Monday, August 1, 2011

ಬಹುಮುಖ  ಪ್ರತಿಭೆಯ ಸಾಯಿ ಭಜನಗಾಯಕಿ  - ಶ್ರೀಮತಿ.ವಸಂತ ವೆಂಕಟೇಶ್  - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀಮತಿ.ವಸಂತ ವೆಂಕಟೇಶ್ ರವರು 3ನೇ ಫೆಬ್ರವರಿ 1966 ರಂದು ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಜನಿಸಿದರು. ಇವರ ತಂದೆಯವರ ಹೆಸರು ಶ್ರೀ.ಬಿ.ವಿ.ರಾಮಣ್ಣ ಮತ್ತು ತಾಯಿಯವರ ಹೆಸರು ಶ್ರೀಮತಿ.ಜಾನಕಮ್ಮ. ಇವರ ತಾಯಿಯವರಾದ ಶ್ರೀಮತಿ.ಜಾನಕಮ್ಮನವರು ಬಹಳ ಒಳ್ಳೆಯ ಶಾಸ್ತ್ರೀಯ ಸಂಗೀತ ವಿದೂಷಿಯಾಗಿದ್ದರು. ಆದುದರಿಂದ, ಶ್ರೀಮತಿ.ವಸಂತ ವೆಂಕಟೇಶ್ ರವರು ಬಾಲ್ಯದಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಗಳ ಬಗ್ಗೆ ಅತೀವ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. 

ಇವರು 2003 ನೇ ಇಸವಿಯಿಂದ ಸಾಯಿ ಭಕ್ತೆಯಾಗಿರುತ್ತಾರೆ. ಅಂದಿನಿಂದ ಇಲ್ಲಿಯವರೆಗೆ ಮೈಸೂರಿನ ತ್ಯಾಗರಾಜ ಸಾಯಿ ಮಂದಿರದಲ್ಲಿ, 2011 ನೇ ಇಸವಿಯ ಗುರುಪೂರ್ಣಿಮೆಯ ಸಂದರ್ಭದಲ್ಲಿ  ರಾಮಕೃಷ್ಣನಗರದ ಶಿರಡಿ ಸಾಯಿ ಶಕ್ತಿ ಸನ್ನಿಧಿ ಮಂದಿರದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ "ಸಾಂಸ್ಕೃತಿಕ ಸೌರಭ" ಕಾರ್ಯಕ್ರಮದಲ್ಲಿ  ಮತ್ತು ಬೆಂಗಳೂರು, ಮೈಸೂರು, ಮಂಡ್ಯ ನಗರದ ಅನೇಕ ಸಾಯಿ ಭಕ್ತರ ಮನೆಗಳಲ್ಲಿ ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. 

ಶ್ರೀಮತಿ.ವಸಂತರವರು ಮದುವೆಯಾದ ನಂತರ ಇವರಿಗೆ ಇವರ ಪತಿ ಶ್ರೀ.ವೆಂಕಟೇಶ್ ರವರಿಂದ ಬಹಳ ಒಳ್ಳೆಯ ಪ್ರೋತ್ಸಾಹ ದೊರೆಯಿತು. ಆದುದರಿಂದ, ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕ, ಪದ್ಯ ಮತ್ತು ಹಾಡುಗಳ ರಚನೆ ಮತ್ತು ಇನ್ನಿತರ ಸಾಹಿತ್ಯ ಮತ್ತು ಲಲಿತ ಕಲೆಗಳ ಪ್ರಾಕಾರಗಳಲ್ಲಿ ಪರಿಣತಿಯನ್ನು ಹೊಂದಲು ಸಹಾಯವಾಯಿತು. 

ಇವರು  ಗಮಕ ವಾಚನವನ್ನು "ಕರ್ನಾಟಕ ಕಲಾಶ್ರೀ" ಪ್ರಶಸ್ತಿ ವಿಜೇತೆ ಮತ್ತು ಖ್ಯಾತ ಗಮಕ ಕಲಾವಿದೆಯಾದ ಶ್ರೀಮತಿ.ನಾಗರತ್ನರವರಿಂದ ಕಲಿತರು. ಶ್ರೀಮತಿ.ನಾಗರತ್ನರವರು ಇವರಿಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೇ ನಿರಂತರವಾಗಿ ಇವರಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. 

ಪ್ರಸ್ತುತ ಇವರು ಮೈಸೂರಿನ ಕುವೆಂಪು ನಗರದ ತಮ್ಮ ಸ್ವಗೃಹದಲ್ಲಿ ಪತಿ ಶ್ರೀ.ವೆಂಕಟೇಶ್ ಮತ್ತು ಮಗನೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. ಇವರ ಮನೆಯ ಎಲ್ಲಾ ಸದಸ್ಯರು ಕೂಡ ಅನನ್ಯ ಸಾಯಿ ಭಕ್ತರಾಗಿರುತ್ತಾರೆ. 

ಶ್ರೀಮತಿ.ವಸಂತ ವೆಂಕಟೇಶ್ ರವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ಇವರ ಶೈಕ್ಷಣಿಕ ಸಾಧನೆ: 

ಕಲಾ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿರುತ್ತಾರೆ. 
ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ - ಪ್ರಥಮ ದರ್ಜೆ 
ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ -  ಡಿಸ್ಟಿನ್ಕ್ಶನ್
ಗಮಕ ಪ್ರಥಮ ಪರೀಕ್ಷೆ - ಪ್ರಥಮ ದರ್ಜೆ 
ಗಮಕ ಪರೀಣ ಪರೀಕ್ಷೆ - ಕರ್ನಾಟಕ ರಾಜ್ಯದಲ್ಲಿ 4ನೇ ಸ್ಥಾನ. 
ಗಮಕ ಕಲಾ ಪರಿಷತ್ ನಡೆಸಿದ ದೇವರನಾಮ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ.
ಸಂಸ್ಕೃತ ಕಾವ್ಯ ಮತ್ತು ಸಾಹಿತ್ಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ. 

ಇವರ ಹವ್ಯಾಸಗಳು: 

ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕ, ದೇವರನಾಮ ಹಾಗೂ ಭಾವಗೀತೆಗಳ ಕಾರ್ಯಕ್ರಮವನ್ನು ನೀಡುವುದು.
ಶಿರಡಿ ಸಾಯಿಬಾಬಾರವರ ಮೇಲೆ ಪದ್ಯಗಳನ್ನು, ಹಾಡುಗಳನ್ನು ರಚಿಸುವುದು ಮತ್ತು ಸಂಗೀತ ಸಂಯೋಜನೆ ಮಾಡುವುದು.
ಮೈಸೂರಿನ ಅನೇಕ ಸಾಂಸ್ಕೃತಿಕ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು.
ಮೈಸೂರಿನ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ, ಗಮಕ ಮತ್ತು ದೇವರನಾಮಗಳನ್ನು ಹೇಳಿಕೊಡುವುದು.
ಆಕಾಶವಾಣಿಯ ಕಲಾವಿದೆಯಾಗಿ ಕಳೆದ 13 ವರ್ಷಗಳಿಂದ ಸತತವಾಗಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಇವರು ನೀಡಿರುವ ಕಾರ್ಯಕ್ರಮಗಳು:

ಶಾಸ್ತ್ರೀಯ ಸಂಗೀತ, ಗಮಕ, ಗೀತ ರೂಪಕ, ದೇವರನಾಮ, ಭಾವಗೀತೆ, ಸಾಯಿ ಭಜನೆಯ ಕಾರ್ಯಕ್ರಮಗಳನ್ನು  ಬೆಂಗಳೂರು, ಮೈಸೂರು, ಹಾಸನ, ತುಮಕೂರಿನ ಅನೇಕ ದೇವಾಲಯಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ನಿರಂತರವಾಗಿ ನೀಡುತ್ತಾ ಬಂದಿದ್ದಾರೆ.

ಮೈಸೂರು ಆಕಾಶವಾಣಿಯಲ್ಲಿ ನಿರಂತರವಾಗಿ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮತ್ತು ರಾಮಾಯಣ ದರ್ಶನಂ ನ ಮೇಲೆ ಗಮಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಕಳೆದ 15 ವರ್ಷಗಳಿಂದ ಸತತವಾಗಿ ಭಾವಗೀತೆ, ದೇವರನಾಮ ಮತ್ತು ಗಮಕ ವಾಚನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಸಂಪ್ರದಾಯ ಗೀತೆಗಳ ಮೇಲೆ ಹೊರತಂದ "ಗಾನ ಗುಂಗುರುಳು" ಕನ್ನಡ ಧ್ವನಿಸುರಳಿಯಲ್ಲಿ ಹಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಮಕ ವಾಚನ ಮಾಡಿರುತ್ತಾರೆ.

ಶ್ರೀ.ಕುವೆಂಪು ವಿದ್ಯಾ ಪರಿಷತ್, ಮೈಸೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತ ಮತ್ತು ರಾಮಾಯಣ ದರ್ಶನಂ ನ ಮೇಲೆ ಗಮಕ ಕಾರ್ಯಕ್ರಮ ನೀಡಿದ್ದಾರೆ.

ತಲಕಾಡಿನಲ್ಲಿ ಜೈಮಿನಿ ಭಾರತದ ಮೇಲೆ ಗಮಕ ಕಾರ್ಯಕ್ರಮ ನೀಡಿದ್ದಾರೆ.

ಮೈಸೂರಿನ ಜಗನ್ ಮೋಹನ ಅರಮನೆಯಲ್ಲಿ 2008 ನೇ ಇಸವಿಯಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಕುಮಾರವ್ಯಾಸ ಭಾರತದ ಮೇಲೆ ಗಮಕ ಕಾರ್ಯಕ್ರಮ ನೀಡಿದ್ದಾರೆ.

ಮೈಸೂರಿನ ಕಾವ್ಯರಂಜಿನಿ ಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಮಕ ವಾಚನ ಮಾಡಿರುತ್ತಾರೆ.

ಮೈಸೂರಿನ ಪ್ರಸಿದ್ಧ ಪರಂಪರೆ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈಮಿನಿ ಭಾರತ, ಪಂಪನ ಆದಿಪುರಾಣ ಮತ್ತು ವೈರಾಗ್ಯ ಶತಕ ಮತ್ತು ಇತರ ಕಾವ್ಯಗಳ  ಮೇಲೆ ಗಮಕ ಕಾರ್ಯಕ್ರಮ ನೀಡಿ ನೆರೆದಿದ್ದ ಸಭಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉದಯ ಟಿವಿ ಮತ್ತು ದೂರದರ್ಶನ ಚಂದನದಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಮೈಸೂರಿನ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆ 2008 ನೇ ಇಸವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತತವಾಗಿ ಶ್ರಾವಣ ಮಾಸದ ಒಂದು ತಿಂಗಳು ಪೂರ್ತಿ ಗಮಕ ವಾಚನ ಕಾರ್ಯಕ್ರಮ ನೀಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ 2008 ನೇ ಇಸವಿಯಲ್ಲಿ ರಂಗಾಯಣದ ಬಹುರೂಪಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಮಕ ವಾಚನ ಮಾಡಿರುತ್ತಾರೆ.

ಗದುಗಿನ ಶ್ರೀ.ವೀರನಾರಾಯಣ ದೇವಾಲಯದಲ್ಲಿ 10ನೇ ಜನವರಿ 2009 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಮಾರ ವ್ಯಾಸ ಭಾರತದ ಬಗ್ಗೆ ಗಮಕ ವಾಚನ ಮಾಡಿರುತ್ತಾರೆ.

ಮೈಸೂರು ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮ ಹಾಗೂ ಸಂದರ್ಶನಗಳನ್ನು ನೀಡಿರುತ್ತಾರೆ.

ಕರ್ನಾಟಕದ ಪ್ರತಿಷ್ಟಿತ ದಿನ ಪತ್ರಿಕೆಗಳಲ್ಲಿ ಶ್ರೀಮತಿ.ವಸಂತ ವೆಂಕಟೇಶ್ ರವರ ಲೇಖನಗಳು ಪ್ರಕಟವಾಗಿರುತ್ತವೆ.

ಇವರು ಪಡೆದ ಪ್ರಶಸ್ತಿಗಳು / ಪುರಸ್ಕಾರಗಳು:

ಇಲ್ಲಿಯವರೆಗೂ ಗಮಕ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಪದ್ಯ ರಚನೆ, ಹನಿಗವನ ರಚನೆ ಮತ್ತು ಆಶುಭಾಷಣ ಸ್ಪರ್ಧೆಗಳಲ್ಲಿ  ಸರಿ ಸುಮಾರು 800 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಹೆಗ್ಗಳಿಕೆ ಇವರದು.

ಗದುಗಿನ ಶ್ರೀ.ವೀರನಾರಾಯಣ ದೇವಾಲಯದ ವತಿಯಿಂದ ಪ್ರತಿಷ್ಟಿತ ಕುಮಾರ ವ್ಯಾಸ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

ಭಾರತೀಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಆದರ್ಶ ಗೃಹಿಣಿ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ ಪ್ರತಿಷ್ಟಿತ ಬೇಂದ್ರೆ ಕಾವ್ಯ ಪುರಸ್ಕಾರ.

ಮೈಸೂರಿನ ಸ್ತ್ರೀ ಶಕ್ತಿ ಮಹಿಳಾ ಪ್ರತಿಷ್ಠಾನ ನಡೆಸಿದ ಕಾರ್ಯಕ್ರಮಗಳಲ್ಲಿ ಎರಡು ಬಾರಿ 40 ಪ್ರಶಸ್ತಿಗಳನ್ನು ಗಳಿಸಿದ್ದಕ್ಕೆ ವಿಶೇಷ ಬೋನಸ್ ಪ್ರಶಸ್ತಿಯ ಕೊಡುಗೆ.

ಕುವೆಂಪು ವಿದ್ಯಾ ಪರಿಷತ್ ಆಯೋಜಿದ್ದ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತಮತ್ತು ರಾಮಾಯಣ ದರ್ಶನಂ ನ ಮೇಲೆ ಗಮಕ ಕಾರ್ಯಕ್ರಮ ನೀಡಿದ್ದಕ್ಕೆ ಪ್ರಥಮ ಬಹುಮಾನ ಗಳಿಸಿರುತ್ತಾರೆ.

ಮೈಸೂರಿನ ಜೆ.ಎಸ್.ಎಸ್.ಸಂಸ್ಥೆಯಿಂದ ವಿಶೇಷ ಪುರಸ್ಕಾರ ಗಳಿಸಿರುತ್ತಾರೆ.

ಬಡಗನಾಡು ಬಳಗದ ವತಿಯಿಂದ ವಿಶೇಷ ಪುರಸ್ಕಾರ ಗಳಿಸಿರುತ್ತಾರೆ.

ಶ್ರೀ ವಾಸವಿ ಸಂಸ್ಥೆಯ ವತಿಯಿಂದ ವಿಶೇಷ ಗೌರವ ಪುರಸ್ಕಾರ ಗಳಿಸಿರುತ್ತಾರೆ.

ಮೈಸೂರಿನ ನಾದ ಲೀಲಾ ಸಂಸ್ಥೆಯಿಂದ ಪ್ರತಿಷ್ಟಿತ ಗಾನ ಮಾಧುರಿ ಪ್ರಶಸ್ತಿಯನ್ನು ಗಳಿಸಿರುತ್ತಾರೆ.


ಶ್ರೀಮತಿ.ವಸಂತ ವೆಂಕಟೇಶ್ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ: 

ನಂ.171, “ಪಾವನಿ”, 10ನೇ ಅಡ್ಡರಸ್ತೆ, “ಎಂ” ಬ್ಲಾಕ್, ಕುವೆಂಪು ನಗರ, ಮೈಸೂರು-570 023.

ದೂರವಾಣಿ ಸಂಖ್ಯೆಗಳು: 

+91 821 2463950 / +91 99861 97263 / +91 92427 37766



ಈ ಮೇಲ್ ವಿಳಾಸ: 
venkateshmysore.ms@gmail.com


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment