Thursday, November 11, 2010

ಸಾಯಿ ಭಜನ ಗಾಯಕಿ - ಶ್ರೀಮತಿ. ಬಿ.ಆರ್.ಛಾಯ - ಕೃಪೆ : ಸಾಯಿಅಮೃತಧಾರಾ.ಕಾಂ

ಗಾಯಕಿ ಬಿ.ಆರ್.ಛಾಯ 

ಗಾಯಕಿಯ ಬಗ್ಗೆ :

"ಕರ್ನಾಟಕದ ಕೋಗಿಲೆ" ಎಂದೇ ಹೆಸರಾದ ಶ್ರೀಮತಿ.ಬಿ.ಆರ್ ಛಾಯರವರದು ಬಾಲ ಪ್ರತಿಭೆ. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದವರು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಶ್ರೀ.ಇಳಯರಾಜರವರಾದರೂ ಕೂಡ ಇವರು ಸಂಗೀತ ನಿರ್ದೇಶಕ "ಸ್ವರ ಸಾಮ್ರಾಟ್" ಶ್ರೀ.ವಿಜಯಭಾಸ್ಕರ್ ರವರನ್ನು ತಮ್ಮ ಗುರುವೆಂದು ಪರಿಗಣಿಸುತ್ತಾರೆ. ಇವರು ಖ್ಯಾತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿ ವಿಜಯ ಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ ಕನ್ನಡ ಚಿತ್ರ "ಅಮೃತ ಗಳಿಗೆ" ಯಲ್ಲಿ  "ಹಿಂದೂಸ್ತಾನವು ಎಂದು ಮರೆಯದ" ಎಂಬ ಹಾಡಿನೊಂದಿಗೆ ಕನ್ನಡ ಚಿತ್ರ ರಂಗವನ್ನು ಪ್ರವೇಶ ಮಾಡಿದರು. ಈ ಹಾಡು ಇವರಿಗೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಷ್ಟೇ ಆಲ್ಲದೇ, ಇವರಿಗೆ ಅನೇಕ ಅವಕಾಶಗಳು ಲಭಿಸುವಂತೆ ಮಾಡಿತು. ಇವರು ಸಂಗೀತ ಜಗತ್ತಿನ ಖ್ಯಾತನಾಮರಾದ ಶ್ರೀ.ಬಾಲಮುರಳಿ ಕೃಷ್ಣ, ಶ್ರೀ.ಜೇಸುದಾಸ್, ಶ್ರೀ.ಪಿ.ಬಿ.ಶ್ರೀನಿವಾಸ್, ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಇನ್ನು ಹತ್ತು ಹಲವು ಗಾಯಕರೊಂದಿಗೆ ಹಾಡಿದ್ದಾರೆ. ಇವರು ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿಯನ್ನು ಎರಡು ಬಾರಿ (ಕಾಡಿನ ಬೆಂಕಿ - 1998  ಮತ್ತು ರಶ್ಮಿ - 1994 ). ಆಲ್ಲದೇ, ಇತ್ತೀಚಿಗೆ 2010 ರಲ್ಲಿ ಇವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ರಾಜ್ಯದ ಪ್ರತಿಷ್ಟಿತ "ರಾಜ್ಯೋತ್ಸವ ಪ್ರಶಸ್ತಿ" ಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 

ಇವರದೇ ಆದ ಆಡಿಯೋ ಕ್ಯಾಸೆಟ್ ಕಂಪನಿ "ಕಿನ್ನರಿ ಆಡಿಯೋ" ವನ್ನು ಪ್ರಾರಂಭಿಸಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದಾರೆ. 

ಪ್ರಸ್ತುತ ಇವರದೇ ಆದ ಸಂಗೀತ ತಂಡವಾದ "ಬಿ.ಆರ್.ಛಾಯ ಮತ್ತು ವೃಂದ" ವನ್ನು ಹುಟ್ಟುಹಾಕಿ ಕರ್ನಾಟಕದಾದ್ಯಂತ ಸಂಚರಿಸಿ ವಿಶೇಷ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 



ಬಿ.ಆರ್.ಛಾಯರವರ ಸಾಧನೆಯ ಹೆಜ್ಜೆ ಗುರುತು:

  • "ಕರ್ನಾಟಕದ ಕೋಗಿಲೆ" ಎಂದೇ ಖ್ಯಾತರಾದ ಇವರು ತಮ್ಮ ಸುಮಧುರ ಕಂಠದಿಂದ 200 ಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು ತುಳು ಮತ್ತು ಕೊಂಕಣಿ ಚಿತ್ರಗಳಲ್ಲಿ ಹಾಡಿದ್ದಾರೆ. 
  • ಇವರು 5000 ಕ್ಕೂ ಹೆಚ್ಚು ಕ್ಯಾಸೆಟ್ /ಸಿಡಿ ಗಳಲ್ಲಿ ಸಂಗೀತದ ವಿವಿಧ ಪ್ರಾಕಾರಗಳಾದ ಪಾಪ್, ಜಾನಪದ, ಭಕ್ತಿಗೀತೆಗಳು ಮತ್ತು ಭಾವಗೀತೆಗಳನ್ನು ಹಾಡಿದ್ದಾರೆ. 
  • ಇವರು ಕರ್ನಾಟಕ ಸರ್ಕಾರದ "ಅತ್ಯುತ್ತಮ ಗಾಯಕಿ" ರಾಜ್ಯ ಪ್ರಶಸ್ತಿಯನ್ನು ಎರಡು ಬಾರಿ (ಕಾಡಿನ ಬೆಂಕಿ - 1998  ಮತ್ತು ರಶ್ಮಿ - 1994 ) ಪಡೆದಿದ್ದಾರೆ.  
  • ಇವರು 2010 ರಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ರಾಜ್ಯದ ಪ್ರತಿಷ್ಟಿತ "ರಾಜ್ಯೋತ್ಸವ ಪ್ರಶಸ್ತಿ" ಯನ್ನು  ತಮ್ಮದಾಗಿಸಿಕೊಂಡಿದ್ದಾರೆ.
  • ವಿವಿಧ ದೇಶಗಳಾದ ಅಮೇರಿಕ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಬೆಹರೈನ್, ದುಬೈ, ಸಿಂಗಪೂರ್ ಮತ್ತಿತರ ಕಡೆ ಕನ್ನಡ ಸಂಘಗಳ ಆಹ್ವಾನದ ಮೇರೆಗೆ ತೆರಳಿ ಅಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಬಿ.ಆರ್.ಛಾಯರವರ ವಾದ್ಯವೃಂದ: 

  • ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ತಮ್ಮ ವಾದ್ಯವೃಂದದೊಂದಿಗೆ ಹಳೆಯ ಮತ್ತು ಹೊಸ ಹಿಂದಿ ಚಲನಚಿತ್ರ ಗೀತೆಗಳು, ಕನ್ನಡ, ತೆಲುಗು, ತಮಿಳು, ರಾಜಸ್ತಾನಿ, ಪಂಜಾಬಿ ಚಲನಚಿತ್ರ ಗೀತೆಗಳು, ಗಜಲ್ ಗಳನ್ನು ಮದುವೆ, ಆರತಕ್ಷತೆ, ಕಂಪನಿಗಳ ಔತಣಕೂಟಗಳು, ದಾಂಡಿಯ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮಗಳಲ್ಲಿ ನೀಡುತ್ತಾ ಬಂದಿದ್ದಾರೆ. 
  • 2500 ಹೆಚ್ಚು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. 
  • ಇವರ ವಾದ್ಯ ವೃಂದವು ಅತ್ಯುತ್ತಮವಾದ ಎಲ್ಲಾ ನವೀನ ರೀತಿಯ ಎಲೆಕ್ಟ್ರೋನಿಕ್ ಸಂಗೀತ ಉಪಕರಣಗಳು ಮತ್ತು ಹಳೆಯ ಉಪಕರಣಗಳ ಮಿಶ್ರಣವನ್ನು ಹೊಂದಿದೆ. 
  • ಇವರ ವಾದ್ಯವೃಂದವು ಉತ್ತಮ ಗುಣಮಟ್ಟದ ಧ್ವನಿವರ್ಧಕ ಉಪಕರಣಗಳನ್ನು ಮತ್ತು ಅತ್ಯುತ್ತಮ ಧ್ವನಿ ತಂತ್ರಜ್ಞರನ್ನು ಹೊಂದಿದೆ. 
  • ಇವರ ವಾದ್ಯವೃಂದವು ಎಲ್ಲಾ ರೀತಿಯ ಸಂಗೀತದ ಉಪಕರಣಗಳನ್ನು ಮತ್ತು ಗಾಯಕ ಗಾಯಕಿಯರನ್ನು ಹೊಂದಿದೆ. 

ಬಿ.ಆರ್.ಛಾಯರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ:
ನಂ.17, 1ನೇ "ಎ" ಮುಖ್ಯ ರಸ್ತೆ, 5ನೇ ಬ್ಲಾಕ್, 
3ನೇ ಹಂತ, ಬನಶಂಕರಿ 3ನೇ  ಘಟ್ಟ, 
ಬೆಂಗಳೂರು-560 085.ಕರ್ನಾಟಕ.

ದೂರವಾಣಿ ಸಂಖ್ಯೆ: 
099003 33040 / 098440 33984 

ಈ ಮೇಲ್ ವಿಳಾಸ:
brchaya@yahoo.com

ಆಲ್ಬಮ್ ಗಳು:
ಶ್ರೀ ಸಾಯಿಬಾಬ, ಶ್ರೀ ಸಾಯಿಪ್ರಭೋ  ಶರಣು ಮತ್ತು ಇನ್ನು ಹತ್ತು ಹಲವು ಅಲ್ಬಮ್ ಗಳು.




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment