Friday, July 23, 2010

ಬೆಂಗಳೂರಿನ ಸಾಯಿಭಕ್ತನ ಹುಣ್ಣನ್ನು ವಾಸಿಮಾಡಿದ ಸಾಯಿಬಾಬಾರವರ ಲೀಲೆ- ಕೃಪೆ - ಡಾ.ಶಿವಚರಣ್

ಈ ಘಟನೆ ನಡೆದಿದ್ದು ಅಕ್ಟೋಬರ್ ೨೦೦೯ ರಲ್ಲಿ. ಶ್ರೀ. ಸಂಜೀವ ರವರು ಅನನ್ಯ ಸಾಯಿಭಕ್ತರಾಗಿದ್ದರು. ಅವರಿಗೆ ಇದ್ದಕ್ಕಿದ್ದಂತೆ ದೇಹದಲ್ಲಿ ಒಂದು ಹುಣ್ಣಾಗಿ ಬಹಳ ಯಾತನೆಯನ್ನು ಅನುಭವಿಸುತ್ತಿದ್ದರು. ಇವರು ಖಾಯಿಲೆಗೆ ತಮ್ಮ ಮನೆಯ ವೈದ್ಯರಾದ ಡಾ. ಶ್ರೀನಾಥ್ ಹೆರೂರ್ ರವರ ಬಳಿ ಆಂಗ್ಲ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಈ ರೀತಿ ಔಷಧಿಯನ್ನು ತೆಗೆದುಕೊಳ್ಳುವಾಗ ನೋವು ಕಡಿಮೆಯಾದಂತೆ ತೋರುತ್ತಿತ್ತು. ಆದರೆ ಔಷಧಿ ಖಾಲಿಯಾದ ಮೇಲೆ ನೋವು ಪುನಃ ಕಾಣಿಸಿಕೊಳ್ಳುತ್ತಿತ್ತು.

ಕೊನೆಗೆ ಡಾ.ಶ್ರೀನಾಥ್ ಹೆರೂರ್ ರವರು ಇವರಿಗೆ ಮನೆಯ ಸಮೀಪ ಇರುವ ಸಾಗರ್ ಹಾಸ್ಪಿಟಲ್ ಗೆ ಹೋಗಿ ಹುಣ್ಣನ್ನು ತೆಗೆಸಲು ಆಪರೇಶನ್ ಮಾಡಿಸುವಂತೆ ಸಲಹೆ ನೀಡಿದರು. ಶ್ರೀ. ಸಂಜೀವ ಅವರ ಮನಸ್ಸಿಗೆ ಇದರಿಂದ ಬಹಳ ಆಘಾತವಾಯಿತು. 

ಮರುದಿನ ಬೆಳಗ್ಗೆ ಶಸ್ತ್ರಚಿಕಿತ್ಸಾ ತಜ್ಞರನ್ನು ಭೇಟಿ ಮಾಡುವುದಕ್ಕೆ ಹೋಗುವ ಮೊದಲು ಸಂಜೀವ ರವರು ಸಾಯಿಬಾಬಾರವರನ್ನು ಅನನ್ಯ ಭಕ್ತಿಯಿಂದ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಕೇವಲ ಮಾತ್ರೆ ಔಷಧಗಳಿಂದಲೇ ತಮಗೆ ಬಂದಿರುವ ಹುಣ್ಣು ವಾಸಿಯಾಗುವಂತೆ ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿದರು. 

ಆ ನಂತರ ತಮ್ಮ ಹೆಂಡತಿಯೊಂದಿಗೆ ಶಸ್ತ್ರಚಿಕಿತ್ಸಾ ತಜ್ಞರನ್ನು ಭೇಟಿ ಮಾಡಲು ಹೋದರು. ಸಂಜೀವ ರವರ ಖಾಯಿಲೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲವೆಂದು ಮತ್ತು ಕೇವಲ ಮಾತ್ರೆಗಳಿಂದಲೇ ಅವರ ಖಾಯಿಲೆಯನ್ನು ಗುಣಪಡಿಸಬಹುದೆಂದು ತಿಳಿಸಿದರು. 

ಡಾಕ್ಟರರ ಮಾತುಗಳನ್ನು ಕೇಳಿ ಸಂಜೀವ್ ಮತ್ತು ಅವರ ಪತ್ನಿಗೆ ಅಮೃತವನ್ನೇ ಕುಡಿದಷ್ಟು ಸಂತೋಷವಾಯಿತು. ಆಲ್ಲದೇ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿದು ಮನಸ್ಸು ನಿರಾಳವಾಯಿತು. ಸಾಯಿ ಸಚ್ಚರಿತ್ರೆಯಲ್ಲಿ ಬಾಬಾರವರು  "ಯಾರು ನನ್ನನ್ನು ನಂಬಿ ಶ್ರದ್ದೆ ಮತ್ತು ತಾಳ್ಮೆಯಿಂದ ಪ್ರಾರ್ಥಿಸುತ್ತಾರೋ ಅವರನ್ನು ತಾವು ಕೈಬಿಡದೆ ಕಾಪಾಡುತ್ತೇನೆ ಮತ್ತು ಅವರಿಗೆ ಬರುವ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತೇನೆ" ಎಂದು ಹೇಳಿದ್ದಾರೆ. ಈ ಘಟನೆಯಿಂದ ಸಂಜೀವ ಮತ್ತು ಅವರ ಹೆಂಡತಿಗೆ ಸಾಯಿಬಾಬಾರವರಲ್ಲಿದ್ದ ಭಕ್ತಿ ಮತ್ತಷ್ಟು ಹೆಚ್ಚಿತು.

-ಶ್ರೀ. ಸಂಜೀವ್ ರವರು ಹೇಳಿರುವಂತೆ

No comments:

Post a Comment