Tuesday, August 2, 2011

ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರ  -  ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ಭಗವತಿ ಸಾಯಿ ಸಂಸ್ಥಾನ (ನೋಂದಣಿ) ಮತ್ತು ಶ್ರೀ.ಸಾಯಿ ನಾರಾಯಣ ಬಾಬಾ ಆಶ್ರಮ, ಪ್ಲಾಟ್ ನಂ.400/1, ಶ್ರೀ ಸಾಯಿ ಬಾಬಾ ಮಂದಿರ ರಸ್ತೆ,  ಪನ್ವೇಲ್ -410 206, ರಾಯಘಡ ಜಿಲ್ಲೆ, ಮಹಾರಾಷ್ಟ್ರ, ಭಾರತ.

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿರುವ ಪನ್ವೇಲ್ ನ ರೈಲ್ವೇ ನಿಲ್ದಾಣದ ಹತ್ತಿರವಿರುವ ಶ್ರೀ ಸಾಯಿಬಾಬಾ ಮಂದಿರ ರಸ್ತೆಯಲ್ಲಿ ಇರುತ್ತದೆ. 


ಈ ದೇವಾಲಯದ ಉದ್ಘಾಟನೆಯನ್ನು ಭಗವತಿ ಸಾಯಿ ಸಂಸ್ಥಾನ (ನೋಂದಣಿ) ಮತ್ತು ಶ್ರೀ.ಸಾಯಿ ನಾರಾಯಣ ಬಾಬಾ ಆಶ್ರಮದ ಸಂಸ್ಥಾಪಕ ಶ್ರೀ.ಸಾಯಿ ನಾರಾಯಣ ಬಾಬಾರವರು 1ನೇ ಜನವರಿ 1985 ರಂದು ನೆರವೇರಿಸಿದರು. 


ಮುಖ್ಯ ದೇವಾಲಯದಲ್ಲಿ 5.5 ಅಡಿ ಎತ್ತರದ ಪಂಚಲೋಹದ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ದೊಡ್ಡ ವಿಗ್ರಹದ ಮುಂಭಾಗದಲ್ಲಿ 2 ಅಡಿ ಎತ್ತರದ ಕಲ್ಚರ್ಡ್ ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಮೃತ ಶಿಲೆಯ ದುರ್ಗಾ ದೇವಿಯ ವಿಗ್ರಹ, ಕಪ್ಪು ಶಿಲೆಯ ಶಿವಲಿಂಗವನ್ನು ಸಾಯಿಬಾಬಾ ವಿಗ್ರಹದ ಎರಡೂ ಬದಿಗಳಲ್ಲಿ ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಪುಟ್ಟ ಪಂಚಲೋಹದ ಸಾಯಿಬಾಬಾರವರ ವಿಗ್ರಹ ಮತ್ತು ಅದರ ಎದುರುಗಡೆ ಇರುವಂತೆ ಸ್ಥಾಪಿಸಿರುವ ಅಮೃತ ಶಿಲೆಯ ಪಾದುಕೆಗಳನ್ನು ನೋಡಬಹುದಾಗಿದೆ. 






ದೇವಾಲಯದ ಒಳ ಗೋಡೆಗಳ ಮೇಲೆ ಶ್ರೀ.ಸಾಯಿ ನಾರಾಯಣ ಬಾಬಾ ಮತ್ತು ಭಿಕ್ಷೆಗೆ ಹೋಗುತ್ತಿರುವ ಸಾಯಿಬಾಬಾರವರ ಚಿತ್ರಪಟಗಳನ್ನು ತೂಗುಹಾಕಲಾಗಿದೆ. ಮುಖ್ಯ ದೇವಾಲಯದ ಹೊರಗಡೆ ಶ್ರೀ.ಸಾಯಿ ನಾರಾಯಣ ಬಾಬಾರವರು ಉಪಯೋಗಿಸುತ್ತಿದ್ದ ಸ್ಕೂಟರ್ ನ್ನು ಭಕ್ತರ ವೀಕ್ಷಣೆಗೆ ಇರಿಸಲಾಗಿದೆ. 






ಮುಖ್ಯ ದೇವಾಲಯದ ಹಿಂಭಾಗದಲ್ಲಿ 27 ಅಡಿ ಎತ್ತರದ ಫೈಬರ್ ನಿಂದ ಮಾಡಿರುವ ಭಿಕ್ಷೆಗೆ ಹೋಗುತ್ತಿರುವ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹದ ಎದುರುಗಡೆಯ ಸ್ಥಳದಲ್ಲಿ ಮತ್ತು ಉಚಿತ ವೈದ್ಯಕೀಯ ತಪಾಸಣಾ ಕೊಟಡಿಯ ಪಕ್ಕದಲ್ಲಿ 12 ಅಡಿ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗಿದೆ. 




ಮುಖ್ಯ ದೇವಾಲಯದ ಹಿಂಭಾಗದಲ್ಲಿ 20ನೇ ಫೆಬ್ರವರಿ  2004 ರಂದು ಶ್ರೀ.ಸಾಯಿ ನಾರಾಯಣ ಬಾಬಾರವರು ಉದ್ಘಾಟನೆ ಮಾಡಿದ ಶ್ರೀ.ಸಾಯಿ ಮಾತಾ ಕುಟೀರವನ್ನು ನೋಡಬಹುದು. ಇದರ ಒಳಗಡೆ 5.5 ಅಡಿ ಎತ್ತರದ ಸಾಯಿಬಾಬಾರವರ ಎರಡು ಅಮೃತ ಶಿಲೆಯ ವಿಗ್ರಹಗಳು, ನಿಂತುಕೊಂಡಿರುವ ಸಾಯಿಬಾಬಾರವರ ಫೈಬರ್ ವಿಗ್ರಹ, ಸಾಯಿಬಾಬಾ ಮತ್ತು ಶ್ರೀ ಸಾಯಿ ನಾರಾಯಣ ಬಾಬಾರವರ ಚಿತ್ರಪಟಗಳನ್ನು ಕಾಣಬಹುದು. ಅಲ್ಲದೆ, ಈ ಸ್ಥಳದಲ್ಲಿ ಒಂದು ಹೋಮಕುಂಡವನ್ನು ಸ್ಥಾಪಿಸಲಾಗಿದ್ದು ಇದನ್ನು ವಿಶೇಷ ಉತ್ಸವದ ದಿನಗಳಲ್ಲಿ ಮಾತ್ರ ಹೋಮವನ್ನು ಮಾಡಲು ಬಳಸಲಾಗುತ್ತಿದೆ. 



ಶ್ರೀ.ಸಾಯಿ ಮಾತಾ ಕುಟೀರದ ಪಕ್ಕದಲ್ಲಿರುವ ಟ್ರಸ್ಟ್ ನ ಕ್ಯಾಂಟೀನ್ ನ ಒಳಗಡೆ 5.5 ಅಡಿ ಎತ್ತರದ ಫೈಬರ್ ನಿಂದ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಕಾಣಬಹುದು. ಅಲ್ಲದೇ, ನಾರಾಯಣ ಬಾಬಾರವರ ಬದುಕಿನ ವಿವಿಧ ಸ್ತರಗಳನ್ನು ಬಿಂಬಿಸುವ ಚಿತ್ರಗಳನ್ನು ಕೂಡ ಸಾಯಿ ಭಕ್ತರು ನೋಡಬಹುದು.



ಅಮೇರಿಕದ ಭಕ್ತ ಶ್ರೀ.ವಿಲ್ಲಿಯಮ್ ಸನಿಯವರು ಹೊಸದಾಗಿ ಸಂಪೂರ್ಣವಾಗಿ ನವೀಕರಿಸಿರುವ ಮತ್ತು 15ನೇ ಜುಲೈ 2011 ರ ಗುರುಪೂರ್ಣಿಮೆಯಂದು ಶ್ರೀ.ಸಾಯಿ ನಾರಾಯಣ ಬಾಬಾರವರು ಉದ್ಘಾಟಿಸಿರುವ ಶ್ರೀ.ಸಾಯಿ ನಾರಾಯಣ ಬಾಬಾ ಚಾರಿಟಬಲ್  ಡಿಸ್ಪೆನ್ಸರಿಯು ಕ್ಯಾಂಟೀನ್ ನ ಪಕ್ಕದಲ್ಲಿದ್ದು ಈ ಸ್ಥಳದಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಮತ್ತು ಔಷಧಗಳನ್ನೂ ನೀಡಲಾಗುತ್ತಿದೆ. 



ಶ್ರೀ.ಸಾಯಿ ಕೃಷ್ಣ (ಮುದ್ದಿನ ನಾಯಿ), ಸಾಯಿ ಟೈಗರ್ ಬಾಬಾ (ಮುದ್ದಿನ ನಾಯಿ), ಸ್ವಾಮಿ ಕರುಣಾನಂದ ಮಹಾರಾಜ್ (ಶ್ರೀ ಸಾಯಿ ನಾರಾಯಣ ಬಾಬಾರವರ ತಂದೆ ಮತ್ತು ಅಧ್ಯಾತ್ಮಿಕ ಗುರುಗಳು), ಶ್ರೀ ಸಾಯಿ ಪಾಂಡು ಬಾಬಾ (ಮುದ್ದಿನ ನಾಯಿ), ಶ್ರೀಮತಿ.ಲೀಲಾವತಿ ಮಾತಾ (ಶ್ರೀ ಸಾಯಿ ನಾರಾಯಣ ಬಾಬಾರವರ ಶಿಷ್ಯೆ) ರವರುಗಳ 5 ಸಮಾಧಿಗಳನ್ನು 27 ಅಡಿ ಫೈಬರ್ ಸಾಯಿಬಾಬಾ ಭಿಕ್ಷೆಗೆ ಹೋಗುತ್ತಿರುವ ವಿಗ್ರಹದ ಪಕ್ಕದ ಸ್ಥಳದಲ್ಲಿ ಮಾಡಲಾಗಿದೆ. 






ಐದು ಸಮಾಧಿಗಳ ಎದುರುಗಡೆ ಇರುವಂತೆ ಮತ್ತೊಂದು ಹೋಮ ಸ್ಥಳವನ್ನು ಸ್ಥಾಪಿಸಲಾಗಿದ್ದು ಇಲ್ಲಿ ಪ್ರತಿನಿತ್ಯ ಹೋಮ ಹವನ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. 


ಕ್ಯಾಂಟೀನ್ ನ ಹಿಂಭಾಗದ ಸ್ಥಳದಲ್ಲಿ ಅತ್ಯಾಧುನಿಕ ಗೋಶಾಲೆಯನ್ನು ಶ್ರೀಮತಿ.ವಿಮಲಾ ಮತ್ತು ಶ್ರೀ.ಗುರುಭಕ್ಷ ದೌಲತಾನಿ ದಂಪತಿಗಳು ನಿರ್ಮಿಸಿ ದಾನವಾಗಿ ನೀಡಿದ್ದು ಅದನ್ನು 20ನೇ ಫೆಬ್ರವರಿ 2009 ರಂದು ಶ್ರೀ.ಸಾಯಿ ನಾರಾಯಣ ಬಾಬಾ ರವರು ಉದ್ಘಾಟಿಸಿರುತ್ತಾರೆ. ಇಲ್ಲಿನ ಹಸುಗಳು ನೀಡುವ ಹಾಲನ್ನು ಪನ್ವೇಲ್ ನಲ್ಲಿರುವ ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ. 


ಗೋಶಾಲೆಯ ಎದುರುಗಡೆ ಇರುವಂತೆ ಚಿತ್ತಾಕರ್ಷಕ ಉದ್ಯಾನವನವನ್ನು ನಿರ್ಮಿಸಲಾಗಿದೆ ಮತ್ತು ಇದನ್ನು ಬಹಳ ಮುತುವರ್ಜಿ ವಹಿಸಿ ದೇವಾಲಯದ ಟ್ರಸ್ಟ್  ನೋಡಿಕೊಳ್ಳುತ್ತಿದೆ. 


ದೇವಾಲಯವು ಪ್ರತಿದಿನ ಬೆಳಿಗ್ಗೆ ಭೂಪಾಲಿ ಮತ್ತು ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:15 ಕ್ಕೆ  ಶೇಜಾರತಿಯಾದ ನಂತರ ಮುಚ್ಚುತ್ತದೆ. 

ಮಂದಿರದ ಕಾರ್ಯಚಟುವಟಿಕೆಗಳು:


ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ
ಬೆಳಿಗ್ಗೆ : 3:15 ರಿಂದ 12:00 ಘಂಟೆಯವರೆಗೆ.
ಸಂಜೆ: 4:30 ರಿಂದ 8:30 ರವರೆಗೆ.

ದೇವಾಲಯದ ದಿನನಿತ್ಯದ ಕಾರ್ಯಕ್ರಮಗಳು 
ಬೆಳಿಗ್ಗೆ 3:15  - ಭೂಪಾಲಿ ಮತ್ತು ಕಾಕಡಾ ಆರತಿ 
ಬೆಳಿಗ್ಗೆ 4:30 -  ಮಹಾ ಅಭಿಷೇಕ. 
ಬೆಳಿಗ್ಗೆ 6:00 - ಆರತಿ ಮತ್ತು ಮಂತ್ರ ಪುಷ್ಪಾಂಜಲಿ. 
ಬೆಳಿಗ್ಗೆ 11:30 - ಮಧ್ಯಾನ್ಹ ಆರತಿ. 
ಸಂಜೆ 4:30  - ಭಜನೆಗಳು ಮತ್ತು ಶ್ರೀ.ಸಾಯಿ ಮಹಿಮಾ 
ಸಂಜೆ 6:15 -  ಧೂಪಾರತಿ. 
ರಾತ್ರಿ 8:15 - ಶೇಜಾರತಿ  

ವಿಶೇಷ ಉತ್ಸವದ ದಿನಗಳು: 

1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 1ನೇ ಜನವರಿಯಂದು.
2. ಪ್ರತಿ ವರ್ಷದ 20ನೇ ಫೆಬ್ರವರಿ ಶ್ರೀ.ಸಾಯಿ ನಾರಾಯಣ ಬಾಬಾರವರ ಹುಟ್ಟುಹಬ್ಬದ ಆಚರಣೆ. 
3. ಗುರುಪೂರ್ಣಿಮೆ. 
4. ಶ್ರೀಕೃಷ್ಣ ಜನ್ಮಾಷ್ಟಮಿ. 
5. ವಿಜಯದಶಮಿ. 
6. ದೀಪಾವಳಿ. 
7. ನವ ಚಂಡಿ ಯಜ್ಞ ಪ್ರತಿ ವರ್ಷದ 23ನೇ ಡಿಸೆಂಬರ್ ರಂದು. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಶ್ರೀ ಸಾಯಿಬಾಬಾ ಮಂದಿರ ರಸ್ತೆ, ರೈಲ್ವೇ ನಿಲ್ದಾಣದ ಹತ್ತಿರ, ಪನ್ವೇಲ್. 

ವಿಳಾಸ: 
ಶ್ರೀ.ಶಿರಡಿ ಸಾಯಿಬಾಬಾ ಮಂದಿರ,
ಭಗವತಿ ಸಾಯಿ ಸಂಸ್ಥಾನ (ನೋಂದಣಿ) ಮತ್ತು ಶ್ರೀ.ಸಾಯಿ ನಾರಾಯಣ ಬಾಬಾ ಆಶ್ರಮ, 
ಪ್ಲಾಟ್ ನಂ.400/1, ಶ್ರೀ ಸಾಯಿಬಾಬಾ ಮಂದಿರ ರಸ್ತೆ, ಪನ್ವೇಲ್ -410 206, 
ರಾಯಘಡ ಜಿಲ್ಲೆ, ಮಹಾರಾಷ್ಟ್ರ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಮನೋಹರ ಚಂದ್ರ /ಶ್ರೀ.ಅನಂತ ಅಯ್ಯರ್ (ಶ್ರೀ.ಸಾಯಿ ನಾರಾಯಣ ಬಾಬಾರವರ ಸಹೋದರ)

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 22 2745 1001 / +91 22 2745 3333 / +91 98202 60903 (ಶ್ರೀ.ಮನೋಹರ  ಚಂದ್ರ) / +91 22 2745 3331 (ಫ್ಯಾಕ್ಸ್)

ಈ ಮೇಲ್ ವಿಳಾಸ: 


ಅಂತರ್ಜಾಲ ತಾಣ: 


ಮಾರ್ಗಸೂಚಿ: 
ಪನ್ವೇಲ್ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಪನ್ವೇಲ್ ರೈಲ್ವೇ ನಿಲ್ದಾಣದಿಂದ 5 ನಿಮಿಷದ ನಡಿಗೆಯ ಅಂತರದಲ್ಲಿ ಇರುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment