Tuesday, November 30, 2010

ಚಾವಡಿಯಲ್ಲಿ ಸಾಯಿಬಾಬಾರವರ ರಾತ್ರಿ ಆರತಿ ಪ್ರಾರಂಭದ ಶತಮಾನೋತ್ಸವ (1910 - 2010) - ಕೃಪೆ: ಸಾಯಿಅಮೃತಧಾರಾ.ಕಾಂ

ಸಾಯಿ ಬಂಧುಗಳೇ, ಶಿರಡಿಯ ಚಾವಡಿಯಲ್ಲಿ ರಾತ್ರಿ ಆರತಿಯು ಪ್ರಾರಂಭವಾಗಿ 100 ವರ್ಷಗಳು ಸಂದಿವೆ. 10ನೇ ಡಿಸೆಂಬರ್ 1910 ರ ಶನಿವಾರದಂದು ಶಿರಡಿಯಲ್ಲಿ ಮೊದಲ ಬಾರಿಗೆ ಚಾವಡಿಯಲ್ಲಿ ರಾತ್ರಿ ಆರತಿ ಪ್ರಾರಂಭವಾಯಿತು. ಈ ವಿವರವನ್ನು ಸಾಯಿಭಕ್ತರು ಸಾಯಿ ಸಚ್ಚರಿತೆಯ 4ನೇ ಅಧ್ಯಾಯದಲ್ಲಿ ನೋಡಬಹುದು. ಸಮಾಧಿ ಮಂದಿರದಲ್ಲಿ ನಡೆಯುವ ಶೇಜಾರತಿಯಲ್ಲದೆ ಈ ಕೆಳಗೆ ಕೊಟ್ಟಿರುವ  5 ಆರತಿಯ ಹಾಡುಗಳನ್ನು ಪ್ರತಿ ಗುರುವಾರದಂದು ಶಿರಡಿಯಲ್ಲಿ ಚಾವಡಿ ಉತ್ಸವದ ಸಂದರ್ಭದಲ್ಲಿ ಚಾವಡಿಯಲ್ಲಿ ಹಾಡುತ್ತಾರೆ. ಅವುಗಳು ಯಾವುವೆಂದರೆ: 

  1. ಘೇವುನಿಯಾ ಪಂಚಾರತಿ 
  2. ಆರತಿ ಸಾಯಿಬಾಬಾ 
  3. ಶಿರಡಿ ಮಾಜೆ ಪಂಡರಪುರ 
  4. ಘಾಲೀನ ಲೋಟಾಂಗಣ
  5. ಹರೇ ರಾಮ ಹರೇ ರಾಮ 
ಈ ವಿಶೇಷ ಶತಮಾನೋತ್ಸವದ ನೆನಪಿಗಾಗಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ , ಪ್ರಪಂಚದಾದ್ಯಂತ ಇರುವ ಸಾಯಿ ಮಂದಿರಗಳಲ್ಲಿ  10ನೇ ಡಿಸೆಂಬರ್ 2010 ರ ರಾತ್ರಿಯಂದು ಸಾಯಿಬಾಬಾರವರ ಆರತಿಯನ್ನು ಹಾಡಬೇಕೆಂದು ಮತ್ತು ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಈ ಅಂತರ್ಜಾಲ ತಾಣದ ಪರವಾಗಿ ನಾವುಗಳು ಮನವಿ ಮಾಡಿಕೊಳ್ಳುತ್ತೇವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment