Monday, August 1, 2011

ಸೂಫಿ ಶೈಲಿಯ ಖ್ಯಾತ ಸಾಯಿ ಭಜನ ಗಾಯಕಿ "ಮಾಡ್ರನ್ ಮೀರಾ" ಪ್ರಶಸ್ತಿ  ವಿಜೇತೆ -  ಸೋನಾ ಜಾಧವ್ - ಕೃಪೆ: ಸಾಯಿಅಮೃತಧಾರಾ.ಕಾಂ  


ಸೋನಾ ಜಾಧವ್ (ಭಾರದ್ವಾಜ್) ರವರು ಮಧ್ಯಪ್ರದೇಶ್ ನ ಇಂದೂರ್ ನ ಖ್ಯಾತ ಸೂಫಿ ಗಾಯಕಿಯಾಗಿದ್ದಾರೆ. ಇವರು ತಮ್ಮ ಎಳೆಯ ವಯಸ್ಸಿನಿಂದಲೇ ಬಹಳ ಕಷ್ಟಗಳನ್ನು ಎದುರಿಸಿ ತಮ್ಮ ಸ್ವಪ್ರಯತ್ನದಿಂದ ಗಾಯನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ "ಮಾಡ್ರನ್ ಮೀರಾ" ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇವರಲ್ಲಿ ಅಪರಿಮಿತವಾದ ಭಕ್ತಿ ಮತ್ತು ಆಧ್ಯಾತ್ಮಿಕದ ಕಡೆಗೆ ಇವರು ತೋರಿದ ಓಲವು ಇವರನ್ನು ಒಬ್ಬ ಒಳ್ಳೆಯ ಗಾಯಕಿಯನ್ನಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದರೆ ತಪ್ಪಾಗಲಾರದು. 

ಇವರು ತಮ್ಮ 11ನೇ ವಯಸ್ಸಿನಿಂದಲೇ ಗಾಯನ ಪಯಣವನ್ನು ಆರಂಭಿಸಿದರು. ಆ ಸಮಯದಲ್ಲಿ ಈ ಎಳೆಯ ವಯಸ್ಸಿನ ಹುಡುಗಿ ಇಷ್ಟು ಎತ್ತರಕ್ಕೆ ಬೆಳೆಯುತ್ತಾಳೆ ಎಂದು ಯಾರು ಊಹಿಸಿರಲಿಲ್ಲ. 

ಸೋನಾ ಜಾಧವ್ ರವರು 21ನೇ ಮೇ 1981 ರಂದು ಮಧ್ಯಪ್ರದೇಶದ ಇಂದೂರಿನಲ್ಲಿ ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಸಿ.ಪಿ.ಜಾಧವ್ ಮತ್ತು ತಾಯಿ ಶ್ರೀಮತಿ.ಮೀನಾ ಜಾಧವ್. ಇವರು 16ನೇ ವಯಸ್ಸಿನಲ್ಲಿರುವಾಗಲೇ ತಮ್ಮ ತಂದೆಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡರು. ಆದರೆ ಈ ದೊಡ್ಡ ಆಘಾತದಿಂದ ಬಹಳ ಬೇಗನೆ ಚೇತರಿಸಿಕೊಂಡು ತಮ್ಮ ಸಂಗೀತ ಸಾಧನೆಯ ಕಡೆ ಹೆಚ್ಚಿನ ಗಮನ ನೀಡಿ ಅತ್ಯುತ್ತಮ ಟಾಪ್ ಟೆನ್ ಗಾಯಕರಲ್ಲಿ ಒಬ್ಬರೆನಿಸಿಕೊಂಡರು. ಅಲ್ಲಿಂದ ಮುಂದೆ ಇವರು ಹಿಂತಿರುಗಿ ನೋಡಿಯೇ ಇಲ್ಲ. 

ಸೋನಾ ಜಾಧವ್ ರವರು ಕಳೆದ 18 ವರ್ಷಗಳಿಂದ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿದ್ದು ಭಾರತದ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಮತ್ತು ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. 

ಸೋನಾ ಜಾಧವ್ ರವರು ಕಾಟೂ ಶ್ಯಾಮ್ ಬಾಬಾವರ ಪರಮ ಭಕ್ತೆ ಕೂಡ ಆಗಿದ್ದು ಜೈ ಮಾತಾ ದೇವಿಯ ಮೇಲೆ ಕೂಡ ಭಜನೆಗಳನ್ನು, ಹಾಡುಗಳನ್ನು ಹಾಡುತ್ತಾರೆ. ಇವರು ಸರಿ ಸುಮಾರು 700ಕ್ಕೂ ಹೆಚ್ಚು ಭಜನ ಕಾರ್ಯಕ್ರಮಗಳನ್ನು ನೀಡಿದ್ದು ಎಲ್ಲೆಡೆ ಜನಪ್ರಿಯರಾಗಿದ್ದಾರೆ. ಮಧ್ಯಪ್ರದೇಶದ ಗೃಹಸಚಿವರ ಹುಟ್ಟುಹಬ್ಬದ ಸಮಾರಂಭದಲ್ಲಿ ಸೋನಾ ನೀಡಿದ ಕಾರ್ಯಕ್ರಮ ನೋಡಿ ಸ್ವತಃ ಗೃಹಸಚಿವರೇ ದಿಗ್ಮೂಢರಾಗಿರುತ್ತಾರೆ. ಇವರು ಚಲನಚಿತ್ರ ಜಗತ್ತಿನ ಪ್ರಸಿದ್ದ ಕಲಾವಿದರಾದ ರಾಜಾ, ಗಾಯಕಿ ರೀಚಾ ಶರ್ಮ, ಸೋನು ನಿಗಮ್, ತೃಪ್ತಿ ಶಕ್ಯಾ, ಅನು ಕಪೂರ್ ಮತ್ತು ಇನ್ನು ಅಲವಾರು ಗಣ್ಯರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. 

ಶ್ಯಾಮ್ ಬಾಬಾ ಭಕ್ತರಾದ ಶ್ರೀ.ನಂದಕಿಶೋರ್ ಶರ್ಮ (ನಂದೂಜಿ)ಯವರು ಗೀತ ರಚನೆಯನ್ನು ಮಾಡಿದ ಮತ್ತು 2007ನೇ ಇಸವಿಯಲ್ಲಿ ಬಿಡುಗಡೆಯಾದ "ರಾಧಾ ಕಾ ಚಿತ್ ಚೋರ್" ಧ್ವನಿಸುರಳಿಯಲ್ಲಿ ಸೋನಾ ಜಾಧವ್ ಹಾಡಿದ ಗೀತೆಗಳು ಎಲ್ಲಾ ಸಂಗೀತ ಪ್ರೇಮಿಗಳ ಮನವನ್ನು ಗೆದ್ದಿವೆ. ಈ ಅಲ್ಬಮ್ ಸೋನಾ ಜಾಧವ್ ರವರನ್ನು ಗಾಯನ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತೆಂದೇ ಹೇಳಬೇಕು. 

ಇದಕ್ಕೆ ಮುಂಚೆ 2004 ರಲ್ಲಿ ಶ್ರೀ.ಕಿರಣ್ ಮಿಶ್ರಾರವರು ರಚಿಸಿ ಸೋನಾ ಜಾಧವ್ ರವರು ಹಾಡಿದ ಅಲ್ಬಮ್ "ಚಲಾ ರೇ ಮನ್ ಗುರು ಶರಣ್ ಮೇ" ಕೂಡ ಎಲ್ಲಾ ಸಂಗೀತ ಪ್ರೇಮಿಗಳ ಮನವನ್ನು ಗೆದ್ದಿವೆ.

ಸಂಗೀತದ ಅಧಿದೇವತೆ ಸರಸ್ವತಿ ದೇವಿಯ ಆಶೀರ್ವಾದದಿಂದ ಸೋನಾ ಜಾಧವ್ ರ ನರ ನಾಡಿಗಳಲ್ಲಿ ಸಂಗೀತವೇ ಹರಿಯುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. 

ಇವರಿಗೆ ಸಂದ ಪ್ರಶಸ್ತಿಗಳು / ಪುರಸ್ಕಾರಗಳು / ಗೌರವಗಳು 

1997 - ಇಂದೂರಿನ ಅಂತರ ಶಾಲಾ ಗಾಯನ ಸ್ಪರ್ಧೆಯಲ್ಲಿ ಮೊದಲ ಬಹುಮಾನ.  

1998 - ಮಾತೇಶ್ವರಿ ಸುಗಣಿ ದೇವಿ ಕನ್ಯಾ ಮಹಾವಿದ್ಯಾಲಯದಲ್ಲಿ ನಡೆದ ಅಂತರ ಕಾಲೇಜು ಗಾಯನ ಸ್ಪರ್ಧೆಯಲ್ಲಿ ಮೊದಲ ಬಹುಮಾನ. 

2001 - ಅಖಿಲ ಭಾರತ ಸಂಗೀತ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸಿ "ಕಲಾ ಅಭಿರುಚಿ" ಪ್ರಶಸ್ತಿಯನ್ನು ಗಿಟ್ಟಿಸಿದ್ದಾರೆ. 

2002 - ಇಂಡಿಯನ್ ಮ್ಯುಸಿಕ್, ಕಲ್ಚರ್ ಅಂಡ್ ಎಜುಕೇಶನ್ ಅಕಾಡೆಮಿ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ. 

2002 - ಗ್ರೇಟ್ ಇಂದೂರ್ ಮಯೊರಿ ನೃತ್ಯ ಪ್ರಶಸ್ತಿ.  

2004 - ಸಾನ್ಸೂಯಿ ಸಂಸ್ಥೆ ಏರ್ಪಡಿಸಿದ್ದ ಮಹಿಳೆಯರ ವಿಶೇಷ ಅಂತ್ಯಾಕ್ಷರಿಯಲ್ಲಿ 3ನೇ ಬಹುಮಾನ. 

2004 - ಖ್ಯಾತ ಗಾಯಕ ಶ್ರೀ.ಅಡ್ನಾನ್ ಸ್ವಾಮಿ ನಡೆಸಿಕೊಟ್ಟ ಎಂಟಿವಿ ಕಾರ್ಯಕ್ರಮ ವಿ ಸೂಪರ್ ಸಿಂಗರ್ ನಲ್ಲಿ ಝೋನಲ್ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದರು. 

2005 - ಪ್ರತಿಷ್ಟಿತ ವಿಶ್ವ ಆಧ್ಯಾತ್ಮಿಕ ಸಂಸ್ಥಾನ ಪ್ರಶಸ್ತಿ ವಿಜೇತೆ. 

2008 - ಮಧ್ಯಪ್ರದೇಶದ ಚರಿತ್ರೆಯಲ್ಲೇ ಮೊದಲ ಬಾರಿಗೆ ನಗಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಟಿತ "ಮೀರಾ ಸಮ್ಮಾನ್" ಪ್ರಶಸ್ತಿಗೆ ಭಾಜನರಾಗಿದ್ದಾರೆ. 

2010 - ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಟಿತ ಶ್ಯಾಮ್ ರತನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಸೋನಾ ಜಾಧವ್ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ವಿಳಾಸ: 
210/3, ನಂದಾ ನಗರ, ಇಂದೂರು- 452 003, ಮಧ್ಯಪ್ರದೇಶ, ಭಾರತ.

ದೂರವಾಣಿ ಸಂಖ್ಯೆಗಳು: 
+91 93015 51931 / + 91 93032 25063 / +91 731 2575097 (ಫ್ಯಾಕ್ಸ್)

ಈ ಮೇಲ್ ವಿಳಾಸ: 
sonakshi_jadhav@yahoo.com,
info@sonajadhav.com,
sonajadhav@sonajadhav.com

ಅಂತರ್ಜಾಲ ತಾಣ: 


ಸಾಯಿಬಾಬಾ ಅಲ್ಬಮ್ ಗಳು: 
ಸಾಯಿ ಕಾ ಸೆಹರಾ - ಆಡಿಯೋ ಸಿಡಿ. 

ಭಜನೆಯ ವೀಡಿಯೋಗಳು: 









ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment