Sunday, July 4, 2010

ಶಿರಡಿ ಸಾಯಿಮಂದಿರದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - ಸಾಯಿಬಾಬಾ ವಸ್ತು ಸಂಗ್ರಹಾಲಯ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ



ಸಾಯಿಬಾಬಾ ವಸ್ತು ಸಂಗ್ರಹಾಲಯದ ಹೊರನೋಟ



ಸಾಯಿಬಾಬಾ ವಸ್ತು ಸಂಗ್ರಹಾಲಯದ ನಾಮಫಲಕ

ಶಿರಡಿ ಸಾಯಿಬಾಬಾ ಮಂದಿರದ ಪ್ರಾಂಗಣದಲ್ಲಿರುವ ಸಾಯಿಬಾಬಾ ವಸ್ತು ಸಂಗ್ರಹಾಲಯದಲ್ಲಿ  ಸಾಯಿಬಾಬಾರವರು ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನು ಸಾಯಿಬಾಬಾ ಸಂಸ್ಥಾನದವರು ನೋಡಿಕೊಳ್ಳುತ್ತಿದ್ದಾರೆ. ಈ ವಸ್ತು ಸಂಗ್ರಹಾಲಯದಲ್ಲಿ ಸಾಯಿಬಾಬಾರವರಿಗೆ ಬಹಳ ಪ್ರೀತಿಪಾತ್ರವಾದ ಮತ್ತು ಅವರು ನಿತ್ಯ ಬಳಸುತ್ತಿದ್ದ ಅನೇಕ ವಸ್ತುಗಳನ್ನು ಸಂಗ್ರಹಿಸಿ ಅತ್ಯಂತ ಜೋಪಾನವಾಗಿ ಇಡಲಾಗಿದೆ. ಈ ವಸ್ತು ಸಂಗ್ರಹಾಲಯವನ್ನು ಪ್ರತಿದಿನ ಲಕ್ಷಾಂತರ ಸಾಯಿಭಕ್ತರು ದೇಶ ವಿದೇಶಗಳಿಂದ ಬಂದು ವೀಕ್ಷಿಸುತ್ತಾರೆ.

ಸಾಯಿಯವರ ಪವಿತ್ರ ಪಾದುಕೆಗಳು

ಸಾಯಿಯವರ ಪವಿತ್ರ ಪಾದುಕೆ

ಸಾಯಿಬಾಬಾರವರ ಭಕ್ತರು ಅತ್ಯಂತ ಪವಿತ್ರವೆಂದು ಭಾವಿಸುವ ಸಾಯಿಬಾಬಾರವರ ಪಾದುಕೆಗಳು, ಸಾಯಿಬಾಬಾರವರು ಖಂಡೋಬ ಮಂದಿರದ ಪೂಜಾರಿ ಮಾಳಸಾಪತಿಯವರಿಗೆ ನೀಡಿದ ಪವಿತ್ರ ನಾಣ್ಯಗಳು, ಸಾಯಿಬಾಬಾರವರು ಸ್ವತಃ ಅಡಿಗೆ ಮಾಡಿ ಭಕ್ತರಿಗೆ ಬಡಿಸಲು ಬಳಸುತ್ತಿದ್ದ ಒಂದು ಚಿಕ್ಕದಾದ ಮತ್ತೊಂದು ದೊಡ್ಡದಾದ ಅಡಿಗೆಯ ಪಾತ್ರೆಗಳು, ಬೀಸುವ ಕಲ್ಲು, ಸಾಯಿಬಾಬಾರವರು ಉಪಯೋಗಿಸುತ್ತಿದ್ದ ಕುರ್ಚಿ, ಸಾಯಿಯವರ ಕೊನೆಯ ಮಂಗಳ ಸ್ನಾನ ಮಾಡಲು ಬಳಸಿದ ಮಂಚ, ಸಾಯಿಯವರು ಭಿಕ್ಷೆಗಾಗಿ ಬಳಸುತ್ತಿದ್ದ ಮಣ್ಣಿನ ಪಾತ್ರೆ, ನೀರನ್ನು ಸಂಗ್ರಹಿಸಲು ಬಳಸುತ್ತಿದ್ದ ಮಡಿಕೆ, ಸಾಯಿಯವರು ಬಳಸುತ್ತಿದ್ದ ಚಿಮಟ, ಕೊಲಂಬಾ, ಭಂಗಿ ಸೇದಲು ಬಳಸುತ್ತಿದ್ದ ಚಿಲ್ಲಂ, ಸಟಕ, ದೊಡ್ಡ ಹಗ್ಗ ಮತ್ತು ಇನ್ನು ಹಲವಾರು ವಸ್ತುಗಳನ್ನು ಜೋಪಾನವಾಗಿ ಸಂಗ್ರಹಿಸಿ ಇಡಲಾಗಿದೆ.

ಸಾಯಿಯವರು ಉಪಯೋಗಿಸುತ್ತಿದ್ದ ವಸ್ತುಗಳು

ಸಾಯಿಯವರು ಮುಟ್ಟಿದ್ದ ಪವಿತ್ರ ವಸ್ತುಗಳು

ಸಾಯಿಯವರು ಮಾಳಸಾಪತಿಯವರಿಗೆ ನೀಡಿದ್ದ ಪವಿತ್ರ ನಾಣ್ಯಗಳು

ಶ್ರೀರಾಮ ಪರಿವಾರ

ಸಾಯಿಯವರು ಉಪಯೋಗಿಸುತ್ತಿದ್ದ ೨ ಹಂಡೆಗಳು ಮತ್ತು ಇತರ ವಸ್ತುಗಳು

ಸಾಯಿಯವರು ಬಳಸುತ್ತಿದ್ದ ಬೀಸುವ ಕಲ್ಲು

ಸಾಯಿಯವರು ಎಂದಿಗೂ ಬಳಸದ ಕುರ್ಚಿ

ಸಾಯಿಯವರು ಬಳಸುತ್ತಿದ್ದ ಪಾದುಕೆ ಮತ್ತು ಚಿಮಟ


ಸಾಯಿಯವರು ನೀರು ತುಂಬಲು ಬಳಸುತ್ತಿದ್ದ ಮಡಿಕೆ

ಹಾಸಿಗೆ ಮಂಚ ಹಾಗೂ ಗಾಲಿ ಕುರ್ಚಿ

ಸಾಯಿಯವರು ಸ್ನಾನ ಮಾಡಲು ಬಳಸುತ್ತಿದ್ದ ಸ್ನಾನದ ಕಲ್ಲು

ಕೊಲಂಬಾ

ಸಾಯಿಯವರ ಕೊನೆಯ ಸ್ನಾನ ಮಾಡಿಸಲು ಬಳಸಿದ ಮಂಚ

ಕೆಲವು ವಸ್ತುಗಳನ್ನು ಸಾಯಿಭಕ್ತರು ಸಮಾಧಿ ಮಂದಿರದ ಒಳಗಡೆಯ ಆವರಣದ ಎಡಭಾಗದಲ್ಲಿ ನೋಡಬಹುದು. ಇನ್ನು ಕೆಲವು ವಸ್ತುಗಳನ್ನು ದ್ವಾರಕಾಮಾಯಿಯಲ್ಲಿ ಕಾಣಬಹುದು. ಉಳಿದ ವಸ್ತುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಶಿರಡಿ ಸಾಯಿಬಾಬಾ ಸಂಸ್ಥಾನದವರು ಸಾಯಿಬಾಬಾ ವಸ್ತು ಸಂಗ್ರಹಾಲಯವನ್ನು ಪ್ರತಿದಿನ ಬೆಳಗ್ಗೆ ೬ ಘಂಟೆಯಿಂದ ರಾತ್ರಿ ೯ ಘಂಟೆಯವರೆಗೆ ಸಾಯಿಭಕ್ತರ ವೀಕ್ಷಣೆಗೆ ಅವಕಾಶ ಮಾಡಿಕೊಡಲು ತೆರೆದಿಟ್ಟಿರುತ್ತಾರೆ.

No comments:

Post a Comment