Tuesday, July 13, 2010

ಸಾಯಿ ಭಜನ ಗಾಯಕಿ - ಶ್ರೀಮತಿ ಲಲಿತ ಗುಣದಾಸ್ - ಕೃಪೆ - ಸಾಯಿ ಅಮೃತಧಾರಾ.ಕಾಂ 


ಶ್ರೀಮತಿ ಲಲಿತಾ ಗುಣದಾಸ್ 

ಶ್ರೀಮತಿ ಲಲಿತ ಗುಣದಾಸ್ ರವರು ಪೂಜ್ಯ ಆಚಾರ್ಯ ಶ್ರೀ.ಎಕ್ಕಿರಾಲ ಭಾರದ್ವಾಜ ರವರ ಆಶೀರ್ವಾದದಿಂದ ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆಯಾದರು. ಇವರು ಗಣಿತದಲ್ಲಿ ಎಂ.ಎಸ್.ಸಿ ಪದವಿಯನ್ನು ಹಾಗೂ ಮಕ್ಕಳ ಮನಶಾಸ್ತ್ರವನ್ನು ಅಭ್ಯಾಸ ಮಾಡಿರುತ್ತಾರೆ. ಇವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ನಲ್ಲಿ ಬಹಳ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ೧ ನೇ ತರಗತಿಯಿಂದ ಪಿಯುಸಿ ಯವರೆಗಿನ ಮಕ್ಕಳಿಗೆ ಯಾವುದೇ ಹಣವನ್ನು ಪಡೆಯದೇ ಉಚಿತವಾಗಿ ಮನೆಪಾಠ ಹೇಳಿಕೊಡುತ್ತಾರೆ. ಇವರು ಮನಶಾಸ್ತ್ರವನ್ನು ಅಭ್ಯಾಸ ಮಾಡಿರುವುದರಿಂದ ಮಕ್ಕಳಿಗೆ ಹಾಗೂ ಹಿರಿಯರಿಗೆ ಉಚಿತ ಸಲಹೆಯನ್ನು ಕೂಡ ನೀಡುತ್ತಾರೆ.

ಇವರು ಕನ್ನಡ ಭಾಷೆಯಲ್ಲಿ ೪ ಪುಸ್ತಕಗಳನ್ನು ಬರೆದಿದ್ದರೆ. ಅವುಗಳು ಯಾವುವೆಂದರೆ:  ೧. ಶಿರಡಿ ಕ್ಷೇತ್ರ ಸಂದರ್ಶನ ೨. ಶಿರಡಿ ಸಾಯಿಬಾಬಾರವರ ೯ ವಾರಗಳ ವ್ರತ ಮತ್ತು ಪೂಜೆ ೩. ಪದ್ಮಾವತಮ್ಮ ಎಂಬ ಅವಧೂತೆಯ ಜೀವನ ಚರಿತ್ರೆ ೪. ಶ್ರೀ ಗುರು ಚರಿತ್ರೆ (ಇನ್ನು ಪ್ರಕಟಣೆಯಾಗಿಲ್ಲ).

ಕನ್ನಡದ ಪ್ರಸಿದ್ದ ಲೇಖಕಿಯಾದ ಶ್ರೀಮತಿ.ಗೀತಾರಾವ್ ರವರು ತಮ್ಮ ಪುಸ್ತಕ "ಶ್ರೀ ಸಾಯಿ ಗುರು ಅನುಭವಾಮೃತ" ದಲ್ಲಿ ಶ್ರೀಮತಿ ಲಲಿತ ಗುಣದಾಸ್ ರವರ ಜೀವನದಲ್ಲಿ ಸಾಯಿಬಾಬಾರವರ ಪವಾಡಗಳ ಬಗ್ಗೆ ಬರೆದಿದ್ದಾರೆ.
ತೆಲುಗಿನ ಪ್ರಸಿದ್ದ ಲೇಖಕರಾದ ಡಾ.ಕಾವಲಿಯವರು ತಮ್ಮ ಪುಸ್ತಕ "ಗುರು ಶುಶ್ರುಷ" ದಲ್ಲಿ ಶ್ರೀಮತಿ ಲಲಿತ ಗುಣದಾಸ್ ರವರ ಜೀವನದಲ್ಲಿ ಸಾಯಿಬಾಬಾರವರ ಪವಾಡಗಳ ಬಗ್ಗೆ ಬರೆದಿದ್ದಾರೆ.
ಇವರು ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಲ್ಲಿ ಸಾಯಿ ಭಜನೆಯನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಆಲ್ಲದೇ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಯಿಬಾಬಾರವರ ಬಗ್ಗೆ ಹಾಡುಗಳನ್ನು ರಚಿಸಿದ್ದಾರೆ.

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಸಂಪರ್ಕದ ವಿವರಗಳು
ಗಾಯಕಿಯ ಹೆಸರು
ಶ್ರೀಮತಿ.ಲಲಿತ ಗುಣದಾಸ್ 
ವಿಳಾಸ
ಫ್ಲಾಟ್ ನಂ.1009-ಇ, ಗೋಲ್ಡನ್ ಮ್ಯಾಜಿಕ್ ಬ್ಲಾಕ್, ಬ್ರಿಗೇಡ್ ಗಾರ್ಡೆನಿಯ, 9ನೇ ಅಡ್ಡರಸ್ತೆ, 8ನೇ ಹಂತ, ಜೆ.ಪಿ.ನಗರ, ಬೆಂಗಳೂರು-560 078.  ಈ ಮೇಲ್: soumyagunadas@gmail.com
ದೂರವಾಣಿ ಸಂಖ್ಯೆಗಳು
 92464 - 97250

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment