Tuesday, July 27, 2010

ಬೆಂಗಳೂರಿನ ಸಾಯಿ ಮಂದಿರ - ಶ್ರೀ.ಶಿವಶಕ್ತಿ ಶಿರಡಿ ಸಾಯಿಬಾಬಾ ಮಂದಿರ, ಪುಟ್ಟೇನಹಳ್ಳಿ ಪಾಳ್ಯ, ಜೆ.ಪಿ.ನಗರ, ಬೆಂಗಳೂರು - ಕೃಪೆ - ಶ್ರೀ.ಗುರುಮುರ್ತಿ 

  • ದೇವಾಲಯದ ಹೊರಭಾಗದಲ್ಲಿ ಗಣೇಶನ ಸುಂದರ ವಿಗ್ರಹವಿದೆ.
  • ದೇವಾಲಯದ ಪ್ರವೇಶ ದ್ವಾರದ ಬಲಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. 
  • ಅಮೃತ ಶಿಲೆಯ ಸುಂದರ ಸಾಯಿಬಾಬಾರವರ ವಿಗ್ರಹವನ್ನು ದೇವಾಲಯದಲ್ಲಿ ಸಾಯಿಭಕ್ತರು ನೋಡಬಹುದು. 
  • ಶಿವ ಶಕ್ತಿ ಸ್ವರೂಪಿಣಿ ದುರ್ಗಾ ದೇವಿಯ ವಿಗ್ರಹವು ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 
  • ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರಿಗೆ ನಂದಿಯನ್ನು ಪ್ರತಿಷ್ಟಾಪಿಸಲಾಗಿದೆ.
  • ದೇವಾಲಯದ ಎರಡನೇ ಮಹಡಿಯಲ್ಲಿ ಪ್ರತಿ ಗುರುವಾರ ಅನ್ನದಾನ ಕಾರ್ಯಕ್ರಮ ನಡೆಯುತ್ತದೆ. 
  • ಪ್ರತಿ ಗುರುವಾರ ರಾತ್ರಿ ೮ ಘಂಟೆಗೆ ಪಲ್ಲಕ್ಕಿ ಉತ್ಸವ ನಡಯುತ್ತದೆ. 
  • ಮೊದಲನೇ ಮಹಡಿಯಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ. 
  • ಪ್ರತಿ ಗುರುವಾರ ಬೆಳಗ್ಗೆ ೬:೩೦ ಕ್ಕೆ ಸಾಯಿಬಾಬಾರವರಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಎಲ್ಲಾ ಸಾಯಿಭಕ್ತರು ಇದರಲ್ಲಿ ಪಾಲ್ಗೊಂಡು ತಾವೇ ಸ್ವತಃ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗಿದೆ. 

ಸಾಯಿಬಾಬಾರವರ ವಿಗ್ರಹ


ದುರ್ಗಾದೇವಿಯ ವಿಗ್ರಹ


 ಪವಿತ್ರ ಧುನಿ




  
 ಗುರುವಾರದ ಅನ್ನದಾನದ ದೃಶ್ಯ

ದಿನನಿತ್ಯ ನಡೆಯುವ ಕಾರ್ಯಕ್ರಮಗಳು

ಆರತಿಯ ಸಮಯ
ಆರತಿ
ಸಮಯ
ಕಾಕಡ ಆರತಿ
೬:೩೦ ಬೆಳಗ್ಗೆ 
ಮಹಾಮಂಗಳಾರತಿ 
೯:೩೦ ಬೆಳಗ್ಗೆ 
ಮಧ್ಯಾನ್ಹ ಆರತಿ
೧೨:೦೦
ಧೂಪಾರತಿ
೬:೩೦ ಸಂಜೆ 
ಶೇಜಾರತಿ
೯:೩೦ ರಾತ್ರಿ 

ವಿಶೇಷ ಕಾರ್ಯಕ್ರಮಗಳು 

ಪ್ರತಿ ಹುಣ್ಣಿಮೆಯ ದಿನ ಸಂಜೆ ೭:೦೦ ಘಂಟೆಯಿಂದ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ವಿಶೇಷ ಉತ್ಸವಗಳು ಮತ್ತು ಹಬ್ಬಗಳು

೧. ಹೊಸ ವರ್ಷದ ಆಚರಣೆ
೨. ಶ್ರೀರಾಮನವಮಿ
೩. ಗುರುಪೌರ್ಣಮಿ
೪. ನವರಾತ್ರಿ ಉತ್ಸವಗಳು
೫. ದತ್ತಾತ್ರೇಯ ಜಯಂತಿ

ದೇವಾಲಯವಿರುವ ಸ್ಥಳದ ವಿವರಗಳು

ವಿಳಾಸ :ನಂ.೫೩, ೧೩ ನೇ ಮುಖ್ಯ ರಸ್ತೆ, ಪುಟ್ಟೇನಹಳ್ಳಿ ಪಾಳ್ಯ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಜೆ.ಪಿ.ನಗರ, ೭ ನೇ ಹಂತ, ಬೆಂಗಳೂರು-೭೮.

ಸಂಪರ್ಕಿಸಬೇಕಾದ ವ್ಯಕ್ತಿ : ಶ್ರೀ. ಗುರುಮುರ್ತಿ ಗುರೂಜಿ

ದೂರವಾಣಿ ಸಂಖ್ಯೆಗಳು :   ೯೮೪೫೬೮೪೭೮೩ / ೯೬೮೬೬೮೧೨೩೩ / ೯೬೮೬೬೮೧೨೩೨

ಈ ಮೇಲ್ ವಿಳಾಸ :  jaiguru6@gmail.comgmurthy06@gmail.com

ಮಾರ್ಗ ಸೂಚಿ : ಪುಟ್ಟೇನಹಳ್ಳಿ ಪಾಳ್ಯ ಬಸ್ ನಿಲ್ದಾಣದಿಂದ ೨ ನಿಮಿಷ ನಡೆದರೆ ಸಾಯಿಮಂದಿರ ಸಿಕ್ಕುತ್ತದೆ.

No comments:

Post a Comment