Friday, November 5, 2010

ಸಾಯಿ ಮಹಾಭಕ್ತ - ಬಾವು ಮಹಾರಾಜ ಕುಂಬಾರ - ಕೃಪೆ: ಸಾಯಿಅಮೃತಧಾರಾ.ಕಾಂ


ಬಾವು ಮಹಾರಾಜ ಕುಂಬಾರ

ಬಾವು ಮಹಾರಾಜ ಕುಂಬಾರ್ ರವರು ಸಾಯಿಯವರು ಹೆಚ್ಚಾಗಿ ಪ್ರೀತಿಸುತ್ತಿದ್ದ ಮಹಾಭಕ್ತರಲ್ಲಿ ಪ್ರಮುಖರು. ಇವರು ಸಾಯಿಯವರ ಕೊನೆಯ ದಿನಗಳಲ್ಲಿ ಅಂದರೆ 2 - 3 ವರ್ಷಗಳಿರುವಾಗ ಸಾಯಿಬಾಬಾರವರ ಬಳಿಗೆ ಬಂದರು. ಇವರ ಬಗ್ಗೆ ಶಿರಡಿಯ ಜನಗಳಿಗೆ ಬಹಳ ಒಳ್ಳೆಯ ಅಭಿಪ್ರಾಯವಿತ್ತು. ಅನೇಕ ಜನರು ಇವರನ್ನು ಅವಧೂತರೆಂದು ಗೌರವಿಸುತ್ತಿದ್ದರು. ಇವರು ಸದಾ ಮೌನವಾಗಿರುತ್ತಿದ್ದರು. ಆದರೆ ಇವರು ಎಲ್ಲಾ ಜನಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ ತೋರಿಸುತ್ತಿದ್ದ ಅಪಾರವಾದ ಪ್ರೇಮ, ಮಮತೆ ಮತ್ತು ಸದಾ ಹಸನ್ಮುಖ ವ್ಯಕ್ತಿತ್ವ, ಶಿರಡಿಯ ಎಲ್ಲಾ ಜನರು ಇವರನ್ನು ಇಷ್ಟ ಪಡುವಂತೆ ಮಾಡಿತ್ತು. ಬಾವು ಮಹಾರಾಜ ಕುಂಬಾರ್ ರವರು ಶಿರಡಿಯ ಬೀದಿಗಳನ್ನು ಗುಡಿಸುತ್ತಿದ್ದರು ಮತ್ತು ತಮ್ಮ ಬಳಿಯಲ್ಲಿದ್ದ ಹಣವನ್ನು ಬೇರೆಯವರಿಗೋಸ್ಕರ ಖರ್ಚು ಮಾಡುತ್ತಿದ್ದರು. ಇವರು ಕೇವಲ ಕೌಪೀನವನ್ನು ಧರಿಸುತ್ತಿದ್ದರು. ಯಾರಾದರೂ ಇವರಿಗೆ ಹಾಕಿಕೊಳ್ಳಲು ಬಟ್ಟೆಗಳನ್ನು ನೀಡಿದರೆ ಇವರು ಅದನ್ನು ಮರದ ನೆರಳಿನಲ್ಲಿ ಆಶ್ರಯ ಪಡೆಯಲು ಬರುವ ಪ್ರಾಣಿಗಳಿಗೆ ನೆರಳಾಗಿರಲೆಂದು ಮರದ ಕೊಂಬೆಗಳ ಮೇಲೆ ತೂಗು ಹಾಕುತ್ತಿದ್ದರು. ಹಾಗೆಯೇ ಯಾರಾದರೂ ಇವರಿಗೆ ತಿನ್ನಲು ಆಹಾರವನ್ನು ನೀಡಿದರೆ ಅದನ್ನು ಬೇರೆಯವರಿಗೆ ಕೊಟ್ಟುಬಿಡುತ್ತಿದ್ದರು.

ಬಾವು ಮಹಾರಾಜ ಕುಂಬಾರ್ ರವರ ಸಮಾಧಿ

ಬಾವು ಮಹಾರಾಜ್ ಕುಂಬಾರ್ ರ ಸಮಾಧಿ

 
ಇವರ ಸಮಾಧಿಯು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಾಂಗಣದಲ್ಲಿ ನಾನಾವಲ್ಲಿಯವರ ಸಮಾಧಿಯ ಪಕ್ಕದಲ್ಲಿದೆ. ಇವರು 27ನೇ ಏಪ್ರಿಲ್ 1938 ರಲ್ಲಿ ಸಮಾಧಿ ಹೊಂದಿದರು. ಇಂದಿಗೂ ಇವರ ಭಕ್ತರು ಚೈತ್ರಮಾಸದಲ್ಲಿ ಇವರ ಪುಣ್ಯತಿಥಿಯನ್ನು ಆಚರಿಸಿ ಅನ್ನದಾನ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ.  ಆಲ್ಲದೇ ಇವರ ಸಮಾಧಿಯ ಬಳಿಯ ಮಣ್ಣನ್ನು ತೆಗೆದುಕೊಂಡು ಅದನ್ನು ಹರಳೆಣ್ಣೆಯಲ್ಲಿ ಬೆರೆಸಿ ತಮ್ಮ ಮಕ್ಕಳಿಗೆ ಗುಣವಾಗಲೆಂದು ನೀಡುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment