Friday, June 22, 2012

ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಸಮಾಜ ಕಾರ್ಯಕರ್ತೆ ಕಿರಣ್ ಬೇಡಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಸಮಾಜ ಕಾರ್ಯಕರ್ತೆ ಶ್ರೀಮತಿ.ಕಿರಣ್ ಬೇಡಿಯವರು ಇದೇ ತಿಂಗಳ 22ನೇ ಜೂನ್ 2012, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, June 19, 2012

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುರುಪೂರ್ಣಿಮೆ ಉತ್ಸವದ ಆಚರಣೆ -  ಆಹ್ವಾನ ಪತ್ರಿಕೆ ಮತ್ತು ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಮುಂದಿನ ತಿಂಗಳ 2ನೇ ಜುಲೈ 2012, ಸೋಮವಾರದಿಂದ 4ನೇ ಜುಲೈ 2012, ಬುಧವಾರದವರಗೆ ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿರುತ್ತದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಪತ್ರಿಕಾ ಪ್ರಕಟಣೆಯನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗತ್ತಿಸಲಾಗಿದೆ: 




ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಗುರುಪೂರ್ಣಿಮೆಯ ಅಂಗವಾಗಿ ಬೆಂಗಳೂರು, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಿರಡಿ ಸಾಯಿಬಾಬಾರವರು ನಿಮೋಣ್ಕರ್ ರವರಿಗೆ ನೀಡಿದ  ಪವಿತ್ರ ಪಾದುಕೆಗಳ ಆಗಮನ - ಕೃಪೆ: ಸಾಯಿಅಮೃತಧಾರಾ.ಕಾಂ 

ಗುರುಪೂರ್ಣಿಮೆಯ ಅಂಗವಾಗಿ ಶಿರಡಿ ಸಾಯಿಬಾಬಾರವರು ನಿಮೋಣ್ಕರ್ ರವರಿಗೆ ನೀಡಿದ  ಪವಿತ್ರ ಪಾದುಕೆಗಳನ್ನು ಮುಂದಿನ ತಿಂಗಳ 1ನೇ ಜುಲೈ 2012, ಭಾನುವಾರದಂದು ಶಿರಡಿಯಿಂದ ಬೆಂಗಳೂರಿಗೆ  ತರಲಾಗುತ್ತಿದ್ದು 1ನೇ ಜುಲೈ 2012, ಭಾನುವಾರದಿಂದ  6ನೇ ಜುಲೈ 2012, ಶುಕ್ರವಾರದವರಗೆ ಪವಿತ್ರ ಪಾದುಕೆಗಳು ಬೆಂಗಳೂರು, ಕೋಲಾರ ಮತ್ತು ಮೈಸೂರು ಜಿಲ್ಲೆಯ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ದರ್ಶನಕ್ಕೆ ಲಭ್ಯವಿರುತ್ತದೆ.

ಸಾಯಿಭಕ್ತರು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಂಡು ಸಾಯಿಬಾಬಾರವರ ಪಾದುಕೆಗಳ ದರ್ಶನವನ್ನು ಪಡೆದು ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಈ ಮುಖಾಂತರ ಮನವಿ ಮಾಡಿಕೊಳ್ಳಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ಲಗತ್ತಿಸಿರುವ ಆಮಂತ್ರಣ ಪತ್ರವನ್ನು ಸಾಯಿಭಕ್ತರು ನೋಡಬಹುದು.
 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, June 17, 2012

ಶೇಕಡ 99% ಹೃದಯದ ಬ್ಲಾಕ್ ಹೊಂದಿದ್ದ ರೋಗಿಯನ್ನು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿಸಿದ ಶಿರಡಿ ಸಾಯಿಬಾಬಾ - ಕೃಪೆ: ಶ್ರೀಮತಿ.ಮೀತಾ ಭಟ್, ಮುಂಬೈ ಮತ್ತು ಸಾಯಿಅಮೃತಧಾರಾ.ಕಾಂ 

ಶ್ರೀಮತಿ.ಮೀತಾ ಭಟ್ ರವರು ಮಹಾರಷ್ಟ್ರದ ಮುಂಬೈ ನಗರದಲ್ಲಿರುವ ಪಶ್ಚಿಮ ಥಾಣೆಯ ನಿವಾಸಿ. ಇವರ ಸಹೋದರಿ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದರು. ರೋಗಿಯ ವೈದ್ಯಕೀಯ ತಪಾಸಣೆಯನ್ನು ನಡೆಸಿದ ವೈದ್ಯರು ಇವರ ಹೃದಯವು ಶೇಕಡ 99% ರಷ್ಟು ಬ್ಲಾಕ್ ಹೊಂದಿದ್ದು ಬೈಪಾಸ್ ಆಪರೇಷನ್ ಮಾಡಲು ಸಾಧ್ಯವಿಲ್ಲ ಹಾಗೂ ಮಾಡಿದರೂ ಬದುಕುಳಿಯುವ ಸಂಭವ ಕಡಿಮೆ ಎಂದು ಮನೆಯವರಿಗೆ ತಿಳಿಸಿದರು. ಆದರೆ ಅನನ್ಯ ಸಾಯಿಭಕ್ತರಾದ ಇವರ ಕುಟುಂಬ ವರ್ಗದವರು ಆಶಾವಾದಿಗಳಾಗಿದ್ದು ವೈದ್ಯರುಗಳಿಗೆ ಬೈಪಾಸ್ ಆಪರೇಷನ್ ಮಾಡಲು ಬಲವಂತ ಮಾಡಿ ಒಪ್ಪಿಸಿದರು. ಆಪರೇಷನ್ ಗೆ ನಿಗದಿ ಪಡಿಸಿದ ದಿನದಂದು ವೈದ್ಯರುಗಳು ಸತತ 9 ಗಂಟೆಗಳ ಕಾಲ ಆಪರೇಷನ್ ಪ್ರಕ್ರಿಯೆಯನ್ನು ನಡೆಸಿದರು.  ಆಪರೇಷನ್ ಮುಗಿಸಿ ಆಪರೇಷನ್ ಕೋಣೆಯಿಂದ ಹೊರಬಂದ ವೈದ್ಯರು "ಇದು ಒಂದು ಪವಾಡವಲ್ಲದೇ ಮತ್ತೇನೂ ಇಲ್ಲ. ನಾನು ಕೇವಲ ನಿಮಿತ್ತ ಮಾತ್ರನಾಗಿ ದೇವರ ಸಾಧನವೆಂಬಂತೆ ಈ ಆಪರೇಷನ್ ಮಾಡಿದೆ" ಎಂದು ನುಡಿದರು. ಆಪರೇಷನ್ ಆದ 3 ದಿನಗಳ ನಂತರ ಮೀತಾರವರ ಸಹೋದರಿ ಮೊದಲಿನಂತಾದರು. ಆಗ ಮಾತನಾಡಿದ ಅವರು "ಅರಿವಳಿಕೆಯನ್ನು ನೀಡಿದ ಮೇಲೆ ಎನಾಯಿತೆಂದು ನನಗೆ ತಿಳಿಯಲಿಲ್ಲ. ಕಣ್ಣು ಕತ್ತಲಿಟ್ಟುಕೊಂಡು ನನ್ನ ಮುಂದಿರುವ ಎಲ್ಲವೂ ಖಾಲಿಯಾಗಿರುವಂತೆ ಕಾಣಿಸಿತು. ನಂತರ ಒಂದು ದೊಡ್ಡ ಕೋಟೆಯ ಬಾಗಿಲಿನಲ್ಲಿ ಸಾಯಿಬಾಬಾರವರು ನಿಂತುಕೊಂಡಿರುವಂತೆ ಕಾಣಿಸಿತು. ಸಾಯಿಬಾಬಾರವರು  ನನಗೆ ಯೋಚನೆ ಮಾಡಬೇಡ, ನಾನು ನಿನ್ನ ಜೊತೆಯಲ್ಲಿದ್ದೇನೆ ಎಂದು ಅಭಯ ನೀಡಿದರು. ಆನಂತರ ಏನು ನಡೆಯಿತೋ ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ" ಎಂದು  ಭಾವುಕರಾಗಿ ನುಡಿದರು. ಶ್ರೀಮತಿ.ಮೀತಾರವರು "ನನ್ನ ಸಹೋದರಿಗೆ ಸಾಯಿಬಾಬಾರವರು ಮರುಜನ್ಮ ಎಂಬ ಕೊಡುಗೆಯನ್ನು ನೀಡಿದರು" ಎಂದು ಅತ್ಯಂತ ಸಂತೋಷದಿಂದ ನುಡಿಯುತ್ತಾರೆ.

ಸಾಯಿಬಾಬಾರವರ ಈ ಅಪೂರ್ವ ಲೀಲೆಯು ಶಿರಡಿ ಸಾಯಿಬಾಬಾ ಸಂಸ್ಥಾನ ಪ್ರಕಟಣೆ ಮಾಡುವ ಶ್ರೀ ಸಾಯಿಲೀಲಾ ಮಾರ್ಚ್-ಏಪ್ರಿಲ್ 2012 ಸಂಚಿಕೆಯಲ್ಲಿ ಪ್ರಕಟಣೆಗೊಂಡಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ವತಿಯಿಂದ ಗುರುಪೂರ್ಣಿಮಾ ಉತ್ಸವದ ಆಚರಣೆ -  ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ಮುಂದಿನ ತಿಂಗಳ 3ನೇ ಜುಲೈ 2012, ಮಂಗಳವಾರ ದಂದು ರಾಜಾಜಿನಗರದ 3ನೇ ಬ್ಲಾಕ್ ನಲ್ಲಿರುವ ಶ್ರೀರಾಮಮಂದಿರದಲ್ಲಿ ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿರುತ್ತಾರೆ. 

ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗತ್ತಿಸಲಾಗಿದೆ.

 
ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, June 14, 2012

ಚನ್ನೈ ನ ಶಿರಡಿ ಸಾಯಿಬಾಬಾ ಮಂದಿರ - ನೂತನ ಶಿರಡಿ ಸಾಯಿ ಬ್ರಹ್ಮ ಪೀಠಂ, ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ), ನಂ.135, ಮುಖ್ಯ ರಸ್ತೆ, ಗೋಮತಿಪುರಂ, ತಿರುನಿನ್ರವೂರು-602 024, ತಿರುವೆಲ್ಲೂರು ಜಿಲ್ಲೆ, ಚನ್ನೈ, ತಮಿಳುನಾಡು, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಚನ್ನೈನ ತಿರುವೆಲ್ಲೂರು ಜಿಲ್ಲೆಯ ತಿರುನಿನ್ರವೂರು ಪಟ್ಟಣದ ಗೋಮತಿಪುರಂ ಮುಖ್ಯರಸ್ತೆಯಲ್ಲಿ ಇರುತ್ತದೆ. ತಿರುನಿನ್ರವೂರು ಪಟ್ಟಣವು ಚನ್ನೈ ಸೆಂಟ್ರಲ್ - ಆವಡಿ ಆರಕ್ಕೋನಂ ರೈಲ್ವೇ ಮಾರ್ಗದಲ್ಲಿರುತ್ತದೆ. ದೇವಾಲಯವು ಆವಡಿಯಿಂದ 6 ಕಿಲೋಮೀಟರ್ ಮತ್ತು ತಿರುನಿನ್ರವೂರು ಬಸ್  ನಿಲ್ದಾಣದಿಂದ ಹಾಗೂ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯದ ಉದ್ಘಾಟನೆಯನ್ನು 6ನೇ ಸೆಪ್ಟೆಂಬರ್ 1998 ರಂದು ಅಲ್ಲಾ ಮಾಲಿಕ್ ಶ್ರೀ ಸಂತಾನ ಸಾಯಿಬಾಬಾ ಗುರೂಜಿಯವರು ನೆರವೇರಿಸಿರುತ್ತಾರೆ.

ಶ್ರೀ.ಆರ್.ಸಂತಾನ  ಕೃಷ್ಣನ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯ ಪದಾಧಿಕಾರಿಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವನ್ನು 15 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು, ಇಲ್ಲಿ ಮೊದಲಿಗೆ 3x3 ಗರ್ಭಗುಡಿಯಲ್ಲಿ ಕಪ್ಪುಶಿಲೆಯ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಹಾಗೂ ಪವಿತ್ರ ಧುನಿಯನ್ನು ಸ್ಥಾಪನೆ ಮಾಡಲಾಯಿತು. 2009ನೇ ಇಸವಿಯಲ್ಲಿ ಕಪ್ಪುಶಿಲೆಯ ಸಾಯಿಬಾಬಾರವರ ವಿಗ್ರಹದ ಬದಲಿಗೆ ಸಾಯಿಭಕ್ತರೊಬ್ಬರು ಕಾಣಿಕೆಯಾಗಿ ನೀಡಿದ 5 ಅಡಿ ಎತ್ತರದ ಸುಂದರ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ಜೂನ್ 2011 ರಲ್ಲಿ ಕಪ್ಪು ಶಿಲೆಯ ರಾಘವೇಂದ್ರ ಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು.

ದೇವಾಲಯದಲ್ಲಿ ದ್ವಾರಕಾಮಾಯಿ, ಗುರುಸ್ಥಾನ ಮತ್ತು ಪವಿತ್ರ ಧುನಿಯನ್ನು ಕೂಡ ಪ್ರತಿಷ್ಟಾಪಿಸಲಾಗಿರುತ್ತದೆ.

ದೇವಾಲಯದಲ್ಲಿ ಮರದ ಪಲ್ಲಕ್ಕಿಯಿದ್ದು ಇದನ್ನು ಪ್ರತಿ ಗುರುವಾರ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತದೆ.









ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6 ಗಂಟೆಯಿಂದ 12 ಗಂಟೆಯವರೆಗೆ.
ಸಂಜೆ 5:30 ರಿಂದ 8:30 ರವರೆಗೆ.

ಆರತಿಯ ಸಮಯ:

ಪ್ರತಿ ಭಾನುವಾರ ಮಧ್ಯಾನ್ಹ 12 ಗಂಟೆಗೆ ವಿಶೇಷ ಆರತಿಯ ಕಾರ್ಯಕ್ರಮವಿರುತ್ತದೆ.

ಪ್ರತಿ ಗುರುವಾರ ಸಂಜೆ 7:45 ರವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. ಭಜನೆಯ ನಂತರ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. ಪಲ್ಲಕ್ಕಿ ಉತ್ಸವದ ನಂತರ ಶೇಜಾರತಿಯನ್ನು ಮಾಡಲಾಗುತ್ತದೆ ಹಾಗೂ ಪ್ರಸಾದವನ್ನು ವಿತರಿಸಲಾಗುತ್ತದೆ.

ಪ್ರತಿ ಭಾನುವಾರ ಬೆಳಿಗ್ಗೆ 10:30 ಕ್ಕೆ ಸಾಯಿಬಾಬಾರವರ ವಿಗ್ರಹಕ್ಕೆ ವಿಶೇಷ ಅಭಿಷೇಕವನ್ನು ಮಾಡಲಾಗುತ್ತದೆ. ಮಧ್ಯಾನ್ಹ 12 ಗಂಟೆಗೆ ವಿಶೇಷ ಆರತಿಯ ಕಾರ್ಯಕ್ರಮವಿರುತ್ತದೆ. ಆರತಿಯ ನಂತರ ಸುಮಾರು 100 ಜನರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ  ೬ನೇ ಸೆಪ್ಟೆಂಬರ್ ದೇವಾಲಯದ ವಾರ್ಷಿಕೋತ್ಸವ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದಲ್ಲಿ ಪ್ರತಿ ಭಾನುವಾರ ಮಧ್ಯಾನ್ಹ ಆರತಿಯ ನಂತರ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇವಾಲಯದ ಹತ್ತಿರ ಇರುವ ವೃದ್ಧಾಶ್ರಮದ ಸುಮಾರು 50 ಜನರಿಗೆ ಉಚಿತವಾಗಿ ಮಹಾಪ್ರಸಾದವನ್ನು ಕಳುಹಿಸಿಕೊಡಲಾಗುತ್ತಿದೆ.

ದೇಣಿಗೆಗೆ ಮನವಿ:

ದೇವಾಲಯದ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಂಡಿರುವುದರಿಂದ ದೇವಾಲಯವನ್ನು ತಾತ್ಕಾಲಿಕವಾಗಿ ಮೊದಲನೆ ಮಹಡಿಗೆ ಸ್ಥಳಾಂತರಿಸಲಾಗಿದೆ. ಅನೇಕ ಸಾಯಿಭಕ್ತರ ಸಹಕಾರದಿಂದ ದೇವಾಲಯದ ವಿಸ್ತರಣೆ ಕಾರ್ಯವು 29ನೇ ಸೆಪ್ಟೆಂಬರ್ 2011 ರಂದು ಪ್ರಾರಂಭವಾಗಿರುತ್ತದೆ.  ದೇವಾಲಯದ ರಾಜಗೋಪುರದ ನಿರ್ಮಾಣದ ಕೆಲಸ ಬಹುತೇಕ ಪೂರ್ಣಗೊಂಡಿದ್ದು ಧ್ಯಾನಮಂದಿರಕ್ಕೆ ಧುನಿಯನ್ನು ವಿಸ್ತರಿಸುವ ಕೆಲಸ ಭರದಿಂದ ಸಾಗುತ್ತಿದೆ. ಅಷ್ಟೇ ಅಲ್ಲದೆ, ಶ್ರೀ ಆಂಜನೇಯ ಸ್ವಾಮಿ , ಶ್ರೀ ಗಣಪತಿ ಹಾಗೂ ಈಗಾಗಲೇ ಸ್ಥಾಪಿಸಲಾಗಿರುವ ಶಿರಡಿ ಸಾಯಿಬಾಬಾ, ರಾಘವೇಂದ್ರ ಸ್ವಾಮಿಯ ದೇವಾಲಯಗಳನ್ನು ದೇವಾಲಯದಲ್ಲಿ ಒಂದೇ ಸೂರಿನಡಿಯಲ್ಲಿ ಸ್ಥಾಪಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮೇಲಿನ ಈ ಮಹತ್ ಕಾರ್ಯಕ್ಕಾಗಿ ಹಾಗೂ ಕುಂಭಾಭಿಷೇಕ ಕಾರ್ಯಕ್ರಮಗಳಿಗಾಗಿ ದೇಣಿಗೆಯ ಅಗತ್ಯವಿರುತ್ತದೆ. ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ) ಯು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ಸಾಯಿಭಕ್ತರುಗಳು ದೇಣಿಗೆಯನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು  ನೀಡಲು  ಇಚ್ಚಿಸುವ  ಸಾಯಿಭಕ್ತರು ನಗದು /ಚೆಕ್ /ಡಿಡಿ ರೂಪದಲ್ಲಿ "ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ)" ಇವರಿಗೆ  ಸಂದಾಯವಾಗುವಂತೆ ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣವನ್ನು ಸಂದಾಯ ಮಾಡಬಹುದಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್, ಪಡಿ ಶಾಖೆ - ಬ್ರಾಂಚ್ ಕೋಡ್ - 05083, - ಖಾತೆ ಸಂಖ್ಯೆ 30248221094 ಐ.ಎಫ್.ಎಸ್.ಸಿ. ಕೋಡ್ - SBIN0005083.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಆವಡಿಯಿಂದ 6 ಕಿಲೋಮೀಟರ್ ಮತ್ತು ತಿರುನಿನ್ರವೂರು ಬಸ್  ನಿಲ್ದಾಣದಿಂದ ಹಾಗೂ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ವಿಳಾಸ:
ನೂತರ ಶಿರಡಿ ಸಾಯಿ ಬ್ರಹ್ಮ ಪೀಠಂ,
ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ),
ನಂ.135, ಮುಖ್ಯ ರಸ್ತೆ, ಗೋಮತಿಪುರಂ,
ತಿರುನಿನ್ರವೂರು-602 024,
ತಿರುವೆಲ್ಲೂರು ಜಿಲ್ಲೆ, ಚನ್ನೈ,
ತಮಿಳುನಾಡು, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಆರ್.ಸಂತಾನಕೃಷ್ಣನ್ / ಶ್ರೀ.ಎಸ್.ರಂಗನಾಥನ್ (ಸಾಯಿ ಸ್ಮರಣಾನಂದ).

ದೂರವಾಣಿ ಸಂಖ್ಯೆಗಳು:
+91 44  2634 1087- ಸ್ಥಿರ ದೂರವಾಣಿ / +91 98845 10345 - ಶ್ರೀ.ಎಸ್.ರಂಗನಾಥನ್  / +91 91760 32229 – ಶ್ರೀ.ಆರ್.ಸಂತಾನಕೃಷ್ಣನ್



ಇ ಮೇಲ್ ವಿಳಾಸ:  


ಮಾರ್ಗಸೂಚಿ: 
ತಿರುನಿನ್ರವೂರು ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು  ದೇವಾಲಯವು ತಿರುನಿನ್ರವೂರು ಬಸ್  ನಿಲ್ದಾಣದಿಂದ ಹಾಗೂ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, June 13, 2012

ಗುಜರಾತ್  ರಾಜ್ಯದ ರಾಜ್ಯಪಾಲರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಗುಜರಾತ್  ರಾಜ್ಯದ ರಾಜ್ಯಪಾಲರಾದ ಡಾ.ಕಮಲ ಬೆನಿವಾಲ್ ರವರು ಇದೇ ತಿಂಗಳ 13ನೇ ಜೂನ್ 2012, ಬುಧವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, June 11, 2012

ಶಿರಡಿ ಸಾಯಿ ಪರಿವಾರ್ ಟ್ರಸ್ಟ್ , ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿ ಪರಿವಾರ್ ಟ್ರಸ್ಟ್ , ಹೆಚ್.ಎಸ್.ಆರ್ ಬಡಾವಣೆ, ಬೆಂಗಳೂರು ವತಿಯಿಂದ 28ನೇ ಜುಲೈ 2012, ಶನಿವಾರದಂದು ರಾತ್ರಿ 9:00 ರಿಂದ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪ್ಯಾಲೇಸ್ ಗ್ರೌಂಡ್ ನಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ಎಂಬ ಶೀರ್ಷಿಕೆಯಡಿಯಲ್ಲಿ  ಶಿರಡಿಯ ಪ್ರಖ್ಯಾತ ನಾಟಕ ತಂಡವಾದ "ಶ್ರೀ.ಬಬ್ಲು ದುಗ್ಗಾಲ್ ಮತ್ತು ತಂಡ" ದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿರಡಿಯಲ್ಲಿರುವ ದ್ವಾರಕಾಮಾಯಿಯ ಪ್ರತಿರೂಪವನ್ನು ಪುನರ್ ನಿರ್ಮಾಣ ಮಾಡುತ್ತಿರುವುದು ಈ ಬೃಹತ್ ಶಿರಡಿ ಸಾಯಿಬಾಬಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಶಿರಡಿ ಸಾಯಿ ಪರಿವಾರ್ ಟ್ರಸ್ಟ್, ಬೆಂಗಳೂರು ಸಾಯಿಬಾಬಾರವರ ಆಶೀರ್ವಾದದೊಂದಿಗೆ 2009 ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಮಾಡಿದ ಅನೇಕ ಲೀಲೆಗಳನ್ನು ಮತ್ತು ಚಮತ್ಕಾರಗಳನ್ನು ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ  ಬರುವ ಘಟನೆಗಳ ಮುಖಾಂತರವಾಗಿ ಸಾಯಿ ಭಕ್ತರಿಗೆ ಈ ನಾಟಕದ ಮುಖಾಂತರ ತೋರಿಸುವುದು ಹಾಗೂ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ಟ್ರಸ್ಟ್ ನ್ನು ಪ್ರಾರಂಭಿಸಲಾಗಿರುತ್ತದೆ.

ಕಾರ್ಯಕ್ರಮವು 28ನೇ ಜುಲೈ 2012, ಶನಿವಾರ ದಂದು ರಾತ್ರಿ 9:00 ಕ್ಕೆ  ಪ್ರಾರಂಭವಾಗುತ್ತದೆ. ಶಿರಡಿ ಸಾಯಿಬಾಬಾರವರ ಆರತಿ, ಭಜನೆ,  ಸಾಯಿಬಾಬಾರವರ ಉಪದೇಶಗಳು, ದ್ವಾರಕಾಮಾಯಿ ದರ್ಬಾರ್, ಸಾಯಿಬಾಬಾರವರ ದರ್ಶನ, ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನಾಟಕ, ಸಾಯಿಬಾಬಾರವರು ಮಾಡಿದ  ಅನೇಕ ಪವಾಡಗಳು, ಮಹಾಪ್ರಸಾದ ಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ.

ಕಾರ್ಯಕ್ರಮವು ಶಿರಡಿ ಸಾಯಿಬಾಬಾರವರಿಗೆ ವಿಶೇಷ ಆರತಿ ಬೆಳಗುವುದರೊಂದಿಗೆ ಮುಕ್ತಾಯವಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳ:

ಪ್ರಿನ್ಸಸ್ ಗಾಲ್ಫ್, ಅರಮನೆ ಮೈದಾನ,
ಹೀರೋ ಹೊಂಡಾ ಶೋರೂಂ ಎದುರು,
ಬಳ್ಳಾರಿ ರಸ್ತೆ, ಬೆಂಗಳೂರು.


ಕಳೆದ ವರ್ಷ ನೆಡೆದ ಕಾರ್ಯಕ್ರಮದಲ್ಲಿ ಸರಿ ಸುಮಾರು 5000 ಕ್ಕೂ ಹೆಚ್ಚು ಸಾಯಿಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆಯೋಜಕರು ರಾತ್ರಿ ಪೂರ್ತಿ ನೆಡೆಯುವ ಈ ಶಿರಡಿ ಸಾಯಿಬಾಬಾ ಕಾರ್ಯಕ್ರಮಕ್ಕೆ ಮತ್ತಷ್ಟು ಹೆಚ್ಚಿನ ಸಾಯಿ ಭಕ್ತರ ಸಹಕಾರವನ್ನು ಕೋರುತ್ತಾರೆ. ಕಾರ್ಯಕ್ರಮಕ್ಕೆ ದೇಣಿಗೆ ನೀಡಲು ಅಥವಾ ಇನ್ನ್ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ಶ್ರೀ.ಮುಕೇಶ್ ಅಗರವಾಲ್ - +91 98800 73330  ಶ್ರೀ.ಅಜಯ್ ಶರ್ಮ - +91 99649 73330 ಶ್ರೀ.ರಾಜೇಂದರ್ ಬೈಡ್ - +91 94488 03769 ಅಥವಾ ಶ್ರೀ.ರವಿ - +91 94482 56685  ಇ-ಮೈಲ್ ವಿಳಾಸ: shirdisaipariwartrust@gmail.com ನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:



ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, June 7, 2012

ಪ್ರತಿಭಾನ್ವಿತ ಯುವ ಸಾಯಿ ಭಜನ ಗಾಯಕ - ಶ್ರೀ.ಪಂಕಜ್ ರಾಜ್  - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಪಂಕಜ್ ರಾಜ್ ಪ್ರತಿಭಾನ್ವಿತ ಯುವ ಸಾಯಿ ಭಜನ ಗಾಯಕರಾಗಿರುತ್ತಾರೆ. ಇವರು ಉತ್ತರ ಭಾರತದಲ್ಲಿ ಸಾಯಿಭಜನೆಯಲ್ಲಿ ಹೊಸ ಅಲೆಯನ್ನೇ ಎಬ್ಬಿಸಿರುತ್ತಾರೆ. ಇವರು 14ನೇ ನವೆಂಬರ್ 1986 ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಂದೆ ಯವರು ಶ್ರೀ.ನರೇಷ್ ಕುಮಾರ್ ಮತ್ತು ತಾಯಿ ಶ್ರೀಮತಿ.ರಾಜ್ ರಾಣಿ.

ಇವರು ದೆಹಲಿ ವಿಶ್ವವಿದ್ಯಾಲಯದಿಂದ ಕಾಮರ್ಸ್ ಪದವಿಯನ್ನು ಗಳಿಸಿರುತ್ತಾರೆ. ಇವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು 6 ವರ್ಷಗಳ ಕಾಲ ಪಂಜಾಬ್ ಘರಾನಾದ ಶ್ರೀ.ಸುಖಜೀತ್ ಸಿಂಗ್ ರವರ ಬಳಿ ಕಲಿತರು. ಇವರು ಭಾರತದಾದ್ಯಂತ ಸಂಚಾರ ಮಾಡಿ ಹಲವಾರು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅಷ್ಟೇ ಅಲ್ಲದೆ, 2011ನೇ ಇಸವಿಯಲ್ಲಿ ಹೊರ ದೇಶವಾದ ದುಬೈನಲ್ಲಿ ಕೂಡ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ನೀಡಿದ ಹೆಗ್ಗಳಿಗೆ ಇವರದು.

ಇವರು ಪ್ರಖ್ಯಾತ ಗಾಯಕರುಗಳಾದ ಶ್ರೀ.ಸೋನು ನಿಗಮ್ ರವರಿಂದ "ದೀದಾರ್ ಎ ಸಾಯಿ" ಪ್ರಶಸ್ತಿಯನ್ನು, ಶ್ರೀ.ನರೇಂದ್ರ ಚಂಚಲ್ ರವರಿಂದ "ಶುಕರ್ ಹೈ ಮಾ ಕಲ್ಕಾ" ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಅಲ್ಲದೇ ಇನ್ನು ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.

ಇವರು ಸಾಯಿಬಾಬಾರವರ ಮೇಲೆ ಬಿಡುಗಡೆಯಾದ ಅನೇಕ ಭಕ್ತಿ ಗೀತೆಗಳ ಆಲ್ಬಮ್ ಗಳಿಗೆ ತಮ್ಮ ಧ್ವನಿಯನ್ನು ನೀಡಿರುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ಸಾಯಿ ನಾಮ್ ಬಡಾ ಅನ್ಮೋಲ್, ಸಾಯಿ ಕಾ ಪೈಗಮ್, ಸಾಯಿ ಸೇ ರುಬುರು, ಬಾಬಾ ಮೇರೇ ಸಾಥ್ ಹೈ, ಸಾಯಿ ಪವನ್, ಸಾಯಿ ಉಧಿ, ಸಾಯಿ ಫಕೀರ್ ಕಾ ದೀವಾನಾ. 

ಪ್ರಸ್ತುತ ಇವರು ತಮ್ಮ ತಂದೆ, ತಾಯಿ ಹಾಗೂ ಸಹೋದರಿಯೊಡನೆ ನವದೆಹಲಿಯ ತಮ್ಮ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ.ಪಂಕಜ್ ರಾಜ್ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ವಿಳಾಸ:

ಫ್ಲಾಟ್ ಸಂಖ್ಯೆ: ಎ-2, ಅಪ್ಪರ್ ಗ್ರೌಂಡ್,
ದ್ವಾರಕಾ, ಸೆಕ್ಟರ್-1,
ನವದೆಹಲಿ -110 059, ಭಾರತ. 

ದೂರವಾಣಿ ಸಂಖ್ಯೆಗಳು:

+91 98916 65062 / +91 99105 89000


ಇ-ಮೈಲ್ ವಿಳಾಸ:



ಫೇಸ್ ಬುಕ್ ಜೋಡಣೆ:  




ಸಾಯಿಬಾಬಾ ಆಲ್ಬಮ್ ಗಳು:  


ಸಾಯಿ ನಾಮ್ ಬಡಾ ಅನ್ಮೋಲ್, ಸಾಯಿ ಕಾ ಪೈಗಮ್, ಸಾಯಿ ಸೇ ರುಬುರು, ಬಾಬಾ ಮೇರೇ ಸಾಥ್ ಹೈ, ಸಾಯಿ ಪವನ್, ಸಾಯಿ ಉಧಿ, ಸಾಯಿ ಫಕೀರ್ ಕಾ ದೀವಾನಾ. 


ಭಜನೆಯ ವೀಡಿಯೋಗಳು:


































ಕನ್ನಡ ಅನುವಾದ: ಶ್ರೀಕಂಠ ಶರ್ಮ