Tuesday, September 25, 2012

ಜಾರ್ಖಂಡ್ ರಾಜ್ಯದ ಶಿರಡಿ ಸಾಯಿಬಾಬಾ ಮಂದಿರ - ಸಿದ್ಧಿದಾತ ಸಾಯಿ ಮಂದಿರ, ಎಂಎ-65, ಆದಿತ್ಯಪುರ - 1, ಜಮಶೆಡ್ ಪುರ -  831 013, ಜಾರ್ಖಂಡ್, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಜಾರ್ಖಂಡ್ ರಾಜ್ಯದ ಜಮಶೆಡ್ ಪುರ ಪಟ್ಟಣದ ಆದಿತ್ಯಪುರ-ಕಂಡ್ರಾ ರಸ್ತೆಯಲ್ಲಿರುವ ಕಾಂತಾ ಮೈದಾನದ ಎದುರುಗಡೆ ಹಾಗೂ ಆಶಿಯಾನಾ ಟ್ರೇಡ್ ಸೆಂಟರ್ ನಿಂದ ಸುಮಾರು 1/4 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯದ ಭೂಮಿಪೂಜೆಯನ್ನು ಜನವರಿ 2007 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯವನ್ನು ಸಂಸ್ಥಾಪಕರಾದ ಶ್ರೀ.ಮನೋಹರ್ ಚಬ್ರಾರವರ ವಸತಿ ಸಂಕೀರ್ಣದ ಪಕ್ಕದಲ್ಲಿರುವ 30 x 30 ಖಾಲಿ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 13ನೇ ಏಪ್ರಿಲ್ 2008 ರಂದು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ದೇವಾಲಯದ ಸಂಸ್ಥಾಪಕರಾದ ಶ್ರೀ.ಮನೋಹರ್ ಚಬ್ರಾರವರು ನೆರವೇರಿಸಿರುತ್ತಾರೆ.

ಶ್ರೀ.ಮನೋಹರ್ ಚಬ್ರಾರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರೇ ಸ್ವತಃ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದಲ್ಲಿ 3 ಅಡಿ ಎತ್ತರದ ಸಿಮೆಂಟ್ ನಿಂದ ಮಾಡಲ್ಪಟ್ಟ ಸುಂದರ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.







ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6:00 ರಿಂದ ರಾತ್ರಿ 9:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ :06:00 ಗಂಟೆ
ಛೋಟಾ ಆರತಿ :07:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     :06:00 ಗಂಟೆ
ಶೇಜಾರತಿ      :09:15 ಗಂಟೆ


ಪ್ರತಿ ತಿಂಗಳ ಮೊದಲ ಹಾಗೂ ಕೊನೆಯ ಗುರುವಾರಗಳಂದು ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಬೆಳಿಗ್ಗೆ 7:00 ಗಂಟೆಗೆ ನೆರವೇರಿಸಲಾಗುತ್ತದೆ.

ಪ್ರತಿ ಗುರುವಾರ ಸಂಜೆ 6:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಸಾಯಿ ಭಜನೆ/ಕೀರ್ತನೆಗಳು ನೆಡೆಯುತ್ತವೆ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದವನ್ನು ವಿತರಿಸಲಾಗುತ್ತದೆ.

ಪ್ರತಿ ಗುರುವಾರ ಹಾಗೂ ಭಾನುವಾರಗಳಂದು ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದವನ್ನು ವಿತರಿಸಲಾಗುತ್ತದೆ.


ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ 13ನೇ ಏಪ್ರಿಲ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ಹೋಳಿ ಹುಣ್ಣಿಮೆಯ ಹಿಂದಿನ ಭಾನುವಾರದಂದು ಹೋಳಿ ಮಿಲನ ಉತ್ಸವ.
ಪ್ರತಿ ವರ್ಷದ 15ನೇ ಆಗಸ್ಟ್ ಅಖಂಡ ಸಾಯಿ ಸಚ್ಚರಿತ್ರೆಯ ಪಾರಾಯಣ.
ಪ್ರತಿ ವರ್ಷದ 31ನೇ ಡಿಸೆಂಬರ್ ಹೊಸ ವರ್ಷದ ಆಚರಣೆ.


ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ಭಾನುವಾರ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾನ್ಹ 2:00 ಗಂಟೆಯವರೆಗೆ ಪರಿಣತ ಹೋಮಿಯೋಪತಿ ವೈದ್ಯರು ರೋಗಿಗಳನ್ನು ತಪಾಸಣೆ  ಮಾಡಿ ಅವರಿಗೆ ಉಚಿತ ಎಲೆಕ್ಟ್ರೋ ಹೋಮಿಯೋಪತಿ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. 

ಪ್ರತಿ ಭಾನುವಾರ ಸಂಜೆ ದೇವಾಲಯದ "ಸಾಯಿ ಭಕ್ತ ಮಂಡಳ" ಭಜನ ತಂಡದಿಂದ ನಗರದ ವಿವಿಧ ಸಾಯಿ ಭಕ್ತರ ಮನೆಗಳಲ್ಲಿ ಸಾಯಿ ಭಜನೆ / ಪ್ರವಚನಗಳ ಮೂಲಕ  ಸಾಯಿ ಪ್ರಚಾರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಕಾಂತಾ ಮೈದಾನದ ಎದುರುಗಡೆ, ಆಶಿಯಾನಾ ಟ್ರೇಡ್ ಸೆಂಟರ್ ನ ಹತ್ತಿರ, ಆದಿತ್ಯಪುರ-ಕಂಡ್ರಾ ರಸ್ತೆ.
.

ವಿಳಾಸ:
ಸಿದ್ಧಿದಾತ ಸಾಯಿ ಮಂದಿರ,
ಎಂಎ-65, ಆದಿತ್ಯಪುರ - 1,
ಜಮಶೆಡ್ ಪುರ -  831 013,
ಜಾರ್ಖಂಡ್, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಮನೋಹರ್ ಚಬ್ರಾ - ಅಧ್ಯಕ್ಷರು

ದೂರವಾಣಿ ಸಂಖ್ಯೆಗಳು:
+91 93343 63851 / +91 657 6542540 (ಸ್ಥಿರ ದೂರವಾಣಿ)


ಇ ಮೇಲ್ ವಿಳಾಸ:
ashokaartpress@rediffmail.com


ಮಾರ್ಗಸೂಚಿ:
ಈ ದೇವಾಲಯವು ಜಾರ್ಖಂಡ್ ರಾಜ್ಯದ ಜಮಶೆಡ್ ಪುರ ಪಟ್ಟಣದ ಆದಿತ್ಯಪುರ-ಕಂಡ್ರಾ ರಸ್ತೆಯಲ್ಲಿರುವ ಕಾಂತಾ ಮೈದಾನದ ಎದುರುಗಡೆ ಹಾಗೂ ಆಶಿಯಾನಾ ಟ್ರೇಡ್ ಸೆಂಟರ್ ನಿಂದ ಸುಮಾರು 1/4 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, September 21, 2012

ಹೊಸೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದೇವ್ ಸಾಯಿ ಮಂದಿರ, ಶ್ರೀ ಸಾಯಿಬಾಬಾ ನಗರ, ಸೂರ್ಯ ಆಸ್ಪತ್ರೆ ಎದುರುಗಡೆ, ಟ್ಯಾಂಕ್ ರಸ್ತೆ, ಹೊಸೂರು-635 109, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಟ್ಟಣದ ಟ್ಯಾಂಕ್ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ನಗರದಲ್ಲಿ ಇರುತ್ತದೆ. ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 2001 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಖರೀದಿಸಿದ 25 ಸೆಂಟ್ ಸ್ವಂತ ಭೂಮಿಯಲ್ಲಿ  ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು ಪವಿತ್ರ ಜ್ಯೇಷ್ಟ ಬಹುಳ ತದಿಗೆ (26ನೇ ಜೂನ್ 2002) ಯಂದು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಸಂಜೀವ್ ಡಿ. ರಂಕಾರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ಲಕ್ಷ್ಮೀನಾರಾಯಣನ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 2-1/2  ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಕಪ್ಪು ಶಿಲೆಯ ಹಾಗೂ ಅಮೃತಶಿಲೆಯ ಗಣಪತಿ, ಅಮೃತಶಿಲೆಯ ಲಕ್ಷ್ಮಿ, ಸರಸ್ವತಿಯ ವಿಗ್ರಹಗಳು ಹಾಗೂ ಅಮೃತಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.

















ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 7:00 ರಿಂದ 12:00.
ಸಂಜೆ : 5:30 ರಿಂದ 8:30.

ಆರತಿಯ ಸಮಯ:

ಕಾಕಡಾ ಆರತಿ : 07:00 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 06:00 ಗಂಟೆ
ಶೇಜಾರತಿ      : 08:00 ಗಂಟೆ


ಪ್ರತಿದಿನ ಬೆಳಿಗ್ಗೆ 7:00 ಕ್ಕೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 100/- ರೂಪಾಯಿಗಳು.

ಪ್ರತಿ ದಿನ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 5/- ರೂಪಾಯಿಗಳು.

ಪ್ರತಿ ಸೋಮವಾರ ಸಂಜೆ 06:00 ರಿಂದ 7:30 ಗಂಟೆಯವರೆಗೆ ಸಾಯಿ ಭಜನೆಯನ್ನು ಮಾಡಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6:30 ರಿಂದ 8:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು  ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ ಜ್ಯೇಷ್ಟ ಬಹುಳ ತದಿಗೆಯಂದು ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಸೂರ್ಯ ಆಸ್ಪತ್ರೆಯ ಎದುರುಗಡೆ, ಟ್ಯಾಂಕ್ ರಸ್ತೆ, ಶ್ರೀ ಸಾಯಿಬಾಬಾ ನಗರ, ಹೊಸೂರು.
.

ವಿಳಾಸ:
ಶ್ರೀ ದೇವ್ ಸಾಯಿ ಮಂದಿರ,
ಶ್ರೀ ಸಾಯಿಬಾಬಾ ನಗರ,
ಸೂರ್ಯ ಆಸ್ಪತ್ರೆ ಎದುರುಗಡೆ, ಟ್ಯಾಂಕ್ ರಸ್ತೆ,
ಹೊಸೂರು-635 109, ಕೃಷ್ಣಗಿರಿ ಜಿಲ್ಲೆ,
ತಮಿಳುನಾಡು, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸಂಜೀವ್ ಡಿ.ರಂಕಾ - ಅಧ್ಯಕ್ಷರು / ಶ್ರೀ.ಲಕ್ಷ್ಮೀನಾರಾಯಣನ್.

ದೂರವಾಣಿ ಸಂಖ್ಯೆಗಳು:
+91 4344 242599 (ಸ್ಥಿರ ದೂರವಾಣಿ) / + 91 98440 03436 / +91 94433 26991 



ಇ ಮೇಲ್ ವಿಳಾಸ: 
rankasanjeev@gmail.com 

ಮಾರ್ಗಸೂಚಿ:
ಹೊಸೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದ ಹಿಂಭಾಗದಲ್ಲಿ ಗಾಂಧಿ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ 5 ನಿಮಿಷಗಳ ಕಾಲ ನೆಡೆಯುವುದು. ದೇವಾಲಯವು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಟ್ಟಣದ ಟ್ಯಾಂಕ್ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ನಗರದಲ್ಲಿ ಇರುತ್ತದೆ. ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, September 11, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮಾಹಿತಿ ಕೇಂದ್ರಗಳ ಪ್ರಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ

ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ! ಶಿರಡಿ ಸಾಯಿಬಾಬಾ ಸಂಸ್ಥಾನವು ಸಾಯಿ ಭಕ್ತರ ಅನುಕೂಲಕ್ಕಾಗಿ ಮುಂಬೈ, ಚನ್ನೈ, ಬೆಂಗಳೂರು ಹಾಗೂ ಸಿಕಂದರಾಬಾದ್ ನಗರಗಳಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಯಿ ಭಕ್ತರು ಈ ಮಾಹಿತಿ ಕೇಂದ್ರಗಳ ಮೂಲಕ ಆರತಿ, ದರ್ಶನ ಮತ್ತು ವಸತಿಯನ್ನು ಆನ್ ಲೈನ್ ನ ಮುಖಾಂತರ ಕಾದಿರಿಸಬಹುದಾಗಿದೆ.

ಭಕ್ತರು ಸಾಯಿಬಾಬಾರವರಿಗೆ ತಮ್ಮ ಪ್ರಣಾಮಗಳನ್ನು ಸಲ್ಲಿಸಿ ಅವರ ಆಶೀರ್ವಾದವನ್ನು ಪಡೆಯುವ ಸಲುವಾಗಿ ಪ್ರಪಂಚದ ಎಲ್ಲಾ ಮೂಲೆಗಳಿಂದಲೂ ಶಿರಡಿಗೆ ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಶ್ರೀ ಸಾಯಿಬಾಬಾ ಸಂಸ್ಥಾನವು ಸಾಯಿ ನಿಕೇತನ, 803-13, ಡಾ.ಅಂಬೇಡ್ಕರ್ ರಸ್ತೆ, ದಾದರ್, ಮುಂಬೈ - 400 014 (022-24166556), ಕೃಷ್ಣನ್ ಕರಣೈ,ಪಟ್ಟಿಪುಲಮ್ ಅಂಚೆ, ಚನ್ನೈ, ತಮಿಳುನಾಡು - 603 104 (044-27444093), ಸಾಯಿ ಮಂಡಳಿ,14ನೇ ಅಡ್ಡರಸ್ತೆ, ಸಂಪಿಗೆ ರಸ್ತೆ,ಮಲ್ಲೇಶ್ವರಂ, ಬೆಂಗಳೂರು-560 003 (0944-9214114) ಮತ್ತು ಶ್ರೀ.ಎಸ್.ರಾಧಾಸ್ವಾಮಿ ಫೌಂಡೇಶನ್, ಘಟಕ ಸಂಖ್ಯೆ: 25, ನೆಲ ಅಂತಸ್ತು, ದೀಪ್ತಿ ಹೌಸ್, ವೈ.ಎಮ್.ಸಿ.ಎ ಸಂಕೀರ್ಣ, ಸರ್ದಾರ್ ಪಟೇಲ್ ರಸ್ತೆ, ಸಿಕಂದರಾಬಾದ್ (040-27808845) ಗಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಿ ಈಗ ಭಕ್ತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಸರಿಯಾದ ಮಾರ್ಗದರ್ಶನ ನೀಡಲು ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಿದೆ.

ಸ್ಥಳೀಯ ಭಾಷೆಗಳಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಹಾಗೂ ಸಾಯಿಬಾಬಾ ಸಂಸ್ಥಾನದ ಎಲ್ಲಾ ಪ್ರಕಟಣೆಗಳು ಈ ಮಾಹಿತಿ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಅಲ್ಲದೇ, ಈ ಮಾಹಿತಿ ಕೇಂದ್ರಗಳಲ್ಲಿ ಸಾಯಿಭಕ್ತರು ಶಿರಡಿಗೆ ನೀಡಬೇಕೆಂದುಕೊಂಡಿರುವ ದೇಣಿಗೆಯನ್ನು ಕೂಡ ಸ್ವೀಕರಿಸಲಾಗುತ್ತದೆ. ಈ ಮಾಹಿತಿ ಕೇಂದ್ರಗಳ ನಿರ್ವಹಣೆಗಾಗಿ ಬೇಕಾದ ಸಿಬ್ಬಂದಿಗಳನ್ನು ಕೂಡ ಸಂಸ್ಥಾನವು ನಿಯೋಜಿಸಿರುತ್ತದೆ. ಆನ್ ಲೈನ್ ನಲ್ಲಿ ಸಿಗುವ ಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಸಾಯಿ ಭಕ್ತರು www.online.sai.org.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, September 7, 2012

ಸುಮಧುರ ಕಂಠದ ಸಾಯಿ ಭಜನ ಗಾಯಕಿ - ಶ್ರೀಮತಿ.ವಂದನಾ ಕಾಮತ್  - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀಮತಿ.ವಂದನಾ ಕಾಮತ್ ರವರು ಕರ್ನಾಟಕದ ಬೆಂಗಳೂರಿನಲ್ಲಿ ತಮ್ಮ ಸುಮಧುರ ಸಾಯಿ ಭಜನ ಗಾಯನದಿಂದ ಮನೆ ಮಾತಾಗಿದ್ದಾರೆ. ಇವರು 22ನೇ ಅಕ್ಟೋಬರ್ 1960 ರಂದು  ಕರ್ನಾಟಕದ ದಾವಣಗೆರೆಯಲ್ಲಿ ಶ್ರೀಮತಿ.ಲಲಿತಾ ವಸಂತ ಕುಮಾರ್ ಮತ್ತು ಶ್ರೀ.ವಸಂತ ಕುಮಾರ್ ರವರ ಮಗಳಾಗಿ ಜನಿಸಿದರು.

ಇವರು 1998 ನೇ ಇಸವಿಯಲ್ಲಿ "ಸಾಯಿ ಸ್ಮರಣ್ ಭಜನ ಮಂಡಳಿ" ಯನ್ನು ಸ್ಥಾಪಿಸಿ ಮಂಡಳಿಯ ಸದಸ್ಯರೊಂದಿಗೆ ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಹಾಗೂ ಭಕ್ತರ ಮನೆಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಕರ್ನಾಟಕದ ಬೆಂಗಳೂರು, ಸೋಮನಹಳ್ಳಿ, ಚಿಂತಾಮಣಿ, ಮೈಸೂರು, ಶಿವಗಂಗೆ, ಮುದ್ದೇನಹಳ್ಳಿ, ರಾಮನಗರ, ಕುಣಿಗಲ್, ಹಾಸನ, ಅಂಧ್ರಪ್ರದೇಶದ ಹಿಂದೂಪುರ ಹಾಗೂ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಸಂಸ್ಥಾನವನ್ನು ಒಳಗೊಂಡಂತೆ ಇಲ್ಲಿಯವರೆಗೂ ಸುಮಾರು 750ಕ್ಕೂ ಹೆಚ್ಚು ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.


ಅಲ್ಲದೆ, ಪ್ರತಿ ವರ್ಷ ಹಲವಾರು ಸಾಯಿ ಭಕ್ತರೊಂದಿಗೆ ಶಿರಡಿ ಯಾತ್ರೆಯನ್ನು ಕೈಗೊಂಡು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಸಮಾಧಿ ಮಂದಿರದಲ್ಲಿ ಭಜನೆಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ.

ಶ್ರೀಮತಿ.ವಂದನಾ ಕಾಮತ್ ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀಮತಿ.ವಂದನಾ ಕಾಮತ್
ಸಾಯಿ ಸ್ಮರಣ್ ಭಜನ ಮಂಡಳಿ,
"ಸಾಯಿ ಸಂಸಾರ್", 1/2, 1ನೇ ಬ್ಲಾಕ್,
ತ್ಯಾಗರಾಜನಗರ, ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ,
ಬೆಂಗಳೂರು - 560 028,
ಕರ್ನಾಟಕ, ಭಾರತ

ದೂರವಾಣಿ ಸಂಖ್ಯೆಗಳು:
+91 80 2676 3897 / +91 97417 22422


ಕನ್ನಡ ಅನುವಾದ: ಶ್ರೀಕಂಠ ಶರ್ಮ


ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಸಾಯಿ ಸ್ಮರಣ್ ಭಜನ ಮಂಡಳಿ, "ಸಾಯಿ ಸಂಸಾರ್", 1/2, 1ನೇ ಬ್ಲಾಕ್, ತ್ಯಾಗರಾಜನಗರ, ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ, ಬೆಂಗಳೂರು - 560 028, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ ತ್ಯಾಗರಾಜನಗರ ಬಡಾವಣೆಯಲ್ಲಿದೆ. ದೇವಾಲಯವು ನರಸಿಂಹರಾಜ ಕಾಲೋನಿಯ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿದೆ.

ಈ ದೇವಾಲಯವನ್ನು ಭಜನ ಮಂಡಳಿಯ ಸದಸ್ಯರ ಹಣಕಾಸಿನ ನೆರವಿನೊಂದಿಗೆ ನಿರ್ಮಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 15ನೇ ಮಾರ್ಚ್ 2007 ರಂದು ಬೆಂಗಳೂರಿನ ರಾಮಕೃಷ್ಣ ಯೋಗಾಶ್ರಮದ ಶ್ರೀ.ಯೋಗೇಶ್ವರಾನಂದ ಸ್ವಾಮೀಜಿಯವರು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ. ಬೆಂಗಳೂರಿನ ಚಿನ್ಮಯ ಮಿಷನ್ ನ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು 16ನೇ ಮಾರ್ಚ್ 2007 ರಂದು ಪ್ರವಚನ ಕಾರ್ಯಕ್ರಮವನ್ನು ನೀಡಿದರು.

ಶ್ರೀ.ವಿ.ಪಿ.ಕಾಮತ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ವಿ.ಪಿ.ಕಾಮತ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ವಂದನಾ ಕಾಮತ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದಲ್ಲಿ  ಪುಟ್ಟದಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.

ದೇವಾಲಯದ ಎಡಭಾಗದಲ್ಲಿ ಅಮೃತಶಿಲೆಯ ದತ್ತಾತ್ರೇಯ ವಿಗ್ರಹ ಸ್ಥಾಪಿಸಲಾಗಿದೆ. ಅಲ್ಲದೇ, ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ ಮತ್ತು ನಂದಾದೀಪವನ್ನು ಸಹ ಇರಿಸಲಾಗಿದೆ. 

ದೇವಾಲಯದ ಬಲಭಾಗದಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವನ್ನು ತೂಗುಹಾಕಲಾಗಿದೆ.

ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹದ ಎದುರು ಭಾಗದಲ್ಲಿ ಕಪ್ಪು ಶಿಲೆಯ ಗಣೇಶ, ಶಿವಲಿಂಗ ಮತ್ತು ಈಶ್ವರ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

ಶಿರಡಿಯ ಅತ್ಯಂತ ಪುರಾತನ ಚಿತ್ರಗಳು, ಸಾಯಿಬಾಬಾರವರ ಹಳೆಯ ಚಿತ್ರಗಳು, ಸಾಯಿ ಮಹಾಭಕ್ತರ ಚಿತ್ರಗಳು, ಮತ್ತು ಸಾಯಿಬಾಬಾರವರು ಉಪಯೋಗಿಸುತ್ತಿದ್ದ ವಸ್ತುಗಳ ಚಿತ್ರಗಳನ್ನು ದೇವಾಲಯದಲ್ಲಿ ತೂಗುಹಾಕಲಾಗಿದೆ.

ಪ್ರತಿ ಗುರುವಾರದಂದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುವ ಮರದ ಪಲ್ಲಕ್ಕಿಯನ್ನು ಕೂಡ ದೇವಾಲಯದಲ್ಲಿ ನೋಡಬಹುದು.










ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6:30 ರಿಂದ 12:00.
ಸಂಜೆ : 6:00  ರಿಂದ 8:00.

ಪ್ರತಿ ವರ್ಷ ಮಹಾ ಶಿವರಾತ್ರಿ ಹಾಗೂ ಕಾರ್ತೀಕ ಮಾಸದ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಪ್ರತಿ ವರ್ಷ ಶ್ರೀರಾಮನವಮಿ, ಗುರುಪೂರ್ಣಿಮಾ ಮತ್ತು ವಿಜಯದಶಮಿಯ ಸಂದರ್ಭಗಳಲ್ಲಿ ಸಾಮೊಹಿಕ ಅಭಿಷೇಕ ಹಾಗೂ ಪ್ರಖ್ಯಾತ ಭಜನ ಗಾಯಕರುಗಳಿಂದ ವಿಶೇಷ ಭಜನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.

ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ವತಿಯಿಂದ ನಿಯಮಿತವಾಗಿ ಬಡ ಶಾಲಾ ವಿದ್ಯಾರ್ಥಿಗಳ ಪುಸ್ತಕ ಹಾಗೂ ಶಾಲಾ ಶುಲ್ಕವನ್ನು ಭರಿಸಲಾಗುತ್ತಿದೆ.

ದೇವಾಲಯಕ್ಕೆ ಬರುವ ಶ್ರೀ.ಜಗದೀಶ್ ಬಂಗೇರಾ ಎಂಬ ಬಡ ಸಾಯಿಭಕ್ತರ ಎರಡು ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಈ ದೇವಾಲಯದ ಸದಸ್ಯರು ಹಾಗೂ ಅವರ ಸ್ನೇಹಿತರು ಭರಿಸಿರುತ್ತಾರೆ. ಸಾಯಿಬಾಬಾರವರ ಆಶೀರ್ವಾದದಿಂದ ಮಗುವು ಸಂಪೂರ್ಣ ಗುಣಮುಖವಾಗಿ ಆರೋಗ್ಯದಿಂದಿರುತ್ತದೆ.

ಈ ಮಂದಿರಕ್ಕೆ ನಿಯಮಿತವಾಗಿ ಬರುತ್ತಿದ್ದ ಶ್ರೀ.ವಿಶ್ವನಾಥ್ ಆಲಿಯಾಸ್ ಕಪೂರ್ ಜಿ ಎಂಬ ಸಾಯಿ ಭಕ್ತರು 29ನೇ ನವೆಂಬರ್ 2013 ರಂದು ತಮ್ಮ ಆರ್ಥಿಕ ಹಾಗೂ ಇತರ ವೈಯಕ್ತಿಕ ಕಾರಣಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಅವರು ಬಹಳ ವಯಸ್ಸಾಗಿ ಹಾಗೂ ಖಾಯಿಲೆಯಿಂದ ಬಳಲುತ್ತಿದ್ದ ತಾಯಿ ಹಾಗೂ ತಂಗಿಯನ್ನು ಬಿಟ್ಟು ಹೊರಟು ಹೋದರು. ಅವರಿಬ್ಬರನ್ನು ನೋಡಿಕೊಳ್ಳಲು ಯಾರೂ ದಿಕ್ಕಿರಲಿಲ್ಲ. ಅವರ ಹಿರಿಯ ಅಣ್ಣನವರು ಈ ಹಿಂದೆಯೇ ಸಂಸಾರವನ್ನು ತ್ಯಜಿಸಿ ಬೇರೆ ಕಡೆಯಲ್ಲಿ ವಾಸಿಸುತ್ತಿದ್ದರು. ಶ್ರೀ.ವಿಶ್ವನಾಥ್ ರವರು ದಯನೀಯವಾಗಿ ಸಾವನ್ನಪ್ಪಿದ ಮೇಲೆ ಅವರ ದೇಹವನ್ನು ಪಡೆಯಲು ಸಹ ಯಾರೂ ಮುಂದೆ ಬರಲಿಲ್ಲ. ಆಗ ಸಾಯಿ ಸ್ಮರಣ ಭಜನ ಮಂಡಳಿಯ ಸದಸ್ಯರೆಲ್ಲರೂ ಮುಂದೆ ಬಂದು ಒಗ್ಗಟ್ಟಿನಿಂದ ಒಂದೆಡೆ ಸೇರಿ ಚರ್ಚೆ ಮಾಡಿ ವಿಶ್ವನಾಥ್ ರವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗಳನ್ನು ನೆರವೇರಿಸಿದರು. ನಂತರ ಗುಂಪಿನ ಸದಸ್ಯರೆಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ಸಂಗ್ರಹ ಮಾಡಿ ಒಟ್ಟು 4.3 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದರು. ಈ ಮೊತ್ತದಿಂದ ಶ್ರೀ.ವಿಶ್ವನಾಥ್ ರವರ ತಾಯಿ ಹಾಗೂ ತಂಗಿಯನ್ನು ಎರಡು ಬೇರೆ ಬೇರೆ ಆಶ್ರಮಗಳಲ್ಲಿ ದಾಖಲಿಸಿದರು. ಈ ರೀತಿಯಲ್ಲಿ ಗುಂಪಿನ ಸದಸ್ಯರು ತಮ್ಮ ಪ್ರೀತಿಯ ಗುರುಗಳಾದ ಶ್ರೀ ಶಿರಡಿ ಸಾಯಿಬಾಬಾರವರ ತತ್ವವಾದ "ಮಾನವ ಸೇವೆಯೇ ಮಾಧವ ಸೇವೆ" ಯನ್ನು ಚಾಚೂತಪ್ಪದೆ ಪಾಲಿಸಿ ಮಾನವತೆಯನ್ನು ಮೆರೆದರು. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ, ತ್ಯಾಗರಾಜನಗರ, ಬೆಂಗಳೂರು.
.

ವಿಳಾಸ:
ಸಾಯಿ ಸ್ಮರಣ್ ಭಜನ ಮಂಡಳಿ,
"ಸಾಯಿ ಸಂಸಾರ್", 1/2, 1ನೇ ಬ್ಲಾಕ್,
ತ್ಯಾಗರಾಜನಗರ, ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ,
ಬೆಂಗಳೂರು - 560 028,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ವಿ.ಪಿ.ಕಾಮತ್  / ಶ್ರೀಮತಿ.ವಂದನಾ ಕಾಮತ್

ದೂರವಾಣಿ ಸಂಖ್ಯೆಗಳು:
+91 80 2676 3897 / +91 97417 22422



ಮಾರ್ಗಸೂಚಿ:
ನರಸಿಂಹರಾಜಾ ಕಾಲೋನಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬೆಂಗಳೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆ 31  ಹಾಗೂ ಬನಶಂಕರಿ ಮತ್ತು ಚಿಕ್ಕಲ್ಲಸಂದ್ರಕ್ಕೆ ಹೋಗುವ ಎಲ್ಲಾ ಬಸ್ ಗಳು ನರಸಿಂಹರಾಜಾ ಕಾಲೋನಿ ಬಸ್ ನಿಲ್ದಾಣದಲ್ಲಿ   ನಿಲ್ಲುತ್ತವೆ. ದೇವಾಲಯವು ನರಸಿಂಹರಾಜಾ ಕಾಲೋನಿ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, September 1, 2012

ಸಾಯಿ ಸಮರ್ಥ ಟ್ರಸ್ಟ್ ನ ವತಿಯಿಂದ ಈಶಾನ್ಯ ರಾಜ್ಯದ ಜನರಿಗೆ ಸಹಾಯ ಹಸ್ತ - ಕೃಪೆ: ಸಾಯಿಅಮೃತಧಾರಾ.ಕಾಂ


ಸಾಯಿ ಸಮರ್ಥ ಟ್ರಸ್ಟ್, ಕೋರಮಂಗಲ, ಬೆಂಗಳೂರಿನ ಟ್ರಸ್ಟಿಗಳು ಹಾಗೂ ಸದಸ್ಯರುಗಳು ಕಳೆದ ತಿಂಗಳ 18ನೇ ಆಗಸ್ಟ್ 2012, ಶನಿವಾರದಂದು ಬೆಂಗಳೂರಿನ ಮೆಜಿಸ್ಟಿಕ್ ನ ಬಳಿಯಿರುವ ಸಿಟಿ ರೈಲು ನಿಲ್ದಾಣದಲ್ಲಿ ಸಂತ್ರಸ್ತರಾಗಿದ್ದ ಸಾವಿರಾರು ಪ್ರಯಾಣಿಕರಿಗೆ ಮಿನರಲ್ ವಾಟರ್ ಹಾಗೂ ತಿಂಡಿಯನ್ನು ನೀಡುವ ಮುಖಾಂತರ ತಮ್ಮ ಸೌಹಾರ್ದತೆಯನ್ನು ಮತ್ತು ಹೃದಯ ವೈಶಾಲ್ಯತೆಯನ್ನು ಮೆರೆದರು.

ತಮ್ಮ ರಾಜ್ಯದ ಜನರ ಮೇಲೆ ದೇಶಾದ್ಯಂತ ಹಲ್ಲೆ ನಡೆಯುತ್ತಿದೆಯೆಂಬ ಉಹಾಪೋಹಗಳಿಂದ ಹೆದರಿ ಕಂಗಾಲಾಗಿದ್ದ ಬೆಂಗಳೂರಿನಲ್ಲಿ ನೆಲೆಸಿದ್ದ ಈಶಾನ್ಯ ರಾಜ್ಯದ ಜನರು ತಮ್ಮ ಗಂಟು-ಮೊಟೆಗಳನ್ನು ಕಟ್ಟಿಕೊಂಡು 15ನೇ ಆಗಸ್ಟ್ 2012, ಬುಧವಾರದಿಂದ ತಮ್ಮ ರಾಜ್ಯಕ್ಕೆ ಮರಳಿ ಹೋಗಲು ಪ್ರಾರಂಭಿಸಿದರೆಂಬ ವಿಷಯವನ್ನು ನಿಮ್ಮ ಅವಗಾಹನೆಗೆ ತರಲು ನಾವು ಬಯಸುತ್ತೇವೆ.

ಅಂದು ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಈ ಕೆಳಗೆ ಲಗತ್ತಿಸಲಾಗಿದೆ: 













ಕನ್ನಡ ಅನುವಾದ: ಶ್ರೀಕಂಠ ಶರ್ಮ
ಕೋಲಾರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ (ನೋಂದಣಿ), ಸಂತೆ ಮೈದಾನ, ಮುಳಬಾಗಿಲು - 563 131, ಕೋಲಾರ ಜಿಲ್ಲೆ, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಸೋಮೇಶ್ವರ ವೃತ್ತದ ಬಳಿಯಿರುವ ಹೊಸ ಸರ್ಕಾರಿ ಶಾಲೆಯ ಹಿಂಭಾಗದಲ್ಲಿದೆ. ದೇವಾಲಯವು ಸೋಮೇಶ್ವರ ವೃತ್ತದಿಂದ ನಡಿಗೆಯ ಅಂತರದಲ್ಲಿದೆ.

ದೇವಾಲಯದ ಭೂಮಿಪೂಜೆಯನ್ನು 2004 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಖರೀದಿಸಿದ 50 x 60 ಚದರ ಅಡಿ ಭೂಮಿಯಲ್ಲಿ ಸ್ಥಳೀಯ  ಸಾಯಿಭಕ್ತರಿಂದ ದೇಣಿಗೆಯನ್ನು ಸ್ವೀಕರಿಸಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 8ನೇ ಜೂನ್ 2012 ರಂದು ಮೈಸೂರು ವೇದ ಪಾಠಶಾಲೆಯ ವೇದ ವಿದ್ವಾಂಸರಾದ ಶ್ರೀ.ಸುರೇಶ ದೀಕ್ಷಿತ್ ರವರು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಕೆ.ಸತೀಶ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದಲ್ಲಿ  6 ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಅಮೃತಶಿಲೆಯ ನಂದಿಯ ವಿಗ್ರಹವನ್ನು ದೇವಾಲಯದ ಪ್ರವೇಶದ್ವಾರದಲ್ಲಿ ಸಾಯಿಬಾಬಾರವರ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ.

ದೇವಾಲಯದ ಹೊರ ಆವರಣದಲ್ಲಿ ದ್ವಾರಕಾಮಾಯಿಯನ್ನು ನಿರ್ಮಾಣ ಮಾಡಲಾಗಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.

ದೇವಾಲಯದಲ್ಲಿ ಸುಮಾರು 3 ಅಡಿ ಎತ್ತರದ ಜರ್ಮನ್ ಬೆಳ್ಳಿಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವಿದ್ದು ಇದನ್ನು ಪ್ರತಿ ಗುರುವಾರದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತಿದೆ. 













ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 5.30 ರಿಂದ 12.30.
ಸಂಜೆ : 4.30 ರಿಂದ 8:30.

ಆರತಿಯ ಸಮಯ:

ಕಾಕಡಾ ಆರತಿ : 06.00 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 06:00 ಗಂಟೆ
ಶೇಜಾರತಿ      : 08:00 ಗಂಟೆ

ಪ್ರತಿ ಗುರುವಾರ ಶೇಜಾರತಿಯನ್ನು ರಾತ್ರಿ 9.00 ಗಂಟೆಗೆ ನೆರವೇರಿಸಲಾಗುತ್ತದೆ.

ಪ್ರತಿ ಗುರುವಾರ ಬೆಳಿಗ್ಗೆ 6:30 ಕ್ಕೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಜಲಾಭಿಷೇಕ ಹಾಗೂ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 500/- ರೂಪಾಯಿಗಳು. ಪೂಜಾ ಸಾಮಗ್ರಿಗಳನ್ನು ಹಾಗೂ ಪ್ರಸಾದವನ್ನು ದೇವಾಲಯದ ವತಿಯಿಂದ ವಿತರಿಸಲಾಗುತ್ತದೆ.

ಪ್ರತಿ ದಿನ ಧುನಿ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 40/- ರೂಪಾಯಿಗಳು. ಪೂಜಾ ಸಾಮಗ್ರಿಗಳನ್ನು ದೇವಾಲಯದ ವತಿಯಿಂದ ವಿತರಿಸಲಾಗುತ್ತದೆ.

ಪ್ರತಿ ಗುರುವಾರ ಸಂಜೆ 7:30 ರಿಂದ 9:00 ಗಂಟೆಯವರೆಗೆ ಸಾಯಿಬಾಬಾರವರ ಜರ್ಮನ್ ಬೆಳ್ಳಿಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಉತ್ಸವ ಆಚರಿಸಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಬೆಳಿಗ್ಗೆ 10:00 ಕ್ಕೆ ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 8ನೇ ಜೂನ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ಶ್ರೀರಾಮನವಮಿ.
ದತ್ತ ಜಯಂತಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಹೊಸ ಸರ್ಕಾರಿ ಶಾಲೆಯ ಹಿಂಭಾಗ, ಸಂತೇ ಮೈದಾನ, ಸೋಮೇಶ್ವರ ವೃತ್ತದ ಬಳಿ, ಮುಳಬಾಗಿಲು.
.

ವಿಳಾಸ:
ಶ್ರೀ ಶಿರಡಿ ಸಾಯಿ ಮಂದಿರ
ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ (ನೋಂದಣಿ),
ಸಂತೆ ಮೈದಾನ, ಮುಳಬಾಗಿಲು - 563 131,
ಕೋಲಾರ ಜಿಲ್ಲೆ, ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಕೆ.ಸತೀಶ - ಅಧ್ಯಕ್ಷರು / ಶ್ರೀ.ಎಸ್.ವಿ.ಶ್ರೀನಾಥ - ಅರ್ಚಕರು.

ದೂರವಾಣಿ ಸಂಖ್ಯೆಗಳು:
+91 90609 94666 / +91 88928 77575



ಮಾರ್ಗಸೂಚಿ:
ಸೋಮೇಶ್ವರ ವೃತ್ತ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಹೊಸ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಮತ್ತು ಸೋಮೇಶ್ವರ ವೃತ್ತದಿಂದ ನಡಿಗೆಯ ಅಂತರದಲ್ಲಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ