Thursday, August 18, 2011

ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದ ವತಿಯಿಂದ 24 ಘಂಟೆಗಳ ಅಖಂಡ ಸಾಯಿನಾಮ ಜಪ ಕಾರ್ಯಕ್ರಮ  - ಕೃಪೆ: ಸಾಯಿಅಮೃತಧಾರಾ.ಕಾಂ  

ಬೆಂಗಳೂರಿನ ಜಯನಗರದಲ್ಲಿರುವ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರವು ಇದೇ ತಿಂಗಳ 20 ಮತ್ತು 21ನೇ ಆಗಸ್ಟ್ 2011 ರಂದು 24 ಘಂಟೆಗಳ ಕಾಲ ಅಖಂಡ ಸಾಯಿನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 

ನಾಮಜಪವು 20ನೇ ಆಗಸ್ಟ್ 2011, ಶನಿವಾರ ಬೆಳಿಗ್ಗೆ 8 ಘಂಟೆಗೆ ಆರಂಭವಾಗಿ 21ನೇ ಆಗಸ್ಟ್ 2011, ಭಾನುವಾರ ಬೆಳಿಗ್ಗೆ 8 ಘಂಟೆಗೆ ಮುಕ್ತಾಯಗೊಳ್ಳುತ್ತದೆ. ಅನೇಕ ಪ್ರತಿಷ್ಟಿತ ಸಾಯಿಭಜನ ವೃಂದದವರು ಈ ಕಾರ್ಯಕ್ರಮದಲ್ಲಿ ಭಾಗವಸಲಿದ್ದಾರೆ. ನಾಮಜಪ ಪೂರ್ಣವಾದ ನಂತರ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಸಾಯಿಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.

ಸ್ಥಳ: 
ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ 
ಶ್ರೀ ಸಾಯಿ ಅಮೃತಂ, 3ನೇ ಮಹಡಿ, (ಕೆಫೆ ಕಾಫಿ ಡೇ ಮೇಲೆ)
ನಂ.1481, ಸೌತ್ ಎಂಡ್ "ಬಿ" ಅಡ್ಡರಸ್ತೆ, 28ನೇ ಮುಖ್ಯರಸ್ತೆ, 
9ನೇ ಬ್ಲಾಕ್, ರಾಗಿಗುಡ್ಡ ದೇವಾಲಯದ ಬಳಿ, 
ಜಯನಗರ, ಬೆಂಗಳೂರು-560 069.
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀಮತಿ.ಇಂದು ಮತ್ತು ಶ್ರೀ.ಆರ್.ಸತೀಶ್ 
ದೂರವಾಣಿ ಸಂಖ್ಯೆ: +91 93412 64696 
ಮಾರ್ಗಸೂಚಿ: ಜಯನಗರ ಈಸ್ಟ್ ಎಂಡ್ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ಧ್ಯಾನಮಂದಿರ ಸಿಗುತ್ತದೆ. 

ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಧ್ಯಾನ ಮಂದಿರದ ಕಾರ್ಯಕಾರಿ ಸಮಿತಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment