Tuesday, July 27, 2010

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯ, ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಬನ್ನೇರುಘಟ್ಟ ರಸ್ತೆ, ಬೆಂಗಳೂರು - ಕೃಪೆ - ಸಾಯಿಅಮೃತಧಾರಾ.ಕಾಂ 

ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಸಮಾಜದಲ್ಲಿರುವ ಬಡ ಜನರ ಯೋಗಕ್ಷೇಮಕ್ಕಾಗಿ, ಅವರ ಒಳಿತಿಗಾಗಿ ಶಿರಡಿ ಸಾಯಿಬಾಬಾರವರು ತೋರಿಸಿದ ಮಾರ್ಗದಲ್ಲಿ ನಡೆಯುತ್ತಾ ಬಡ ಜನರ ಮಕ್ಕಳ ಓದು-ಬರಹಕ್ಕೆ ಸಹಾಯ ಮಾಡಲು, ಅವರ ವೈದ್ಯಕೀಯ ಖರ್ಚಿಗೆ ಸಹಾಯವನ್ನು ಮಾಡುವ, ವೃದ್ದರ ವೈದ್ಯಕೀಯ ಖರ್ಚುಗಳಿಗೆ ಸಹಾಯವನ್ನು ಮಾಡುವ ಉನ್ನತ ಧ್ಯೇಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಟ್ರಸ್ಟ್ ನಲ್ಲಿ ಅನೇಕ ಯುವಕರು ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದು ಸೇವಾ ಮನೋಭಾವವನ್ನು ಹೊಂದಿದ್ದಾರೆ.




ಈ ಟ್ರಸ್ಟ್ ನ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳು ಈ ಕೆಳಕಂಡಂತೆ ಇವೆ. 


  • ಶ್ರೀ.ದ್ವಾರಕಾಮಾಯಿ  ಸೇವಾ ಚಾರಿಟಬಲ್ ಟ್ರಸ್ಟ್ 7ನೇ ಜುಲೈ 2009 ರ ಪವಿತ್ರ ಗುರುಪೂರ್ಣಿಮೆಯಂದು ಪ್ರಾರಂಭವಾಯಿತು. 
  • ಈ ಟ್ರಸ್ಟ್ ಅನ್ನು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿ 27ನೇ ಆಗಸ್ಟ್ 2009 ರಂದು ನೋಂದಣಿ ಮಾಡಲಾಯಿತು. 
  • ಈ ಟ್ರಸ್ಟ್ ನಲ್ಲಿರುವ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹವನ್ನು ಶಿರಡಿಯ ಸಮಾಧಿ ಮಂದಿರ, ದ್ವಾರಕಾಮಾಯಿ ಹಾಗೂ ಚಾವಡಿಯಲ್ಲಿ ಪೂಜೆ ಮಾಡಿಸಿ ನಂತರ ತಂದು ವಿಧಿವತ್ತಾಗಿ ಪ್ರತಿಷ್ಟಾಪಿಸಲಾಯಿತು. 
  • ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹವನ್ನು ನಿತ್ಯ ಪೂಜೆ ಮತ್ತು ಅಭಿಷೇಕಗಳಿಗೆ ಬಳಸಲಾಗುತ್ತಿದೆ. 
  • ಪ್ರತಿ ಗುರುವಾರ ಸಂಜೆ ಭಜನೆಯ ಕಾರ್ಯಕ್ರಮವನ್ನು ಸಂಜೆ 6:30 ರಿಂದ 8:30 ರ ವರೆಗೆ ನಡೆಸಲಾಗುತ್ತಿದೆ.
  • ಟ್ರಸ್ಟ್ ನ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ಟ್ರಸ್ಟ್ ನಲ್ಲಿರುವ ಸಾಯಿಬಾಬಾರವರ ವಿಗ್ರಹ ಮತ್ತು ಪಾದುಕೆಗಳು 


ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ವಸ್ತ್ರವನ್ನು ನೀಡುತ್ತಿರುವ ದೃಶ್ಯ 


ವೃದ್ಧಾಶ್ರಮದ ವೃದ್ಧರಿಗೆ ಔಷಧ ನೀಡುತ್ತಿರುವ ದೃಶ್ಯ



ವೃದ್ಧಾಶ್ರಮದ ನಿವಾಸಿಗಳಿಗೆ ಭೋಜನ ನೀಡುತ್ತಿರುವ ದೃಶ್ಯ 

ಟ್ರಸ್ಟ್ ನ ಧ್ಯೇಯ ಮತ್ತು ಉದ್ದೇಶಗಳು

  • ಶಿರಡಿ ಸಾಯಿಬಾಬಾರವರು ಮತ್ತು ಅವರ ಅಂಕಿತ ಶಿಷ್ಯರುಗಳಾದ ಶ್ರೀ.ರಾಧಾಕೃಷ್ಣ ಸ್ವಾಮೀಜಿ ಹಾಗೂ ಶ್ರೀ.ನರಸಿಂಹ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದು ಮತ್ತು ಪ್ರಪಂಚದ ಎಲ್ಲಾ ಜನರ ನಡುವೆ ಸೋದರ ಭಾವನೆಯನ್ನು ಇನ್ನಷ್ಟು ಹೆಚ್ಚಿಸುವುದು. 
  • ಸಾಯಿ ಭಜನೆಗಳು, ಸತ್ಸಂಗಗಳು, ಹೆಸರಾಂತ ವೇದಾಂತ ಪಂಡಿತರಿಂದ ಪ್ರವಚನಗಳನ್ನು ಏರ್ಪಡಿಸುವುದರ ಮುಖೇನ ಎಲ್ಲೆಡೆಯಲ್ಲಿ ಸಾಯಿಬಾಬಾರವರ ಪ್ರಚಾರವನ್ನು ಮತ್ತು ಅವರ ಸಿದ್ದಾಂತವನ್ನು ಪ್ರಚಾರ ಮಾಡುವುದು. 
  • ಬೆಂಗಳೂರಿನ ಯಾವ ಪ್ರದೇಶದಲ್ಲಿ ಸಾಯಿ ಮಂದಿರವಿಲ್ಲವೋ ಅಲ್ಲಿ ಸಾಯಿಬಾಬಾರವರ ಮಂದಿರವನ್ನು ಕಟ್ಟಿ ಅದನ್ನು ಉತ್ತಮವಾಗಿ ನಡೆಸುವುದು ಮತ್ತು ಅಲ್ಲಿನ ಜನರಿಗೆ ಸಾಯಿಬಾಬಾರವರ ದರ್ಶನ ಮತ್ತು ಆಶೀರ್ವಾದ ಲಭಿಸುವಂತೆ ಮಾಡುವುದು. 
  • ಸಾಯಿಬಾಬಾರವರ ಪ್ರಮುಖ ಧ್ಯೇಯವಾದ ಅನ್ನದಾನವನ್ನು ಬೆಂಗಳೂರಿನ ಪ್ರಮುಖ ವೃದ್ಧಾಶ್ರಮಗಳು, ಶಾಲೆಗಳು, ಅಂಗವಿಕಲರ ಸಂಸ್ಥೆಗಳು, ಆಶ್ರಮಗಳಲ್ಲಿ ನಿಯಮಿತವಾಗಿ ನಡೆಸುವುದು ಮತ್ತು ಅಲ್ಲಿರುವ ಜನರ ಯೋಗಕ್ಷೇಮವನ್ನು ಆಗಾಗ್ಗೆ ವಿಚಾರಿಸಿ ಕೈಲಾದ ಸಹಾಯವನ್ನು ಮಾಡುವುದು. 
  • ಸಮಾಜದ ಹಿಂದುಳಿದ ಮತ್ತು ಬಡ ಜನರ ಶಸ್ತ್ರಚಿಕಿತ್ಸೆ, ಔಷಧಗಳಿಗೆ ಹಣಕಾಸಿನ ಸಹಾಯವನ್ನು ಮಾಡುವುದು. 
  • ಟ್ರಸ್ಟ್ ನ ಧ್ಯೇಯ ಮತ್ತು ಉದ್ದೇಶಗಳನ್ನು ತಿಳಿಸುವ ಭಿತ್ತಿ ಪತ್ರಗಳನ್ನು ಜನರಿಗೆ ನೀಡಿ ಟ್ರಸ್ಟ್ ನ ಧ್ಯೇಯಗಳನ್ನು ತಿಳಿಯಪಡಿಸಿ ಟ್ರಸ್ಟ್ ನ ಸದುದ್ದೇಶಗಳಿಗೆ ಬಳಸಲು ಹಣವನ್ನು ಸಂಗ್ರಹ ಮಾಡುವುದು. 
  • ಟ್ರಸ್ಟ್ ನ ಇನ್ನಿತರ ಯಾವುದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾಗುವ ಎಲ್ಲಾ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುವುದು. 
ಟ್ರಸ್ಟ್ ನ ವತಿಯಿಂದ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ನಿರ್ಮಾಣ:

ಟ್ರಸ್ಟ್ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರವನ್ನು ಬೆಂಗಳೂರು ದಕ್ಷಿಣ ಭಾಗದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕುಲುಮೆಪಾಳ್ಯದಲ್ಲಿ ನಿರ್ಮಾಣ ಮಾಡುತ್ತಿದ್ದು ಅದಕ್ಕೆ ಸರಿಸುಮಾರು 80 ಲಕ್ಷ ರೂಪಾಯಿಗಳ ವೆಚ್ಚ ತಗಲುತ್ತದೆ ಎಂದು ಅಂದಾಜು ಮಾಡಲಾಗಿದೆ. 

ಈ ದೇವಾಲಯದ ರೂಪುರೇಷೆ ಹಾಗೂ ಮನವಿ ಪತ್ರವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 





ಟ್ರಸ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯರು 

1.ಶ್ರೀ.ಕೆ.ಗೋವಿಂದರಾಜ್          - ಅಧ್ಯಕ್ಷರು
2. ಶ್ರಿ.ರಾಘವೇಂದ್ರ ಶೆಟ್ಟಿ           - ಉಪಾಧ್ಯಕ್ಷರು
3. ಶ್ರಿ.ಶ್ರೀ.ಹೆಚ್.ಎನ್.ರಾಜೇಶ್   – ಸಾಮಾನ್ಯ ಕಾರ್ಯದರ್ಶಿ
4. ಶ್ರೀ. ಅಚ್ಯುತ ರಾವ್              – ಜಂಟಿ ಕಾರ್ಯದರ್ಶಿ 
5. ಶ್ರಿ. ಕೆ.ಎಸ್.ವೇಣುಗೋಪಾಲ್  - ಖಚಾಂಚಿ 
6. ಶ್ರಿ.ಬಿ.ಅರ್.ನಾರಾಯಣ          - ಸದಸ್ಯರು 
7. ಶ್ರೀ.ಹೇಮಂತ್ ಕೊಲೇಕರ್      - ಸದಸ್ಯರು 
8.ಶ್ರೀ.ಬಿ. ಆನಂದ ಸಿಂಗ್             - ಸದಸ್ಯರು
9. ಶ್ರಿ.ಬಿ.ಸಿ.ಪ್ರವೀಣ್                    - ಸದಸ್ಯರು

 
ಟ್ರಸ್ಟ್ ನ ಕಾರ್ಯ ಚಟುವಟಿಕೆಗಳು 

  • ವೃದ್ಧಾಶ್ರಮ ಹಾಗೂ ಅಂಧರ ಶಾಲೆಗಳಲ್ಲಿ ಅನ್ನದಾನ ಕಾರ್ಯಕ್ರಮಗಳು.
  • ವೃದ್ಧಾಶ್ರಮದ ವೃದ್ಧರಿಗೆ ಉಚಿತವಾಗಿ ಔಷಧಗಳನ್ನು ನೀಡುವ ಕಾರ್ಯಕ್ರಮ. 
  • ಅನಾಥಾಶ್ರಮದ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಶಾಲಾ ಬ್ಯಾಗ್ ಗಳು ಮತ್ತು ತಟ್ಟೆಗಳನ್ನು ನೀಡುವ ಕಾರ್ಯಕ್ರಮ.
  • ಬಡ ಜನರಿಗೆ ಮತ್ತು ಅಶಕ್ತರಿಗೆ ವೈದ್ಯಕೀಯ ಸಹಾಯವನ್ನು ಮಾಡುವ ಕಾರ್ಯಕ್ರಮ.
  • ನಿಯಮಿತವಾಗಿ ಪ್ರತಿ ವರ್ಷ ಶಿರಡಿ ಯಾತ್ರೆಯನ್ನು ಕೈಗೊಳ್ಳುವುದು.
ವಿಶೇಷ ಉತ್ಸವದ ದಿನಗಳು

1 . ಗುರು ಪೂರ್ಣಿಮೆ
2 . ರಾಮನವಮಿ
3 . ವಿಜಯದಶಮಿ
4 .ದತ್ತ ಜಯಂತಿ

ದೇಣಿಗೆಗೆ ಮನವಿ:

ಟ್ರಸ್ಟ್ ನಿರ್ಮಿಸುತ್ತಿರುವ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ಖರ್ಚುಗಳಿಗಾಗಿ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಿಗಾಗಿ ದೇಣಿಗೆ ನೀಡಲು ಇಚ್ಚಿಸುವ ಸಾಯಿ ಬಂಧುಗಳು ಹಣವನ್ನು  ನಗದು/ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ "ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಬೆಂಗಳೂರು" ಈ ಹೆಸರಿಗೆ ಸಂದಾಯವಾಗುವಂತೆ ನೀಡಬಹುದು. ಟ್ರಸ್ಟ್ ನ ಬ್ಯಾಂಕ್ ಖಾತೆಯ ವಿವರಗಳು ಈ ಕೆಳಕಂಡಂತೆ ಇವೆ: 

ಖಾತೆ ಸಂಖ್ಯೆ: 2698101011164, - ಕೆನರಾ ಬ್ಯಾಂಕ್, ಡಾ.ರಾಜಕುಮಾರ್ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-21, ಐ.ಎಫ್.ಎಸ್.ಸಿ.ಸಂಖ್ಯೆ: CNRB0002698. 

ಟ್ರಸ್ಟ್ ಗೆ ನೀಡುವ ಎಲ್ಲಾ ದೇಣಿಗೆಗೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80-G ಅನ್ವಯವಾಗುವಂತೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.
ಟ್ರಸ್ಟ್ ನ ಸಂಪರ್ಕದ ವಿವರಗಳು 

ಸ್ಥಳ:
ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಶಿರಡಿ ಸಾಯಿಬಾಬಾ ಲೇ ಔಟ್, ಕುಲುಮೆ ಪಾಳ್ಯ

ವಿಳಾಸ:
ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್,  
ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯ, ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, 
ಬನ್ನೇರುಘಟ್ಟ ರಸ್ತೆ, ಬೆಂಗಳೂರು

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರಿ. ವೇಣುಗೋಪಾಲ್ /ಶ್ರಿ.ರಾಜೇಶ್/ಶ್ರಿ.ಪ್ರವೀಣ್/ಶ್ರಿ.ಅಚ್ಯುತ ರಾವ್/ಶ್ರಿ.ಗೋವಿಂದ ರಾಜ್/
 

ದೂರವಾಣಿ ಸಂಖ್ಯೆಗಳು:
+91 99805 26642 /+91 94483 62411/+91 90355 56381/+91 99453 73737/+91 99860 32187/+91 94490 64951

ಇ-ಮೈಲ್ ವಿಳಾಸ:
sdstblr@gmail.com

ಅಂತರ್ಜಾಲ ತಾಣ: 
http://shridwarakamaisevacharitabletrust.webs.com/

ಮಾರ್ಗಸೂಚಿ:
ಶ್ಯಾನುಭೋಗನ ಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಬನ್ನೇರುಘಟ್ಟ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯದಲ್ಲಿ ಇರುತ್ತದೆ. ಮೆಜಿಸ್ಟಿಕ್ ಹಾಗೂ ಮಾರುಕಟ್ಟೆಯಿಂದ ದೇವಾಲಯಕ್ಕೆ ಹೇರಳವಾಗಿ ಬಸ್ ಗಳು ದೊರೆಯುತ್ತವೆ. 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ  

No comments:

Post a Comment