Thursday, July 29, 2010

ಬೆಂಗಳೂರಿನ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಆನಂದ ಆಶ್ರಮ, ಕೆ.ಇ.ಬಿ.ಲೇಔಟ್, ೧ ನೇ ಹಂತ, ಬಿ.ಟಿ.ಎಂ.ಲೇಔಟ್, ಬೆಂಗಳೂರು - ಕೃಪೆ - ಶ್ರೀ.ಶೇಖರ್ ರಾಜು

ದೇವಾಲಯದ ವಿಶೇಷತೆಗಳು 

  • ಗುರುಸ್ಥಾನವನ್ನು ೨೦ ನೇ ಮಾರ್ಚ್ ೧೯೯೮ ರಂದು ಪ್ರಾರಂಭಿಸಲಾಯಿತು. 
  • ಸಾಯಿಮಂದಿರವು ೧೯ ನೇ ಆಗಸ್ಟ್ ೧೯೯೯ ರಂದು ಅಮ್ಮುಲ ಸಾಂಭಶಿವರಾವ್ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. 
  • ಮಂದಿರವನ್ನು ಸುತ್ತಮುತ್ತಲಿನ ಸಾರ್ವಜನಿಕರ ಸಹಾಯದಿಂದ ಶ್ರೀ.ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ) ಪೂರ್ಣಗೊಳಿಸಿತು. 
  • ದೇವಾಲಯದ ಪ್ರಾಂಗಣದ ಎಡಭಾಗದಲ್ಲಿ ಗುರುಸ್ಥಾನವನ್ನು ನಿರ್ಮಿಸಲಾಗಿದ್ದು ಅಲ್ಲಿ ಗಣೇಶ, ದತ್ತಾತ್ರೇಯ ಮತ್ತು ಸುಬ್ರಮಣ್ಯ ದೇವರುಗಳ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 
  • ಶಿರಡಿಯಲ್ಲಿರುವಂತೆ ನಂದಿಯ ವಿಗ್ರಹವನ್ನು ಸಾಯಿಮಂದಿರದ ಹೊರಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 
  • ಸಾಯಿಬಾಬಾ ಮಂದಿರದ ಮುಂಭಾಗದಲ್ಲಿ ಶ್ರೀ ಸಾಯಿ ಕೋಟಿ ಸ್ಥೂಪವನ್ನು ಸ್ಥಾಪಿಸಲಾಗಿದೆ. 
  • ಧುನಿಯನ್ನು ಸಾಯಿಬಾಬಾ ಮಂದಿರದ ಬಲಭಾಗದಲ್ಲಿ ಶಿರಡಿಯಿಂದ ತಂದ ಪವಿತ್ರ ಅಗ್ನಿಯಿಂದ ಸ್ಥಾಪಿಸಲಾಗಿದೆ. 
  • ಧುನಿಯ ಹೊರಗಡೆ ಬಲಭಾಗದಲ್ಲಿ ಶಿರಡಿಯಿಂದ ತಂದ ಪವಿತ್ರ ನಂದಾದೀಪದ ಜ್ವಾಲೆಯಿಂದ ನಂದಾದೀಪವನ್ನು ಸ್ಥಾಪಿಸಲಾಗಿದೆ. 
  • ಗುರುಸ್ಥಾನಕ್ಕೆ ಎದುರಿನಲ್ಲಿ ದೇವಾಲಯದ ಹೊರಭಾಗದಲ್ಲಿ ದತ್ತ ಪಾದುಕೆಗಳನ್ನು ಮತ್ತು ಔದುಂಬರ ವೃಕ್ಷವನ್ನು ಸ್ಥಾಪಿಸಲಾಗಿದೆ. 
  • ಚಾವಡಿಯನ್ನು ದೇವಾಲಯದ ಹೊರಭಾಗದಲ್ಲಿ ಉಚಿತ ಔಷಧಾಲಯದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. 
  • ಸಾಯಿಬಾಬಾ ಮಂದಿರದ ಕೆಳಭಾಗದ ನೆಲಮಾಳಿಗೆಯಲ್ಲಿ ಧ್ಯಾನಮಂದಿರ ಮತ್ತು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. 
  • ಗುರುಸ್ಥಾನದ ಪಕ್ಕದಲ್ಲಿ ಭೋಜನ ಶಾಲೆಯನ್ನು ಸ್ಥಾಪಿಸಲಾಗಿದೆ.

ಸಾಯಿಬಾಬಾರವರ ಸುಂದರ ವಿಗ್ರಹ

ದೇವಾಲಯದ ಹೊರಭಾಗದಲ್ಲಿರುವ ನಂದಿಯ ವಿಗ್ರಹ 

ಗುರುಸ್ಥಾನ

ಶ್ರೀ ಸಾಯಿ ಕೋಟಿ ಸ್ಥೂಪ 

ಪವಿತ್ರ ಧುನಿ ಮಾ 
ನಂದಾ ದೀಪ

ದೇವಾಲಯದ ಕಾರ್ಯಚಟುವಟಿಕೆಗಳು 

ದೈನಂದಿನ ಕಾರ್ಯಕ್ರಮಗಳು 

ಆರತಿಯ ಸಮಯ  

Aarti
Timings
ಕಾಕಡ ಆರತಿ ೬ :೩೦ ಬೆಳಗ್ಗೆ 
ಮಂಗಳಾರತಿ ೮ :೩೦ ಬೆಳಗ್ಗೆ 
ಮಧ್ಯಾನ್ಹ ಆರತಿ ೧೨ :೦೦ ಘಂಟೆ
ಧೂಪಾರತಿ 6.15 ಸಂಜೆ 
ಶೇಜಾರತಿ ೮ :೩೦ ರಾತ್ರಿ (ಗುರುವಾರದಂದು ರಾತ್ರಿ ೧೦:೦೦ ಘಂಟೆಗೆ)

  • ಗುರುಸ್ಥಾನದಲ್ಲಿ ಪ್ರತಿನಿತ್ಯ ಅಭಿಷೇಕವನ್ನು ಬೆಳಗ್ಗೆ ೭ ಘಂಟೆಯಿಂದ ೯ ಘಂಟೆಯವರೆಗೆ ಮಾಡಲಾಗುತ್ತದೆ. ಇದರ ಶುಲ್ಕ ೧೦೧/- ರುಪಾಯಿಗಳಾಗಿದ್ದು ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇರುವುದಿಲ್ಲ. 
  • ಸಾಯಿಬಾಬಾರವರ ಪಂಚ ಲೋಹದ ವಿಗ್ರಹಕ್ಕೆ ಪ್ರತಿನಿತ್ಯ ಅಭಿಷೇಕವನ್ನು ಬೆಳಗ್ಗೆ ೯ ಘಂಟೆಯಿಂದ ೧೦.೩೦ ಘಂಟೆಯವರೆಗೆ ಮಾಡಲಾಗುತ್ತದೆ.ಇದರ ಶುಲ್ಕ ೩೫೧/- ಆಗಿದ್ದು ಮುಂಚಿತವಾಗಿ ದೇವಾಲಯದ ಆಫೀಸಿನಲ್ಲಿ ಹೆಸರನ್ನು ನೊಂದಾಯಿಸತಕ್ಕದ್ದು. ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇರುವುದಿಲ್ಲ. 
  • ಪ್ರತಿನಿತ್ಯ ಧುನಿ ಪೂಜೆಯನ್ನು ಬೆಳಗ್ಗೆ ೧೧:೪೫, ಸಂಜೆ ೬:೦೦ ಮತ್ತು ರಾತ್ರಿ ೮:೧೫ ಕ್ಕೆ ಮಾಡಲಾಗುತ್ತದೆ. 
  • ಪ್ರತಿ ಗುರುವಾರ ರಾತ್ರಿ ೮:೩೦ ಕ್ಕೆ ಪಲ್ಲಕ್ಕಿ ಸೇವೆಯನ್ನು ಮಾಡಲಾಗುತ್ತದೆ. ಸೇವೆಯನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ೧೦೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. 
  • ಪ್ರತಿ ಗುರುವಾರ ಚಾಮರ ಸೇವೆಯನ್ನು ರಾತ್ರಿ ೮:೩೦ ಕ್ಕೆ ಮಾಡಲಾಗುತ್ತದೆ. ಸೇವೆಯನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. 
  ತಿಂಗಳ ವಿಶೇಷ ಕಾರ್ಯಕ್ರಮ 

ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ ೪:೦೦ ಘಂಟೆಯಿಂದ ೬:೦೦ ಘಂಟೆಯವರೆಗೆ ಸತ್ಯನಾರಾಯಣ ವ್ರತವನ್ನು ಮಾಡಲಾಗುತ್ತದೆ. ಪೂಜೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೧೫೦/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. ಸತ್ಯನಾರಾಯಣ ವ್ರತ ಸಂಕಲ್ಪವನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ೧೫/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇರುವುದಿಲ್ಲ.


ವಿಶೇಷ ಉತ್ಸವಗಳು ಮತ್ತು ಹಬ್ಬದ ದಿನಗಳು

೧. ಹೊಸ ವರ್ಷದ ಆಚರಣೆ (ಹೂವಿನ ಅಲಂಕಾರ ಮತ್ತು ಭಜನೆ ಕಾರ್ಯಕ್ರಮ).
೨. ಪ್ರತಿ ವರ್ಷದ ಫೆಬ್ರವರಿ ತಿಂಗಳಿನ ೨ ನೇ ಭಾನುವಾರ ಬೆಳಗ್ಗೆ ೮ ರಿಂದ ರಾತ್ರಿ ೮:೦೦ ರ ವರೆಗೆ ಸಾಯಿನಾಮ ಜಪ ಕಾರ್ಯಕ್ರಮ.
೩. ಶ್ರೀರಾಮ ನವಮಿ.
೪. ಗುರು ಪೌರ್ಣಮಿ.
೫. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ ೧೯ ನೇ ಆಗಸ್ಟ್ ರಂದು.
೬. ವಿಜಯ ದಶಮಿ (ಸಾಯಿಬಾಬಾ ಸಮಾಧಿ ದಿನ)
೭. ದತ್ತ ಜಯಂತಿ.

ಸಾಮಾಜಿಕ ಕಾರ್ಯ ಚಟುವಟಿಕೆಗಳು

  • ದೇವಾಲಯದ ಉಚಿತ ವೈದ್ಯಕೀಯ ಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ ೯:೩೦ ರಿಂದ ೧೧:೩೦ ರ ವರೆಗೆ ಮತ್ತು ಸಂಜೆ ೪:೩೦ ರಿಂದ ೬:೩೦ ರ ವರೆಗೆ (ಭಾನುವಾರ ಹೊರತುಪಡಿಸಿ) ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ. 
  • ದೇವಾಲಯದ ಉಚಿತ ದಂತ ಚಿಕಿತ್ಸಾ ಕೇಂದ್ರದಲ್ಲಿ ಪ್ರತಿದಿನ ಸಂಜೆ ೪:೩೦ ರಿಂದ ೮:೦೦ ರ ವರೆಗೆ (ಭಾನುವಾರ ಹೊರತುಪಡಿಸಿ) ಉಚಿತ ದಂತ ತಪಾಸಣೆ ಮಾಡಲಾಗುತ್ತದೆ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ.
  • ಪ್ರತಿ ವರ್ಷ ೧೫ ನೇ ಆಗಸ್ಟ್ ರದು ರಕ್ತದಾನ ಶಿಬಿರ ನಡೆಸಲಾಗುತ್ತದೆ. 
  • ಸಮಾಜದ ಹಿಂದುಳಿದ ವರ್ಗದವರ ವೈದ್ಯಕೀಯ ಖರ್ಚಿನ ಸ್ವಲ್ಪ ಭಾಗವನ್ನು ಟ್ರಸ್ಟ್ ನ ಸಲಹೆಯ ಮೇರೆಗೆ ನೀಡಲಾಗುತ್ತದೆ. 
  • ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಗಳನ್ನು ಮತ್ತು ಸಮವಸ್ತ್ರಗಳನ್ನು  ವಿತರಿಸಲಾಗುತ್ತದೆ. 
  • ಸಮಾಜದ ಬಡ ಜನರಿಗೆ,ವೃದ್ದರಿಗೆ ಮತ್ತು ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು, ಶಾಲುಗಳನ್ನು ಮತ್ತು ಹೊದಿಕೆಗಳನ್ನು ನೀಡಲಾಗುತ್ತದೆ.
 ದೇವಾಲಯದ ವಿಳಾಸ ಮತ್ತು ಮಾರ್ಗ ಸೂಚಿ

ವಿಳಾಸ :

ಶ್ರೀ ಶಿರಡಿ ಸಾಯಿಬಾಬಾ ಆನಂದ ಆಶ್ರಮ,
ಶ್ರೀ ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ)
೭ ನೇ ಮುಖ್ಯ ರಸ್ತೆ, ಕೆ.ಇ.ಬಿ.ಬಡಾವಣೆ
೧ ನೇ ಹಂತ, ಬಿ.ಟಿ.ಎಂ.ಬಡಾವಣೆ
ಬೆಂಗಳೂರು-೫೬೦ ೦೨೯.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ. ಸುರೇಶ / ಶ್ರೀ. ಶೇಖರ ರಾಜು / ಶ್ರೀ. ಕೃಷ್ಣ ಕುಮಾರ್

ದೂರವಾಣಿ ಸಂಖ್ಯೆಗಳು:

೦೮೦ -೨೬೬೮ ೯೩೯೩ / ೯೮೪೫೦ ೪೯೪೬೮ /೯೯೦೦೦ ೦೦೦೭೨ /೯೪೪೯೦ ೨೯೩೯೩ 

ಇ ಮೇಲ್ ವಿಳಾಸ : 

chandrankrishnakumar@yahoo.com
  
ಮಾರ್ಗ ಸೂಚಿ: 

ಮೈಕೋ ಲೇಔಟ್ ಬಸ್ ನಿಲ್ಧಾಣದಿಂದ ೫ ನಿಮಿಷದ ನಡೆದರೆ ಸಾಯಿಮಂದಿರ ಸಿಕ್ಕುತ್ತದೆ.





    No comments:

    Post a Comment