Saturday, January 8, 2011

ಬೆಂಗಳೂರಿನ ಸಾಯಿ ಮಂದಿರ - ಶ್ರೀ ಗಣೇಶ, ಶ್ರೀ.ಕನ್ಯಕಾಪರಮೇಶ್ವರಿ ಮತ್ತು ಶ್ರೀ.ಶಿರಡಿ ಸಾಯಿಬಾಬಾ ದೇವಾಲಯ, ರಾಜಾಜಿನಗರ ವಾಸವಿ ಚಾರಿಟಬಲ್ ಟ್ರಸ್ಟ್ (ನೋಂದಣಿ), ನಂ.23/11, 46ನೇ ಅಡ್ಡರಸ್ತೆ,  7ನೇ ಮುಖ್ಯರಸ್ತೆ , 4ನೇ ಘಟ್ಟ, ರಾಜಾಜಿನಗರ, ಬೆಂಗಳೂರು-560 010. - ಕೃಪೆ-ಸಾಯಿ ಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾದ ರಾಜಾಜಿನಗರ 4ನೇ ಘಟ್ಟದಲ್ಲಿದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು:

ಈ ದೇವಾಲಯದ ಭೂಮಿಪೂಜೆಯನ್ನು 13ನೇ ನವೆಂಬರ್ 2002 ರಂದು ರಾಜಾಜಿನಗರ ಕ್ಷೇತ್ರದ ಎಂ.ಎಲ್.ಎ.ಶ್ರೀ.ಸುರೇಶ ಕುಮಾರ್ ರವರು ಅನೇಕ ಗಣ್ಯರ ಸಮ್ಮುಖದಲ್ಲಿ ನೆರವೇರಿಸಿದರು.  

ಈ ದೇವಾಲಯದ ಉದ್ಘಾಟನೆಯನ್ನು 7ನೇ ಮೇ 2006 ರ ವಾಸವಿ ಜಯಂತಿಯ ದಿನ ಶ್ರೀ.ಶ್ರೀ.ಶ್ರೀ.ಚಂದ್ರಶೇಕರಾನಂದಗಿರಿ ಸ್ವಾಮೀಜಿಯವರು ಇಂದಿನ ಮುಖ್ಯಮಂತ್ರಿ ಶ್ರೀ.ಬಿ.ಎಸ್.ಯಡ್ಯುರಪ್ಪ, ಕಾನೂನು ಸಚಿವ ಶ್ರೀ.ಸುರೇಶ ಕುಮಾರ್, ಮಾಜಿ ಆರೋಗ್ಯ ಸಚಿವ ಶ್ರೀ.ರಾಮಚಂದ್ರ ಗೌಡ, ಸಚಿವೆ ಕುಮಾರಿ.ಶೋಭಾ ಕರಂದ್ಲಾಜೆ ಮತ್ತಿತರ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೆರವೇರಿಸಿದರು. ಉದ್ಘಾಟನೆಯ ವಿಶೇಷವೇನೆಂದರೆ ಹೆಲಿಕಾಪ್ಟರ್ ನಿಂದ ದೇವಾಲಯದ ಮೇಲೆ "ಪುಷ್ಪ ವೃಷ್ಟಿ" ಯನ್ನು ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಡಲಾಯಿತು. 

ದೇವಾಲಯದಲ್ಲಿ ಗಣೇಶ, ಕನ್ಯಕಾಪರಮೇಶ್ವರಿ, ಶಿರಡಿ ಸಾಯಿಬಾಬಾ, ವೀರಾಂಜನೇಯ ಸ್ವಾಮಿ ದೇವರುಗಳ ಅಮೃತ ಶಿಲೆಯ ವಿಗ್ರಹಗಳು ಮತ್ತು ಭವಾನಿಶಂಕರನ ಕಪ್ಪು ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 

ದೇವಾಲಯದ ನೆಲ ಮಾಳಿಗೆಯಲ್ಲಿ ಯೋಗ ಮತ್ತು ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ. ಈ ಸ್ಥಳವನ್ನು ಸಣ್ಣ ಸಮಾರಂಭಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆ ನೀಡಲಾಗುತ್ತದೆ. 

ಈ ದೇವಾಲಯವನ್ನು 43 ಜನ ಟ್ರಸ್ಟ್ ನ ಸದಸ್ಯರು ತಮ್ಮ ಸ್ವಂತ ಹಣವನ್ನು ಹಾಕಿ ಈ ಬಡಾವಣೆಯ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿರುತ್ತಾರೆ. 

     ದೇವಾಲಯದ ಹೊರನೋಟ 

     ದೇವಾಲಯದ ರಾಜಗೋಪುರ 

     ಸಾಯಿಬಾಬಾರವರ ವಿಗ್ರಹ 

     ಕನ್ಯಕಾಪರಮೇಶ್ವರಿಯ ವಿಗ್ರಹ 

     ಗಣಪತಿಯ ವಿಗ್ರಹ 

    ಭವಾನಿಶಂಕರನ ವಿಗ್ರಹ 

     ವೀರಾಂಜನೇಯನ ವಿಗ್ರಹ 

    ದೇವಾಲಯದ ಕಾರ್ಯಚಟುವಟಿಕೆಗಳು:  

    ದಿನನಿತ್ಯದ ಕಾರ್ಯಕ್ರಮಗಳು:

    ಆರತಿಯ ಸಮಯ:
    ಕಾಕಡಾ ಆರತಿ: ಪ್ರತಿದಿನ ಬೆಳಿಗ್ಗೆ 6:30 ಕ್ಕೆ.
    ಮಧ್ಯಾನ್ಹ ಆರತಿ : ಪ್ರತಿದಿನ ಮಧ್ಯಾನ್ಹ 12 ಘಂಟೆಗೆ.
    ಧೂಪಾರತಿ: ಪ್ರತಿದಿನ ಸಂಜೆ 6:30 ಕ್ಕೆ.
    ಶೇಜಾರತಿ: ಪ್ರತಿದಿನ ರಾತ್ರಿ 8:30 ಕ್ಕೆ.



    ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಇದರ ಸೇವಾ ಶುಲ್ಕ 30/- ರುಪಾಯಿಗಳು.

    ಪ್ರತಿ ಹುಣ್ಣಿಮೆಯ ದಿನ ಸಂಜೆ 7 ಘಂಟೆಗೆ ಸತ್ಯನಾರಾಯಣ ಪೂಜೆ ಇರುತ್ತದೆ. ಇದರ ಸೇವಾ ಶುಲ್ಕ 30/- ರುಪಾಯಿಗಳು.

    ಪ್ರತಿ ತಿಂಗಳ ಕೃಷ್ಣ ಪಕ್ಷ ಚತುರ್ಥಿಯ ದಿನ ಸಂಜೆ 7 ಘಂಟೆಗೆ ಸಂಕಷ್ಟ ಚತುರ್ಥಿ ಪೂಜೆ ಇರುತ್ತದೆ. ಇದರ ಸೇವಾ ಶುಲ್ಕ 30/- ರುಪಾಯಿಗಳು. 

    ಶಾಶ್ವತ ಪೂಜೆಯ ವ್ಯವಸ್ಥೆ ದೇವಾಲಯದಲ್ಲಿದ್ದು ಇದರ ಸೇವಾ ಶುಲ್ಕ 2116/- ರುಪಾಯಿಗಳಾಗಿರುತ್ತದೆ. 

    ವಿಶೇಷ ಉತ್ಸವದ ದಿನಗಳು:

    1. ವಾಸವಿ ಜಯಂತಿ - ದೇವಾಲಯದ ವಾರ್ಷಿಕೋತ್ಸವ.
    2. ಕನ್ಯಕಾಪರಮೇಶ್ವರಿ ಆತ್ಮಾಹುತಿ ದಿವಸ. 
    3. ಶ್ರೀರಾಮನವಮಿ. 
    4. ಗುರುಪೂರ್ಣಿಮೆ. 
    5. ವಿಜಯದಶಮಿ - ನವರಾತ್ರಿ ಅಂಗವಾಗಿ 10 ದಿನಗಳ ಉತ್ಸವ. 
    6. ಶ್ರಾವಣ ಮಾಸದ ಕಡೆಯ ಶನಿವಾರ ವಿಶೇಷ ಪೂಜೆ.
    ಸಾಮಾಜಿಕ ಕಾರ್ಯ ಚಟುವಟಿಕೆಗಳು:
    1. ಉಚಿತ ಯೋಗ ಮತ್ತು ಧ್ಯಾನ ತರಗತಿಗಳು. 
    2. ಪ್ರತಿವರ್ಷ ಉತ್ಸವದ ದಿನಗಳಲ್ಲಿ ರಂಗೋಲಿ ಸ್ಪರ್ಧೆ.
    3. ಗಾಂಧಿ ಜಯಂತಿ ಆಚರಣೆ. 
    4. ಉಚಿತ ನೇತ್ರ ಪರೀಕ್ಷಾ ಶಿಬಿರ. 
    5. ರಕ್ತ ದಾನ ಶಿಬಿರ. 
    ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

    ಸ್ಥಳ:
    ರಾಜಾಜಿನಗರ ರಾಮ ಮಂದಿರದ ಹತ್ತಿರ, ಮನಿಪ್ಪುರಂ ಜುವೆಲ್ಲರ್ಸ್ ಮತ್ತು  ಬಿಂದು ಅಪಾರ್ಟ್ ಮೆಂಟ್ ರಸ್ತೆ.

    ವಿಳಾಸ:  
    ಶ್ರೀ ಗಣೇಶ, ಶ್ರೀ.ಕನ್ಯಕಾಪರಮೇಶ್ವರಿ ಮತ್ತು ಶ್ರೀ.ಶಿರಡಿ ಸಾಯಿಬಾಬಾ ದೇವಾಲಯ, 
    ರಾಜಾಜಿನಗರ ವಾಸವಿ ಚಾರಿಟಬಲ್ ಟ್ರಸ್ಟ್ (ನೋಂದಣಿ), 
    ನಂ.23/11, 46ನೇ ಅಡ್ಡರಸ್ತೆ,  7ನೇ ಮುಖ್ಯರಸ್ತೆ , 4ನೇ ಘಟ್ಟ, 
    ರಾಜಾಜಿನಗರ, ಬೆಂಗಳೂರು-560 010. ಕರ್ನಾಟಕ. 

    ಸಂಪರ್ಕಿಸಬೇಕಾದ ವ್ಯಕ್ತಿಗಳು:  
    ಶ್ರೀ. ಎ.ಎಸ್.ಎನ್.ಗುಪ್ತ ಬಿಕಾಂ,ಎಲ್.ಎಲ್.ಬಿ.–  ಅಧ್ಯಕ್ಷರು ಶ್ರೀ.ಬಿ.ವಿ.ದೀಕ್ಷಿತ್ ಕುಮಾರ್ - ಕಾರ್ಯದರ್ಶಿ.

    ದೂರವಾಣಿ ಸಂಖ್ಯೆಗಳು:  
    +91 98442 14969 / +91 80 2338 5446 / +91 98440 11055 / +91 80 2330 1487

    ಈ ಮೇಲ್ ವಿಳಾಸ: 

    ಮಾರ್ಗಸೂಚಿ:
    ರಾಜಾಜಿನಗರ ಇ.ಎಸ್.ಐ.ಬಸ್ ನಿಲ್ದಾಣದಲ್ಲಿ ಇಳಿದು ೫ ನಿಮಿಷ ನಡೆದರೆ  ದೇವಾಲಯ ಸಿಗುತ್ತದೆ. ದೇವಾಲಯವು ಮನಿಪ್ಪುರಂ ಜುವೆಲ್ಲರ್ಸ್ ಮತ್ತು  ಬಿಂದು ಅಪಾರ್ಟ್ ಮೆಂಟ್ ರಸ್ತೆಯಲ್ಲಿ ಇರುತ್ತದೆ.

    ಕನ್ನಡ ಅನುವಾದ:ಶ್ರೀಕಂಠ ಶರ್ಮ

    No comments:

    Post a Comment