Monday, January 17, 2011

ಶಿರಡಿಯಲ್ಲಿ ಸಾಮುಹಿಕ ಸಾಯಿ ಸಚ್ಚರಿತೆಯ ಪಾರಾಯಣ - 17ನೇ ಜನವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿಯಲ್ಲಿ ಶ್ರೀರಾಮನವಮಿ ಉತ್ಸವ ಪ್ರಾರಂಭವಾಗಿ 100 ವರ್ಷಗಳು ಸಂದಿದೆ. ಈ ಸುವರ್ಣ ಶ್ರೀರಾಮನವಮಿ (1911 - 2011) ಉತ್ಸವದ ಸವಿನೆನಪಿಗಾಗಿ  ಶಿರಡಿ ಸಾಯಿಬಾಬಾ ಸಂಸ್ಥಾನವು ಸಾಮುಹಿಕ ಸಾಯಿ ಸಚ್ಚರಿತೆಯ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಸಾಯಿಬಾಬಾರವರ ಭಾವಚಿತ್ರ, ಪಾದುಕೆ, ಸಟಕಾ ಮತ್ತು ಸಾಯಿ ಸಚ್ಚರಿತೆಯ ಪುಸ್ತಕಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ ಮತ್ತು ಇನ್ನಿತರ ಗಣ್ಯರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

ಮೆರವಣಿಗೆಯಲ್ಲಿ ಪಾಲ್ಗೊಂಡ ಗಣ್ಯರು 

ಮೆರವಣಿಗೆಯ ನಂತರ ಸಾಮುಹಿಕ ಸಾಯಿ ಸಚ್ಚರಿತೆಯ ಪಾರಾಯಣದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ.ಶಾಲಿನಿ ತಾಯಿ ವಿಕ್ಹೆ ಪಾಟೀಲ್ ರವರು ದೀಪ ಬೆಳಗುವುದರ ಮುಖಾಂತರ ಮಾಡಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ, ಉಪಾಧ್ಯಕ್ಷ ಶ್ರೀ.ಶಂಕರ ರಾವ್ ಕೊಲ್ಹೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

ಪಾರಾಯಣದ ಉದ್ಘಾಟನೆಯನ್ನು ಮಾಡುತ್ತಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ.ಶಾಲಿನಿ ತಾಯಿ ವಿಕ್ಹೆ ಪಾಟೀಲ್ 

ನಂತರ ನಡೆದ ಸಾಮುಹಿಕ ಪಾರಾಯಣದಲ್ಲಿ ಸಾವಿರಾರು ಸಾಯಿ ಭಕ್ತರು ಪಾಲ್ಗೊಂಡು ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾದರು.

ಸಾಮುಹಿಕ ಪಾರಾಯಣದಲ್ಲಿ  ನಿರತರಾಗಿರುವ ಸಾವಿರಾರು ಸಾಯಿ ಭಕ್ತರು

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment