Tuesday, November 30, 2010

ಸಾಯಿ ಭಜನ ಗಾಯಕರು ಮತ್ತು ನಾಟಕಕಾರರು - ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ಮತ್ತು ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ - ಕೃಪೆ: ಸಾಯಿ ಅಮೃತಧಾರಾ.ಕಾಂ

ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ಮತ್ತು ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ ಸಹೋದರರು ಅನನ್ಯ ಸಾಯಿಭಕ್ತರು. ಇವರಿಬ್ಬರು ತಮ್ಮ ಕೆಲಸಗಳನ್ನು ತೊರೆದು 1987ನೇ ಇಸವಿಯಿಂದ ಜೊತೆಗೂಡಿ ಜಯ ಮಾತಾ ದಿ ಜಾಗರಣ ಮಂಡಲ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಅಡಿಯಲ್ಲಿ ಶಿರಡಿ ಸಾಯಿಬಾಬಾ ರವರ ಸಾಯಿ ಸಚ್ಚರಿತೆ ಆಧಾರಿತ ಹಿಂದಿ ನಾಟಕವನ್ನು ಪ್ರಪಂಚದಾದ್ಯಂತ ಪ್ರಸ್ತುತಪಡಿಸುತ್ತಾ ಶಿರಡಿ ಸಾಯಿಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಪವಾಡಗಳನ್ನು, ಅವರ ಉಪದೇಶಗಳನ್ನು ಜನರಿಗೆ ಮುಟ್ಟಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. 

ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ರವರು ಪಂಜಾಬಿ ಕುಟುಂಬದಲ್ಲಿ ಜನಿಸಿದ್ದು ಅಡಿಗೆ ಮಾಡುವುದು, ಹಾಡುವುದು ಮತ್ತು ಸಮಾಜ ಸೇವೆ ಮಾಡುವ ಹವ್ಯಾಸಗಳನ್ನು ಹೊಂದಿದ್ದಾರೆ. ಇವರು ಸುಶ್ರಾವ್ಯವಾದ ಕಂಠ ಸಿರಿಯನ್ನು ಹೊಂದಿದ್ದು ಸಾಯಿ ಸಚ್ಚರಿತೆಯ ಘಟನಾವಳಿಗಳನ್ನು ಉತ್ತಮವಾದ ಹಿಂದಿ ಸಾಯಿ ಭಜನೆಗಳ ಸಹಾಯದಿಂದ ಸೊಗಸಾಗಿ ನಿರೂಪಣೆ ಮಾಡುವುದರಲ್ಲಿ ಸಿದ್ಧಹಸ್ತರು. ಅವರ ನಿರೂಪಣಾ ಶೈಲಿ ಮತ್ತು ಸಾಯಿ ಭಜನೆಗಳನ್ನು ಹಾಡುವ ರೀತಿ ಸಾಯಿ ಭಕ್ತರನ್ನು ಮಂತ್ರಮುಗ್ಧರನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ. 

ಶ್ರೀ.ಬಬ್ಲೂ ದುಗ್ಗಲ್ ಗುರುಬಚನ್ ಲಾಲ್ ಬೆಂಗಳೂರಿನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿರುವುದು 

ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ ರವರು ಕೂಡ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದು ತಮ್ಮ ಸಹೋದರನಂತೆ ಅವರು ಕೂಡ ಸಮಾನ ಹವ್ಯಾಸಗಳನ್ನು ಹೊಂದಿದ್ದಾರೆ. ಇವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಆ ವೃತ್ತಿಯನ್ನೇ ತೊರೆದು ತಮ್ಮ ಸಹೋದರ ನಿರೂಪಿಸುವ ಸಾಯಿಬಾಬಾರವರ ನಾಟಕಗಳಲ್ಲಿ ಶಿರಡಿ ಸಾಯಿಬಾಬಾರವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ತಮ್ಮ ಮನೋಜ್ಞ ನಟನಾ ಕೌಶಲ್ಯದಿಂದ ಸಾಯಿಭಕ್ತರನ್ನು ತಮ್ಮೆಡೆ ಸೆಳೆಯುತ್ತಾರೆ. 

 ಶ್ರೀ.ಚಂದನ್ ದುಗ್ಗಲ್ ಗುರುಬಚನ್ ಲಾಲ್ ಶಿರಡಿ ಸಾಯಿಬಾಬಾರವರ ಪಾತ್ರದಲ್ಲಿ 

ಈ ಇಬ್ಬರು ಸಹೋದರರು ಜೊತೆಗೂಡಿ ಸಾಯಿ ಜಾಗರಣೆ, ಸಾಯಿ ಸಚ್ಚರಿತೆ ಆಧಾರಿತ ನಾಟಕ ಮತ್ತು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಭಾರತದ ಅನೇಕ ರಾಜ್ಯಗಳಾದ ಮಹಾರಾಷ್ಟ್ರ, ಪಂಜಾಬ್, ದೆಹಲಿ, ಅಸ್ಸಾಂ, ಗುಜರಾತ್, ಕರ್ನಾಟಕ ಗಳಲ್ಲಿ ಅಷ್ಟೇ ಅಲ್ಲದೇ ನಮ್ಮ ನೆರೆಯ ದೇಶವಾದ ನೇಪಾಳ ದಲ್ಲಿ ಕೂಡ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂಗವಿಕಲರಿಗೆ ಮತ್ತು ಕಡುಬಡವರಿಗೆ ಸಹಾಯ ಹಸ್ತ ನೀಡುವ ಒಳ್ಳೆಯ ಉದ್ದೇಶವನ್ನು ದುಗ್ಗಲ್ ಸಹೋದರರು ಹೊಂದಿದ್ದಾರೆ. ಇವರ ತಂಡವು ಶಿರಡಿ ಸಾಯಿಬಾಬಾರವರು ಸಾಯಿ ಸಚ್ಚರಿತೆಯಲ್ಲಿ ತಮ್ಮ ಭಕ್ತರಿಗೆ ನೀಡಿರುವ ಸಂದೇಶವನ್ನು ಜಗತ್ತಿನಾದ್ಯಂತ ತಲುಪಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. 

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ:
ಜಯ ಮಾತಾ ದಿ ಜಾಗರಣ ಮಂಡಲ,
ಅಶೋಕ  ರೆಸಿಡೆನ್ಸಿ,ವಾರ್ಡ್ ಸಂಖ್ಯೆ-6, ಫ್ಲಾಟ್  ಸಂಖ್ಯೆ-ಎ/5,
ಉತ್ಸವ ಮಂಗಳ ಕಾರ್ಯಾಲಯದ ಹತ್ತಿರ ,
ಫೋಪ್ಲೆ ಚಾವಲ್ ಹತ್ತಿರ,
ಶ್ರೀರಾಮಪುರ-413 709. ಮಹಾರಾಷ್ಟ್ರ, ಭಾರತ. 


ದೂರವಾಣಿ ಸಂಖ್ಯೆಗಳು:
+91 2422-225624 / 225024 / 225660 / +91 9422235518 / +91 9822780608 / +91 9822531321

ಈ ಮೇಲ್ ವಿಳಾಸ:
dr.rohitduggal@rediffmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment