Friday, July 30, 2010

ಬೆಂಗಳೂರಿನ ಸಾಯಿ ಮಂದಿರ - ಶಾಂತಿಧಾಮ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಜೆ.ಪಿ.ನಗರ, ೩ ನೇ ಹಂತ, ಬೆಂಗಳೂರು - ಕೃಪೆ - ಶ್ರೀ.ಗುರುರಾಜ್ 

ದೇವಾಲಯದ ವಿಶೇಷತೆಗಳು

  • ಮಂದಿರವು ೨೧ ನೇ ಜೂನ್ ೧೯೯೮ ರಂದು ಹೆಬ್ಬೂರು ಕೋದಂಡ ಆಶ್ರಮದ ಹಿಂದಿನ ಗುರುಗಳಾದ ದಿವಂಗತ ವೇದ ಬ್ರಹ್ಮ ಶ್ರೀ.ಗಣಪತಿ ಸೋಮಯಾಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
  • ಈ ಮಂದಿರವನ್ನು ಸಾಯಿಭಕ್ತರ ನೆರವಿನಿಂದ ಶಾಂತಿಧಾಮ ಶ್ರೀ ಶಿರಡಿ ಸಾಯಿಬಾಬಾ ಮಂದಿರದವರು ಕಟ್ಟಿರುತ್ತಾರೆ.
  • ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ಪಾದುಕೆಗಳನ್ನು ಸಾಯಿಬಾಬಾರವರ ವಿಗ್ರಹದ ಎದುರುಗಡೆ ಪ್ರತಿಷ್ಟಾಪಿಸಲಾಗಿದೆ.
  • ಪಂಚಲೋಹದ ದತ್ತಾತ್ರೇಯ ದೇವರ ವಿಗ್ರಹವನ್ನು ಸಾಯಿಬಾಬಾರವರ ವಿಗ್ರಹದ ಮುಂದೆ ಇರಿಸಲಾಗಿದೆ.
  • ಬೆಳ್ಳಿಯ ಸಟಕಾ ಮತ್ತು ಬೆಳ್ಳಿಯ ಪಾದುಕೆಗಳು ಮಂದಿರದಲ್ಲಿ ಇರಿಸಲಾಗಿದೆ.
  • ಶ್ರೀರಾಮ ಪರಿವಾರ ವಿಗ್ರಹಗಳು ಮಂದಿರದಲ್ಲಿ ಪ್ರತಿಷ್ಟಾಪಿಸಲಾಗಿದೆ.
  • ಪವಿತ್ರ ಧುನಿಯನ್ನು ಮಂದಿರದ ಒಳಗಡೆ ಪ್ರತಿಷ್ಟಾಪಿಸಲಾಗಿದೆ.
  • ಗಣೇಶ, ಉಮಾ ಮಹೇಶ್ವರ ಮತ್ತು ಸುಬ್ರಮಣ್ಯ ದೇವರ ದೇವಸ್ಥಾನವನ್ನು ೨೨ ನೇ ಫೆಬ್ರವರಿ ೨೦೦೯ ರಂದು ಪ್ರಾರಂಭಿಸಲಾಯಿತು.
  • ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಮಂದಿರದ ಒಳಗೆ ಪ್ರತಿಷ್ಟಾಪಿಸಲಾಗಿದೆ. ಮತ್ತೊಂದು ಬೃಹತ್ ನಂದಿಯ ಕಪ್ಪು ಶಿಲೆಯ ವಿಗ್ರಹವನ್ನು ಗಣೇಶ, ಉಮಾ ಮಹೇಶ್ವರ ಮತ್ತು ಸುಬ್ರಮಣ್ಯ ದೇವಾಲಯದ ಹೊರಗಡೆ ಪ್ರತಿಷ್ಟಾಪಿಸಲಾಗಿದೆ.
  • ಸಾಯಿಬಾಬಾ ಮಂದಿರದ ಮುಂದುಗಡೆ ಬೃಹತ್ ತುಳಸಿಯ ಬೃಂದಾವನವನ್ನು ಸ್ಥಾಪಿಸಲಾಗಿದೆ.
  • ದೇವಾಲಯದ ಆವರಣದಲ್ಲಿ ಅಶ್ವಥ ವೃಕ್ಷದ ಕೆಳಗಡೆ ನಾಗ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ಸಾಯಿಬಾಬಾರವರ ವಿಗ್ರಹ

ಧುನಿ ಮಾ

ತುಳಸಿ ಬೃಂದಾವನ

ಗಣೇಶನ ವಿಗ್ರಹ

ಉಮಾ ಮಹೇಶ್ವರ ವಿಗ್ರಹ


ಸುಬ್ರಹ್ಮಣ್ಯೇಶ್ವರ ವಿಗ್ರಹ

ದೇವಾಲಯದ ಕಾರ್ಯಚಟುವಟಿಕೆಗಳು

ದೈನಂದಿನ ಕಾರ್ಯಕ್ರಮಗಳು

ಪ್ರತಿನಿತ್ಯ ಆರತಿಯ ಸಮಯ

ಕಾಕಡ ಆರತಿ    ಬೆಳಗ್ಗೆ  ೭:೦೦ ರಿಂದ ೭:೩೦ ರ ವರೆಗೆ
ಮಧ್ಯಾನ್ಹ ಆರತಿ ಮಧ್ಯಾನ್ಹ ೧೧:೦೦ ರಿಂದ ೧೧:೨೦ ರ ವರೆಗೆ
ಧೂಪಾರತಿ       ಸಂಜೆ ೬:೦೦ ರಿಂದ ೬:೨೦ ರ ವರೆಗೆ
ಶೇಜಾರತಿ        ರಾತ್ರಿ ೮:೦೦ ರಿಂದ ೮:೧೦ ರ ವರೆಗೆ

ಗುರುವಾರ  ಆರತಿಯ ಸಮಯ

ಕಾಕಡ ಆರತಿ ಬೆಳಗ್ಗೆ ೬: ೩೦ ರಿಂದ ೭:೦೦ ರ ವರೆಗೆ
ಮಧ್ಯಾನ್ಹ ಆರತಿ ಮಧ್ಯಾನ್ಹ ೧೨ :೦೦  ರಿಂದ ೧೨:೨೦ ರ ವರೆಗೆ
ಧೂಪಾರತಿ ಸಂಜೆ ೫:೩೦ ರಿಂದ ೫:೫೦ ರ ವರೆಗೆ
ಶೇಜಾರತಿ ರಾತ್ರಿ ೮:೧೫ ರಿಂದ ೮:೩೦ ರ ವರೆಗೆ



  • ಪ್ರತಿನಿತ್ಯ ಸಾಯಿಬಾಬಾರವರಿಗೆ ಮತ್ತು ಧುನಿ ಮಾ ಗೆ ಅಭಿಷೇಕ, ಅಲಂಕಾರ ಹಾಗೂ ನೈವೇದ್ಯವನ್ನು ಬೆಳಗ್ಗೆ ೮:೦೦ ರಿಂದ ೯:೧೫ ರ ವರೆಗೆ ಮಾಡಲಾಗುತ್ತದೆ.


  • ಧುನಿ ಪೂಜೆಯನ್ನು ಪ್ರತಿದಿನ ಬೆಳಗ್ಗೆ ೯:೩೦ ರಿಂದ ೧೦:೩೦ ರ ವರೆಗೆ ಮಾಡಲಾಗುತ್ತದೆ.


  • ಪ್ರತಿದಿನ ಸಂಜೆ ೬:೩೦ ರಿಂದ ೭:೩೦ ರ ವರೆಗೆ ಧುನಿ ಪೂಜಾ ಮತ್ತು ವಿಷ್ಣು ಸಹಸ್ರನಾಮ ಕಾರ್ಯಕ್ರಮವಿರುತ್ತದೆ.


  • ಪ್ರತಿ ಗುರುವಾರ ಬೆಳಗ್ಗೆ ೭:೦೦ ರಿಂದ ೮:೦೦ ಘಂಟೆಯವರೆಗೆ ಸಾಯಿಬಾಬಾರವರಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಇದರಲ್ಲಿ ಎಲ್ಲಾ ಸಾಯಿಭಕ್ತರು ಭಾಗವಹಿಸಬಹುದು.


  • ಪ್ರತಿ ಗುರುವಾರ ಸಂಜೆ ೬:೦೦ ರಿಂದ ೬:೧೫ ರ ವರೆಗೆ ಕನ್ನಡದಲ್ಲಿ ಸಾಯಿ ಸಚ್ಚರಿತೆ ಪಾರಾಯಣ ಕಾರ್ಯಕ್ರಮವಿರುತ್ತದೆ.


  • ಪ್ರತಿ ಗುರುವಾರ ರಾತ್ರಿ ೭:೦೦ ರಿಂದ ೮:೦೦ ಘಂಟೆಯವರೆಗೆ ವಿವಿಧ ಭಜನ ಮಂಡಳಿಗಳಿಂದ ಸಾಯಿ ಭಜನೆ ಕಾರ್ಯಕ್ರಮವಿರುತ್ತದೆ.


  • ಪ್ರತಿ ಗುರುವಾರ ರಾತ್ರಿ ೮:೦೦ ರಿಂದ ೮:೧೫ ರ ವರೆಗೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.


  • ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ ೬:೩೦ ರಿಂದ ೮:೩೦ ರ ವರೆಗೆ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮವಿರುತ್ತದೆ. ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯಬಹುದು.
ವಿಶೇಷ ಉತ್ಸವ ಮತ್ತು ಹಬ್ಬದ ದಿನಗಳು

೧. ಹೊಸ ವರ್ಷದ ಆಚರಣೆ ಪ್ರತಿ ವರ್ಷದ ೧ ನೇ ತಾರೀಕಿನಂದು.
೨. ಸಂಕ್ರಾಂತಿ ಹಬ್ಬ.
೩. ಶಿವರಾತ್ರಿ ಹಬ್ಬ.
೪. ಗಣೇಶ, ಉಮಾ ಮಹೇಶ್ವರ ಮತ್ತು ಸುಬ್ರಮಣ್ಯ ದೇವಾಲಯದ ವಾರ್ಷಿಕೋತ್ಸವ ಪ್ರತಿವರ್ಷ ೨೨ ನೇ ಫೆಬ್ರವರಿ ಯಂದು.
೫. ಯುಗಾದಿ ಹಬ್ಬ.
೬. ಶ್ರೀ ರಾಮನವಮಿ.
೭. ಶ್ರೀ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ ಪ್ರತಿವರ್ಷ ೨೧ ನೇ ಜೂನ್ ರಂದು. 
೮. ಗುರು ಪೂರ್ಣಿಮಾ ಉತ್ಸವ. 
೯. ವಿಜಯ ದಶಮಿ (ಹತ್ತು ದಿನಗಳ ಉತ್ಸವ)
೧೦.ಗಣೇಶ ಹಬ್ಬ. 
೧೧.ದೀಪಾವಳಿ ಹಬ್ಬ.
೧೨.ಕ್ರಿಸ್ಮಸ್ ಹಬ್ಬ. 
೧೩. ಗೋಕುಲಾಷ್ಟಮಿ ಹಬ್ಬ.

ದೇವಾಲಯದ ಮುಂದಿನ ಯೋಜನೆಗಳು  

೧. ಸಾಯಿಬಾಬಾ ದೇವಾಲಯದ ರಾಜಗೋಪುರ ನಿರ್ಮಾಣ.
೨. ಧ್ಯಾನ ಮಂದಿರ ಮತ್ತು ಯೋಗ ಶಾಲೆ (ಹಿರಿಯರಿಗೆ ಮತ್ತು ಮಹಿಳೆಯರಿಗೆ).

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ :

ಶಾಂತಿಧಾಮ ಶ್ರೀ ಶಿರಡಿ ಸಾಯಿಬಾಬಾ ಮಂದಿರ,
೧೨೯/ಎ, ೧೩ ನೇ ಅಡ್ಡ ರಸ್ತೆ, ೬ ನೇ ಮುಖ್ಯ ರಸ್ತೆ,
ಜೆ.ಪಿ.ನಗರ, ೩ ನೇ ಹಂತ, ಬೆಂಗಳೂರು-೫೬೦ ೦೭೮.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ. ಗುರುರಾಜ್ - ದೇವಾಲಯದ ಮ್ಯಾನೇಜರ್.

ಮಾರ್ಗಸೂಚಿ:

ಜೆ.ಪಿ. ನಗರ ೩ ನೇ ಹಂತದ ಕೊನೆಯ ಬಸ್ ನಿಲ್ಧಾಣದಿಂದ ೨ ನಿಮಿಷ ನಡೆದರೆ ಮಂದಿರ ಸಿಗುತ್ತದೆ. "ಮಿನಿ ಫಾರೆಸ್ಟ್" ನಿಂದ ಕೇವಲ ೨೦೦ ಅಡಿಗಳ ದೂರದಲ್ಲಿ ಮತ್ತು "ಎಸ್ ಹೋಟೆಲ್" ನಿಂದ ೧೦೦ ಅಡಿ ದೂರದಲ್ಲಿ ಮಂದಿರವಿದೆ.

No comments:

Post a Comment