Saturday, August 6, 2011


ಚತ್ತೀಸ್ ಘಡ ರಾಜ್ಯದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಅಮೀದನಗರ, ಹುಡ್ಕೋ, ಭಿಲಾಯ್ - 490 009, ಚತ್ತೀಸ್ ಘಡ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ 




ದೇವಾಲಯದ ವಿಶೇಷತೆಗಳು: 


ಈ ದೇವಾಲಯವು ಚತ್ತೀಸ್ ಘಡ ರಾಜ್ಯದ ಭಿಲಾಯ್ ಪಟ್ಟಣದ ಅಮೀದನಗರದ ಹುಡ್ಕೋ ಕಾಲೋನಿಯಲ್ಲಿ ಇರುತ್ತದೆ. ದೇವಾಲಯವು ದುರ್ಗ್ ರೈಲು ಮತ್ತು ಬಸ್ ನಿಲ್ದಾಣದಿಂದ 4 ಕಿಲೋಮೀಟರ್,  ಮಾನಾ ವಿಮಾನ ನಿಲ್ದಾಣದಿಂದ 1 ಗಂಟೆಗಳ  ಅಂತರದಲ್ಲಿ ಇರುತ್ತದೆ.

16ನೇ ಜುಲೈ 2008 ರ ಪವಿತ್ರ ಗುರುಪೂರ್ಣಿಮೆಯಂದು ಗ್ಯಾರೇಜಿನಲ್ಲಿ ಒಂದು ಸಣ್ಣ ಮಂದಿರವನ್ನು ಪ್ರಾರಂಭಿಸಲಾಯಿತು. ಆ ದಿನ ಹುಡ್ಕೋ ಕಾಲೋನಿಯಿಂದ ಕುಮ್ಹರಿಯಲ್ಲಿರುವ ಸಾಯಿಧಾಮ್ ಗೆ ಪಲ್ಲಕ್ಕಿ ಉತ್ಸವವನ್ನು ಮೆರವಣಿಗೆಯಲ್ಲಿ ಕೊಂಡೊಂಯ್ಯಲಾಯಿತು. ನಂತರ ಗ್ಯಾರೇಜ್ ಅನ್ನು ನವೀಕರಿಸಲಾಯಿತು. ನವೀಕರಿಸಿದ ಮಂದಿರವನ್ನು 1ನೇ ಜನವರಿ 2009 ರಂದು ಪ್ರಾರಂಭಿಸಲಾಯಿತು. ಕಾಲಾನಂತರದಲ್ಲಿ ಭಕ್ತರ ಸಂಖ್ಯೆಯು ದಿನೇ ದಿನೇ ಬೆಳೆದು 3ನೇ ಮಾರ್ಚ್ 2012 ರಂದು "ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಹುಡ್ಕೋ" ಟ್ರಸ್ಟ್ ನ ನೋಂದಣಿಯನ್ನು ಮಾಡಲಾಯಿತು.

ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಟ್ರಸ್ಟ್ ನ ಅಧ್ಯಕ್ಷರ ತಾಯಿಯವರಾದ ಶ್ರೀಮತಿ.ರೂಪಾಲಿ ಘೋಷ್ ಮತ್ತು ತಂದೆಯವರಾದ ದಿವಂಗತ ಶ್ರೀ.ಅರುಣ್ ಕುಮಾರ್ ಘೋಷ್ ರವರು ದಾನವಾಗಿ ನೀಡಿರುತ್ತಾರೆ.

ನವೀಕರಿಸಿದ ಮಂದಿರವನ್ನು 1ನೇ ಜನವರಿ 2009 ರಂದು ಪ್ರಾರಂಭಿಸಲಾಯಿತು. ಆ ದಿನ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ದಿನವಿಡೀ ಹೋಮ-ಹವನಗಳು ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಆ ದಿನ ಸಂಜೆ ಸಾಯಿ ಭಕ್ತರ ತಂಡದಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದೇವಾಲಯದ ಟ್ರಸ್ಟ್ ನ ನೋಂದಣಿಯನ್ನು 3ನೇ ಮಾರ್ಚ್ 2012 ರಂದು ನೋಂದಣಿ ಸಂಖ್ಯೆ:79/2011-12 ರ ಅಡಿಯಲ್ಲಿ ಮಾಡಲಾಯಿತು.

ದೇವಾಲಯದ ಒಳಗಡೆ 4 ಅಡಿ ಎತ್ತರದ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹ, ದ್ವಾರಕಾಮಾಯಿ ಬಾಬಾ ಮತ್ತು ಗುರುಸ್ಥಾನದಲ್ಲಿರುವ "ಕಲ್ಲಿನ ಮೇಲೆ ಕುಳಿತ ಬಾಬಾ" ರವರ ಚಿತ್ರಪಟಗಳನ್ನು ಹಾಗೂ ಮರದ ಪಲ್ಲಕ್ಕಿಯನ್ನು ನೋಡಬಹುದು. ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು 21ನೇ ಜನವರಿ 2010 ರಂದು ಪ್ರತಿಷ್ಟಾಪಿಸಲಾಯಿತು.






ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ದೇವಾಲಯದ ಸಮಯ:

ದೇವಾಲಯ ತೆರೆಯುವ ಸಮಯ : 5:00 AM
ಭೂಪಾಳಿ : 5:15 AM
ಕಾಕಡಾ ಆರತಿ : 5:30 AM
ಸಾಯಿಬಾಬಾರವರಿಗೆ ಅಭಿಷೇಕ: 6:05 AM
ಛೋಟಾ ಆರತಿ: 6:45 AM
ಮಧ್ಯಾನ್ಹ ಆರತಿ:12:00
ಧೂಪಾರತಿ     : ಸೂರ್ಯಾಸ್ತ ಸಮಯಕ್ಕೆ.
ದ್ವಾರಕಾಮಾಯಿ ಮತ್ತು ಗುರುಸ್ಥಾನ ಮುಚ್ಚುವುದು: 8:30 PM
ಶೇಜಾರತಿ: 9:00 PM
ದೇವಾಲಯ ಮುಚ್ಚುತ್ತದೆ : 9:30 PM


ವಿಶೇಷ ಕಾರ್ಯಕ್ರಮಗಳು: 

ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಸಾಯಿ ಸತ್ಯವ್ರತ ಹಾಗೂ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತಿದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ದೇವಾಲಯದಲ್ಲಿ ಪ್ರತಿನಿತ್ಯ ರುದ್ರಾಭಿಷೇಕವನ್ನು ಮಾಡಲಾಗುತ್ತದೆ. ಯಾವುದೇ ಸೇವಾಶುಲ್ಕ ಇರುವುದಿಲ್ಲ.

ಪ್ರತಿ ವರ್ಷದ ಗುರುಪೂರ್ಣಿಮೆಯಂದು ಗುರು ಪಾದುಕಾ ಪೂಜೆಯನ್ನು ನೆರವೇರಿಸಲಾಗುತ್ತಿದೆ.

ದೇವಾಲಯದಲ್ಲಿ ಪ್ರತಿನಿತ್ಯ ಎಲ್ಲಾ ಆರತಿಯ ಮುಂಚೆ ಧುನಿ ಪೂಜೆಯನ್ನು ಮಾಡಿ ನೈವೇದ್ಯವನ್ನು ಸಮರ್ಪಿಸಲಾಗುತ್ತಿದೆ.

ಪ್ರತಿ ಗುರುವಾರದಂದು ದೇವಾಲಯಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆ ಮಾಡಲಾಗುತ್ತದೆ.

ವಿಶೇಷ ಉತ್ಸವದ ದಿನಗಳು: 


ಪ್ರತಿವರ್ಷದ 3ನೇ ಜನವರಿಯಂದು ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ಪ್ರತಿ ಗುರುವಾರದಂದು ದೇವಾಲಯಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆ ಮಾಡಲಾಗುತ್ತದೆ. ಸರಿ ಸುಮಾರು 600-800 ಸಾಯಿ ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ. 

ದೇಣಿಗೆಗೆ ಮನವಿ: 

ದೇವಾಲಯದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಧನ ಸಹಾಯವನ್ನು ಮಾಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಹುಡ್ಕೋ" ಇವರಿಗೆ ಸಂದಾಯವಾಗುವಂತೆ ಈ ಕೆಳಕಂಡ ಬ್ಯಾಂಕ ಖಾತೆಗೆ ಜಮಾ ಮಾಡಬಹುದಾಗಿದೆ: 

ಬ್ಯಾಂಕ್ ನ ಹೆಸರು: ಭಾರತೀಯ ಸ್ಟೇಟ್ ಬ್ಯಾಂಕ್ 
ಶಾಖೆ: ಆಸ್ಪತ್ರೆ ಸೆಕ್ಟರ್ ಶಾಖೆ, ಭಿಲಾಯ್, ಚತ್ತೀಸ್ ಘಡ, 
ಖಾತೆ ಹೆಸರು: ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಹುಡ್ಕೋ 
ಖಾತೆ ಸಂಖ್ಯೆ: 32582117383
ಐ.ಎಫ್.ಎಸ್.ಸಿ. ಕೋಡ್ : SBIN0004678


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಹುಡ್ಕೋ ಮುಖ್ಯ ರಸ್ತೆ, ಆಸ್ಪತ್ರೆಯ ಹತ್ತಿರ, ಸೆಕ್ಟರ್-9 ಚೌಕದ ಬಳಿ.


ವಿಳಾಸ: 

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್,
ಅಮೀದನಗರ, ಹುಡ್ಕೋ,
ಭಿಲಾಯ್ - 490 009,
ಚತ್ತೀಸ್ ಘಡ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ತರುಣ್ ಕುಮಾರ್ ಘೋಷ್  - ಅಧ್ಯಕ್ಷರು / ಶ್ರೀ.ಸುರೇಶ್ ಕುಮಾರ್ ಕೊಥಾರಿ - ಅಧ್ಯಕ್ಷರು / ಪ್ರಸನ್ನಜಿತ್ ಆನಂದ - ಕಾರ್ಯಕಾರಿ ಅಧಿಕಾರಿ.

ದೂರವಾಣಿ ಸಂಖ್ಯೆಗಳು:

+91 73549 80862 / +91 94255 65577 / +91 98261 43233


ಈ ಮೇಲ್ ವಿಳಾಸ: 
saibaba_anr@yahoo.com / pratishirdi.saigaon@gmail.com

ಅಂತರ್ಜಾಲ ತಾಣ: 

ಮಾರ್ಗಸೂಚಿ: 

ದೇವಾಲಯವು ದುರ್ಗ್ ರೈಲು ಮತ್ತು ಬಸ್ ನಿಲ್ದಾಣದಿಂದ 4 ಕಿಲೋಮೀಟರ್,  ಮಾನಾ ವಿಮಾನ ನಿಲ್ದಾಣದಿಂದ 1 ಗಂಟೆಗಳ  ಅಂತರದಲ್ಲಿ ಇರುತ್ತದೆ.



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment