Friday, November 30, 2012

ರಾಜಸ್ಥಾನದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಸಿ-26, ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್,  ಜೆ.ಕೆ.ಪುರಂ,  ಸಿರೋಹಿ ಜಿಲ್ಲೆ, ರಾಜಸ್ಥಾನ-307 019,ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಜೆ.ಕೆ.ಪುರಂನಲ್ಲಿರುವ ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್ ನಲ್ಲಿ ಇರುತ್ತದೆ.

ದೇವಾಲಯದ ಉದ್ಘಾಟನೆಯನ್ನು 14ನೇ ಏಪ್ರಿಲ್ 2011 ರಂದು ಶ್ರೀಮತಿ.ಭಾಗ್ಯವಂತಿ ದೇವಿಯವರು ಹಲವಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ದೇವಾಲಯದಲ್ಲಿ  4-1/2 ಅಡಿ ಎತ್ತರದ ಗನ್ ಮೆಟಲ್ ನಲ್ಲಿ ಮಾಡಿರುವ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6:45 ರಿಂದ 8:00.
ಸಂಜೆ : 5:30 ರಿಂದ 10:00.

ಆರತಿಯ ಸಮಯ:

ಬೆಳಿಗ್ಗೆ : 07:35
ಸಂಜೆ: 07:15

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ 14ನೇ ಏಪ್ರಿಲ್ ದೇವಾಲಯದ ವಾರ್ಷಿಕೋತ್ಸವ.
ನವರಾತ್ರಿ - ಒಂಬತ್ತು ದಿನಗಳು ವಿಶೇಷ ಪೂಜೆ ನಡೆಯುತ್ತವೆ.
ಪ್ರತಿವರ್ಷ ಎರಡು ಬಾರಿ ಉದಯಪುರದ ಜಗನ್ನಾಥ ದೇವಾಲಯದಲ್ಲಿ ನಡೆಯುವ ರಥಯಾತ್ರೆಯಲ್ಲಿ ಪಾಲ್ಗೊಳ್ಳಲಾಗುತ್ತದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್, ಜೆ.ಕೆ.ಪುರಂ, ಮೌಂಟ್ ಅಬುವಿನ ಹತ್ತಿರ, ರಾಜಸ್ಥಾನ.
.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಸಿ-26, ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್, 
ಜೆ.ಕೆ.ಪುರಂ,  ಸಿರೋಹಿ ಜಿಲ್ಲೆ,
ರಾಜಸ್ಥಾನ-307 019,ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಪ್ರದೀಪ್ ಕುಮಾರ್ ಪಾಲಿವಾಲ್ - ಸಂಸ್ಥಾಪಕರು

ದೂರವಾಣಿ ಸಂಖ್ಯೆಗಳು:
+91 97854 55634


ಇ ಮೇಲ್ ವಿಳಾಸ:
pkpaliwal@lc.jkmail.com/paliwal.pradeep23@gmail.com


ಮಾರ್ಗಸೂಚಿ:
ಈ ದೇವಾಲಯವು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಜೆ.ಕೆ.ಪುರಂನಲ್ಲಿರುವ ಜೆ.ಕೆ.ಲಕ್ಷ್ಮೀ ಸಿಮೆಂಟ್ ಕ್ವಾರ್ಟರ್ಸ್ ನಲ್ಲಿ ಇರುತ್ತದೆ. ಈ ಸ್ಥಳವು ಜಗತ್ಪ್ರಸಿದ್ಧ ಮೌಂಟ್ ಅಬುವಿನ ಹತ್ತಿರವಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, November 28, 2012

ಕಾನ್ಪುರದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಹನುಮಾನ್ ಸಾಯಿ ಮಂದಿರ, ಪರ್ದೇವನಪುರ, ರಾಮೇಶ್ವರ ಧಾಮ್ ಮಂದಿರದ ಹತ್ತಿರ, ಕಾನ್ಪುರ-208 007, ಉತ್ತರಪ್ರದೇಶ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಉತ್ತರಪ್ರದೇಶ ರಾಜ್ಯದ ಕಾನ್ಪುರ ಪಟ್ಟಣದ ಪರ್ದೇವನಪುರದಲ್ಲಿ ಇರುತ್ತದೆ. ದೇವಾಲಯವು ರಾಮೇಶ್ವರ ಧಾಮ್ ಮಂದಿರ ಹಾಗೂ ಜಿತೇನ್ ಗ್ಯಾಸ್ ಏಜೆನ್ಸಿಯ ಹತ್ತಿರವಿರುತ್ತದೆ. 

ದೇವಾಲಯದ ಉದ್ಘಾಟನೆಯನ್ನು 1ನೇ ಮೇ 2011 ಯಂದು ದೇವಾಲಯದ ಪ್ರಧಾನ ಪುರೋಹಿತರಾದ ಶ್ರೀ.ಐ.ಎನ್.ಝಾರವರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ವಿನೀತ್ ಕುಮಾರ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ಹನುಮಾನ್ ಸಾಯಿ ಭಕ್ತ ಸೇವಾ ಸಮಿತಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.




ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 5:00 ರಿಂದ 01:00
ಸಂಜೆ : 4:00 ರಿಂದ 10:00

ಆರತಿಯ ಸಮಯ:

ಬೆಳಿಗ್ಗೆ: 8:00 ರಿಂದ 10:00
ಸಂಜೆ: 5:00 ರಿಂದ 7:00

ವಿಶೇಷ ಉತ್ಸವದ ದಿನಗಳು:

ಶಿವರಾತ್ರಿ.
ಪ್ರತಿವರ್ಷದ 1ನೇ ಮೇ ಯಂದು ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ಕೃಷ್ಣ ಜನ್ಮಾಷ್ಟಮಿ.
ದೀಪಾವಳಿ.
ಹೋಳಿ ಹುಣ್ಣಿಮೆ.
ವಿಜಯದಶಮಿ.

ದೇಣಿಗೆಗೆ ಮನವಿ:

ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು ಈ ಕೆಳಕಂಡ ಬ್ಯಾಂಕ್ ಖಾತೆಗೆ ನಗದು/ಚೆಕ್/ಡಿಡಿ ರೂಪದಲ್ಲಿ ದೇಣಿಗೆಯನ್ನು ಕಳುಹಿಸಬಹುದಾಗಿದೆ.

ಖಾತೆ ಹೆಸರು: ಅಥರ್ವ ಕುಮಾರ್
ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಶಾಖೆ: ಡಿಫೆನ್ಸ್ ಕಾಲೋನಿ ಶಾಖೆ
ಖಾತೆ ಸಂಖ್ಯೆ: 697610110003691


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ರಾಮೇಶ್ವರ ಧಾಮ್ ಮಂದಿರ ಹಾಗೂ ಜಿತೇನ್ ಗ್ಯಾಸ್ ಏಜೆನ್ಸಿಯ ಹತ್ತಿರ, ಕಾನ್ಪುರ.
.

ವಿಳಾಸ:
ಶ್ರೀ ಹನುಮಾನ್ ಸಾಯಿ ಮಂದಿರ,
ಪರ್ದೇವನಪುರ, ರಾಮೇಶ್ವರ ಧಾಮ್ ಮಂದಿರದ ಹತ್ತಿರ,
ಕಾನ್ಪುರ-208 007,
ಉತ್ತರಪ್ರದೇಶ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ವಿನೀತ್ ಕುಮಾರ್

ದೂರವಾಣಿ ಸಂಖ್ಯೆಗಳು:
+91 96219 96396/+91 96964 96635/+91 96160 21835


ಇ ಮೇಲ್ ವಿಳಾಸ:
shashinigam12365@rediffmail.com



ಮಾರ್ಗಸೂಚಿ:
ಪರ್ದೇವನಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಉತ್ತರಪ್ರದೇಶ ರಾಜ್ಯದ ಕಾನ್ಪುರ ಪಟ್ಟಣದ ಪರ್ದೇವನಪುರದಲ್ಲಿ ಇರುತ್ತದೆ. ದೇವಾಲಯವು ರಾಮೇಶ್ವರ ಧಾಮ್ ಮಂದಿರ ಹಾಗೂ ಜಿತೇನ್ ಗ್ಯಾಸ್ ಏಜೆನ್ಸಿಯ ಹತ್ತಿರವಿರುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 23, 2012

ಸ್ವಯಂಭು ಸಾಯಿಬಾಬಾ ಮಂದಿರ, ಇಬ್ರಾಹಿಂ ಪಟ್ಟಣಂ, ಹೈದರಾಬಾದ್ ನ ವತಿಯಿಂದ ಶಿರಡಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ

ಸ್ವಯಂಭು ಸಾಯಿಬಾಬಾ ಮಂದಿರ, ಇಬ್ರಾಹಿಂ ಪಟ್ಟಣಂ, ಹೈದರಾಬಾದ್ ನ ವತಿಯಿಂದ ಇದೇ ತಿಂಗಳ 30ನೇ ನವೆಂಬರ್ 2012 (ಶುಕ್ರವಾರ) ದಿಂದ ಮುಂದಿನ ತಿಂಗಳ 3ನೇ ಡಿಸೆಂಬರ್ 2012 (ಸೋಮವಾರ) ದವರೆಗೆ ನೂತನ ಶಿರಡಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 




ಸಾಯಿ ಭಕ್ತರು ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಳಾಸವನ್ನು ಸಾಯಿಭಕ್ತರು ಸಂಪರ್ಕಿಸತಕ್ಕದ್ದು.

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್
ಮಂಗಳಪಲ್ಲಿ, "ಎಕ್ಸ್" ರಸ್ತೆ,
ಸಾಗರ ರಸ್ತೆ, ಇಬ್ರಾಹಿಂ ಪಟ್ಟಣಂ,
ಆರ್.ಆರ್.ಜಿಲ್ಲೆ, ಹೈದರಾಬಾದ್ - 508 211,
ಆಂಧ್ರಪ್ರದೇಶ, ಭಾರತ,
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ಮೋಹನ ಗಂಧಮ್ (ಸಂಸ್ಥಾಪಕರು),
ದೂರವಾಣಿ ಸಂಖ್ಯೆಗಳು:  +91 93482 56944 / +91 98480 24606
ಇ ಮೈಲ್ ವಿಳಾಸ: info@shirdisaibabamangalpally.org
ಅಂತರ್ಜಾಲ ತಾಣ: www.shirdisaibabamangalpally.org
  
ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, November 18, 2012

ಶಿರಡಿ  ಸಾಯಿಬಾಬಾ  ಸಂಸ್ಥಾನದಿಂದ ಪ್ರಕಟವಾಗುವ ತಮಿಳು ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕ ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರು ದಿವಂಗತ ಶ್ರೀ.ಗೋವಿಂದ್ ರಘುನಾಥ್ ದಾಬೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆಯನ್ನು ತಮಿಳು ಭಾಷೆಯಲ್ಲಿ ಅನುವಾದ ಮಾಡಿರುತ್ತಾರೆ. ಈ ತಮಿಳು ಗ್ರಂಥವನ್ನು ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರಕಟಣೆಗೊಳಿಸುತ್ತಿದೆ. 

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರು 19ನೇ ಜನವರಿ 1944 ರಂದು ತಮಿಳುನಾಡಿನ ಪುದುಕೋಟೆ ಪಟ್ಟಣದಲ್ಲಿ ದಿವಂಗತ ಶ್ರೀಮತಿ.ವೇದಂಬಾಳ್ ಹಾಗೂ ದಿವಂಗತ ಶ್ರೀ.ಆರ್.ಚೊಕ್ಕಲಿಂಗಮ್ ರವರ ಪುತ್ರನಾಗಿ ಜನಿಸಿರುತ್ತಾರೆ. ಇವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಇ.(ಸಿವಿಲ್) ಪದವಿಯನ್ನು ಗಳಿಸಿರುತ್ತಾರೆ.

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರು ದಿವಂಗತ ಖಾಪರ್ಡೆಯವರ "ಶಿರಡಿ ಡೈರಿ", ಆರ್ಥರ್ ಓಸ್ಬರ್ನ್ ರವರ "ಇನ್ಕ್ರೆಡಿಬಲ್ ಸಾಯಿಬಾಬಾ" ಹಾಗೂ ಡಾ.ಬ್ರಿಜ್ ಕಿಶೋರ್ ರವರ "ಸೋಲಮ್ ಪ್ಲೆಡ್ಜ್" ಗ್ರಂಥಗಳನ್ನು ತಮಿಳು ಭಾಷೆಗೆ ಅನುವಾದ ಮಾಡಿರುತ್ತಾರೆ.

ಅಲ್ಲದೇ, ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಬಿಡುಗಡೆ ಮಾಡಿರುವ ತಮಿಳು ಸಾಯಿ ಸಚ್ಚರಿತ್ರೆ ಧ್ವನಿಸುರಳಿ ಡಿವಿಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಎಸ್.ಯೋಗರಾಣಿಯವರೊಂದಿಗೆ ಕುಂಭಕೋಣಂ ನ ತಮ್ಮ ಸ್ವಗೃಹದಲ್ಲಿ  ಸುಖೀಜೀವನವನ್ನು ನಡೆಸುತ್ತಿದ್ದಾರೆ.ಇವರಿಗೆ ಶ್ರೀಮತಿ.ಲಕ್ಷ್ಮೀ ರಮ್ಯ ಎಂಬ ಹೆಣ್ಣು ಮಗಳು ಹಾಗೂ ಶ್ರೀ.ಎಸ್.ಸಾಯಿ ಕದಿರೇಶನ್ ಎಂಬ ಗಂಡು ಮಗನಿದ್ದು  ಅವರುಗಳಿಗೆ ವಿವಾಹವಾಗಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:



ವಿಳಾಸ:

ಶ್ರೀ.ಚೊಕ್ಕಲಿಂಗಮ್ ಸುಬ್ರಮಣಿಯನ್
ಜಿ.ಎಲ್.ಹೌಸ್, 5/168, 
ಸೀತಾರಾಮ ನಗರ,ಸಕ್ಕೋಟೈ, 
ಕುಂಭಕೋಣಂ - 612 401, 
ತಂಜಾವೂರು ಜಿಲ್ಲೆ,
ತಮಿಳುನಾಡು, ಭಾರತ

ದೂರವಾಣಿ ಸಂಖ್ಯೆಗಳು:

+91 435 2414330 (ಸ್ಥಿರ ದೂರವಾಣಿ)/+91 90954 23909 (ಮೊಬೈಲ್)

ಇ-ಮೈಲ್ ವಿಳಾಸ:

chocksubbu@gmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 16, 2012

ಖ್ಯಾತ ಬರಹಗಾರ ಹಾಗೂ ಉಪನ್ಯಾಸಕ - ಶ್ರೀ.ಮದನ ಗೋಪಾಲ್ ಗೋಯಲ್  - ಕೃಪೆ:ಸಾಯಿಅಮೃತಧಾರಾ.ಕಾಂ




ಶ್ರೀ.ಮದನ ಗೋಪಾಲ್ ಗೋಯಲ್ ರವರು ಸಾಯಿಬಾಬಾರವರ ಮೇಲೆ ರಚಿಸಲಾಗಿರುವ "Saibaba -“Sadguru Shri Sain Nath-Dharatal par Adbhut Avataran” ಎಂಬ ಹಿಂದಿ ಪುಸ್ತಕದ ರಚನಕಾರರು.  ಇವರು ಪ್ರಖ್ಯಾತ ಬರಹಗಾರರು, ಉಪನ್ಯಾಸಕರು ಹಾಗೂ ಅನನ್ಯ ಸಾಯಿಭಕ್ತರೂ ಆಗಿದ್ದಾರೆ.

ಇವರು 30ನೇ ಏಪ್ರಿಲ್ 1936 ರಂದು ರಾಜಸ್ಥಾನದ ಬೂಂದಿ ಜಿಲ್ಲೆಯ ಇಂದ್ರಘರ್ ನಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಶ್ರೀಮತಿ.ದ್ರಾಕ್ಷಾ ದೇವಿ ಹಾಗೂ ತಂದೆ ದಿವಂಗತ ಶ್ರೀ.ಕಲ್ಯಾಣ್ ಬಕ್ಷ್ ಗೋಯಲ್.

ಇವರು ರಾಜಸ್ಥಾನದ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಎಡ್ ಹಾಗೂ ಧರ್ಮ ವಿಶಾರದ ಪದವಿಗಳನ್ನು ಪಡೆದಿರುತ್ತಾರೆ.

ಇವರು ರಾಜಸ್ಥಾನದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿ ಹಲವಾರು ವರ್ಷಗಳ ಕಾಲ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಬಳಿಕ 1994 ಇಸವಿಯಲ್ಲಿ ನಿವೃತ್ತಿ ಹೊಂದಿದರು.

ಇವರು ಸಾಯಿಬಾಬಾರವರ ಬಗ್ಗೆ ಹಿಂದಿ ಭಾಷೆಯಲ್ಲಿ ನೂರಾರು ಲೇಖನಗಳನ್ನು ಬರೆದಿದ್ದು ಅವುಗಳು ಪ್ರಖ್ಯಾತ ದಿನಪತ್ರಿಕೆಗಳು, ನಿಯತಕಾಲಿಕಗಳಷ್ಟೇ ಅಲ್ಲದೇ ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಕಟಣೆಯಾದ ಶ್ರೀ ಸಾಯಿಲೀಲಾ ದ್ವೈಮಾಸಿಕದಲ್ಲೂ ಪ್ರಕಟಣೆಗೊಂಡಿವೆ.

ಅಷ್ಟೇ ಅಲ್ಲದೇ, ರಾಜಸ್ಥಾನದ ಹಲವಾರು ಕಡೆಗಳಲ್ಲಿ ಸಾಯಿಬಾಬಾರವರ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಕೂಡ ನೀಡಿದ ಹೆಗ್ಗಳಿಕೆ ಇವರದು.

ಶ್ರೀ.ಮದನ ಗೋಪಾಲ್ ಗೋಯಲ್ ರವರು ಶ್ರೀಮತಿ.ಕಮಲಾದೇವಿ ಗೋಯಲ್ ರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀ.ಲಲಿತ್ ಗೋಪಾಲ್ ಗೋಯಲ್, ಶ್ರೀ.ರಾಜೇಂದ್ರ ಕುಮಾರ್ ಗೋಯಲ್ ಮತ್ತು ಶ್ರೀ.ಮನೀಶ್ ಗೋಯಲ್ ಎಂಬ ಮೂರು ಗಂಡು ಮಕ್ಕಳೂ ಹಾಗೂ ಶ್ರೀಮತಿ.ವಿದ್ಯಾವತಿ ಎಂಬ ಮಗಳೂ ಇದ್ದಾರೆ. ಸಾಯಿಬಾಬಾರವರ ಕೃಪೆ ಹಾಗೂ ಆಶೀರ್ವಾದದಿಂದ ಪ್ರಸ್ತುತ  ಇವರು ರಾಜಸ್ಥಾನದ ಬೂಂದಿ ನಿವಾಸದಲ್ಲಿ ತಮ್ಮ ಪತ್ನಿ ಹಾಗೂ ಗಂಡು ಮಕ್ಕಳೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಮದನ ಗೋಪಾಲ್ ಗೋಯಲ್ ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:

ಶ್ರೀ.ಮದನ ಗೋಪಾಲ್ ಗೋಯಲ್
ಶ್ರೀ ರಾಮ ಆಯನ್, ಇಂದ್ರಘರ್ ಜಿಲ್ಲೆ, ಬೂಂದಿ
ರಾಜಸ್ಥಾನ - 323 613.

ಓಲ್ಡ್ ಪವರ್ ಹೌಸ್ ರಸ್ತೆ,
ನಯಪುರ, ಕೋಟಾ,
ರಾಜಸ್ಥಾನ - 324 001.

ನಂ.1-ಸಿ-21, ಹೌಸಿಂಗ್ ಬೋರ್ಡ್ ಕಾಲೋನಿ,
ಕುನ್ಹಾಡಿ, ಕೋಟಾ,
ರಾಜಸ್ಥಾನ - 324 008.

ದೂರವಾಣಿ ಸಂಖ್ಯೆಗಳು:

+91 92520 60991/+91 94605 94890/+91 78917 63884

ಇ-ಮೈಲ್ ವಿಳಾಸ:

gopalgoyal1963@gmail.com

ಫೇಸ್ ಬುಕ್ ವಿಳಾಸ:

https://www.facebook.com/madan.g.goyal

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶಿರಡಿಯಲ್ಲಿ ಗಿನ್ನೀಸ್ ದಾಖಲೆಯ ಪ್ರಪ್ರಥಮ ಲಕ್ಷ ದೀಪೋತ್ಸವ ಕಾರ್ಯಕ್ರಮ - ಒಂದು ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ

ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಇದೇ ತಿಂಗಳ ದೀಪಾವಳಿ ಹಬ್ಬದ ನಡುವೆ ಬರುವ ಅಮಾವಾಸ್ಯೆಯ ದಿನದಂದು ಆಚರಿಸುವ ಲಕ್ಷ್ಮೀ ಕುಬೇರ ಪೂಜೆಯ ಪರಮ ಪವಿತ್ರ ದಿನವಾದ 13ನೇ ನವೆಂಬರ್ 2012, ಮಂಗಳವಾರದಂದು ಸಂಜೆ 7:00 ಗಂಟೆಗೆ ಶಿರಡಿಯ ಬಸ್ ನಿಲ್ದಾಣದ ಎದುರುಗಡೆ ಇರುವ ಸಾಯಿನಗರ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  ಈ ಕಾರ್ಯಕ್ರಮದಲ್ಲಿ 15,000 ಸಾಯಿ ಭಕ್ತರು ಪಾಲ್ಗೊಂಡು ಏಕ ಕಾಲದಲ್ಲಿ 1 ಲಕ್ಷ 8 ಸಾವಿರ ದೀಪಗಳನ್ನು ಕೇವಲ 30 ಸೆಕೆಂಡ್ ಗಳಲ್ಲಿ ಹಚ್ಚಿ ಒಂದು ಹೊಸ ವಿಶ್ವ ದಾಖಲೆಗೆ ಕಾರಣವಾದರು.  ಈ ಕಾರ್ಯಕ್ರಮವು ಹೊಸ ಗಿನ್ನೀಸ್ ದಾಖಲೆಯನ್ನು ಸೃಷ್ಟಿಸುವುದರೊಂದಿಗೆ ಇತಿಹಾಸದ ಪುಟಗಳನ್ನು ಸೇರಿದುದು ಒಂದು ವಿಶೇಷವೇ ಸರಿ!!!!!!

ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ನ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಕಾರಣರಾದ ಎಲ್ಲಾ ಸಾಯಿ ಭಕ್ತರು, ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು, ಶಿರಡಿ ನಗರ ಪಂಚಾಯತಿಯ ಅಧಿಕಾರಿಗಳು, ಶಿರಡಿ ಪೋಲಿಸ್ ಅಧಿಕಾರಿಗಳು, ಶಿರಡಿ ಸಾಯಿ ಟ್ರಸ್ಟ್ (ಚನ್ನೈ), ಸಾಯಿ ಪ್ರೇರಣಾ ಟ್ರಸ್ಟ್ (ನವದೆಹಲಿ), ಎಲ್ಲಾ ಪತ್ರಿಕೆಗಳು ಹಾಗೂ ಮಾಧ್ಯಮದವರಿಗೆ ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುವುದನ್ನು ಮರೆಯಲಿಲ್ಲ. 






ಕನ್ನಡ ಅನುವಾದ: ಶ್ರೀಕಂಠ ಶರ್ಮ
ಹಿರಿಯ ಸಾಯಿಭಕ್ತ - ಶ್ರೀ.ರಾಮಚಂದ್ರ ಎಂ.ಅಡ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು ಪ್ರತಿನಿತ್ಯ ಸಾಯಿಬಾಬಾರವರ ಮಧ್ಯಾನ್ಹ ಹಾಗೂ ಸಂಜೆಯ ಆರತಿಯ ಸಮಯದಲ್ಲಿ  ಹಾಡುವ ಸುಪ್ರಸಿದ್ಧ "ಆರತಿ ಸಾಯಿಬಾಬಾ ಸೌಖ್ಯ ದಾತಾರ ಜೀವ" ದ ರಚನಕಾರರಾದ ಶ್ರೀ.ಮಾಧವ ವಾಮನ ರಾವ್ ಅಡ್ಕರ್ ರವರ ಪುತ್ರರು. ಇವರು 14ನೇ ಮಾರ್ಚ್ 1915 ರಂದು ದಿವಂಗತ ಶ್ರೀಮತಿ.ಗಂಗಾಬಾಯಿ ಅಡ್ಕರ್ ಹಾಗೂ ದಿವಂಗತ ಶ್ರೀ.ಮಾಧವ ವಾಮನ ರಾವ್ ಅಡ್ಕರ್ ವರ ಪುತ್ರನಾಗಿ ಜನಿಸಿದರು. 



ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು ಸಾಯಿಬಾಬಾರವರ ದಯೆಯಿಂದ 14ನೇ ಮಾರ್ಚ್ 1915 ರಂದು ಜನಿಸಿದರು. ಅದರ ಸಾರಾಂಶವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಕೊಡಲಾಗಿದೆ:

ಮಾಧವ ರಾವ್ ರವರು ಪ್ರತಿ ವರ್ಷ ಪಂಡರಾಪುರದ ಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಒಮ್ಮೆ ಅವರು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಒಂದು ದಿನ ಅವರು ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಾ ಕುಳಿತಿದ್ದಾಗ ಸಾಯಿಬಾಬಾರವರು "ಮಾಧವ ರಾವ್, ನಿನ್ನನ್ನು ಮನೆಗೆ ಕರೆದುಕೊಂಡು ಹೋಗಲು ಇಬ್ಬರು ಬರುತ್ತಾರೆ. ನೀನು ಅವರೊಡನೆ ಹೋಗು. ನಿನಗೆ ಅತಿ ಶೀಘ್ರದಲ್ಲೇ ಒಬ್ಬ ಮಗನು ಹುಟ್ಟುತ್ತಾನೆ. ಅವನಿಗೆ ರಾಮ್ ಎಂದು ಹೆಸರಿಡು" ಎಂದು ಭವಿಷ್ಯ ನುಡಿದರು. ಸಾಯಿಬಾಬಾರವರು ಹೀಗೆ ನುಡಿದ ಸ್ವಲ್ಪ ಹೊತ್ತಿನಲ್ಲೇ ಅವರ ತಂದೆ ಹಾಗೂ ಮಾವನವರು ದ್ವಾರಕಾಮಾಯಿಗೆ ಬಂದರು. ಅವರುಗಳು "ಬಾಬಾ, ದಯವಿಟ್ಟು ಈ ಮಾಧವನನ್ನು ಮನೆಗೆ ಕಳುಹಿಸಿಕೊಡಿ. ಇವನಿಗೆ ಮದುವೆಯಾಗಿದ್ದರೂ ಕೊಡ ಸ್ವಲ್ಪವೂ ಜವಾಬ್ದಾರಿಯಿಲ್ಲ" ಎಂದು ಬೇಡಿಕೊಂಡರು. ಅದಕ್ಕೆ ಉತ್ತರವಾಗಿ ಸಾಯಿಬಾಬಾರವರು "ಈ ಮಾಧವ ನಿಮ್ಮೊಂದಿಗೆ ಮನೆಗೆ ಬರುತ್ತಾನೆ" ಎಂದು ನುಡಿದರು. ಸಾಯಿಬಾಬಾರವರ ಆಜ್ಞೆಯಂತೆ ಮಾಧವ ಅವರಿಬ್ಬರ ಜೊತೆಯಲ್ಲಿ ಮನೆಗೆ ವಾಪಾಸಾದನು. ಸಾಯಿಬಾಬಾರವರು ನುಡಿದಂತೆ ಸರಿಯಾಗಿ ಒಂದು ವರ್ಷದ ಒಳಗಾಗಿ ಅವನಿಗೆ ಗಂಡು ಮಗುವಿನ ಜನನವಾಯಿತು. ಅವನಿಗೆ ರಾಮಚಂದ್ರ ಎಂದು ನಾಮಕರಣ ಮಾಡಲಾಯಿತು.

ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು 5ನೇ ತರಗತಿಯವರೆಗೂ ಮರಾಠಿ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರು. ಇವರ ತಂದೆ ಒಳ್ಳೆಯ ಭಾಷಾ ತಜ್ಞರಾಗಿದ್ದರು. ಅವರು ಇವರಿಗೆ ಉರ್ದು ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿಸಿದರು. ಇವರು ವಿದ್ಯೆಯನ್ನು ಪೂರ್ಣಗೊಳಿಸಿ ಅಧ್ಯಾಪಕ ವೃತ್ತಿಯನ್ನು ಕೈಗೊಳ್ಳಬೇಕೆಂದು ಅಂದುಕೊಂಡಿದ್ದರು. ಆದರೆ ಇವರಿಗೆ ಅದಕ್ಕಿಂತ ಉನ್ನತ ಹುದ್ದೆಯಾದ ಮುಖ್ಯೋಪಾಧ್ಯಾಯರ ಹುದ್ದೆ ದೊರೆಯಿತು. ಇವರು ನಾಲ್ಕು ಶಾಲೆಗಳಿಗೆ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸ ದೊರಕಿದ ಮೂರು ತಿಂಗಳಿನಲ್ಲೇ ಇವರು ಶ್ರೀಮತಿ.ಮಥುರಾ ಬಾಯಿ ಕುಲಕರ್ಣಿಯವರನ್ನು ವಿವಾಹವಾದರು. ಇವರು ತಮ್ಮ ತಂದೆಯ ಊರಾದ ಬರ್ಸಿಯಲ್ಲಿ ತಮ್ಮ ತಂದೆಯ ಮನೆಯಲ್ಲಿ ಇದ್ದುಕೊಂಡು ಮುಖ್ಯೋಪಾಧ್ಯಾಯರ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಕಾಲಾನಂತರದಲ್ಲಿ ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು ಜನಿಸಿದರು. ಇವರು 1972 ನೇ ಇಸವಿಯಲ್ಲಿ ನೌಕರಿಯಿಂದ ನಿವೃತ್ತರಾದರು ಹಾಗೂ 1980 ನೇ ಇಸವಿಯಲ್ಲಿ ಪುಣೆಗೆ ಬಂದು ಶಾಶ್ವತವಾಗಿ ನೆಲೆಸಿದರು. 



ಶ್ರೀ.ರಾಮಚಂದ್ರ ಅಡ್ಕರ್ ರವರಿಗೆ ಈಗ ಬಹಳ ವಯಸ್ಸಾಗಿರುವ ಕಾರಣ ಸಾಯಿಬಾಬಾರವರ ಮುಖ ಸರಿಯಾಗಿ ಜ್ಞಾಪಕಕ್ಕೆ ಬರುತ್ತಿಲ್ಲ. "ಆದರೆ, ಇಂದಿಗೂ ನನಗೆ ಸಾಯಿಬಾಬಾರವರ ಪವಿತ್ರ ಪಾದಗಳ ನೆನಪು ಚೆನ್ನಾಗಿದೆ" ಎಂದು ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಪುಣೆಯ ಸಾಯಿ ಭಕ್ತರಾದ ಶ್ರೀ.ನಾಗರಾಜ್ ಅನ್ವೇಕರ್ ರವರಿಗೆ ಸ್ವತಃ ಅವರೇ ಹೇಳಿರುತ್ತಾರೆ.

ಸಾಯಿಬಾಬಾರವರ ದಯೆ ಹಾಗೂ ಆಶೀರ್ವಾದದಿಂದ ಶ್ರೀ.ರಾಮಚಂದ್ರ ಅಡ್ಕರ್ ರವರು ತಮ್ಮ ಧರ್ಮಪತ್ನಿ ಹಾಗೂ ಮಕ್ಕಳೊಂದಿಗೆ ಪುಣೆಯ ತಮ್ಮ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:

ಶ್ರೀ.ರಾಮಚಂದ್ರ ಎಂ.ಅಡ್ಕರ್
ಶಾಂತಾ ಸೊಸೈಟಿ, ಸಂತ ಸಂಗ್ ಬಂಗ್ಲೆ,
ಸೇನಾಪತಿ ಬಾಪಟ್ ರಸ್ತೆ,
ಪುಣೆ - 411 016,
ಮಹಾರಾಷ್ಟ್ರ, ಭಾರತ

ಮಾರ್ಗಸೂಚಿ:

ಚತುರಶ್ರೀ ದೇವಸ್ಥಾನದ ಎದುರುಗಡೆ ರಸ್ತೆಯಲ್ಲಿ ನೇರವಾಗಿ ಸ್ವಲ್ಪ ದೂರ ಕ್ರಮಿಸಿದರೆ ಸಿಂಬಯಾಸಿಸ್ ಸಂಸ್ಥೆ ಸಿಗುತ್ತದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ದೇನಾ ಬ್ಯಾಂಕ್ ವೃತ್ತ ಸಿಗುತ್ತದೆ. ದೇನಾ ಬ್ಯಾಂಕ್ ವೃತ್ತದಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋಗಿ ಮೊದಲ ಬಲ ತಿರುವಿನಲ್ಲಿ ತಿರುಗಿದರೆ ಶ್ರೀ.ರಾಮಚಂದ್ರ ಅಡ್ಕರ್ ರವರ್ ನಿವಾಸ ಸಿಗುತ್ತದೆ. 

ದೂರವಾಣಿ ಸಂಖ್ಯೆಗಳು:

+91 20 3092 8078 / +91 98220 30201

ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, November 5, 2012


ಶಿರಡಿಯಲ್ಲಿ ಪ್ರಪ್ರಥಮ ಲಕ್ಷ ದೀಪೋತ್ಸವ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ

ದೀಪಾವಳಿಯ ಪರಮ ಪವಿತ್ರ ದಿನದಂದು ಸಾಯಿಬಾಬಾರವರು ಶಿರಡಿಯ ದ್ವಾರಕಾಮಾಯಿಯಲ್ಲಿ ನೀರಿನಿಂದ ದೀಪಗಳನ್ನು  ಬೆಳಗಿಸಿದ ಅದ್ಭುತ ಚಮತ್ಕಾರ ಎಲ್ಲಾ ಸಾಯಿಭಕ್ತರಿಗೂ ತಿಳಿದಿದೆ. ಈ ಅದ್ಭುತ ಚಮತ್ಕಾರದಿಂದ ಪ್ರೇರೇಪಿತರಾದ ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಇದೇ ತಿಂಗಳ ಲಕ್ಷ್ಮೀ ಕುಬೇರ ಪೂಜೆಯ ಪರಮ ಪವಿತ್ರ ದಿನವಾದ 13ನೇ ನವೆಂಬರ್ 2012, ಮಂಗಳವಾರದಂದು ಸಂಜೆ 7:00 ಗಂಟೆಗೆ ಶಿರಡಿಯ ಬಸ್ ನಿಲ್ದಾಣದ ಎದುರುಗಡೆ ಇರುವ ಸಾಯಿನಗರ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವಿಶೇಷ ಕಾರ್ಯಕ್ರಮಕ್ಕೆ 2500 ಲೀಟರ್ ಎಣ್ಣೆಯನ್ನು ಬಳಸಲಾಗುತ್ತಿದೆ. ಈ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಗಿನ್ನೀಸ್ ದಾಖಲೆಗೆ ಸೇರಿಸಬೇಕೆಂದು ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ಅಂದುಕೊಂಡಿದೆ. ಅದಕ್ಕೆ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ಗಿನ್ನೀಸ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳಿಗೆ ಈಗಾಗಲೇ ನೀಡಿರುತ್ತದೆ.



ಈ ವಿಶೇಷ ಕಾರ್ಯಕ್ರಮದಲ್ಲಿ ಗಿನ್ನೀಸ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕಾರಿಗಳು, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು ಹಾಗೂ ಶಿರಡಿ ನಗರಪಾಲಿಕೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.


ಈ ಅಪರೂಪದ ಹಾಗೂ ಜಗದ್ವಿಖ್ಯಾತ ಕಾರ್ಯಕ್ರಮದಲ್ಲಿ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ನ ಪದಾಧಿಕಾರಿಗಳು ಈ ಮೂಲಕ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಇಚ್ಚಿಸುವ ಸಾಯಿ ಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

ಶ್ರೀ.ಅರುಣ್ ಗಾಯಕವಾಡ್ - ಟ್ರಸ್ಟಿ
ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಶಿರಡಿ
ಶ್ರೀ ಶಿರಡಿ ಸಾಯಿ ಡೆವಲಪರ್ಸ್,
ಎಲ್.ಐ.ಸಿ.ಕೌಂಟರ್ ಹತ್ತಿರ, ಸಾಯಿ ಪ್ರಸಾದ ಸಂಕೀರ್ಣ,
ಸಾಯಿ ಸಂಜೀವನಿ ಹೋಟೆಲ್ ಹತ್ತಿರ,
ನ್ಯೂ ಪಿಂಪಲವಾಡಿ ರಸ್ತೆ, ಶಿರಡಿ - 423 109,
ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ, ಭಾರತ,
ಮೊಬೈಲ್ ಸಂಖ್ಯೆಗಳು: +91 99602 65819 / +91 93703 09888
ಇ ಮೈಲ್ ವಿಳಾಸ: arung_shirdi@yahoo.com
ಫೇಸ್ ಬುಕ್ ವಿಳಾಸ: facebook.com/saibhakta laxmibaishindetrust,shirdi
ಅಂತರ್ಜಾಲ ತಾಣ: www.sai9coins.org

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 2, 2012


ಸಾಯಿ ದರ್ಬಾರದ ಅಲಂಕಾರಕರು - ಶ್ರೀ.ಮಹೀಂದರ್ ಕೆ.ವರ್ಮ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಮಹೀಂದರ್ ಕೆ.ವರ್ಮರವರು ಸುಪ್ರಸಿದ್ಧ ಸಾಯಿ ದರ್ಬಾರದ ಅಲಂಕಾರಕರು ಹಾಗೂ ಸಾಯಿಬಾಬಾರವರಿಗೆ ಸಂಬಂಧಿಸಿದ ವಸ್ತುಗಳನ್ನು ವಿಕ್ರಯಿಸುವ ಮಳಿಗೆಯ ಒಡೆಯರು ಆಗಿದ್ದಾರೆ. ಇವರು 15ನೇ ಮೇ 1962 ರಂದು  ನವದೆಹಲಿಯಲ್ಲಿ ಶ್ರೀಮತಿ.ಕಪೂರಿ ಮತ್ತು ದಿವಂಗತ ಶ್ರೀ.ಪಿ.ಎಲ್.ವರ್ಮರವರ ಮಗನಾಗಿ ಜನಿಸಿದರು.

ಇವರು ದೆಹಲಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಗಳಿಸಿರುತ್ತಾರೆ. ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಗೀತಾ ವರ್ಮರವರ ಸಹಯೋಗದೊಂದಿಗೆ ದೆಹಲಿಯ ದ್ವಾರಕಾದಲ್ಲಿ "ಸಾಯಿ ಸಂಪದ ದರ್ಬಾರ್ ಡೆಕೋರೇಟರ್ಸ್" ಎಂಬ ಮಳಿಗೆಯನ್ನು ನಡೆಸುತ್ತಿದ್ದಾರೆ. ಇವರು ಕೃತಕವಾಗಿ ಸಾಯಿಬಾಬಾರವರ ದರ್ಬಾರ್ ಅನ್ನು ನಿರ್ಮಾಣ ಮಾಡುವುದರಲ್ಲಿ ಸಿದ್ಧಹಸ್ತರು. ಒಂದು ಸಣ್ಣ ಕೋಣೆಯ ಗಾತ್ರದಿಂದ ಹಿಡಿದು 350 ಅಡಿ ಎತ್ತರದವರೆವಿಗೂ ಸಾಯಿ ದರ್ಶನ ದರ್ಬಾರನ್ನು ನಿರ್ಮಾಣ ಮಾಡುವುದರಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅಲ್ಲದೇ, ಸಾಯಿಬಾಬಾ ಸಿಂಹಾಸನ, ಛತ್ರಿ, ಗೋಡೆಗಳು ಮತ್ತು ಪಲ್ಲಕ್ಕಿಯ ಕೃತಕ ಮಾದರಿಯನ್ನು ನಿರ್ಮಾಣ ಮಾಡುವುದರಲ್ಲೂ ಕೂಡ ಪರಿಣತಿಯನ್ನು ಹೊಂದಿದ್ದಾರೆ. ಇವರ ಬಳಿಗೆ ಬರುವ ಪ್ರತಿಯೊಬ್ಬರ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಿಕೊಡುವುದು ಇವರ ವೈಶಿಷ್ಟ್ಯ.

ಇವರು ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವಾರು ವಿಶಾಲ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳಿಗೆ ಕೃತಕ ಸಾಯಿ ದರ್ಶನ ದರ್ಬಾರನ್ನು ನಿರ್ಮಾಣ ಮಾಡಿಕೊಟ್ಟಿರುತ್ತಾರೆ. ಮುಂದಿನ ದಿನಗಳಲ್ಲಿ ವಿದೇಶಗಳಿಗೂ ತೆರಳಿ ಅಲ್ಲಿ ನಡೆಯುವ ಸಾಯಿ ಭಜನ ಸಂಧ್ಯಾಗಳಿಗೂ ಕೂಡ ಕೃತಕ ಸಾಯಿ ದರ್ಬಾರನ್ನು ನಿರ್ಮಾಣ ಮಾಡಿಕೊಡುವ ಹೆಬ್ಬಯಕೆ ಇವರದು.

ಪ್ರಸುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಗೀತಾ ವರ್ಮ, ಮಗ ಅಮನ್ ವರ್ಮ ಹಾಗೂ ಮಗಳು ಆಕಾಂಕ್ಷ ವರ್ಮರೊಂದಿಗೆ ತಮ್ಮ ನವದೆಹಲಿಯ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಮಹೀಂದರ್ ಕೆ.ವರ್ಮರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಶ್ರೀ.ಮಹೀಂದರ್ ಕೆ.ವರ್ಮ
ಫ್ಲಾಟ್ ಸಂಖ್ಯೆ:55,ದಿ ಪಾಮ್ಸ್ ವಸತಿಸಂಕೀರ್ಣ,
13-ಬಿ, ಸೆಕ್ಟರ್-6, ದ್ವಾರಕಾ,
ನವದೆಹಲಿ-110 075, ಭಾರತ

ದೂರವಾಣಿ ಸಂಖ್ಯೆಗಳು:
+91 99585 69393/+91 98103 49554/+91 98103 77964

ಇ-ಮೈಲ್ ವಿಳಾಸ:
sai_sampada@yahoo.com

ಫೇಸ್ ಬುಕ್ ವಿಳಾಸ:
www.facebook.com/saisampadadarbardecorators


ಕನ್ನಡ ಅನುವಾದ: ಶ್ರೀಕಂಠ ಶರ್ಮ