Tuesday, November 30, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, 2509 , 26ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ, 2ನೇ ಹಂತ, ಬೆಂಗಳೂರು-560 070. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ಮಂದಿರವು ಬೆಂಗಳೂರು ದಕ್ಷಿಣ ಭಾಗದ ಪ್ರತಿಷ್ಟಿತ ಬಡಾವಣೆಗಳಲ್ಲಿ ಒಂದಾದ ಬನಶಂಕರಿ ಬಡಾವಣೆಯಲ್ಲಿ ಇರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯವನ್ನು 31ನೇ ಮೇ 2009 ರಂದು ಪ್ರಾರಂಭಿಸಲಾಯಿತು. 
  • ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. 
  • ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
  • ದ್ವಾರಕಾಮಾಯಿ ಸಾಯಿಬಾಬಾ ಮತ್ತು ಚಿನ್ನದ ಸಾಯಿಬಾಬಾ ಆಳೆತ್ತರದ ಚಿತ್ರಪಟಗಳನ್ನು ದೇವಾಲಯದಲ್ಲಿ ತೂಗುಹಾಕಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು: 

ದೈನಂದಿನ ಕಾರ್ಯಕ್ರಮಗಳು 

ಆರತಿಯ ಸಮಯ

ಆರತಿ
ಸಮಯ
ಕಾಕಡಾ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
5:30 PM
ಶೇಜಾರತಿ
8:30 PM

ಪ್ರತಿ ಗುರುವಾರ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಸಾಯಿ ಸಹಸ್ರನಾಮ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ತಿಂಗಳ ಕಡೆಯ ಗುರುವಾರದಂದು ಸಂಜೆ 5 ಘಂಟೆಯಿಂದ 6 ಘಂಟೆಯವರೆಗೆ ಭಜನ ಸತ್ಸಂಗ ಕಾರ್ಯಕ್ರಮವಿರುತ್ತದೆ. ಪ್ರತಿ ವರ್ಷ ಗುರುಪೂರ್ಣಿಮೆಯ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ವಿಳಾಸ: 

ಶ್ರೀ ಶಿರಡಿ ಸಾಯಿ ಮಂದಿರ
2509 , 26ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ,
ಬನಶಂಕರಿ, 2ನೇ ಹಂತ, ಬೆಂಗಳೂರು-560 070. ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಹೆಚ್.ಪರಮೇಶ್ವರ / ಶ್ರೀಮತಿ.ಪಿ.ಕನ್ಯಾಕುಮಾರಿ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


098440 09698

ಈ ಮೇಲ್ ವಿಳಾಸ: 



ಮಾರ್ಗಸೂಚಿ: 

ಬನಶಂಕರಿ ಬಿ.ಡಿ.ಎ. ವಾಣಿಜ್ಯ ಸಂಕೀರ್ಣದ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ಈ ಮಂದಿರ ಸಿಗುತ್ತದೆ. ಈ ಮಂದಿರವು ಬನಶಂಕರಿ 2ನೇ ಹಂತದ ಪೋಲಿಸ್ ಸ್ಟೇಷನ್ ಹಿಂಭಾಗದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment