Thursday, August 4, 2011

ಮೈಸೂರಿನಿಂದ ಶಿರಡಿಗೆ ವಿಶೇಷ ರೈಲು ಸಂಚಾರ ಆರಂಭ - 4ನೇ ಆಗಸ್ಟ್ 2011 ಕೃಪೆ: ಸಾಯಿಅಮೃತಧಾರಾ.ಕಾಂ  



ಮೈಸೂರಿನ ಸಾಯಿ ಭಕ್ತರಿಗೆ ಸಿಹಿ ಸುದ್ದಿ!!!!!!! . ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ ಮೈಸೂರು-ಶಿರಡಿ ವಿಶೇಷ ರೈಲು ಸೇವೆ ಕೊನೆಗೂ ಆರಂಭಗೊಂಡಿದೆ. ಇದೇ ತಿಂಗಳ 1ನೇ ಆಗಸ್ಟ್ 2011 , ಸೋಮವಾರದಂದು  ರಂದು ಈ ವಿಶೇಷ ರೈಲು ಸೇವೆ ಆರಂಭಗೊಂಡಿತು. ರೈಲ್ವೇ ಉದ್ಯೋಗಿ ಶ್ರೀಮತಿ.ಎಂ.ಎಸ್.ಅನಿತಾರವರು ಹಸಿರು ನಿಶಾನೆ ತೋರಿಸುವ ಮುಖಾಂತರ ಮೈಸೂರು-ಸಾಯಿನಗರ, ಶಿರಡಿ ಎಕ್ಷ್ ಪ್ರೆಸ್ ರೈಲು ಸಂಚಾರ ಆರಂಭಗೊಂಡಿತು. ಮೈಸೂರು ವಿಭಾಗೀಯ ರೈಲ್ವೇ ಮ್ಯಾನೇಜರ್ ಶ್ರೀ.ಬಿ.ಬಿ.ವರ್ಮ, ಹಿರಿಯ ಕಮರ್ಷಿಯಲ್ ಮ್ಯಾನೇಜರ್ ಡಾ.ಅನುಪ್ ದಯಾನಂದ್ ಸಾಧು, ಸಹಾಯಕ ಕಮರ್ಷಿಯಲ್ ಮ್ಯಾನೇಜರ್ ಶ್ರೀ.ಇಜಾಜ್ ಅಹಮದ್, ಸ್ಟೇಶನ್ ಮ್ಯಾನೇಜರ್ ಶ್ರೀ.ಚಂದ್ರಶೇಖರ ಮೊರ್ತಿ ಮತ್ತಿತರ ಗಣ್ಯರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಮೈಸೂರಿನ ಶ್ರೀ.ಸಾಯಿನಾಥ ಸೇವಾ ಸಂಸ್ಥೆಯ ವತಿಯಿಂದ ರೈಲು ಪ್ರಯಾಣಿಕರಿಗೆ ಹಾಗೂ ನೆರೆದಿದ್ದ ಎಲ್ಲಾ ಸಾಯಿ ಭಕ್ತರಿಗೂ ಸಾಯಿಬಾಬಾರವರ ಆರತಿಯ ಪುಸ್ತಕ ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.



ಹೊಸ ರೈಲನ್ನು ಬಣ್ಣ ಬಣ್ಣದ ಹೂವುಗಳಿಂದ ಶೃಂಗರಿಸಲಾಗಿತ್ತು ಮತ್ತು "ಕಲ್ಲಿನ ಮೇಲೆ ಕುಳಿತ ಸಾಯಿಬಾಬಾ" ರವರ ಎರಡು ಚಿತ್ರಪಟಗಳನ್ನು ಇಂಜಿನ್ ನ ಮೇಲೆ ಲಗತ್ತಿಸಲಾಗಿತ್ತು. 



ಈ ವಿಶೇಷ ರೈಲು ವಾರಕ್ಕೆ ಒಮ್ಮೆ ಮಾತ್ರ ಸಂಚರಿಸಲಿದ್ದು, ರೈಲು ಸಂಖ್ಯೆ 06201 ಮೈಸೂರನ್ನು ಪ್ರತಿ ಸೋಮವಾರ ಬೆಳಿಗ್ಗೆ 9 :50 ಕ್ಕೆ  ಬಿಟ್ಟು ಸಾಯಿನಗರ ಶಿರಡಿಯನ್ನು ಮಂಗಳವಾರ ಮಧ್ಯಾನ್ಹ 2:15 ಕ್ಕೆ ತಲುಪಲಿದೆ.  ಪುನಃ ಅದೇ ದಿನ ಅಂದರೆ ಮಂಗಳವಾರ ರೈಲು ಸಂಖ್ಯೆ 06202 ಸಾಯಿನಗರ ಶಿರಡಿಯನ್ನು ಮಧ್ಯಾನ್ಹ 3:30 ಕ್ಕೆ ಬಿಟ್ಟು  ಬುಧವಾರ ರಾತ್ರಿ 10:55 ಕ್ಕೆ ಮೈಸೂರು ತಲುಪಲಿದೆ. ರೈಲಿನಲ್ಲಿ ಎರಡು ಎಸಿ 2 ಟಯರ್, ಎರಡು ಎಸಿ 3 ಟಯರ್, 11 ಎರಡನೇ ದರ್ಜೆ ಮಲಗುವ ಕೋಚ್ ಗಳು, 3 ಎರಡನೇ ದರ್ಜೆ ಸಾಮಾನ್ಯ ಕೋಚ್ ಗಳು, ಎರಡು ಮಹಿಳೆಯರ ಮತ್ತು ಲಗ್ಗೇಜ್ ಕೋಚ್ ಗಳು ಸೇರಿ ಒಟ್ಟಾರೆ 20 ಕೋಚ್ ಗಳನ್ನು ಹೊಂದಿರುತ್ತದೆ. 



ಎಸಿ 2 ಟಯರ್ ಗೆ 1456 ರುಪಾಯಿಗಳು, ಎಸಿ 3 ಟಯರ್ ಗೆ 1057 ರುಪಾಯಿಗಳು, ಎರಡನೇ ದರ್ಜೆ ಸ್ಲೀಪರ್ ಕೋಚ್ ಗೆ 386 ರುಪಾಯಿಗಳು, ಎರಡನೇ ಸಾಮಾನ್ಯ ದರ್ಜೆಗೆ 206 ರುಪಾಯಿಗಳು ಎಂದು ದರವನ್ನು ನಿಗದಿ ಮಾಡಲಾಗಿದೆ. 



ಈ ವಿಶೇಷ ರೈಲು ಸಂಚಾರವು ಈಗ ಇರುವ ಜನ ಸಂದಣಿಯನ್ನು ಕಡಿಮೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. 

ರೈಲಿನ ನಿಲುಗಡೆ ನಿಲ್ದಾಣಗಳ ಪಟ್ಟಿಯನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment