Monday, November 28, 2011

ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ವತಿಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ XUV500 ವಾಹನದ ಕೊಡುಗೆ - ಕೃಪೆ:ಸಾಯಿಅಮೃತಧಾರಾ.ಕಾಂ 

ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯು ತಾನು ಹೊಸದಾಗಿ ಉತ್ಪಾದನೆ ಮಾಡಿದ 13 ಲಕ್ಷ ಬೆಲೆಬಾಳುವ ಪ್ರಪ್ರಥಮ XUV500 ವಾಹನವನ್ನು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಇದೇ ತಿಂಗಳ 27ನೇ ನವೆಂಬರ್ 2011, ಭಾನುವಾರದಂದು ಕೊಡುಗೆಯಾಗಿ ನೀಡಿತು.  



ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ.ಅಜಯ್ ಚೋಕ್ಸೆಯವರು ವಾಹನದ ಕೀಲಿಕೈಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರಿಗೆ ನೀಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್, ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಶ್ರೀ.ಕರ್ನಲ್ ಬ್ಯಾನರ್ಜಿ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಹಿರಿಯ ಆಡಳಿತ ನಿರ್ವಾಹಕರಾದ ಶ್ರೀ.ಕರ್ನಲ್ ವೈದ್ಯರವರುಗಳು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಿಂದ ಶಿರಡಿ ಸಾಯಿ ಫೋಟೋ ಅಲ್ಬಮ್ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಇದೇ ತಿಂಗಳ 27ನೇ ನವೆಂಬರ್ 2011, ಭಾನುವಾರದಂದು ಅಮೇರಿಕಾದ ಸಾಯಿಭಕ್ತರಾದ ಶ್ರೀ.ಕುಮಾರ್ ಅನ್ವರಪು ಮತ್ತು ಶ್ರೀಮತಿ.ರಾಜೇಶ್ವರಿ ಅನ್ವರಪುರವರು ಜಂಟಿಯಾಗಿ ಸೃಷ್ಟಿಸಿರುವ ಶಿರಡಿ ಸಾಯಿಬಾಬಾರವರ ಫೋಟೋ ಆಲ್ಬಮ್ ನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ದೇವಾಲಯದ ಆವರಣದಲ್ಲಿ ಲೋಕಾರ್ಪಣೆ ಮಾಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ
ಭಾರತ ಸೇನೆಯ ಜನರಲ್ ಶ್ರೀ.ವಿ.ಕೆ.ಸಿಂಗ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಭಾರತ ಸೇನೆಯ ಜನರಲ್ ಶ್ರೀ.ವಿ.ಕೆ.ಸಿಂಗ್ ರವರು ಇದೇ ತಿಂಗಳ 25ನೇ ನವೆಂಬರ್ 2011, ಶುಕ್ರವಾರದಂದು ತಮ್ಮ ಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರುಗಳು ಕೂಡ ಉಪಸ್ಥಿತರಿದ್ದರು. 



ಸಮಾಧಿ ದರ್ಶನದ ನಂತರ ಶ್ರೀ.ವಿ.ಕೆ.ಸಿಂಗ್ ಮತ್ತು ಅವರ ಪತ್ನಿಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ನೀಡುವ ಮುಖಾಂತರ ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, November 21, 2011

ಗೋವಾ ರಾಜ್ಯದ ಮುಖ್ಯಮಂತ್ರಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ದಿಗಂಬರ ಕಾಮತ್ ಮತ್ತು ಅವರ ಕುಟುಂಬದವರು ಇದೆ ತಿಂಗಳ 21ನೇ ನವೆಂಬರ್ 2011, ಸೋಮವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ್ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಅವರುಗಳು ಕೂಡ ಉಪಸ್ಥಿತರಿದ್ದರು.  



ಸಾಯಿಬಾಬಾರವರ ಸಮಾಧಿ ದರ್ಶನದ ನಂತರ ಶ್ರೀ.ದಿಗಂಬರ ಕಾಮತ್ ಮತ್ತು ಅವರ ಕುಟುಂಬದವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ್ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಅವರುಗಳು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ನೀಡುವ ಮುಖಾಂತರ ಸನ್ಮಾನಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, November 19, 2011

ಭಾರತದ ಅಪ್ರತಿಮ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತದ ಅಪ್ರತಿಮ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ರವರು ಇದೇ ತಿಂಗಳ 19ನೇ ನವೆಂಬರ್ 2011, ಶನಿವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಕ್ಯಾಪ್ಟನ್.ಸುರೇಶ್ ವಾಸುದೇವರವರು ಕೂಡ ಉಪಸ್ಥಿತರಿದ್ದರು. 



ಸಮಾಧಿ ದರ್ಶನದ ನಂತರ ಶ್ರೀ.ಲಕ್ಷ್ಮಣ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಕ್ಯಾಪ್ಟನ್.ಸುರೇಶ್ ವಾಸುದೇವರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮೇಲ್ವಿಚಾರಕರಾದ ಶ್ರೀ.ರಾಮರಾವ್ ಶೆಲ್ಕೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 18, 2011

ಶ್ರೀಮತಿ.ಸತ್ವಶೀಲ ಚವಾಣ್ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರ ಧರ್ಮಪತ್ನಿ ಶ್ರೀಮತಿ.ಸತ್ವಶೀಲ ಚವಾಣ್ ರವರು ಇದೇ ತಿಂಗಳ 18ನೇ ನವೆಂಬರ್ 2011, ಶುಕ್ರವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, November 17, 2011

ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ.ಹೆಚ್.ಡಿ.ದೇವೇಗೌಡರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ.ಹೆಚ್.ಡಿ.ದೇವೇಗೌಡರವರು ಇದೇ ತಿಂಗಳ 17ನೇ ನವೆಂಬರ್ 2011, ಗುರುವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ ರಾವ್ ಮಾನೆಯವರುಗಳು ಕೂಡ ಉಪಸ್ಥಿತರಿದ್ದರು. 




ಸಾಯಿಬಾಬಾರವರ ಸಮಾಧಿಯ ದರ್ಶನ ಪಡೆದ ನಂತರ ಶ್ರೀ.ಹೆಚ್.ಡಿ.ದೇವೇಗೌಡ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ನೀಡುವ ಮುಖಾಂತರ ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ ರಾವ್ ಮಾನೆಯವರು ಕೂಡ ಉಪಸ್ಥಿತರಿದ್ದರು.




ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, November 12, 2011

ಮಧ್ಯಪ್ರದೇಶದ ಶಿರಡಿ ಸಾಯಿಬಾಬಾ ಮಂದಿರ  - ಶ್ರೀ ಸಾಯಿಧಾಮ್, ಬಸ್ ನಿಲ್ದಾಣದ ಹತ್ತಿರ, ಸಿರಾಲಿ ತಹಸಿಲ್-461  331, ಹರ್ದಾ ಜಿಲ್ಲೆ, ಮಧ್ಯಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಸಿರಾಲಿ ಬಸ್ ನಿಲ್ದಾಣದ ಬಳಿ ಇರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 15ನೇ ಮಾರ್ಚ್ 2007 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಅರ್ಚಕರಾದ ಶ್ರೀ.ಬಾಳಾ ಸಾಹೇಬ್ ಜೋಷಿಯವರು ನೆರವೇರಿಸಿದರು ಮತ್ತು ಆ ಸ್ಥಳದಲ್ಲಿ 1.25 ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಿದರು. ಈ ಸ್ಥಳವನ್ನು ಕಾಲಾನಂತರದಲ್ಲಿ "ದ್ವಾರಕಾಮಾಯಿ" ಯಾಗಿ ಪರಿವರ್ತಿಸಲಾಯಿತು. 

ಪ್ರಮುಖ ಶ್ರೀ ಸಾಯಿಧಾಮ್ ದೇವಾಲಯದ ಉದ್ಘಾಟನೆಯನ್ನು 27ನೇ ನವೆಂಬರ್ 2009 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಅರ್ಚಕರಾದ ಶ್ರೀ.ಬಾಳಾ ಸಾಹೇಬ್ ಜೋಷಿಯವರು ನೆರವೇರಿಸಿದರು. ಆ ಸಂದರ್ಭದಲ್ಲಿ ಶ್ರೀ.ಕೇಶವ ಬಿನವಾನಿ, ಶ್ರೀ.ವಿಜಯ್ ಬಿನವಾನಿ, ಶ್ರೀ.ಸಂಜಯ್ ಪತ್ನಿ ಮತ್ತು ಸಾವಿರಾರು ಸ್ಥಳೀಯ ಸಾಯಿಭಕ್ತರು ಉಪಸ್ಥಿತರಿದ್ದರು. 

ಶ್ರೀ.ಮುಕೇಶ್ ತಾಲೆ ಮತ್ತು ಶ್ರೀ.ದಯಾಶಂಕರ್ ಕರೋಡೆಯವರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ದೇವಾಲಯದ ಮೇಲ್ವಿಚಾರಣೆಯನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯವು ಪ್ರತಿದಿನ ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 10 ಘಂಟೆಯ ಶೇಜಾರತಿಯ ನಂತರ ಮುಚ್ಚುತ್ತದೆ. 
ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ರಾರಾಜಿಸುತ್ತಿದೆ. ಅಲ್ಲದೆ, ಸಾಯಿಬಾಬಾರವರ ವಿಗ್ರಹದ ಕೆಳಗಡೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 

ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಸಾಯಿಬಾಬಾ ಮಂದಿರದ ಬಲಭಾಗದಲ್ಲಿ ದ್ವಾರಕಾಮಾಯಿಯನ್ನು ಸ್ಥಾಪಿಸಲಾಗಿದೆ. 

ದೇವಾಲಯದ ಆವರಣದಲ್ಲಿ ಸುಂದರವಾದ ಹೂತೋಟವನ್ನು ದೇವಾಲಯದ ಆಡಳಿತ ಮಂಡಳಿ ನಿರ್ಮಿಸಿರುತ್ತದೆ ಮತ್ತು ಅದನ್ನು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳಲಾಗುತ್ತಿದೆ.
















ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 5:15 ಕ್ಕೆ.
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ. 
ಧೂಪಾರತಿ : ಸಾಯಂಕಾಲ 5:30 ಕ್ಕೆ.
ಶೇಜಾರತಿ: ರಾತ್ರಿ 10 ಘಂಟೆಗೆ.

ದೇವಾಲಯದಲ್ಲಿ ಪ್ರತಿನಿತ್ಯ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 1001/- ರುಪಾಯಿಗಳು. 

ದೇವಾಲಯದಲ್ಲಿ ಸಾಯಿಬಾಬಾರವರಿಗೆ ವಸ್ತ್ರ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 1001/- ರುಪಾಯಿಗಳು. 

ದೇವಾಲಯದಲ್ಲಿ ಮಹಾಪ್ರಸಾದ ಸೇವೆಯನ್ನು ಮಾಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ ಪ್ರತಿದಿನ 2001/- ರುಪಾಯಿಗಳು ಮತ್ತು ಗುರುವಾರದಂದು 9001/- ರುಪಾಯಿಗಳು. 

ದೇವಾಲಯದಲ್ಲಿ ಶಾಶ್ವತ ಸದಸ್ಯತ್ವಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ 1100/- ರುಪಾಯಿಗಳು. ಶಾಶ್ವತ ಸೇವೆಯನ್ನು ಮಾಡಿಸುವ ಎಲ್ಲಾ ಸಾಯಿಭಕ್ತರಿಗೆ ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ತಿಳಿಸಲಾಗುತ್ತದೆ ಮತ್ತು ಭಕ್ತರ ಮನೆಗಳಿಗೆ ಉಧಿ ಪ್ರಸಾದವನ್ನು ಅಂಚೆಯ ಮುಖಾಂತರ ಕಳುಹಿಸಲಾಗುತ್ತದೆ. 

ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು: 

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 27ನೇ ನವೆಂಬರ್.   
ಗುರುಪೂರ್ಣಿಮೆ. 
ಶ್ರೀಕೃಷ್ಣ ಜನ್ಮಾಷ್ಟಮಿ. 
ವಿಜಯದಶಮಿ. 
ದೀಪಾವಳಿ. 
ಮಹಾಶಿವರಾತ್ರಿ. 
ಶ್ರೀರಾಮನವಮಿ. 
ಹನುಮಾನ್ ಜಯಂತಿ. 
ಹೋಳಿ ಹಬ್ಬ. 
ಹೊಸ ವರ್ಷದ ಆಚರಣೆ. 
ಸ್ವಾತಂತ್ರ್ಯ ದಿನಾಚರಣೆ. 
ಗಣರಾಜ್ಯ ದಿನಾಚರಣೆ. 

ದೇಣಿಗೆ ನೀಡಲು ಮನವಿ: 

ಶ್ರೀ ಸಾಯಿಧಾಮ್, ಸಿರಾಲಿ ಮಂದಿರದ ಮುಂದಿನ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು "ಶ್ರೀ ಸಾಯಿಧಾಮ್, ಸಿರಾಲಿ" ಭಾರತೀಯ ಸ್ಟೇಟ್ ಬ್ಯಾಂಕ್, ಸಿರಾಲಿ ಶಾಖೆ, ಖಾತೆ ಸಂಖ್ಯೆ: 11705780181 ಮತ್ತು  954220110000001 ಈ ಖಾತೆಗಳಿಗೆ ಹಣ/ಚೆಕ್/ಡಿಡಿ ರೂಪದಲ್ಲಿ ಹಣವನ್ನು ಕಳುಹಿಸಬಹುದಾಗಿದೆ. 


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 
  
ಸಿರಾಲಿ ಬಸ್ ನಿಲ್ದಾಣದ ಹತ್ತಿರ, ಸಿರಾಲಿ, ಹರ್ದಾ ಜಿಲ್ಲೆ, ಮಧ್ಯಪ್ರದೇಶ. 

ವಿಳಾಸ: 
ಶ್ರೀ ಸಾಯಿಧಾಮ್
ಬಸ್ ನಿಲ್ದಾಣದ ಹತ್ತಿರ, 
ಸಿರಾಲಿ ತಹಸಿಲ್-461  331
ಹರ್ದಾ ಜಿಲ್ಲೆ, ಮಧ್ಯಪ್ರದೇಶ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಮುಕೇಶ್ ತಾಲೆ ಮತ್ತು ಶ್ರೀ.ದಯಾಶಂಕರ್ ಕರೋಡೆ

ದೂರವಾಣಿ ಸಂಖ್ಯೆಗಳು:
+ 91 96698 02150 / +91 81206 16301

ಈ ಮೇಲ್ ವಿಳಾಸ: 
shrisaidhamsirali@gmail.com


ಅಂತರ್ಜಾಲ ತಾಣ: 
http://www.shrisaidhamsirali.com  


ಮಾರ್ಗಸೂಚಿ: 
ಹರ್ದಾ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಹೇರಳವಾಗಿ ಬಸ್ ಮತ್ತು ಆಟೋಗಳು ಸಿಗುತ್ತವೆ. ದೇವಾಲಯವು ಸಿರಾಲಿ ಬಸ್ ನಿಲ್ದಾಣದ ಬಳಿ ಇರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ


Friday, November 11, 2011

ಹರಿಯಾಣ  ರಾಜ್ಯಪಾಲರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಹರಿಯಾಣ  ರಾಜ್ಯಪಾಲರಾದ ಶ್ರೀ.ಜಗನ್ನಾಥ್ ಪಹಾಡಿಯಾರವರು ಇದೇ ತಿಂಗಳ 11ನೇ ನವೆಂಬರ್ 2011, ಶುಕ್ರವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ  ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, November 9, 2011

ಸಾಯಿಅಮೃತಧಾರಾ  ಅಂತರ್ಜಾಲ  ತಾಣದಿಂದ ಸಾಯಿಭಕ್ತರಿಗೊಸ್ಕರ ಆಂಗ್ಲ ಭಾಷೆಯಲ್ಲಿ  " ಶಿರಡಿ ಗೈಡ್"  ಕಿರುಹೊತ್ತಿಗೆಯ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ    

ಸಾಯಿಅಮೃತವಾಣಿ ಬ್ಲಾಗ್ ನ ಮಾತೃ ಅಂತರ್ಜಾಲ ತಾಣವಾದ ಸಾಯಿಅಮೃತಧಾರಾ.ಕಾಂ ಕಳೆದ ತಿಂಗಳ 6ನೇ ಅಕ್ಟೋಬರ್ 2011 ರ ಪವಿತ್ರ ವಿಜಯದಶಮಿಯಂದು ತನ್ನ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಶಿರಡಿಗೆ ಪ್ರವಾಸ ಕೈಗೊಳ್ಳುವ ಸಾಯಿಭಕ್ತರಿಗೆ ಅನುಕೂಲವಾಗಲೆಂದು  ಆಂಗ್ಲ ಭಾಷೆಯಲ್ಲಿ  " ಶಿರಡಿ ಗೈಡ್"  ಎಂಬ ಕಿರುಹೊತ್ತಿಗೆಯನ್ನು  ಲೋಕಾರ್ಪಣೆ ಮಾಡಿರುತ್ತದೆ . 

ಈ ಪಾಕೆಟ್ "ಶಿರಡಿ ಗೈಡ್"  ಕೆಳಕಂಡ ವಿಷಯಗಳನ್ನು ಹೊಂದಿರುತ್ತದೆ: 
  1. ಶ್ರೀ.ಮೋಹಿನಿ ರಾಜ್ ಪಂಡಿತ್ ರವರು ರಚಿಸಿರುವ ಸಾಯಿಬಾಬಾರವರ ಹನ್ನೊಂದು ಅಭಿವಚನಗಳು. 
  2. ಶಿರಡಿ ಸಾಯಿಬಾಬಾ ದೇವಾಲಯದ ಆವರಣದಲ್ಲಿ ನೋಡಬೇಕಾದ ಸ್ಥಳಗಳು. 
  3. ಶಿರಡಿಯ ಸುತ್ತಮುತ್ತಲೂ ನೋಡಬೇಕಾದ ಸ್ಥಳಗಳು. 
  4. ಸಾಯಿ ಮಹಾಭಕ್ತರ ಮನೆಗಳು. 
  5. ಸಾಯಿಬಾಬಾರವರು ಪ್ರತಿನಿತ್ಯ ಭಿಕ್ಷೆಯನ್ನು ಸ್ವೀಕರಿಸುತ್ತಿದ್ದ ಐದು ಪೂಜ್ಯ ಮನೆಗಳು. 
  6. ಶಿರಡಿಯಲ್ಲಿನ ವಸತಿ ಸ್ಥಳಗಳ ಬಗ್ಗೆ ಮಾಹಿತಿ. 
  7. ಸಾಯಿ ಭಕ್ತರಿಗೆ ಉಪಯೋಗವಾಗುವ ಕೆಲವು ಮಾಹಿತಿಗಳು. 
  8. ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮಗಳ ವಿವರ. 
  9. ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ನಡೆಯುವ ಪೂಜೆಯ ವಿವರಗಳು. 
  10. ಹಣ ನೀಡಿ ದರ್ಶನ ಪಡೆಯುವ ಸೌಲಭ್ಯ ಮತ್ತು ವಿ.ಐ.ಪಿ.ಪಾಸ್ ಸೌಲಭ್ಯದ ವಿವರಗಳು. 
  11. ಶಿರಡಿಯ ಪ್ರಮುಖ ಸಂಪರ್ಕದ ವಿವರಗಳು. 
  12. ಪರಮ ಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು ರಚಿಸಿರುವ ಶ್ರೀ.ಸಾಯಿಬಾಬಾ ಅಷ್ಟೋತ್ತರಶತನಾಮಾವಳಿ.
  13. ಶಿರಡಿ ಸಾಯಿಬಾಬಾ ಸಂಸ್ಥಾನ ಪ್ರಕಟ ಮಾಡುವ ದ್ವೈಮಾಸಿಕ ಶ್ರೀ ಸಾಯಿಲೀಲಾ ಪತ್ರಿಕೆಯ ಚಂದಾವಿವರಗಳು. 
ಮೇಲಿನ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುವ ಈ "ಶಿರಡಿ ಗೈಡ್" ನ ಬೆಲೆಯು 10/- ರುಪಾಯಿ ಗಳಾಗಿದ್ದು , ಇದು ಕೇವಲ ಮುದ್ರಣ ವೆಚ್ಚವಾಗಿರುತ್ತದೆ. ಇದರಿಂದ ಬರುವ ಹಣವನ್ನು ಮರು ಮುದ್ರಣ ಖರ್ಚಿಗಾಗಿ ಬಳಸಲಾಗುತ್ತದೆ.

ಈ ಬಹುಪಯೋಗಿ ಶಿರಡಿ ಗೈಡ್ ನ್ನು  ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ:



ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, November 6, 2011

ಮಹಾರಾಷ್ಟ್ರ ಸರ್ಕಾರದ ಪಶುಸಂಗೋಪನಾ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರ ಸರ್ಕಾರದ ಪಶುಸಂಗೋಪನಾ ಸಚಿವರಾದ ಡಾ.ನಿತಿನ್ ರಾವತ್ ರವರು ಇದೇ ತಿಂಗಳ 5ನೇ ನವೆಂಬರ್ 2011, ಶನಿವಾರ, ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿ ದರ್ಶನದ ನಂತರ  ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಹಿಂದಿ ಚಿತ್ರನಟ ಸೋನು ಸೂದ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಹಿಂದಿ ಚಿತ್ರನಟ ಶ್ರೀ.ಸೋನು ಸೂದ್ ರವರು ಇದೇ ತಿಂಗಳ 4ನೇ ನವೆಂಬರ್ 2011,ಶುಕ್ರವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷರಾದ ಶ್ರೀ.ಶಂಕರ ರಾವ್ ಕೊಹ್ಲೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್, ಶಿರಡಿ ನಗರ ಪಂಚಾಯತಿ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್, ಯುನೈಟೆಡ್ ಹೆಲಿ ಚಾರ್ಟರ್ಸ್, ಮುಂಬೈನ ಕಾರ್ಯಾಧ್ಯಕ್ಷರಾದ ಶ್ರೀ.ಸುಭಾಶ್ ಗುಪ್ತೆ ಮತ್ತು ವಿಮಾನ ಸಂಸ್ಥೆಯ ಉಪ ನಿರ್ದೇಶಕರಾದ ಶ್ರೀ.ರಾಜ್ ಕನ್ವರ್ ರವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, November 2, 2011

ಸಾಯಿ ಮಹಾಭಕ್ತ - ಶ್ರೀ.ಚಾಂದ್ ಭಾಯಿ ಪಾಟೀಲ್  - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ.ಚಾಂದ್ ಭಾಯಿ ಪಾಟೀಲ್ ರವರು ಧೂಪಖೇಡ ಗ್ರಾಮದ ಮುಖ್ಯಸ್ಥರಾಗಿದ್ದರು. ಈ ಗ್ರಾಮವು ಔರಂಗಾಬಾದ್ ಜಿಲ್ಲೆಯ ಪೈಠಾಣಾ ತಾಲ್ಲೂಕಿನಲ್ಲಿ ಇದ್ದು ಔರಂಗಾಬಾದ್ ನಿಂದ ಅಜಂತಾಗೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿಲೋಮೀಟರ್ ಕ್ರಮಿಸಿದರೆ ಸಿಗುತ್ತದೆ. 

ಸಾಯಿಬಾಬಾರವರು ಶಿರಡಿಯಲ್ಲಿ ಬಂದು ಶಾಶ್ವತವಾಗಿ ನೆಲೆಸಲು ಕಾರಣರು ಮುಸ್ಲಿಂ ಕುಲಕ್ಕೆ ಸೇರಿದ ಶ್ರೀ.ಚಾಂದ್ ಭಾಯಿ ಪಾಟೀಲ್ ರವರು. ಒಮ್ಮೆ ಇವರು ಔರಂಗಾಬಾದ್ ಗೆ ಪ್ರಯಾಣ ಮಾಡುತ್ತಿದ್ದಾಗ ದಾರಿಯಲ್ಲಿ ತಮ್ಮ ಹೆಣ್ಣು ಕುದುರೆಯನ್ನು ಕಳೆದುಕೊಂಡರು. ಕುದುರೆ ಕಳೆದು ಎರಡು ತಿಂಗಳುಗಳಾದರೂ ಎಷ್ಟು ಹುಡುಕಾಡಿದರೂ ಕುದುರೆ ಸಿಗಲಿಲ್ಲ. ಎಲ್ಲಾ ಕಡೆಯಲ್ಲಿ ಹುಡುಕಿ ಬೇಸತ್ತ ಶ್ರೀ.ಚಾಂದ್ ಭಾಯಿ ಪಾಟೀಲ್ ರವರು ವಾಪಸ್ ಔರಂಗಾಬಾದ್ ಕಡೆಗೆ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದರು. ಔರಂಗಾಬಾದಿನಿಂದ ಸುಮಾರು ನಾಲ್ಕೂವರೆ ಕಿಲೋಮೀಟರ್ (ಅಂದಾಜು 9 ಮೈಲಿ ದೂರ) ಕ್ರಮಿಸಿದ ನಂತರ ಮಾವಿನ ಮರದ ಕೆಳಗಡೆ ಕುಳಿತಿದ್ದ ಸುಂದರನಾದ ಎಳೆಯ ಹುಡುಗನನ್ನು ಕಂಡರು. ಫಕೀರನಂತೆ ವಸ್ತ್ರವನ್ನು ಧರಿಸಿದ್ದ ಆ ಹುಡುಗ ಇವರನ್ನು ಕೂಗಿ ಕರೆದು ಚಿಲ್ಲಂ ಅನ್ನು ಸೇದಿ ನಂತರ ಪ್ರಯಾಣವನ್ನು ಮುಂದುವರೆಸುವಂತೆ ಹೇಳಿದನು. ಕೇವಲ ಕಫ್ನಿಯನ್ನು ಧರಿಸಿದ್ದ ಮತ್ತು ಕಂಕುಳಲ್ಲಿ ಸಟಕಾ ಹಿಡಿದುಕೊಂಡಿದ್ದ ಆ ಹುಡುಗ ಚಿಲ್ಲಂ ಅನ್ನು ಸೇದಲು ತಯಾರಿ ನಡೆಸುತ್ತಿದ್ದನು. ಚಾಂದ್ ಭಾಯಿಯ ಹೆಗಲ ಮೇಲೆ ಇದ್ದ ಕುದುರೆಯ ಜೀನನ್ನು ನೋಡಿ ಆ ಹುಡುಗ "ಈ ಜೀನನ್ನು ಏತಕ್ಕೆ ಹೆಗಲ ಮೇಲೆ ಹಾಕಿಕೊಂಡಿದ್ದೀರಿ?" ಎಂದು ಪ್ರಶ್ನಿಸಿದನು. ಆಗ ಚಾಂದ್ ಭಾಯಿ ತಾವು ಕುದುರೆ ಕಳೆದುಕೊಂಡ ವಿಷಯವನ್ನು ಅರುಹಿದರು. ಆ ಬಾಲ ಫಕೀರನು ಅಲ್ಲಿಯೇ ಇದ್ದ ಹಳ್ಳದ ಕಡೆಗೆ ತನ್ನ ಕೈಯನ್ನು ತೋರಿಸಿ "ಅಲ್ಲಿ ಹೋಗಿ ನೋಡಿ, ಅಲ್ಲಿ ನೀವು ಕಳೆದುಕೊಂಡ ಕುದುರೆ ನಿಮಗೆ ಸಿಗುತ್ತದೆ" ಎಂದನು. ಚಾಂದ್ ಭಾಯಿ ಅಲ್ಲಿ ಹೋಗಿ ನೋಡಲು ನಿಜವಾಗಿಯೂ ಅವರ ಕುದುರೆ ಅಲ್ಲಿ ಮೇಯುತ್ತಿರುವುದನ್ನು ಕಂಡರು. ನಡೆದ ಘಟನೆಯನ್ನು ನೋಡಿ ಚಾಂದ್ ಭಾಯಿ ಗೆ ಆಶ್ಚರ್ಯವಾಯಿತು. ತಕ್ಷಣವೇ ಚಾಂದ್ ಭಾಯಿ ಈ ಹುಡುಗ ಸಾಮಾನ್ಯನಲ್ಲ. ಇವನು ಔಲಿಯಾ (ಅಸಾಮಾನ್ಯ ವ್ಯಕ್ತಿ) ಎಂದು ಮನಗಂಡರು. ಆ ಕುದುರೆಯನ್ನು ಕರೆದುಕೊಂಡು ಫಕೀರನ ಬಳಿಗೆ ಬಂದರು. ಫಕೀರನು ತನ್ನ ಹತ್ತಿರ ಕುಳಿತುಕೊಳ್ಳುವಂತೆ ಇವರಿಗೆ ಹೇಳಿದನು. ನಂತರ ಇಕ್ಕಳವನ್ನು ಕೈಗೆ ತೆಗೆದುಕೊಂಡು ನೆಲಕ್ಕೆ ಹೊಡೆದನು. ಉರಿಯುತ್ತಿರುವ ಕೆಂಡವನ್ನು ತನ್ನ ಚಿಲ್ಲಂನಲ್ಲಿ ಇರಿಸಿದನು. ಚಿಲ್ಲಂನನ್ನು ಮುಚ್ಚಲು ಬಟ್ಟೆಯ ಅವಶ್ಯಕತೆ ಇದ್ದಿತು ಮತ್ತು ಅದನ್ನು ಒದ್ದೆ ಮಾಡಲು ನೀರು ಬೇಕಾಗಿತ್ತು. ಆಗ ಆ ಫಕೀರನ್ನು ತನ್ನ ಕಂಕುಳಲ್ಲಿ ಇದ್ದ ಸಟಕಾವನ್ನು ತೆಗೆದುಕೊಂಡು ನೆಲಕ್ಕೆ ಹೊಡೆದ ಕೂಡಲೇ ನೀರು ಚಿಮ್ಮಿ ಬಂದಿತು. ಆ ನೀರಿನಿಂದ ಬಟ್ಟೆಯನ್ನು ಒದ್ದೆ ಮಾಡಿ, ಹೆಚ್ಚಿನ ನೀರನ್ನು ಬಟ್ಟೆಯನ್ನು ಹಿಂಡುವ ಮುಖಾಂತರ ತೆಗೆದು ಹಾಕಿ, ಚಿಲ್ಲಂನ್ನು ಸುತ್ತಿದನು. ತಾನು ಒಮ್ಮೆ ಚಿಲ್ಲಂನ್ನು ಎಳೆದು ನಂತರ ಅದನ್ನು ಚಾಂದ್ ಭಾಯಿಯವರಿಗೆ ಸೇದಲು ನೀಡಿದನು. 

ಬಾಲ ಫಕೀರನು ಮಾಡಿದ ಈ ಎಲ್ಲಾ ಲೀಲೆಗಳನ್ನು ನೋಡಿ ಚಾಂದ್ ಭಾಯಿಗೆ ದಂಗುಬಡಿದಂತೆ ಆಯಿತು. ಸ್ವಾಭಾವಿಕವಾಗಿ ಆ ಫಕೀರನು ತಮ್ಮ ಮನೆಗೆ ಬಂದು ಮನೆಯವರೆಲ್ಲರನ್ನು ಹರಸಲು ಕರೆದುಕೊಂಡು ಹೋಗುವ ಆಸೆಯಾಯಿತು. ಚಾಂದ್ ಭಾಯಿಯವರ ಒತ್ತಾಯದ ಮೇರೆಗೆ ಆ ಬಾಲ ಫಕೀರನು ಅವರ ಮನೆಗೆ ಮಾರನೆಯ ದಿನ ಹೋದನು. ಅಲ್ಲಿ ಸ್ವಲ್ಪ ದಿನಗಳು ತಂಗಿದ್ದನು. ನಂತರ ಚಾಂದ್ ಭಾಯಿ ಪಟೇಲನ ಸಂಬಂಧಿಯ ಮದುವೆಯ ದಿಬ್ಬಣದ ಜೊತೆಯಲ್ಲಿ ಶಿರಡಿಗೆ ಬಂದನು. 

ಚಾಂದ್ ಭಾಯಿಗೆ ಮಕ್ಕಳಿರಲಿಲ್ಲ. ಇವರ ಹೆಂಡತಿಯ ಸೋದರಳಿಯನ ಮದುವೆಯು ಶಿರಡಿಯ "ವಾಜಿರ್ಬಿ" ಎಂಬ ಹುಡುಗಿಯೊಡನೆ ನಿಶ್ಚಯವಾಗಿತ್ತು. ಆ ಮದುವೆಯ ಸಲುವಾಗಿ ಚಾಂದ್ ಭಾಯಿಯ ಕುಟುಂಬದವರು ಮತ್ತು ಅವರ ಸ್ನೇಹಿತರುಗಳು ಕುದುರೆ ಮತ್ತು ಎತ್ತಿನ ಗಾಡಿಗಳನ್ನು ಮಾಡಿಕೊಂಡು ಶಿರಡಿಗೆ ಹೊರಟರು. ಆ ಮದುವೆಯ ದಿಬ್ಬಣದ ಜೊತೆಯಲ್ಲಿ ಒಂದು ಎತ್ತಿನ ಗಾಡಿಯಲ್ಲಿ ಕುಳಿತು ಬಾಬಾರವರು ಕೂಡ ಪ್ರಯಾಣ ಬೆಳೆಸಿದರು. 

ಶಿರಡಿಯನ್ನು ತಲುಪಿದ ನಂತರ ಮದುವೆಯ ದಿಬ್ಬಣವು  ಖಂಡೋಬಾ ಮಂದಿರದ ಎದುರುಗಡೆ ಇದ್ದ ಮೈದಾನದಲ್ಲಿ ಬೀಡು ಬಿಟ್ಟಿತು. ಈ ದೇವಾಲಯ ಅಕ್ಕಸಾಲಿಗ ಜಾತಿಗೆ ಸೇರಿದ ಭಗತ್ ಮಹಾಳಸಾಪತಿಯವರಿಗೆ ಸೇರಿತ್ತು. ಎತ್ತಿನ ಗಾಡಿಯಿಂದ ಇಳಿಯುತ್ತಿದ್ದ ಈ ಬಾಲ ಫಕೀರನನ್ನು ನೋಡಿ ಭಗತ್ ಮಹಾಳಸಾಪತಿಯವರು "ಆವೋ ಸಾಯಿ" ಎಂದು ಸ್ವಾಭಾವಿಕವಾಗಿ ಉಚ್ಚರಿಸಿದರು. ಅಂದಿನಿಂದ ಶಿರಡಿಯ ಎಲ್ಲಾ ಗ್ರಾಮಸ್ಥರೂ ಇವರನ್ನು "ಸಾಯಿಬಾಬಾ" ಎಂದು ಸಂಬೋಧಿಸಲು ಪ್ರಾರಂಭಿಸಿದರು. 

ಶ್ರೀ.ಚಾಂದ್ ಭಾಯಿಯವರು ತಮ್ಮ ಹೆಣ್ಣು ಕುದುರೆಯನ್ನು ಕಳೆದುಕೊಂಡ ವಿಚಾರವನ್ನು ಶಿರಡಿಯ ರಾಮಗೀರಬುವಾ (ಸಾಯಿಬಾಬಾರವರು ಬಾಪುಗೀರ್ ಬುವಾ ಎಂದು ಸಂಬೋಧಿಸುತ್ತಿದ್ದರು) ಗೆ ತಾವೇ ಸ್ವತಃ ತಿಳಿಸಿರುತ್ತಾರೆ. 1936ನೇ ಇಸವಿಯಲ್ಲಿ ರಾಮಗೀರಬುವಾರವರು ಪರಮ ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರಿಗೆ ತಿಳಿಸಿರುತ್ತಾರೆ. ಆಗ ರಾಮಗೀರಬುವಾರವರಿಗೆ 76 ವರ್ಷಗಳಾಗಿತ್ತು. 

ಚಾಂದ್ ಭಾಯಿ ಪಾಟೀಲ್ ರವರ ಕನಸಿನಲ್ಲಿ ಬಂದು ಅವರ ಮನಸ್ಸಿನಲ್ಲಿ ಇದ್ದುದನ್ನು ಸಾಯಿಬಾಬಾರವರು ತಿಳಿದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿರುತ್ತದೆ.

ಚಾಂದ್ ಪಾಟೀಲ್ ರವರ  ಸಹೋದರ ಅನ್ಸರ್ ಖಾನ್ ಮತ್ತು ಅವನ ಹೆಂಡತಿ ಉಮರ್ಬಿಗೆ ಗುಲಾಬ್ ಖಾನ್ ಎಂಬ ಮಗನಿದ್ದನು. ಗುಲಾಬ್ ಖಾನ್ ನ ಮಗ ಲಾಲ್ ಖಾನ್ಇದೇ ಹಳ್ಳಿಯಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದನು. 

ಚಾಂದ್ ಭಾಯಿ ಪಾಟೀಲನ ಮನೆಯ ಹತ್ತಿರದಲ್ಲಿ ಒಂದು ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಅದರ ಪಕ್ಕದಲ್ಲಿ ಬಾಬಾರವರು ಧ್ಯಾನ ಮಾಡುತ್ತಿದ್ದ ಹಾಗೂ ವಿಶ್ರಮಿಸಿಕೊಳ್ಳುತ್ತಿದ್ದ ಪವಿತ್ರ ಬೇವಿನ ಮರವಿದೆ. ಈ ಬೇವಿನ ಮರದ ಎಲೆಗಳು ಶಿರಡಿಯ ಗುರುಸ್ಥಾನದಲ್ಲಿರುವ ಬೇವಿನ ಮರದ ಎಲೆಗಳಂತೆಯೇ ಸಿಹಿಯಾಗಿರುತ್ತವೆ.


ಚಾಂದ್ ಭಾಯಿ ಪಾಟೀಲನ ಹಳೆಯ ಮನೆಯನ್ನು ಕಾಲಾನಂತರದಲ್ಲಿ ಕೆಡವಿ ಅದೇ ಸ್ಥಳದಲ್ಲಿ ಹೊಸ ಮನೆಯನ್ನು ಕಟ್ಟಲಾಗಿರುತ್ತದೆ. ಇದೇ ಮನೆಯಲ್ಲಿ ಪ್ರಸ್ತುತ ಅವರ ಮರಿಮಗನಾದ ಶ್ರೀ.ಬಾಬುಲಾಲ್ ನಾದಾನ್ ಪಠಾಣ್ ರವರು (ನಾಲ್ಕನೇ ಪೀಳಿಗೆ) ವಾಸಿಸುತ್ತಿದ್ದಾರೆ. 

ಚಾಂದ್ ಭಾಯಿ ಪಾಟೀಲರ ಸಮಾಧಿಯನ್ನು ಅವರ ಮನೆಯ ಪಕ್ಕದಲ್ಲೇ ಮಾಡಲಾಗಿದೆ.


ಸಾಯಿಬಾಬಾರವರು ಸುಮಾರು ಎರಡು ತಿಂಗಳ ಕಾಲ ಚಾಂದ್ ಭಾಯಿ ಪಾಟೀಲರ ಈ ಮನೆಯಲ್ಲಿ ಇದ್ದರೆಂದು ಶ್ರೀ.ಬಾಬುಲಾಲ್ ನಾದಾನ್ ಪಠಾಣ್ ರವರು ಹೇಳುತ್ತಾರೆ. ಸಾಯಿಬಾಬಾರವರಿಂದ ಸ್ಪರ್ಶಿಸಲ್ಪಟ್ಟ ಬೀಸುವ ಕಲ್ಲು, ಹೆಣ್ಣು ಕುದುರೆ "ಬಿಜಲಿ" ಯ ವಸ್ತುಗಳು, ಸಾಯಿಬಾಬಾರವರು ಚಾಂದ್ ಭಾಯಿ ಪಾಟೀಲರೊಂದಿಗೆ ಇರುವ ವರ್ಣಚಿತ್ರಗಳನ್ನು ಅವರ ಮನೆಯಲ್ಲಿ ಈಗಲೂ ನೋಡಬಹುದಾಗಿದೆ.





ವಿಳಾಸ: 

ಶ್ರೀ.ಬಾಬುಲಾಲ್ ನಾದಾನ್ ಪಠಾಣ್ 
ಧೂಪಖೇಡಾ ಗ್ರಾಮ, 
ಪೈಠಾಣ್  ತಾಲೂಕು, 
ಔರಂಗಾಬಾದ್ ಜಿಲ್ಲೆ, 
ಮಹಾರಾಷ್ಟ್ರ, ಭಾರತ, 
ದೂರವಾಣಿ ಸಂಖ್ಯೆ:  +91 98818 22212

ಕನ್ನಡ ಅನುವಾದ: ಶ್ರೀಕಂಠ ಶರ್ಮ