Tuesday, November 2, 2010


ಸಾಯಿ ಮಹಾಭಕ್ತೆ - ಬಾಯಜಾ ಬಾಯಿ ಕೋತೆ ಪಾಟೀಲ್ - ಕೃಪೆ: ಸಾಯಿಅಮೃತಧಾರಾ.ಕಾಂ

ಬಾಯಜಾ ಬಾಯಿ ಕೋತೆ ಪಾಟೀಲ್ 

ಬಾಯಜಾ ಬಾಯಿ ಕೋತೆ ಪಾಟೀಲ್ ಮತ್ತು ಅವರ ಪತಿ   ಅಪ್ಪಾ ಕೋತೆ ಪಾಟೀಲ್ ರವರಿಗೆ ಸಾಯಿಬಾಬಾರವರನ್ನು ಕಂಡರೆ ಅಪಾರವಾದ ಪ್ರೀತಿ ಮತ್ತು ಭಕ್ತಿ. ಪ್ರತಿನಿತ್ಯವೂ ಬಾಯಜಾ ಬಾಯಿ ಆಹಾರವನ್ನು ತಯಾರಿಸಿ ಅದನ್ನು ಸಾಯಿಬಾಬಾರವರಿಗೆ ಪ್ರೀತಿಯಿಂದ ಬಡಿಸುತ್ತಿದ್ದರು.ಬಾಯಜಾ ಬಾಯಿಯವರ ಮಗ ತಾತ್ಯಾ ಕೋತೆ ಪಾಟೀಲ್. ಬಾಯಜಾ ಬಾಯಿ ಕೋತೆ ಪಾಟೀಲ್ ರವರು ಸಾಯಿಬಾಬಾರವರನ್ನು ತಮ್ಮ ಅಣ್ಣನೆಂದು ತಿಳಿದಿದ್ದರು. ಮಹಾಲಸಪತಿ, ಶ್ಯಾಮ ಮತ್ತು ಬಾಯಜಾ ಬಾಯಿ ಕೋತೆ ಪಾಟೀಲ್ ರವರು ಸಾಯಿಬಾಬಾರವರು ಸ್ವತಃ ದೇವರ ಅವತಾರ ಎಂದು ಮನಗಂಡ ಶಿರಡಿಯ ಅತ್ಯಂತ ಪುರಾತನ ಭಕ್ತರಾಗಿದ್ದರು. ಬಾಯಜಾ ಬಾಯಿ ಕೋತೆ ಪಾಟೀಲ್ ಮತ್ತು ತಾತ್ಯಾ ರವರು ಸಾಯಿಬಾಬಾರವರನ್ನು ಬಹಳವಾಗಿ ಹಚ್ಚಿಕೊಂಡಿದ್ದರು. ತಾತ್ಯಾ ರವರು ಬಾಬಾರವರನ್ನು ಮಾಮ ಎಂದು ಸಂಬೋಧಿಸುತ್ತಿದ್ದರು. ಸಾಯಿಯವರು ಶಿರಡಿಗೆ ಬಂದರ ಮೊದಲ ದಿನಗಳಲ್ಲಿ ಬೇವಿನ ಮರದ ಕೆಳಗಡೆ ಅಥವಾ ಕಾಡಿನಲ್ಲಿ ಅಲೆದಾಡುತ್ತಿದ್ದರು. ಬಾಯಜಾ ಬಾಯಿ ಕೋತೆ ಪಾಟೀಲ್ ರವರು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಸಾಯಿಬಾಬಾರವರನ್ನು ಹುಡುಕಿಕೊಂಡು ಅವರಿದ್ದ ಕಡೆಗೆ ಹೋಗಿ ಬಲವಂತವಾಗಿ ಊಟವನ್ನು ಬಡಿಸಿ ಪ್ರೀತಿಯಿಂದ ತಿನ್ನಿಸುತ್ತಿದ್ದರು. ಬಾಯಜಾ ಬಾಯಿ ಕೋತೆ ಪಾಟೀಲ್  ಈ ತರಹ ಬಹಳ ದಿನಗಳು ಮಾಡಿದರು. ಸ್ವಲ್ಪ ಕಾಲದ ನಂತರ ಸಾಯಿಬಾಬಾರವರು ಮಸೀದಿಯಲ್ಲಿ ವಾಸ ಮಾಡಲು ಶುರು ಮಾಡಿದರು. ಆನಂತರ ಬಾಯಜಾ ಬಾಯಿ ಕೋತೆ ಪಾಟೀಲ್ ರವರಿಗೆ ಕಾಡಿನಲ್ಲಿ ಬಾಬಾರವರನ್ನು ಹುಡುಕಿಕೊಂಡು ಅಲೆಯುವ ಕೆಲಸ ತಪ್ಪಿತು. ಬಾಯಜಾ ಬಾಯಿ ಕೋತೆ ಪಾಟೀಲ್ ತಮ್ಮ ಜೀವನದ ಕೊನೆಯ ದಿನಗಳವರೆಗೂ ಕೂಡ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿದ್ದರು. 

ಭಕ್ತಿಯಂತೆ ಸೇವೆಯು ಕೂಡ ಬಹಳ ಮುಖ್ಯವಾದ ವಿಷಯವಾಗಿದೆ. ಈ ವಿಷಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಕೂಡ ಬಾಯಜಾ ಬಾಯಿ ಕೋತೆ ಪಾಟೀಲ್ ರವರು ಜ್ವಲಂತ ನಿದರ್ಶನವಾಗಿರುತ್ತಾರೆ. ಬಾಯಜಾ ಬಾಯಿ ಕೋತೆ ಪಾಟೀಲ್ ರವರು ನಮಗೆಲ್ಲ ನಮ್ಮ ಗುರುವಿನಲ್ಲಿ ನಮಗೆ ಭಕ್ತಿಯಷ್ಟೇ ಇದ್ದರೆ ಸಾಲದು, ಸೇವೆಯು ಕೂಡ ಅಷ್ಟೇ ಮುಖ್ಯವಾದ ವಿಷಯ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಾಯಿಬಾಬಾರವರು ಬಾಯಜಾ ಬಾಯಿ ಕೋತೆ ಪಾಟೀಲ್ ರವರ ಸೇವೆಯನ್ನು ಮರೆಯಲಿಲ್ಲ. ಅವರ ಮಗ ತಾತ್ಯಾ ಕೋತೆ ಪಾಟೀಲ್ ರನ್ನು ತಮ್ಮ ಕೊನೆಯ ದಿನಗಳವರೆಗೂ ಕೂಡ ಬಹಳ ಎಚ್ಚರಿಕೆಯಿಂದ ನೋಡಿಕೊಂಡರು. ಅಷ್ಟೇ ಅಲ್ಲಾ, ತಾತ್ಯಾ ರೋಗಪೀಡಿತನಾಗಿ ಹಾಸಿಗೆ ಹಿಡಿದು ಮಲಗಿದಾಗ ಮತ್ತು ಕೊನೆಯ ದಿನಗಳನ್ನು ನೋಡುತ್ತಿರುವಾಗ, ಸಾಯಿಯವರು ತಾತ್ಯಾ ರನ್ನು ಬದುಕಿಸಿ ತಾವು ಪ್ರಾಣವನ್ನು ಬಿಟ್ಟರು. ಬಾಬಾರವರು ತಾತ್ಯಾರವರಿಗೊಸ್ಕರ ಏಕೆ ತಮ್ಮ  ದೇಹತ್ಯಾಗ ಮಾಡಿದರು ಎಂಬುದು ತಿಳಿಯದ ವಿಷಯವಾಗಿದೆ. 

ನಾವುಗಳು ಸೇವೆಯನ್ನು ಮಾಡುವಾಗ ವಿನೀತ ಭಾವದಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕು. ಈ ರೀತಿಯ ನಿಸ್ವಾರ್ಥ ಸೇವೆಯನ್ನು ಬಾಯಜಾ ಬಾಯಿ ಕೋತೆ ಪಾಟೀಲ್ ರವರು ಮಾಡಿ ತೋರಿಸಿದ್ದಾರೆ. ನಾವುಗಳು ಕೂಡ ಬಾಯಜಾ ಬಾಯಿ ಕೋತೆ ಪಾಟೀಲ್ ರವರು ಮಾಡಿದಂತೆ ವಿನೀತ ಭಾವದಿಂದ ಸಾಯಿಬಾಬಾರವರ ಸೇವೆಯನ್ನು ಮಾಡೋಣವೆ?

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment