Monday, August 1, 2011

ಪ್ರಪಂಚದ ಪ್ರಪ್ರಥಮ ಸಾಯಿಬಾಬಾ ಮಂದಿರದ ಅಧ್ಯಕ್ಷ ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ -  ಕೃಪೆ: ಸಾಯಿಅಮೃತಧಾರಾ.ಕಾಂ 



ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ ರವರು ಪ್ರಪಂಚದ ಪ್ರಪ್ರಥಮ ಶಿರಡಿ ಸಾಯಿಬಾಬಾ ಮಂದಿರವನ್ನು ಸ್ಥಾಪಿಸಿದ ಸಾಯಿ ಮಹಾಭಕ್ತ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರ ಮೊಮ್ಮಗನಾಗಿರುತ್ತಾರೆ (3ನೇ ತಲೆಮಾರು). ಶಿರಡಿ ಸಾಯಿಬಾಬಾರವರು ಇವರ ತಾತನವರಾದ ಶ್ರೀ.ಕೇಶವ ರಾಮಚಂದ್ರ ಪ್ರಧಾನ್ ರವರಿಗೆ 1916 ನೇ ಇಸವಿಯಲ್ಲಿ ತಮ್ಮ ಚಿತ್ರಪಟವೊಂದನ್ನು ಕೊಟ್ಟು ಅವರ ಸ್ವಂತ ಸ್ಥಳವಾದ ಭಿವಪುರಿಯಲ್ಲೇ ಒಂದು ಸಾಯಿಬಾಬಾ ಮಂದಿರವನ್ನು ನಿರ್ಮಿಸುವಂತೆ ಆಜ್ಞೆ ಮಾಡಿದ್ದರೆಂದು ಗೊತ್ತಾಗಿದೆ.

"ಪ್ರಧಾನ್" ಎನ್ನುವುದು ಇವರ ವಂಶದಲ್ಲಿ ಹುಟ್ಟಿರುವ ಮತ್ತು ಮುಂದೆ ಹುಟ್ಟಲಿರುವ ಎಲ್ಲರ ಹೆಸರಿನ ಮುಂದೆ ಬರುವ ಒಂದು ವಂಶದ ಹೆಸರಾಗಿರುತ್ತದೆ. ಇವರು ಮುಂಬೈ-ಪುಣೆ ರೈಲು ಮಾರ್ಗದಲ್ಲಿ ಸಿಗುವ ಕರ್ಜತ್-ನೆರಾಲ್ ರೈಲ್ವೇ ನಿಲ್ದಾಣದಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿ ಹಾಗೂ ಭಿವಪುರಿ ರಸ್ತೆ ರೈಲ್ವೇ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲಿರುವ ಭಿವಪುರಿ ಗ್ರಾಮದಲ್ಲಿ ತಲೆತಲಾಂತರದಿಂದ ವಾಸಿಸುತ್ತಿದ್ದಾರೆ.

ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ ರವರು 2ನೇ ಸೆಪ್ಟೆಂಬರ್ 1939 ರಂದು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಭಿವಪುರಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ದತ್ತಾತ್ರೇಯ ಕೇಶವ ಪ್ರಧಾನ್ ಮತ್ತು ತಾಯಿಯವರು ದಿವಂಗತ ಶ್ರೀಮತಿ.ಕಮಲೈ ದತ್ತಾತ್ರೇಯ ಪ್ರಧಾನ್. ಶ್ರೀ.ಗಜಾನನ ದತ್ತಾತ್ರೇಯ ಪ್ರಧಾನ್ ರವರು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಸುಮಾರು 28 ವರ್ಷಗಳ ಕಾಲ ಮುಂಬೈನ ಹಿಂದುಸ್ತಾನ್ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದರು. ಪ್ರಸ್ತುತ ಇವರು ಭಿವಪುರಿ ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಮತ್ತು ಮುಖ್ಯ ಟ್ರಸ್ಟಿ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ತಾತನವರಿಂದ ಬಳುವಳಿಯಾಗಿ ಬಂದ ಭಿವಪುರಿ ದೇವಾಲಯದ ಪಕ್ಕದಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರು ಶ್ರೀಮತಿ.ಮನಿಷಾ ಪ್ರಧಾನ್ ರವರನ್ನು ವಿವಾಹವಾಗಿ ಶ್ರೀ.ಯೋಗೇಶ್ ಪ್ರಧಾನ್ ಮತ್ತು ಶ್ರೀ.ಧನೇಶ್ ಪ್ರಧಾನ್ ಎಂಬ ಇಬ್ಬರು ಗಂಡು ಮಕ್ಕಳೊಂದಿಗೆ ಭಿವಪುರಿಯಲ್ಲಿ ವಾಸಿಸುತ್ತಿದ್ದಾರೆ.

ಪ್ರಧಾನ್ ರವರ ಮನೆಯ ಪೂಜಾ ಸ್ಥಳ 

 
ದತ್ತಾತ್ರೇಯರ ಅತ್ಯಂತ ಪುರಾತನ ಚಿತ್ರಪಟ 


ಶಿರಡಿ ಸಾಯಿಬಾಬಾರವರ ಪ್ರಪ್ರಥಮ ಮಂದಿರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವ ಸಾಯಿಭಕ್ತರು ಶ್ರೀ. ಗಜಾನನ ದತ್ತಾತ್ರೇಯ ಪ್ರಧಾನ್ ರವರನ್ನು ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು.

ವಿಳಾಸ: 
ಭಿವಪುರಿ ರಸ್ತೆ, ಉಕ್ರೂಲ್ ಗ್ರಾಮ, ಚಿಂಚವಾಲಿ ಅಂಚೆ-410 201, ಕರ್ಜತ್ ತಾಲ್ಲೂಕು, ರಾಯಗಡ್ ಜಿಲ್ಲೆ, ಮಹಾರಾಷ್ಟ್ರ.


ದೂರವಾಣಿ ಸಂಖ್ಯೆಗಳು: 
+91 93722 18558 / +91 74981 62002
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment