Monday, November 15, 2010

ಗುರುವಾಯುರಿನ ಸಾಯಿಬಾಬಾ ಮಂದಿರ - ಶಿರಡಿ ಸಾಯಿ ಮಂದಿರ, ಸಾಯಿ ಸಂಜೀವನಿ ಟ್ರಸ್ಟ್, ಮಮ್ಮಿಯುರ್, ಗುರುವಾಯುರ್, ತ್ರಿಚೂರು ಜಿಲ್ಲೆ, ಕೇರಳ - ಕೃಪೆ : ಸಾಯಿ ಅಮೃತಧಾರಾ.ಕಾಂ

ಈ ಮಂದಿರವು ಗುರುವಾಯುರಿನಲ್ಲಿದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು:

  • ಈ ದೇವಾಲಯದ ಭೂಮಿಪೂಜೆಯನ್ನು 24ನೇ ಮೇ 2006 ರಂದು ನೆರವೇರಿಸಲಾಯಿತು. 
  • ಈ ದೇವಾಲಯವನ್ನು 2ನೇ ಅಕ್ಟೋಬರ್ 2006 ರಂದು ಬ್ರಹ್ಮಶ್ರೀ. ತೆಕ್ಕೆಮಠ ಮುಪಿಲ್ ಸ್ವಾಮಿಯವರು ನೆರವೇರಿಸಿದರು. 
  • ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಅಮೃತಶಿಲೆಯ ಸುಂದರ ವಿಗ್ರಹವಿದೆ. 


 ಸಾಯಿಬಾಬಾರವರ ವಿಗ್ರಹ 

ದೇವಾಲಯದ ಕಾರ್ಯಚಟುವಟಿಕೆಗಳು 

ದಿನನಿತ್ಯ ಕಾರ್ಯಕ್ರಮಗಳು 

ಆರತಿಯ ಸಮಯ 
ಆರತಿ
ಸಮಯ
ಬೆಳಗಿನ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ರಾತ್ರಿ ಆರತಿ
7:00 PM

ಪ್ರತಿದಿನ ಸಾಯಿಬಾಬಾರವರಿಗೆ ಪುಷ್ಪಾಂಜಲಿಯನ್ನು ಮಾಡಲಾಗುತ್ತದೆ.  ಸೇವಾಶುಲ್ಕ 5/- ರುಪಾಯಿಗಳು.

ಪ್ರತಿನಿತ್ಯ ಅನ್ನದಾನವನ್ನು ಮಾಡಲಾಗುತ್ತದೆ. ಸೇವೆ ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಅನ್ನದಾನ ನಿಧಿಗೆ ಯಥಾಶಕ್ತಿ ಹಣವನ್ನು ಕಾಣಿಕೆಯಾಗಿ ನೀಡಬಹುದು. 

ಪ್ರತಿ ಗುರುವಾರ ಸಾಯಿಬಾಬಾರವರಿಗೆ ಮಹಾಭಿಷೇಕ ಕಾರ್ಯಕ್ರಮವಿರುತ್ತದೆ. ಸೇವಾಶುಲ್ಕ 200/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು 

  1. ಶಿವರಾತ್ರಿ 
  2. ಗುರುಪೂರ್ಣಿಮಾ 
  3. ವಿಜಯದಶಮಿ (ಬಾಬಾ ಸಮಾಧಿ ದಿವಸ)
  4. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ ಅಕ್ಟೋಬರ್ 2 ರಂದು.
ಸಾಮಾಜಿಕ ಕಾರ್ಯಚಟುವಟಿಕೆಗಳು 

  1. 100 ಬಡ ಕುಟುಂಬಗಳಿಗೆ ಪ್ರತಿ ತಿಂಗಳೂ ಉಚಿತವಾಗಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.  
  2. ಸಾಯಿ ಲಕ್ಷ್ಮೀ ಪೆನ್ಶನ್ ಸ್ಕೀಮ್ ನ ಯೋಜನೆಯಡಿ ಪ್ರತಿ ತಿಂಗಳೂ 150 ಮಂದಿ ಬಡ ಮಹಿಳೆಯರಿಗೆ 200 ರುಪಾಯಿಗಳ ಮಾಶಾಸನ ನೀಡಲಾಗುತ್ತಿದೆ. 
  3. ಯಶೋದ ಚೈಲ್ಡ್ ವೆಲ್ಫೇರ್ ಪ್ರಾಜೆಕ್ಟ್ ನ ಯೋಜನೆಯ ಅಡಿಯಲ್ಲಿ 1500 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲಾಗುತ್ತಿದೆ. 
  4. ಹರಿತ ಗೀತ ಪ್ರಾಜೆಕ್ಟ್ ನ ಯೋಜನೆಯಡಿಯಲ್ಲಿ ಎಲ್ಲಾ ಕಡೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಗ್ಲೋಬಲ್ ವಾರ್ಮಿಂಗ್ ನ ಬಗ್ಗೆ ಮಾಹಿತಿ ಮತ್ತು ಎಚ್ಚರಿಕೆಯನ್ನು ನೀಡುವ ಕೆಲಸ ಮಾಡಲಾಗುತ್ತಿದೆ.  
  5. ಸಾಯಿ ಐಶ್ವರ್ಯ ಇನ್ನೋವೇಟಿವ್ ಮದರ್ಸ್ ಏಡ್ (Sai Ma)


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ 

ವಿಳಾಸ: 

ಶಿರಡಿ ಸಾಯಿ ಮಂದಿರ
ಸಾಯಿ ಸಂಜೀವನಿ ಟ್ರಸ್ಟ್
ಮಮ್ಮಿಯುರ್, ಗುರುವಾಯುರ್
ತ್ರಿಚೂರ್ ಜಿಲ್ಲೆ, ಕೇರಳ.


ಸಂಪರ್ಕಿಸಬೇಕಾದ ವ್ಯಕ್ತಿ: 

ಕರ್ಮಯೋಗಿ ಡಾ.ಎ.ಹರಿನಾರಾಯಣನ್


ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


0487-2554749 / 099611 19999

ಈ  ಮೇಲ್ ವಿಳಾಸ: 


ಅಂತರ್ಜಾಲ ತಾಣ: 



ಮಾರ್ಗಸೂಚಿ:

ಮಮ್ಮಿಯುರ್ ಶಿವ ದೇವಾಲಯದ ಹಿಂಭಾಗ, ಗುರುವಾಯುರ್.

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment