Sunday, January 30, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶ್ರೀ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಮಯೀ ಮಂದಿರ ಟ್ರಸ್ಟ್ (ನೋಂದಣಿ), ನಂ.86, ನಿವೇಶನ ಸಂಖ್ಯೆ.12, ಸೊಣ್ಣೆನಹಳ್ಳಿ, ದೊಡ್ಡಬಸ್ತಿ ಮುಖ್ಯ ರಸ್ತೆ, ವಿದ್ಯುಚ್ಚಕ್ತಿ ಮಂಡಳಿ ಪಕ್ಕ, ಕೆಂಗೇರಿ ಹೋಬಳಿ, ಬೆಂಗಳೂರು-560 056 . ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಂದಿರದ ವಿಶೇಷತೆಗಳು: 

ಸಾಯಿಬಾಬಾರವರ ಅಮೃತಶಿಲೆಯ ಚಿಕ್ಕ ವಿಗ್ರಹವನ್ನು ಹೊಂದಿರುವ ಮೊದಲನೆಯ ಮಂದಿರವು 9ನೇ ಅಕ್ಟೋಬರ್ 2008 ರಂದು ಉದ್ಘಾಟನೆಗೊಂಡಿತು. ಈ ದೇವಾಲಯದ ಹೊರ ಆವರಣದಲ್ಲಿ ಸಾಯಿಬಾಬಾರವರ ವಿಗ್ರಹಕ್ಕೆ ಎದುರುಗಡೆಯಲ್ಲಿರುವಂತೆ ಕಪ್ಪು ಶಿಲೆಯ ನಂದಿ ಮತ್ತು ಕೂರ್ಮದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ತುಳಸಿ ಬೃಂದಾವನ ಮತ್ತು ಸಾಯಿ ಕೋಟಿ ಸ್ತೂಪವನ್ನು ಕೂಡ ಈ ಮಂದಿರದ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ. ಈ ಕೋಟಿ ಸ್ತೂಪದ ವಿಶೇಷತೆ ಏನೆಂದರೆ ಸಾಯಿ ಕೋಟಿ ಸ್ತೂಪದ ಸುತ್ತಲೂ 36 ಕಪ್ಪು ಕಲ್ಲುಗಳನ್ನು ನೆಡಲಾಗಿದ್ದು ಸಾಯಿಭಕ್ತರು ಈ ಕಪ್ಪು ಕಲ್ಲುಗಳ ಮೇಲೆ 3 ಪ್ರದಕ್ಷಿಣೆಯನ್ನು ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಜಪಿಸುತ್ತ ಒಟ್ಟು 108 ನಾಮ ಜಪವನ್ನು ಪೂರ್ಣಗೊಳಿಸಿ ನಂತರ ಮಂದಿರದಲ್ಲಿರುವ ಸಾಯಿಬಾಬಾರವರ ದರ್ಶನ ಪಡೆಯುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.  

ಈ ಮಂದಿರದ ಪಕ್ಕದಲ್ಲೇ ಮತ್ತೊಂದು ದೊಡ್ಡ ಮಂದಿರವನ್ನು ಕಟ್ಟಲಾಗಿದೆ. ಈ ಮಂದಿರವನ್ನು 17ನೇ ಅಕ್ಟೋಬರ್ 2010 ರ ವಿಜಯದಶಮಿಯಂದು ಶ್ರೀ.ಶ್ರೀ.ಶ್ರೀ.ಅನ್ನದಾನೇಶ್ವರ ಸ್ವಾಮೀಜಿ, ಶಿವಗಿರಿ ಕ್ಷೇತ್ರ, ಉಂಬಳ್ಳಿ, ಶಿವಾಲ್ದಾಪ್ಪನ ಬೆಟ್ಟ, ಸಂಗಮದ ಹತ್ತಿರ, ಕನಕಪುರ ತಾಲ್ಲೂಕು, ಇವರ ಆಶೀರ್ವಾದದೊಂದಿಗೆ ಪ್ರಾರಂಭಿಸಲಾಯಿತು. ಈ ಮಂದಿರದಲ್ಲಿ ದೊಡ್ಡದಾದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ, ವೀರಾಂಜನೇಯನ ವಿಗ್ರಹ, ನಂದಿ, ಕೂರ್ಮದ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.  

ದೇವಾಲಯದ ಹಿಂಭಾಗದಲ್ಲಿ ಗುರುಸ್ಥಾನವಿದ್ದು ಇಲ್ಲಿ ಅಮೃತ ಶಿಲೆಯ ಸಾಯಿಬಾಬಾ ಮತ್ತು ದತ್ತಾತ್ರೇಯರ ವಿಗ್ರಹಗಳನ್ನು ತಾನೇ ತಾನಾಗಿ ಉದ್ಭವಗೊಂಡ  ಪವಿತ್ರ ಬೇವಿನ ಮರದ ಅಡಿಯಲ್ಲಿ ಸ್ಥಾಪಿಸಲಾಗಿದೆ. 










    ದೇವಾಲಯದ ಕಾರ್ಯಚಟುವಟಿಕೆಗಳು: 

    ಆರತಿಯ ಸಮಯ:
    ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಮತ್ತು ಗುರುವಾರ ಬೆಳಿಗ್ಗೆ 6:00 ಘಂಟೆಗೆ.  
    ಮಧ್ಯಾನ್ಹ ಆರತಿ : ಪ್ರತಿದಿನ ಮಧ್ಯಾನ್ಹ 11:30 ಕ್ಕೆ ಮತ್ತು ಗುರುವಾರ ಮಧ್ಯಾನ್ಹ 12:00 ಘಂಟೆಗೆ  
    ಧೂಪಾರತಿ : ಪ್ರತಿದಿನ ಸಂಜೆ 6:00 ಘಂಟೆಗೆ
    ಶೇಜಾರತಿ : ಪ್ರತಿದಿನ ರಾತ್ರಿ 7:45 ಕ್ಕೆ ಮತ್ತು ಗುರುವಾರ ರಾತ್ರಿ 9:15 ಕ್ಕೆ


    ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಪ್ರತಿನಿತ್ಯ ಗುಲಾಬಿ ನೀರಿನೊಂದಿಗೆ ಮಂಗಳ ಸ್ನಾನ ನೆರವೇರಿಸಲಾಗುತ್ತದೆ. ಪಂಚಾಮೃತ ಅಭಿಷೇಕವನ್ನು ಪಂಚಲೋಹದ ಸಾಯಿಬಾಬಾರವರ ವಿಗ್ರಹಕ್ಕೆ ಮಾಡಲಾಗುತ್ತದೆ. ಸೇವಾ ಶುಲ್ಕ 51/- ರುಪಾಯಿಗಳು.

    ಪ್ರತಿ ತಿಂಗಳ ಹುಣ್ಣಿಮೆಯಂದು ಮಧ್ಯಾನ್ಹ 12 ರಿಂದ 3 ಘಂಟೆಯವರೆಗೆ "ಅನ್ನ ಕುಟೀರ" ಯೋಜನೆಯ ಅಡಿಯಲ್ಲಿ ಅಂದು ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೂ ಅನ್ನದಾನ ಕಾರ್ಯಕ್ರಮವಿರುತ್ತದೆ. 

    ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6:45 ಕ್ಕೆ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. 

    ಪ್ರತಿ ತಿಂಗಳ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಸಂಜೆ 5 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.

    ಪ್ರತಿ ತಿಂಗಳ ಅಮಾವಾಸ್ಯೆಯಂದು ಸಂಜೆ 6 ಘಂಟೆಗೆ ದೀಪೋತ್ಸವ ಕಾರ್ಯಕ್ರಮವಿರುತ್ತದೆ. 

    ವಿಶೇಷ ಉತ್ಸವದ ದಿನಗಳು 
    1. ಶ್ರೀರಾಮನವಮಿ. 
    2. ಗುರುಪೂರ್ಣಿಮೆ. 
    3. ಶಿವರಾತ್ರಿ. 
    4. ವಿಜಯದಶಮಿ - ಮಂದಿರದ ವಾರ್ಷಿಕೋತ್ಸವದ ದಿವಸ. 
    5. ಹನುಮಜ್ಜಯಂತಿ. 
    ದೇಣಿಗೆ ನೀಡಲು ಮನವಿ: 

    ಈ ದೇವಾಲಯದ ಟ್ರಸ್ಟ್ ನ ವತಿಯಿಂದ "ಅನ್ನ ಕುಟೀರ" ಯೋಜನೆಯಡಿ ನಿರಂತರವಾಗಿ ನಡೆಯುತ್ತಿರುವ ಅನ್ನದಾನ ಕಾರ್ಯಕ್ರಮಕ್ಕೆ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಇಚ್ಚಿಸುವ ಭಕ್ತರು ತಮ್ಮ ಕಾಣಿಕೆಗಳನ್ನು ಚೆಕ್ ಅಥವಾ ಡಿಡಿ ರೂಪದಲ್ಲಿ "ಶ್ರೀ ಶ್ರೀ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಮಯೀ ಮಂದಿರ ಟ್ರಸ್ಟ್ (ನೋಂದಣಿ), ಬೆಂಗಳೂರು" ಇವರಿಗೆ ಸಂದಾಯವಾಗುವಂತೆ ಕೆಳಗೆ ನೀಡುವ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಟ್ರಸ್ಟ್ ನ ವತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ. 

    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

    ಸ್ಥಳ: 
    ವಿದ್ಯುಚ್ಚಕ್ತಿ ಮಂಡಳಿ ಪಕ್ಕ, ಶ್ರೀ ಧರ್ಮ ಶಾಸ್ತ ಬೇಕರಿ ಎದುರು.

    ವಿಳಾಸ: 
    ಶ್ರೀ ಶ್ರೀ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಮಯೀ ಮಂದಿರ ಟ್ರಸ್ಟ್ (ನೋಂದಣಿ),
    ನಂ.86, ನಿವೇಶನ ಸಂಖ್ಯೆ.12, ಸೊಣ್ಣೆನಹಳ್ಳಿ, ದೊಡ್ಡಬಸ್ತಿ ಮುಖ್ಯ ರಸ್ತೆ,
    ವಿದ್ಯುಚ್ಚಕ್ತಿ ಮಂಡಳಿ ಪಕ್ಕ, ಕೆಂಗೇರಿ ಹೋಬಳಿ, ಬೆಂಗಳೂರು-560 056 .ಕರ್ನಾಟಕ.

    ಸಂಪರ್ಕಿಸಬೇಕಾದ ವ್ಯಕ್ತಿಗಳು:
    ಶ್ರೀ.ಸನತ್ ಕುಮಾರ್  / ಶ್ರೀಮತಿ. ರತ್ನ ಸನತ್ ಕುಮಾರ್.

    ದೂರವಾಣಿ:
    +91 95354 28048 / +91 98862 88609


    ಮಾರ್ಗಸೂಚಿ: 
    ಸೊಣ್ಣೆನಹಳ್ಳಿ ಶ್ರೀ ಧರ್ಮ ಶಾಸ್ತ  ಬೇಕರಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೊಡ್ಡಬಸ್ತಿ ಮುಖ್ಯ ರಸ್ತೆಯಲ್ಲಿ ಬೇಕರಿಯ ಎದುರು ಮತ್ತು ವಿದ್ಯುಚ್ಚಕ್ತಿ ಮಂಡಳಿ ಪಕ್ಕದಲ್ಲಿ ಇದೆ.  ಬಸ್ ಸಂಖ್ಯೆಗಳು: ಮಾರುಕಟ್ಟೆಯಿಂದ : 235-D  ಮೆಜಿಸ್ಟಿಕ್ ನಿಂದ: 235 K.

    ಕನ್ನಡ ಅನುವಾದ: ಶ್ರೀಕಂಠ ಶರ್ಮ 



    No comments:

    Post a Comment