Saturday, August 13, 2011

ಸಾಯಿ ಮಹಾಭಕ್ತ - ಬಾಲಕೃಷ್ಣ ಖಾಪರ್ಡೆ - ಕೃಪೆ: ಸಾಯಿ ಅಮೃತಧಾರಾ.ಕಾಮ್



ಶ್ರೀ.ಬಾಲಕೃಷ್ಣ ಖಾಪರ್ಡೆಯವರು ಆಲಿಯಾಸ್ ಬಾಬಾ ಸಾಹೇಬ್ ರವರು ಪ್ರಖ್ಯಾತ "ಶಿರಡಿ ಡೈರಿ" ಯನ್ನು ರಚಿಸಿದ ಶ್ರೀ.ದಾದಾ ಸಾಹೇಬ್ ಖಾಪರ್ಡೆಯವರ ಪುತ್ರರು. ಈ ಕೆಳಗೆ ನೀಡಿರುವ ಸಾಯಿ ಲೀಲೆಯು ಸಾಯಿಬಾಬಾರವರ ಮಹಾಸಮಾಧಿಯ ನಂತರ ಜರುಗಿತು. ಈ ಸಾಯಿಲೀಲೆಯನ್ನು ಶ್ರೀ.ದಾದಾ ಸಾಹೇಬ್ ಖಾಪರ್ಡೆಯವರ ಮೊಮ್ಮಗ ಶ್ರೀ.ಕೇಶವ ಖಾಪರ್ಡೆಯವರು ತಿಳಿಸಿರುತ್ತಾರೆ.

ಬಾಲಕೃಷ್ಣ ಖಾಪರ್ಡೆಯವರು ಒಮ್ಮೆ ತಮ್ಮ ಕಾರಿನಲ್ಲಿ ಭೂಪಾಲನಿಂದ ಪಾಚಮಾಡಿಗೆ ತೆರಳುತ್ತಿದ್ದರು. ದಾರಿಯು ಬಹಳ ಇಳಿಜಾರಿನಿಂದ ಕೂಡಿತ್ತು ಮತ್ತು ಅಂಕುಡೊಂಕಾಗಿತ್ತು. ದಾರಿಯ ಮತ್ತೊಂದು ಕಡೆಯಲ್ಲಿ ದೂಡ್ಡ ಪ್ರಪಾತ ಇತ್ತು. 

ಇವರಿದ್ದ ಕಾರು ಒಂದು ಡೊಂಕಾದ ತಿರುವಿನಲ್ಲಿ ತಿರುಗುತ್ತಿದ್ದಾಗ ವಿರುದ್ದ ದಿಕ್ಕಿನಿಂದ ಮತ್ತೊಂದು ಕಾರು ರಭಸವಾಗಿ ಬಂದು ಡಿಕ್ಕಿ ಹೊಡೆಯಿತು. ಬಾಲಕೃಷ್ಣ ಖಾಪರ್ಡೆಯವರಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕದಲ್ಲಿದ್ದ ಪ್ರಪಾತಕ್ಕೆ ಉರುಳಿ ಬಿದ್ದಿತು. ಕಾರು ಪ್ರಪಾತಕ್ಕೆ ಬೀಳುತ್ತಿದ್ದ ಸಮಯದಲ್ಲಿ ಬಾಲಕೃಷ್ಣ ಖಾಪರ್ಡೆಯವರು ಸಾಯಿಬಾಬಾರವರನ್ನು ಸಹಾಯ ಮಾಡುವಂತೆ ಪ್ರಾರ್ಥಿಸಿದರು. ಆಗ ಬಾಲಕೃಷ್ಣ ಖಾಪರ್ಡೆಯವರಿಗೆ "ಬಿಳಿಯ ಕಫ್ನಿ" ಯನ್ನು ಧರಿಸಿದ್ದ ಒಬ್ಬ ವ್ಯಕ್ತಿಯು ಕಾರಿನ ಬಾಗಿಲನ್ನು ಅವರ ಕೈನಿಂದ ತೆರೆಯುತ್ತಿದ್ದುದು ಕಾಣಿಸಿತು. ಮರುಕ್ಷಣವೇ ಉರುಳಿ ಬೀಳುತ್ತಿದ್ದ ಇವರುಗಳು ಒಂದು ಬಂಡೆಯ ತುದಿಗೆ ಹೋಗಿ ಬಿದ್ದರು. ಇವರಿದ್ದ ಕಾರು ಉರುಳಿ ಪ್ರಪಾತಕ್ಕೆ ಬಿದ್ದಿತು. ಕಾರಿನಲ್ಲಿದ್ದ  ಬಾಲಕೃಷ್ಣ ಮತ್ತು ಅವರ ಕಾರು ಚಾಲಕನ ಹಣೆಯ ಮೇಲೆ ಸ್ವಲ್ಪವೇ ಗಾಯವಾಯಿತಷ್ಟೇ ಬಿಟ್ಟರೆ ಹೆಚ್ಚಿಗೆ ಪ್ರಾಣಾಪಾಯವಾಗಲಿಲ್ಲ. 

ಕೆಲವು ದಿನಗಳ ನಂತರ ಪ್ರಪಾತಕ್ಕೆ ಉರುಳಿ ಬಿದ್ದ ಆ ಕಾರನ್ನು ಹೊರತೆಗೆದು ನೋಡಲಾಗಿ ಅದು ಸಂಪೂರ್ಣ ಜಖಂಗೊಂಡಿತ್ತು. ಕಾರಿನ ಬಾಗಿಲನ್ನು ಸಮಯಕ್ಕೆ ಸರಿಯಾಗಿ ತೆಗೆದು ಬಾಲಕೃಷ್ಣ ಖಾಪರ್ಡೆ ಮತ್ತು ಅವರ ಕಾರು ಚಾಲಕನ ಪ್ರಾಣವನ್ನು ಕಾಪಾಡಿದ್ದು ಸಾಯಿಬಾಬಾರವರಲ್ಲದೇ ಮತ್ತಿನ್ಯಾರೂ ಅಲ್ಲ ಎಂದು ಬೇರೆ ಹೇಳಬೇಕಿಲ್ಲಾ ಅಲ್ಲವೇ? 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment