Friday, November 12, 2010

ಸಾಯಿ ಭಜನ ಗಾಯಕಿ - ಅನುಪಮ ದೇಶಪಾಂಡೆ  - ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಸಾಯಿ ಭಜನ ಗಾಯಕಿ ಶ್ರೀಮತಿ.ಅನುಪಮ ದೇಶಪಾಂಡೆ 

ಖ್ಯಾತ ಸಾಯಿ ಭಜನ ಗಾಯಕಿಯಾದ ಶ್ರೀಮತಿ.ಅನುಪಮ ದೇಶಪಾಂಡೆಯವರು ಅನೇಕ ವರ್ಷಗಳಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಶಿರಡಿಯ ಸಮಾಧಿ ಮಂದಿರದಲ್ಲಿ ಕಳೆದ 25 ವರ್ಷಗಳಿಂದ ಪ್ರತಿದಿನ ಸಾಯಿಭಕ್ತರು ಕೇಳುವ ಸಾಯಿ ಮಂತ್ರವನ್ನು ಖ್ಯಾತ ಹಿಂದಿ ಗಾಯಕ ಮಹೇಂದ್ರ ಕಪೂರ್ ರವರೊಂದಿಗೆ ಹಾಡಿದ್ದಾರೆ. ಶಿರಡಿ ಸಾಯಿಬಾಬಾ ಸಂಸ್ಥಾನದವರು ಬಿಡುಗಡೆ ಮಾಡಿರುವ ಅನೇಕ ಸಾಯಿ ಭಜನೆಯ ಅಲ್ಬಮ್ ಗಳಲ್ಲಿ ಇವರು ಹಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಕಾಕಡಾ ಆರತಿ ಮತ್ತು ಶೇಜಾರತಿ. ಇವರು ಭಾರತದಾದ್ಯಂತ ಸುತ್ತಾಡಿ ದೆಹಲಿ, ಲಕ್ನೌ, ಕಲ್ಕತ್ತಾ ಮತ್ತು ಇನ್ನು ಹಲವಾರು ಕಡೆಗಳಲ್ಲಿ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಯಿ ಸಚ್ಚರಿತೆಯನ್ನು ಆಧರಿಸಿ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಹಿಂದಿ ಮತ್ತು ಮರಾಟಿ ಭಾಷೆಗಳಲ್ಲಿ ನೀಡಬೇಕೆಂಬ ಹಂಬಲ ಇವರದು. 

ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ಸಂಪರ್ಕದ ವಿವರಗಳು 
ಗಾಯಕಿಯ ಹೆಸರು
ಅನುಪಮ ದೇಶಪಾಂಡೆ 
ವಿಳಾಸ
ಮಾಹಿತಿ ಇಲ್ಲ
ದೂರವಾಣಿ ಸಂಖ್ಯೆಗಳು
09820124795 / 09810041447 / 09312685829
ಇಮೇಲ್ ವಿಳಾಸ
ಅಂತರ್ಜಾಲ
ಇಲ್ಲ 
Albums:
ಶ್ರೀ ಸಾಯಿ ಮಹಿಮಾ, ಸಾಯಿ ಬಾಬಾ ಆರತಿ ಮತ್ತು ಮಂತ್ರೋಚಾರಣೆ, ಶ್ರೀ. ಸಾಯಿ ಸುಗುಣೋಪಾಸನ,  ಸಾಯಿನಾಮ ಸುಖದಾಯಿ, ಜೈ ಜಗದೀಶ್ವರ್ ಸಾಯಿ, ಸಾಯಿ ದಯಾಸಾಗರ್ , ಸುನೋ ಸಾಯಿಬಾಬಾ,  ದಯಾಕೆ ಮಾಸಿಹ ಸಾಯಿ,  ಪಾಲಕಿ ಸಾಯಿನಾಥ್ ಕೀ ಮತ್ತು ಇನ್ನು ಹಲವಾರು ಸಾಯಿ ಭಜನೆಯ ಆಲ್ಬಮ್ ಗಳು.



ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment