Saturday, July 31, 2010

ಬೆಂಗಳೂರಿನ ಸಾಯಿ ಮಂದಿರ - ಶ್ರೀ ನಾಗಸಾಯಿ ಮಂದಿರ, ರಾಮಾಂಜನಪ್ಪ ಲೇಔಟ್, ಆಕಾಶ ನಗರ, ಎ.ನಾರಾಯಣಪುರ, ಬೆಂಗಳೂರು - ಕೃಪೆ - ಪಿ.ವೆಂಕಟರಮಣ ರೆಡ್ಡಿ 

 ದೇವಾಲಯದ ವಿಶೇಷತೆಗಳು

  • ದೇವಾಲಯದ ಭೂಮಿ ಪೂಜೆಯನ್ನು ೧೮ ನೇ ನವೆಂಬರ್ ೨೦೦೨ ರಂದು ಮಾಡಲಾಯಿತು.
  • ಸಾಯಿಬಾಬಾ ಮಂದಿರವು ೨೨ ನೇ ನವೆಂಬರ್ ೨೦೦೯ ರಂದು ಶ್ರೀ.ಅಮ್ಮುಲ ಸಾಂಭಶಿವ ರಾವ್ ರವರಿಂದ ಉದ್ಘಾಟನೆಗೊಂಡಿತು.
  • ಈ ದೇವಾಲಯವನ್ನು ಸಾರ್ವಜನಿಕರ ಸಹಕಾರದಿಂದ ಶ್ರೀ. ಶಿರಡಿ ಸಾಯಿಬಾಬಾ ಸೇವಾ ಸಮಿತಿ (ರಿ) ನಿರ್ಮಿಸಿದರು.
  • ದತ್ತಾತ್ರೇಯ ದೇವರ ವಿಗ್ರಹವು ಸಾಯಿಬಾಬಾ ಮಂದಿರದ ಎದುರುಗಡೆ ಇದೆ.
  • ಶಿರಡಿಯಲ್ಲಿರುವಂತೆ ನಂದಿಯ ವಿಗ್ರಹವನ್ನು ಸಾಯಿಬಾಬಾ ಮಂದಿರದ ಹೊರಗಡೆ ಪ್ರತಿಷ್ಟಾಪಿಸಲಾಗಿದೆ.
  • ಧುನಿಯನ್ನು ಸಾಯಿಬಾಬಾ ಮಂದಿರದ ಬಲಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. ಪವಿತ್ರ ಅಗ್ನಿಯನ್ನು ಬಿ.ಟಿ.ಎಂ. ಲೇಔಟ್, ಸಾಯಿಬಾಬಾ ಮಂದಿರದಿಂದ ತಂದು ಪ್ರತಿಷ್ಟಾಪಿಸಲಾಗಿದೆ.
  • ಸಾಯಿಬಾಬಾ ಮಂದಿರದ ಕೆಳ ಅಂತಸ್ತಿನಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದ್ದು ಅಲ್ಲಿ ನಂದಾದೀಪವನ್ನು ಕೂಡ ಸ್ಥಾಪಿಸಲಾಗಿದೆ.
  • ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಒಂದು ನಾಗರ ಹುತ್ತ ಇದೆ.

ಸಾಯಿಬಾಬಾ ವಿಗ್ರಹ

ಧ್ಯಾನ ಮಂದಿರ

 
ಪವಿತ್ರ ಧುನಿ ಮಾ

ನಾಗರ ಹುತ್ತ
  
ದೇವಾಲಯದ ಹೊರನೋಟ

ದೇವಾಲಯದ ಕಾರ್ಯಚಟುವಟಿಕೆಗಳು

 ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ

 ಕಾಕಡ ಆರತಿ - ಪ್ರತಿದಿನ ಬೆಳಿಗ್ಗೆ ೬:೩೦ ಕ್ಕೆ 
ಛೋಟಾ ಆರತಿ - ಪ್ರತಿದಿನ ಬೆಳಿಗ್ಗೆ ೮:೩೦ ಕ್ಕೆ 
ಮಧ್ಯಾನ್ಹ ಆರತಿ - ಪ್ರತಿದಿನ ಮಧ್ಯಾನ್ಹ ೧೨:೦೦ ಘಂಟೆಗೆ 
ಧೂಪಾರತಿ - ಪ್ರತಿದಿನ ಸಂಜೆ ೬:೧೫ ಕ್ಕೆ  
ಶೇಜಾರತಿ - ಪ್ರತಿದಿನ ರಾತ್ರಿ ೮:೧೫ ಕ್ಕೆ ಮತ್ತು ಗುರುವಾರದಂದು ೮:೩೦ ಕ್ಕೆ

ಪ್ರತಿ ಗುರುವಾರದಂದು ಬೆಳಿಗ್ಗೆ ೭:೦೦ ಘಂಟೆಯಿಂದ ೮:೦೦ ಘಂಟೆಯವರೆಗೆ ಮಾತ್ರ ಸಾಯಿಬಾಬಾ ವಿಗ್ರಹಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೨೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.

ತಿಂಗಳ ಯಾವುದೇ ದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ವಿಶೇಷ ಅಭಿಷೇಕ ಸೇವೆಯಿರುತ್ತದೆ. ಅದರ ಸೇವಾ ಶುಲ್ಕ ೧೦೦೧/- ರುಪಾಯಿಗಳಾಗಿದ್ದು, ಅಭಿಷೇಕ ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.  

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ವ್ರತವನ್ನು ಬೆಳಿಗ್ಗೆ ೯:೦೦ ರಿಂದ ೧೨:೦೦ ಘಂಟೆಯವರೆಗೆ ಹಮ್ಮಿಕೊಳ್ಳಲಾಗುತ್ತದೆ. ಇದರ ಸೇವಾ ಶುಲ್ಕ ೫೧/- ರುಪಾಯಿಗಳಾಗಿದ್ದು ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.

ವಿಶೇಷ ಉತ್ಸವಗಳು ಮತ್ತು ಹಬ್ಬಗಳು
 
  1. ಶ್ರೀ ರಾಮನವಮಿ
  2. ಗುರು ಪೂರ್ಣಿಮೆ
  3. ವಿಜಯ ದಶಮಿ (ಸಾಯಿಬಾಬಾ ಸಮಾಧಿ ದಿವಸ)
  4. ದತ್ತ ಜಯಂತಿ
  5. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ೨೨ ನೇ ನವೆಂಬರ್.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ ನಾಗಸಾಯಿ ಮಂದಿರ
ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ (ರಿ)
ನಂ.೧೫-೧, ರಾಮಾಂಜನಪ್ಪ ಲೇಔಟ್, ಆಕಾಶ ನಗರ,
ಎ.ನಾರಾಯಣಪುರ, ದೂರವಾಣಿನಗರ ಅಂಚೆ,
ಬೆಂಗಳೂರು-೫೬೦ ೦೧೬.

ಸಂಪರ್ಕಿಸಬೇಕಾದ ವ್ಯಕ್ತಿ:

ಪಿ. ವೆಂಕಟರಮಣ ರೆಡ್ಡಿ - ದೇವಾಲಯದ ಮ್ಯಾನೇಜರ್

ದೂರವಾಣಿ ಸಂಖ್ಯೆಗಳು:

೦೮೦-೨೮೫೧ ೨೨೯೯ / ೯೯೦೦೩, ೧೮೨೩೬

ಮಾರ್ಗಸೂಚಿ:

ಕೆ. ಆರ್.ಪುರಂ ರೈಲ್ವೆ ನಿಲ್ದಾಣದಿಂದ ೨೫ ನಿಮಿಷದ ನಡಿಗೆ, ಪಿ. ಡಬ್ಲ್ಯು.ಡಿ. ಮುಖ್ಯ ರಸ್ತೆಯ ಹತ್ತಿರ.

No comments:

Post a Comment