Thursday, November 11, 2010

ಬೆಂಗಳೂರಿನ ಸಾಯಿ ಮಂದಿರ - ವಿಜಯ ವಿನಾಯಕ ಮತ್ತು ಶಿವ ಸಾಯಿ ಸೇವಾ ಸಮಿತಿ (ರಿ), ಕುರುಬರಹಳ್ಳಿ, ಬೆಂಗಳೂರು-560 086 - ಕೃಪೆ : ಸಾಯಿ ಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

  • ದೇವಾಲಯದ ಭೂಮಿ ಪೂಜೆಯನ್ನು 14ನೇ ಜನವರಿ 2007 ರಂದು ನೆರವೇರಿಸಲಾಯಿತು. 
  • ದೇವಾಲಯವನ್ನು 29ನೇ ನವೆಂಬರ್ 2007 ರಂದು ಯಡೆಯುರಿನ  ಶ್ರೀ.ಶಲಭ್ರ ರೇಣುಕ ಶಿವಾಚಾರ್ಯ ಸ್ವಾಮೀಜಿಯವರು ಉದ್ಘಾಟನೆ ಮಾಡಿದರು. 
  • 20 ಅಡಿಗಳ ಸುಂದರ ಶಿವನ ವಿಗ್ರಹವನ್ನು ವಿಜಯ ವಿನಾಯಕ ದೇವಾಲಯದ ಮೇಲ್ಭಾಗದಲ್ಲಿ ರಾಜಗೋಪುರದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. 
  • ಸುಂದರ ಕಪ್ಪು ಶಿಲೆಯ ವಿಜಯ ವಿನಾಯಕ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 
  • ವಿಜಯ ವಿನಾಯಕ ದೇವಾಲಯದ ಎಡಭಾಗದಲ್ಲಿ ಶಿವ ಮತ್ತು ಸಾಯಿಬಾಬಾರವರ ದೇವಾಲಯವನ್ನು ಸ್ಥಾಪಿಸಲಾಗಿದೆ. ದೇವಾಲಯದ ಒಳಗಡೆ ಸುಂದರ ಕಪ್ಪು ಶಿಲೆಯ ಶಿವಲಿಂಗ, ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹ, ಅಮೃತ ಶಿಲೆಯ ರಾಮ ಪರಿವಾರದ ವಿಗ್ರಹಗಳನ್ನು ನೋಡಬಹುದು. ಆಲ್ಲದೇ, ನಂದಿಯ ವಿಗ್ರಹವನ್ನು ಶಿವನ ಎದುರುಗಡೆ ಸ್ಥಾಪಿಸಲಾಗಿದೆ. ಬೆಳ್ಳಿಯ ಪಾದುಕೆಗಳನ್ನು ಸಾಯಿಬಾಬಾರವರ ಎದುರುಗಡೆ ಸ್ಥಾಪಿಸಲಾಗಿದೆ. 
  • ಹನುಮಂತನ ಕಪ್ಪು ಶಿಲೆಯ ವಿಗ್ರಹ, ನಾಗ ದೇವರುಗಳು, ನಾಗರ ಹುತ್ತವನ್ನು ಶಿವ ಸಾಯಿಬಾಬಾ ಮಂದಿರದ ಹೊರಗಡೆ ಅರಳಿ ಮರದ ಕೆಳಭಾಗದಲ್ಲಿ ಸ್ಥಾಪಿಸಲಾಗಿದೆ. 
  • ಕಪ್ಪು ಶಿಲೆಯ ನವಗ್ರಹಗಳು ಮತ್ತು ಅದಕ್ಕೆ ಸಂಬಂಧಪಟ್ಟ ವೃಕ್ಷಗಳನ್ನು ಅರಳಿ ಮರದ ಹಿಂಭಾಗದಲ್ಲಿ ಶಿವ ಸಾಯಿಬಾಬಾ ಮಂದಿರದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. 
 ದೇವಾಲಯದ ರಾಜಗೋಪುರ 

 ದೇವಾಲಯದ ಮೇಲ್ಭಾಗದಲ್ಲಿರುವ ಶಿವನ 20 ಅಡಿಗಳ ಸುಂದರ ವಿಗ್ರಹ  

ವಿಜಯ ವಿನಾಯಕನ ವಿಗ್ರಹ  

ಶಿವಲಿಂಗ ಮತ್ತು ನಂದಿಯ ವಿಗ್ರಹಗಳು 

ಶಿರಡಿ ಸಾಯಿಬಾಬಾರವರ ವಿಗ್ರಹ 

ಶ್ರೀರಾಮ ಪರಿವಾರದ ಸುಂದರ ವಿಗ್ರಹಗಳು 

 
ನವಗ್ರಹ ಮತ್ತು ಅದಕ್ಕೆ ಸಂಬಂಧಪಟ್ಟ ವೃಕ್ಷಗಳು 

ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ: 

ಆರತಿ
ಸಮಯ
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
6.00 PM
ಶೇಜಾರತಿ
8:00 PM

ಪಂಚಾಮೃತ ಅಭಿಷೇಕವನ್ನು ವಿಜಯ ವಿನಾಯಕ, ಶಿವ ಮತ್ತು ಸಾಯಿಬಾಬಾರವರಿಗೆ ಪ್ರತಿನಿತ್ಯ ಮಾಡಲಾಗುತ್ತದೆ. ಸೇವಾ ಶುಲ್ಕ 250/-
ರುಪಾಯಿಗಳು.

ವಿಶೇಷ ದಿನಗಳು: 

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 30/- ರುಪಾಯಿಗಳು.
ಪ್ರತಿ ತಿಂಗಳ ಚತುರ್ಥಿಯಂದು ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 30/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು: 

  1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 29ನೇ ನವೆಂಬರ್.
  2. ಗುರು ಪೂರ್ಣಿಮಾ.
  3. ಶ್ರೀರಾಮನವಮಿ 

ಸಾಮಾಜಿಕ ಕಾರ್ಯಚಟುವಟಿಕೆಗಳು :

ಪ್ರತಿ ವರ್ಷ ವಿಶೇಷ ಉತ್ಸವದ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಮತ್ತು ಬಟ್ಟೆಗಳನ್ನು ವಿತರಣೆ ಮಾಡಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

ವಿಜಯ ವಿನಾಯಕ ಮತ್ತು ಶಿವ ಸಾಯಿ ಸೇವಾ ಸಮಿತಿ (ರಿ)
ಕೆ.ಇ.ಬಿ.ಕಚೇರಿ ಎದುರು, 60 ಅಡಿ ರಸ್ತೆ, ಜೆ.ಸಿ.ನಗರ,
ಕುರುಬರಹಳ್ಳಿ , ಮಹಾಲಕ್ಷ್ಮಿಪುರ ಪೋಸ್ಟ್,
ಬೆಂಗಳೂರು-560 086.

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಜೈಪ್ರಕಾಶ್ (ಜೆ.ಪಿ)

ದೂರವಾಣಿ ಸಂಖ್ಯೆಗಳು: 


080-23492779 / 94806 49999

ಈ  ಮೇಲ್ ವಿಳಾಸ: 


ಮಾರ್ಗಸೂಚಿ: 

ಕೆ.ಇ.ಬಿ.ಕಚೇರಿ ಎದುರು, ಕುರುಬರಹಳ್ಳಿ ಬಸ್ ನಿಲ್ದಾಣ, ಬಸ್ ಸಂಖ್ಯೆಗಳು : 89, 89A,89B, 89C, 89D.

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment