನ್ ಕೀ ಆಶ್, ಶಿರಡಿ ಮೇ ಚಾರೋ ಧಾಮ್, ಜೀವನ ನಯ್ಯ ಸಾಯಿ ಕಿವಯ್ಯ, ಸಾಯಿ ಕೆ ಧರ್ ಪೆ, ಸಾಯಿ ರಾಮ್ (ಧುನ್) ಮತ್ತು ಇನ್ನು ಹಲವಾರು ಆಲ್ಬಮ್ ಗಳು.

ಭಜನೆಗಳು




ಕನ್ನಡ ಅನುವಾದ : ಶ್ರೀಕಂಠ ಶರ್ಮ

Thursday, November 18, 2010

ರಾಮನಗರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಪ್ರೇಮಮಯಿ ಮಂದಿರ, ನಂ.46, ಮಾರುತಿನಗರ, ಭೀಮನಹಳ್ಳಿ, ಈಗಲ್ ಟನ್ ಗಾಲ್ಫ್ ಕ್ಲಬ್ ಪಕ್ಕ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ - ಕೃಪೆ: ಸಾಯಿ ಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ "ಕಾಡು ಮನೆ" ಬಸ್ ನಿಲ್ದಾಣದ ನಂತರ ಸಿಗುವ ಎಡ ತಿರುವಿನಲ್ಲಿ ಸುಮಾರು 1.5 ಕಿಲೋಮೀಟರ್ ಕ್ರಮಿಸಿದರೆ ಸಿಗುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 



ಮಂದಿರದ ವಿಶೇಷತೆಗಳು: 

  • ಈ ಮಂದಿರದ ಭೂಮಿಪೂಜೆಯನ್ನು ಮಾರ್ಚ್ 2008 ರಲ್ಲಿ ನೆರವೇರಿಸಲಾಯಿತು. 
  • ಈ ಮಂದಿರದ ಉದ್ಘಾಟನೆಯನ್ನು 9ನೇ ಅಕ್ಟೋಬರ್ 2008 ರ ವಿಜಯದಶಮಿಯಂದು ನೆರವೇರಿಸಲಾಯಿತು. 
  • ದೇವಾಲಯದ ಹೊರಭಾಗದ ಎಡಭಾಗದಲ್ಲಿ ಒಂದು ಸುಂದರ ಕಾರಂಜಿಯನ್ನು ನಿರ್ಮಿಸಲಾಗಿದ್ದು ಅದರ ಮೇಲ್ಭಾಗದಲ್ಲಿ ನಿಂತಿರುವ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. 
  • ಕಾರಂಜಿಯ ಹಿಂಭಾಗದಲ್ಲಿ ಕಪ್ಪು ಶಿಲೆಯನ್ನು ನೆಡಲಾಗಿದ್ದು ಅದರಲ್ಲಿ ಸಾಯಿಬಾಬಾರವರ ವಚನಗಳನ್ನು ಕೆತ್ತಲಾಗಿದೆ. 
  • ದೇವಾಲಯದ ಹೊರಭಾಗದ ಬಲಭಾಗದಲ್ಲಿ ಆಂಜನೇಯನ ಕಪ್ಪು ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 
  • ದೇವಾಲಯದ ಮಹಾದ್ವಾರದಲ್ಲಿ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿ ಮತ್ತು ಆಮೆಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. 
  • ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. 
  • ಶಿರಡಿ ಸಾಯಿಬಾಬಾರವರ ವಿಗ್ರಹದ ಅಡಿಯಲ್ಲಿ ಸುಂದರ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
  • ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಗಣೇಶ, ಸುಬ್ರಮಣ್ಯ ದೇವರುಗಳ ಅಮೃತ ಶಿಲೆಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ವಿಗ್ರಹಗಳ ಹಿಂಭಾಗದಲ್ಲಿ ಶಿವ ಪಾರ್ವತಿಯ ಪೋಟೋವನ್ನು ಇರಿಸಲಾಗಿದೆ. 
  • ಸಾಯಿಬಾಬಾರವರ ವಿಗ್ರಹದ ಬಲಭಾಗದಲ್ಲಿ ದತ್ತಾತ್ರೇಯ ಮತ್ತು ಕೃಷ್ಣ ದೇವರುಗಳ ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹಗಳ ಹಿಂಭಾಗದಲ್ಲಿ ಸತ್ಯನಾರಾಯಣ ಸ್ವಾಮಿಯ ಪೋಟೋವನ್ನು ಇರಿಸಲಾಗಿದೆ. 
  • 1916 ರಲ್ಲಿ ತೆಗೆಯಲಾದ ಸಾಯಿಬಾಬಾರವರ ಚಿತ್ರ, ಕಲ್ಲಿನ ಮೇಲೆ ದ್ವಾರಕಾಮಾಯಿಯಲ್ಲಿ ಕುಳಿತಿರುವ ಸಾಯಿಬಾಬಾರವರ ಚಿತ್ರ, ಶ್ಯಾಮರಾವ್ ಜಯಕರ್ ರವರು ಚಿತ್ರಿಸಿದ ದ್ವಾರಕಾಮಾಯಿ ಸಾಯಿಬಾಬಾ ರವರ ಆಳೆತ್ತರದ ಚಿತ್ರಗಳನ್ನು ಮಂದಿರದ ಒಳಗಡೆ ನೋಡಬಹುದು.
  • ಸುಂದರ ಪಂಚಲೋಹದ ಸಾಯಿಬಾಬಾರವರ ವಿಗ್ರಹವಿದ್ದು ಅದನ್ನು ಉತ್ಸವದ ಸಂದರ್ಭಗಳಲ್ಲಿ ಬಳಸಲಾಗುತ್ತದೆ. 
  • ಪವಿತ್ರ ಧುನಿಯನ್ನು ದೇವಾಲಯದ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ. 

 ದೇವಾಲಯದ ಹೊರನೋಟ

ನಿಂತಿರುವ ಸಾಯಿಬಾಬಾರವರ ವಿಗ್ರಹ ಮತ್ತು ಸಾಯಿಬಾಬಾರವರ ವಚನಗಳನ್ನು ಕೆತ್ತಲಾಗಿರುವ ಕಪ್ಪು ಶಿಲೆ 

ಆಂಜನೇಯನ ಕಪ್ಪುಶಿಲೆಯ ವಿಗ್ರಹ

 ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹ 

 ಗಣೇಶ, ಸುಬ್ರಮಣ್ಯ ದೇವರ ವಿಗ್ರಹ ಮತ್ತು ಶಿವ ಪಾರ್ವತಿಯ ಚಿತ್ರಪಟ 

ದತ್ತಾತ್ರೇಯ, ಕೃಷ್ಣ ದೇವರ ವಿಗ್ರಹಗಳು ಮತ್ತು ಸತ್ಯನಾರಾಯಣ ಸ್ವಾಮಿಯ ಚಿತ್ರಪಟ

ಪವಿತ್ರ ಧುನಿ ಮಾ
 
ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ 

ಆರತಿ
ಸಮಯ
ಕಾಕಡಾ ಆರತಿ
7:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM


ವಿಶೇಷ ದಿನಗಳು: 

  1. ತಿಂಗಳ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.
  2. ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ವಿಶೇಷ ದಿನಗಳಲ್ಲಿ ಮತ್ತು ಉತ್ಸವದ ದಿನಗಳಲ್ಲಿ ಅಭಿಷೇಕವನ್ನು ಮಾಡಲಾಗುತ್ತದೆ. 
ವಿಶೇಷ ಉತ್ಸವದ ದಿನಗಳು:

  1. ಗುರುಪೂರ್ಣಿಮೆ 
  2. ದೀಪಾವಳಿ 
  3. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ ಮತ್ತು ದೇವಾಲಯದ ವಾರ್ಷಿಕೋತ್ಸವದ ದಿವಸ)
  4. ಶ್ರೀರಾಮನವಮಿ 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ವಿಳಾಸ: 

ಶ್ರೀ ಸಾಯಿಬಾಬಾ ಪ್ರೇಮಮಯಿ ಮಂದಿರ,
ನಂ.46, ಮಾರುತಿನಗರ, ಭೀಮನಹಳ್ಳಿ,
ಈಗಲ್ ಟನ್ ಗಾಲ್ಫ್ ಕ್ಲಬ್ ಪಕ್ಕ, ಬಿಡದಿ ಹೋಬಳಿ,
ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಎ.ಕೆ.ಗೋವಿಂದ್ / ಶ್ರೀ.ಜೆ.ಸುರೇಶ / ಶ್ರೀ.ಎ.ಡಿ.ಧ್ರುವಕುಮಾರ್


ದೂರವಾಣಿ ಸಂಖ್ಯೆಗಳು: 


98440 32237 / 98440 82877 / 98450 91184 

ಈ ಮೇಲ್ ವಿಳಾಸ: 


ಮಾರ್ಗಸೂಚಿ: 

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ "ಕಾಡು ಮನೆ" ಬಸ್ ನಿಲ್ದಾಣದ ನಂತರ ಸಿಗುವ ಎಡ ತಿರುವಿನಲ್ಲಿ ಸುಮಾರು 1.5 ಕಿಲೋಮೀಟರ್ ಕ್ರಮಿಸಿದರೆ ಸಿಗುತ್ತದೆ. ಈ ಮಂದಿರವು ಈಗಲ್ ಟನ್ ಗಾಲ್ಫ್ ಕ್ಲಬ್ ಪಕ್ಕದಲ್ಲಿ ಇದೆ. ಬೆಂಗಳೂರು ಬಸ್ ನಿಲ್ದಾಣದಿಂದ, ಶಿವಾಜಿನಗರದಿಂದ ಮತ್ತು ಕೆ.ಆರ್.ಮಾರುಕಟ್ಟೆಯಿಂದ ಬಿಡದಿಗೆ ಹೋಗುವ ಎಲ್ಲಾ ಬಸ್ ಗಳಿಗೆ "ಕಾಡುಮನೆ" ಬಸ್ ನಿಲ್ದಾಣದಲ್ಲಿ ನಿಲುಗಡೆ ಇದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ