Tuesday, August 9, 2011

ಕೋಲಾರದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಮಂದಿರ, ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ, ಮಹಿಳಾ ಸಮಾಜದ ಹತ್ತಿರ, ಹೊಸ ಬಡಾವಣೆ, ಕೋಲಾರ-563 101, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ  ದೇವಾಲಯವು ಕೋಲಾರದ ಹೊಸ ಬಡಾವಣೆಯಲ್ಲಿರುವ ಎಸ್.ಎನ್.ಆರ್.ಆಸ್ಪತ್ರೆಯ ಎದುರು ಮತ್ತು ಮಹಿಳಾ ಸಮಾಜದ ಹತ್ತಿರ ಇರುತ್ತದೆ. ದೇವಾಲಯವುಕೋಲಾರದ ಬಸ್ ನಿಲ್ದಾಣದಿಂದ ಕೇವಲ 10 ನಿಮಿಷದ ನಡಿಗೆಯ ಅಂತರದಲ್ಲಿರುತ್ತದೆ. 

ಈ ದೇವಾಲಯದ ಉದ್ಘಾಟನೆಯನ್ನು ಏಪ್ರಿಲ್ 1994 ರಲ್ಲಿ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ಟ್ರಸ್ಟ್ ನ ಸದಸ್ಯರುಗಳು ನೆರವೇರಿಸಿದರು. 

ದೇವಾಲಯವು ಬೆಳಿಗ್ಗೆ 5 ಘಂಟೆಗೆ ತೆರೆಯುತ್ತದೆ ಮತ್ತು ಮಧ್ಯಾನ್ಹ 12:30 ಕ್ಕೆ ಮುಚ್ಚುತ್ತದೆ. ಪುನಃ ಸಂಜೆ 5:30 ಕ್ಕೆ ತೆರೆಯುತ್ತದೆ ಹಾಗೂ ರಾತ್ರಿ 8:30 ಕ್ಕೆ ಶೇಜಾರತಿಯ ನಂತರ ಮುಚ್ಚುತ್ತದೆ

ಅಮೃತ ಶಿಲೆಯ 5 ಅಡಿ ಎತ್ತರದ ಸಾಯಿಬಾಬಾರವರ ವಿಗ್ರಹ ಮಂದಿರದಲ್ಲಿ ರಾರಾಜಿಸುತ್ತಿದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತ ಶಿಲೆಯ ಮತ್ತು ಬೆಳ್ಳಿಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 

ದೇವಾಲಯದ ಆವರಣದಲ್ಲಿ ಸಿಗುವ ಮೊದಲ ಗುಡಿಯಲ್ಲಿ ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಸಾಯಿಬಾಬಾ ದೇವಾಲಯದ ಪಕ್ಕದಲ್ಲಿ ಮತ್ತು ಗಣಪತಿ ಗುಡಿಯ ಹಿಂಭಾಗದಲ್ಲಿರುವಂತೆ ದೊಡ್ಡದಾದ ಧ್ಯಾನ ಹಾಗೂ ಭಜನಾ ಮಂದಿರವನ್ನು ಸ್ಥಾಪಿಸಲಾಗಿದೆ. 

ಸುಮಾರು 8 ಅಡಿ ಎತ್ತರದ ಸುಂದರವಾದ ಹನುಮಂತನ ವಿಗ್ರಹವನ್ನು ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಗಿದ್ದು ನೋಡಲು ಅತ್ಯಂತ ಮನೋಹರವಾಗಿದೆ. 














ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ
ಬೆಳಿಗ್ಗೆ : 9 ಘಂಟೆಗೆ
ಮಧ್ಯಾನ್ಹ: 12 ಘಂಟೆಗೆ
ಸಂಜೆ: 7 ಘಂಟೆಗೆ

ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಅಭಿಷೇಕವನ್ನು ಮಾಡಲಾಗುತ್ತದೆ. ಪ್ರತಿದಿನ 150/- ರುಪಾಯಿಗಳು ಹಾಗೂ ಗುರುವಾರದಂದು ಮಾತ್ರ 250/- ರುಪಾಯಿಗಳ ಸೇವಾಶುಲ್ಕವನ್ನು ನಿಗದಿಪಡಿಸಲಾಗಿದೆ. 

ಪ್ರತಿದಿನ ಸಂಜೆ 6:30 ರಿಂದ 7:30 ರ ತನಕ ಸೇವಾ ದಳದ ಕಾರ್ಯಕರ್ತರಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. 

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಪ್ರಸಾದ ವಿತರಣೆಯನ್ನು ಮಾಡಲಾಗುತ್ತದೆ.

ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಸಂಕಷ್ಟ ಚತುರ್ಥಿಯನ್ನು ಸಂಜೆ 4 ಘಂಟೆಯಿಂದ ಆಚರಿಸಲಾಗುತ್ತದೆ. ಯಾವುದೇ ಸೇವಾ ಶುಲ್ಕವಿರುವುದಿಲ್ಲ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಎಸ್.ಎನ್.ಆರ್.ಆಸ್ಪತ್ರೆಯ ಎದುರು ಮತ್ತು ಮಹಿಳಾ ಸಮಾಜದ ಹತ್ತಿರ, ಕೋಲಾರ

ವಿಳಾಸ
ಶ್ರೀ ಸಾಯಿಬಾಬಾ ಮಂದಿರ, 
ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ, 
ಮಹಿಳಾ ಸಮಾಜದ ಹತ್ತಿರ, 
ಹೊಸ ಬಡಾವಣೆ, ಕೋಲಾರ-563 101, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಚಂದ್ರಪ್ಪ / ಶ್ರೀ.ಜಿ.ಪಿ.ಮುನಿಸ್ವಾಮಿ / ಶ್ರೀ.ಗುಪ್ತಾ / ಶ್ರೀ.ಚಿನ್ನಪ್ಪ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+ 91 94480 34621 / +91 98806 56829 / +91 90366 27349

ಮಾರ್ಗಸೂಚಿ:
ಕೋಲಾರ ಬಸ್ ನಿಲ್ದಾಣದಲ್ಲಿ ಇಳಿದು ಹತ್ತು ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಹೊಸ ಬಡಾವಣೆಯ ಎಸ್.ಎನ್.ಆರ್.ಆಸ್ಪತ್ರೆಯ ಎದುರು ಮತ್ತು ಮಹಿಳಾ ಸಮಾಜದ ಹತ್ತಿರ ಇರುತ್ತದೆ

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment