Tuesday, November 30, 2010

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಅಕ್ಷಯ ಶಿರಡಿ ಸಾಯಿ ಮಂದಿರ, ನಂ.43,  1ನೇ "ಬಿ" ಅಡ್ಡ ರಸ್ತೆ, ಅರೇಹಳ್ಳಿ, ಏಜೀಸ್ ಬಡಾವಣೆ, ಸುಬ್ರಮಣ್ಯಪುರ ಪೋಸ್ಟ್, ಬೆಂಗಳೂರು-560 061. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ಮಂದಿರವು ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ-ಕೆಂಗೇರಿ ಮುಖ್ಯ ರಸ್ತೆಯ ಸುಬ್ರಮಣ್ಯಪುರದ ಬಳಿ ಬರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿ ಪೂಜೆಯನ್ನು 23ನೇ ಮಾರ್ಚ್ 1990 ರಂದು ನೆರವೇರಿಸಲಾಯಿತು. 
  • ಈ ದೇವಾಲಯವನ್ನು 28ನೇ ಫೆಬ್ರವರಿ 1995 ರಂದು ಹೆಬ್ಬೂರು ಕೋದಂಡಾಶ್ರಮ ಮಠ ಮತ್ತು ಕಾಮಾಕ್ಷಿ ಮಹಾಸನ್ನಿಧಾನದ ಶ್ರೀಗಳಾದ ದಿವಂಗತ ಶ್ರೀ.ಶ್ರೀ.ಶ್ರೀ.ಗಣಪತಿ ಸೋಮಯಾಜಿಗಳು ಉದ್ಘಾಟಿಸಿದರು. 
  • ಈ ದೇವಾಲಯದಲ್ಲಿ ಸದ್ಗುರು ದತ್ತಾತ್ರೇಯ, ಗಣಪತಿ, ಸುಬ್ರಮಣ್ಯ,ಈಶ್ವರ, ಲಕ್ಷ್ಮೀನಾರಾಯಣ, ವರಮಹಾಲಕ್ಷ್ಮಿ, ಪಂಚಮುಖಿ ಆಂಜನೇಯ, ನವಗ್ರಹ ದೇವರುಗಳ ವಿಗ್ರಹವಿದೆ. ಅಲ್ಲದೇ, ಸುಂದರವಾದ ಅಮೃತಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು 3 ಮೆಟ್ಟಿಲುಗಳ ಮೇಲೆ ಪ್ರತಿಷ್ಟಾಪಿಸಲಾಗಿದೆ. 
  • ಈ ಮಂದಿರದಲ್ಲಿ ಶಿರಡಿ ಸಾಯಿಬಾಬಾರವರ ವಿವಿಧ ಭಂಗಿಯ ಚಿತ್ರಗಳನ್ನು ಕೂಡ ಸಾಯಿಭಕ್ತರು ನೋಡಬಹುದು. 

 ದೇವಾಲಯದ ಹೊರನೋಟ 
 
 ದೇವಾಲಯದ ರಾಜಗೋಪುರ 
 
 ಸದ್ಗುರು ದತ್ತಾತ್ರೇಯ, ಗಣಪತಿ, ಸುಬ್ರಮಣ್ಯ,ಈಶ್ವರ ದೇವರ ವಿಗ್ರಹಗಳು 

 ಲಕ್ಷ್ಮೀನಾರಾಯಣ, ವರಮಹಾಲಕ್ಷ್ಮಿ, ಪಂಚಮುಖಿ ಆಂಜನೇಯ ದೇವರ ವಿಗ್ರಹಗಳು 

 3 ಮೆಟ್ಟಿಲುಗಳ ಮೇಲೆ ಸ್ಥಾಪಿಸಲಾದ ಶಿರಡಿ ಸಾಯಿಬಾಬಾರವರ ವಿಗ್ರಹ 

ಶಿರಡಿ ಸಾಯಿಬಾಬಾರವರ ವಿಗ್ರಹದ ಮತ್ತೊಂದು ನೋಟ 

ನವಗ್ರಹ ದೇವರುಗಳ ವಿಗ್ರಹ


ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು 

ಆರತಿಯ ಸಮಯ: 


ಆರತಿ
ಪ್ರತಿದಿನ
ಗುರುವಾರ 
Morning
6:00 AM
5:30 AM
Afternoon
12:00 PM
1:00 PM
Evening
-
4:30 PM
Night
9:00 PM
9:30 PM

  • ದೇವಾಲಯದಲ್ಲಿ ಪ್ರತಿ ತಿಂಗಳು ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು ಅದರ ಸೇವಾ ಶುಲ್ಕ 30/- ರುಪಾಯಿಗಳಾಗಿರುತ್ತದೆ. 
  •  ದೇವಾಲಯದಲ್ಲಿ ಪ್ರತಿನಿತ್ಯ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳಾಗಿರುತ್ತದೆ. 
  • ವಿಶೇಷ ಉತ್ಸವದ ದಿನಗಳಲ್ಲಿ ಶಿರಡಿ ಸಾಯಿಬಾಬಾರವರಿಗೆ "ಬೆಳ್ಳಿಯ ಕವಚ ಧಾರಣೆ" ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

  1. ಪ್ರತಿ ವರ್ಷದ 28ನೇ ಫೆಬ್ರವರಿ ಯಂದು ವಾರ್ಷಿಕೋತ್ಸವ.
  2. ಗುರು ಪೂರ್ಣಿಮಾ. 
  3. ವಿಜಯದಶಮಿ (10 ದಿನಗಳೂ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ).
  4. ಶ್ರೀರಾಮನವಮಿ. 
  5. ದತ್ತಜಯಂತಿ. 
  6. ಶಿವರಾತ್ರಿ (ರಾತ್ರಿಯಿಂದ ಬೆಳಗಿನ ಜಾವದ ತನಕ ನಿರಂತರವಾಗಿ 4 ಯಾಮ ವಿಶೇಷ ರುದ್ರಾಭಿಷೇಕ)

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

ಅಕ್ಷಯ ಶಿರಡಿ ಸಾಯಿ ಮಂದಿರ,
ನಂ.43,  1ನೇ "ಬಿ" ಅಡ್ಡ ರಸ್ತೆ,
ಅರೇಹಳ್ಳಿ, ಏಜೀಸ್ ಬಡಾವಣೆ,
ಸುಬ್ರಮಣ್ಯಪುರ ಪೋಸ್ಟ್,
ಬೆಂಗಳೂರು-560 061. ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಬಿ.ಕೆ.ಸುಬ್ಬರಾಯಸ್ವಾಮಿ / ಶ್ರೀ.ಬಿ.ಎಸ್.ಕೇಶವಮುರ್ತಿ

ದೂರವಾಣಿ ಸಂಖ್ಯೆಗಳು: 


080-3295 6257 / 97410 79671 / 97410 76503

ಮಾರ್ಗಸೂಚಿ: 

ಏಜೀಸ್ ಬಡಾವಣೆ, ಇಟ್ಟಮಡು ಕೊನೆ ಬಸ್ ನಿಲ್ದಾಣ. ಮಾರ್ಗ ಸಂಖ್ಯೆ: 45-D -ಬಸ್ ನಿಲ್ದಾಣದಿಂದ ಎರಡು ರಸ್ತೆ ಹಿಂದೆ ನಡೆದರೆ ದೇವಾಲಯಕ್ಕೆ ಎರಡು ನಿಮಿಷಗಳ ನಡಿಗೆ. ಮಾರ್ಗ ಸಂಖ್ಯೆಗಳು: 222-D, 222-G, 275 ಬಸ್ ಗಳಲ್ಲಿ ಪ್ರಯಾಣಿಸಿದರೆ ಉತ್ತರಹಳ್ಳಿ - ಕೆಂಗೇರಿ ಮುಖ್ಯ ರಸ್ತೆಯಲ್ಲಿ ಸಿಗುವ ಉತ್ತರಹಳ್ಳಿ ವಾಟರ್ ಟ್ಯಾಂಕ್ ಬಸ್ ನಿಲ್ದಾಣದಲ್ಲಿ ಇಳಿಯುವುದು. ಇಲ್ಲಿಂದ ದೇವಾಲಯಕ್ಕೆ ಕೇವಲ 5 ನಿಮಿಷಗಳ ನಡಿಗೆ.   

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment