Friday, July 16, 2010

ಶಿರಡಿಯಲ್ಲಿ ನೋಡಬೇಕಾದ ಸ್ಥಳ - ಪಂಚಮುಖಿ ವಿನಾಯಕ ಮಂದಿರ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಪಂಚಮುಖಿ ವಿಷ್ಣು ಗಣಪತಿಯ ಸುಂದರ ವಿಗ್ರಹ

ಈ ಸುಪ್ರಸಿದ್ದ ಪಂಚಮುಖಿ ವಿಷ್ಣು ಗಣಪತಿ ಮಂದಿರವು ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಸುಮಾರು ೨ ಕಿಲೋಮೀಟರು ದೂರದಲ್ಲಿದೆ. ಈ ಮಂದಿರದಲ್ಲಿ ಸುಂದರವಾದ ಪಂಚಮುಖಿ ವಿಷ್ಣು ಗಣಪತಿಯ ವಿಗ್ರಹವಿದೆ. ಈ ವಿಗ್ರಹವನ್ನು ಭಾರತದ ಸುಪ್ರಸಿದ್ದ ಜ್ಯೋತಿಷಿಯಾದ ಶ್ರೀ.ಬೇಜಾನ್ ದಾರೂವಾಲರವರು ೧೩ ನೇ ಜೂನ್ ೨೦೦೨ ರಂದು ತಮ್ಮ ೭೦ ನೇ ಇಳಿವಯಸ್ಸಿನಲ್ಲಿ ಪ್ರತಿಷ್ಟಾಪನೆ ಮಾಡಿರುತ್ತಾರೆ.


ದೇವಾಲಯದ ಹೊರನೋಟ


ದೇವಾಲಯದ ಕುಂಭಾಭಿಷೇಕವನ್ನು ೧೧ ನೇ ಫೆಬ್ರವರಿ ೨೦೦೪ ರಂದು ಪೂಜ್ಯ ಶ್ರೀ. ಪರಿಪೂರ್ಣಾನಂದ ಸರಸ್ವತಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ದೇವಾಲಯದ ವಿಶೇಷವೇನೆಂದರೆ ಭಕ್ತರು ತಮ್ಮ ಮನದ ಬಯಕೆಗಳನ್ನು ಗಣಪತಿಯಲ್ಲಿ ಹೇಳುವ ಬದಲು ಅವನ ವಾಹನವಾದ ಇಲಿಯ ಬಲಕಿವಿಯಲ್ಲಿ ಹೇಳಬೇಕು. ಹೀಗೆ ಹೇಳಿದರೆ ತಮ್ಮ ಮನದ ಇಷ್ಟರ್ಥಗಳೆಲ್ಲ ಸಿದ್ದಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಬೆಳೆದುಬಂದಿದೆ.

ಈ ದೇವಾಲಯದ ಪಕ್ಕದಲ್ಲಿ ಶಿರಡಿ ಸಾಯಿಬಾಬಾ ಮತ್ತು ಜಗನ್ಮಾತೆ ಅನ್ನಪೂರ್ಣೆಶ್ವರಿಯ ದೇವಾಲಯವಿದೆ.


ಸಾಯಿಬಾಬಾ ಮತ್ತು ಅನ್ನಪೂರ್ಣೆಶ್ವರಿಯ ವಿಗ್ರಹಗಳು


ಅಷ್ಟೇ ಆಲ್ಲದೇ, ಪಂಚಮುಖಿ ವಿಷ್ಣು ಗಣಪತಿಯ ದೇವಾಲಯದ ಹಿಂಭಾಗದಲ್ಲಿ ಹನುಮಾನ್ ಮಂದಿರವಿದೆ. ಈ ಮಂದಿರದಲ್ಲಿ ಆಳೆತ್ತರದ ಹನುಮಂತನ ಸುಂದರ ವಿಗ್ರಹವನ್ನು ಹೊಸದಾಗಿ ನಿರ್ಮಿಸಲಾಗಿದೆ.
 
 
ಹನುಮಂತನ ವಿಗ್ರಹ


ಪ್ರತಿನಿತ್ಯ ಬೆಳಗಿನ ಜಾವ ಎಲ್ಲ ದೇವರುಗಳಿಗೆ ಅಭಿಷೇಕ, ಅರ್ಚನೆ ಮತ್ತು ಮಂಗಳಾರತಿಯನ್ನು ದಕ್ಷಿಣ ಭಾರತದ ವೈದಿಕ ಪದ್ದತಿಯ ಪ್ರಕಾರ ನಡೆಸಲಾಗುತ್ತಿದೆ.

ದೇವಾಲಯದ ಪಕ್ಕದ ೨ ಎಕರೆ ಪ್ರದೇಶದಲ್ಲಿ ಬಡವರಿಗೆ ನಿತ್ಯ ಅನ್ನದಾನ, ವೃದ್ದಾಶ್ರಮ, ಮದುವೆಯ ಛತ್ರ ಮತ್ತು ಬಂದ ಭಕ್ತರಿಗೆ ಉಳಿದುಕೊಳ್ಳಲು ಸುಮಾರು ೪೦ ರೂಮುಗಳನ್ನು ಕಟ್ಟುವ ಉದ್ದೇಶವನ್ನು ಪಂಚಮುಖಿ ಗಣಪತಿ ಟ್ರಸ್ಟ್ ನವರು ಹೊಂದಿದ್ದಾರೆ.

No comments:

Post a Comment