Thursday, July 10, 2014

ಗುರು ಪೂರ್ಣಿಮಾ ಉತ್ಸವ 2014 – 2ನೇ ಪತ್ರಿಕಾ ಪ್ರಕಟಣೆ – ಕೃಪೆ:ಸಾಯಿಅಮೃತಧಾರಾ.ಕಾಂ

ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಹಾಗೂ ಅದರ ಅಂಗವಾಗಿ 11ನೇ ಜುಲೈ 2014 ರಿಂದ ಮೊದಲುಗೊಂಡು ಉತ್ಸವದ 3 ದಿನಗಳೂ ಆಯೋಜಿಸಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿರಡಿಗೆ ಭಕ್ತಸಾಗರವೇ ಹರಿದುಬರುವುದನ್ನು ಗಮನದಲ್ಲಿಟ್ಟುಕೊಂಡು ಶ್ರೀ ಸಾಯಿಬಾಬಾ ಸಂಸ್ಥಾನವು ಶಿರಡಿಯ ವಿವಿಧ ಕಡೆಗಳಲ್ಲಿ  75,000 ಚದರ ಅಡಿಗೂ ಹೆಚ್ಚು ವಿಸ್ತೀರ್ಣದ ಶಾಮಿಯಾನಗಳನ್ನು ಹಾಕಲು ನಿರ್ಧರಿಸಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಹಾಗೂ ಮುಂಬೈನಿಂದ ಶಿರಡಿ ಹಾಗೂ ಪುಣೆಯಿಂದ ಶಿರಡಿಗೆ ಪಾದಯಾತ್ರೆಯಲ್ಲಿ ಪಲ್ಲಕ್ಕಿಯನ್ನು ಹೊತ್ತು ತರುವ ಭಕ್ತರುಗಳಿಗೆ ತಂಗಲು ಅನುಕೂಲವಾಗಲೆಂದು ಶಿರಡಿ ಸಮಾಧಿ ಮಂದಿರದ ಆವರಣ, ಸಾಯಿ ಪ್ರಸಾದ ಭಕ್ತನಿವಾಸದ ವಾಹನ ನಿಲುಗಡೆ ಸ್ಥಳ  ಹಾಗೂ ಮತ್ತಿತರ ಕಡೆಗಳಲ್ಲಿ  75,000 ಚದರ ಅಡಿಗೂ ಹೆಚ್ಚು ವಿಸ್ತೀರ್ಣದ ಶಾಮಿಯಾನಗಳನ್ನು ಹಾಕಲು ನಿರ್ಧರಿಸಿದೆ. ಈಗ ಮಳೆಗಾಲವಾದ ಕಾರಣ ಈ ಶಾಮಿಯಾನಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗುತ್ತದೆ. ಅಲ್ಲದೇ ಪಾದಯಾತ್ರೆಯಲ್ಲಿ ಪಲ್ಲಕ್ಕಿಯನ್ನು ಹೊತ್ತು ತರುವ ಭಕ್ತರಿಗಾಗಿ ಸಾಯಿ ಆಶ್ರಮ-2 ರಲ್ಲಿ ಉಚಿತವಾಗಿ ತಂಗಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ಶ್ರೀ ಸಾಯಿಬಾಬಾರವರ ದರ್ಶನಕ್ಕೆಂದು ಬರುವ ಎಲ್ಲಾ ಭಕ್ತರಿಗೂ ಲಾಡು ಪ್ರಸಾದ ದೊರಕಲು ಅನುಕೂಲವಾಗಲೆಂದು ಸುಮಾರು 275ಕ್ಕೂ ಹೆಚ್ಚು ಕ್ವಿಂಟಾಲ್ ನಷ್ಟು ಸಕ್ಕರೆಯನ್ನು ಬಳಸಿ ಹೆಚ್ಚಿನ  ಸಂಖ್ಯೆಯಲ್ಲಿ ಲಾಡುವನ್ನು ತಯಾರು ಮಾಡಲಾಗುತ್ತಿದೆ ಎಂದು ಶ್ರೀ.ಸೋನಾವಾನೆಯವರು ತಿಳಿಸಿದರು. 

ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಉತ್ಸವದ 3 ದಿನಗಳೂ ಆಹ್ವಾನಿತ ಕಲಾವಿದರಿಂದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 11th July 2014 ರಂದು ಸಂಜೆ 4 ರಿಂದ 6 ರವರೆಗೆ ಹೆಚ್.ಬಿ.ಪಿ.ಮಾಧವರಾವ್ ಅಜಯಗಾವಂಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿದೆ. ಸಂಜೆ 7.30 ರಿಂದ ರಾತ್ರಿ 10.30 ರವರೆಗೆ ಭೂಪಾಲ್ ನ ಶ್ರೀ.ಸುಮಿತ್ ಪೋಂಡಾರವರಿಂದ  “ಸಾಯಿ ಅಮೃತ ಕಥಾ” ವನ್ನು ಆಯೋಜಿಸಲಾಗಿದೆ. 12ನೇ ಜುಲೈ 2014 ರಂದು  bಸಂಜೆ 4 ರಿಂದ 6 ರವರೆಗೆ ಹೆಚ್.ಬಿ.ಪಿ.ಮಾಧವರಾವ್ ಅಜಯಗಾವಂಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿದೆ. ಸಂಜೆ 7.30 ರಿಂದ ರಾತ್ರಿ 10.30 ರವರೆಗೆ ಮುಂಬೈನ ಶ್ರೀ.ವಿಜಯ್ ಸಕ್ಕಾರ್ಕರ್ ಮತ್ತು ಅವರ ತಂಡದವರಿಂದ ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ  “ಸಾಯಿ ವಾಯ್ಸ್  – ನೃತ್ಯೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉತ್ಸವದ  ಕೊನೆಯ ದಿನವಾದ 13ನೇ ಜುಲೈ2014 ರಂದು ಬೆಳಿಗ್ಗೆ 10.30 ಕ್ಕೆ  ಸಮಾಧಿ ಮಂದಿರದ ಆವರಣದಲ್ಲಿ ಹೆಚ್.ಬಿ.ಪಿ.ಮಾಧವರಾವ್ ಅಜಯಗಾವಂಕರ್ ರವರಿಂದ ಗೋಪಾಲಕಾಲ ಮತ್ತು ದಹಿಹಂಡಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಸಂಜೆ 7.30 ರಿಂದ ರಾತ್ರಿ 10.30 ರವರೆಗೆ ಶಿರಡಿ ಸಮೀಪದ ಶ್ರೀರಾಮಪುರದ ಖ್ಯಾತ ಕಲಾವಿದರಾದ ಶ್ರೀ. ವಿಶ್ವನಾಥ್ ಓಜಾರವರಿಂದ “ಸಾಯಿ ಮಿಲನ್ ಕಿ ಆಸ್” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಉತ್ಸವದ ಅಂಗವಾಗಿ ಬೆಂಗಳೂರಿನ  ಶ್ರೀ.ಸುಬ್ರಮಣಿ ರಾಜು ಮತ್ತು ಶ್ರೀ.ಪ್ರಸಾದ್ ಬಾಬುರವರುಗಳು ನೀಡಿರುವ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರದ ಒಳ ಆವರಣ, ಹೊರ ಆವರಣ ಹಾಗೂ ಮತ್ತಿತರ ಕಡೆಗಳಲ್ಲಿ ಹೂವಿನ ಅಲಂಕಾರವನ್ನು ಮಾಡಲಾಗುತ್ತಿದೆ. ಅಲ್ಲದೆ, ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ರವರು ದೇವಾಲಯದ ಆವರಣವನ್ನು  ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಶೃಂಗರಿಸುತ್ತಿದ್ದಾರೆ ಎಂದು ಶ್ರೀ.ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಉತ್ಸವದ 3 ದಿನಗಳೂ ಎಲ್ಲ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿದೆ. ಇದಕ್ಕೆ ಸಿಕಂದರಾಬಾದ್ ನ ಶ್ರೀಮತಿ. ಶ್ರಾವಣಿ ಮತ್ತು ಶ್ರೀ.ಸಾರಥಿ ಕಲ್ಪವಲ್ಲಿ, ದೆಹಲಿಯ ಶ್ರೀಮತಿ.ವೃಂದಾ ಸುಂದರಂ, ಚಿರಾಲದ ಶ್ರೀ.ಕರುಮುಡಿ ವೆಂಕಟರಮಣ ರೆಡ್ಡಿ, ಮುಂಬೈನ ಶ್ರೀ.ಅಡ್ಯಾನ್ ನಾರಂಗ್,  ಶ್ರೀ.ಅನಿಲ್ ದಿಧಿಕರ್, ಗೋಂಡ್ಯಾದ ಶ್ರೀ.ಘನಶ್ಯಾಮದಾಸ ರಾಮಕಿಶನ್ ಮಸಾನಿ, ಮುಂಬೈನ ಶ್ರೀ.ಸುನೀಲ್ ಅಗರವಾಲ್, ಶ್ರೀ.ಶಿವಪ್ರಕಾಶ ಗುಪ್ತಾ, ಹೈದರಾಬಾದ್ ನ ಶ್ರೀ.ಸುಧೀಶ್ ತಿಮ್ಮರಾಜು, ಶ್ರೀ.ಕರಣಂ ನಾರಾಯಣ, ಜಬಲ್ ಪುರದ ಸಾಯಿ ಗ್ರಾಫಿಕ್ಸ್ ನ ಶ್ರೀ.ಶಿಶಿರ್ ಪಾಂಡೆ, ಹಾಗೂ ಹೈದರಾಬಾದ್ ನ ಶ್ರೀ.ಪೊನ್ನಪುಲ ಪಾರ್ಥಸಾರಥಿ ಮತ್ತು ಶ್ರೀಮತಿ.ಸುಲೋಚನ ಕಾರ್ತೀಕ್ ಸಂಜಯ್ ರವರುಗಳು ಬಹಳವಾಗಿ ಧನಸಹಾಯವನ್ನು ಮಾಡಿ ಪ್ರಸಾದ ಭೋಜನವನ್ನು ಪ್ರಾಯೋಜಿಸಿರುತ್ತಾರೆ. ಭಕ್ತರಿಗೆ ಬಂದೊದಗಬಹುದಾದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶಿರಡಿಯ ಎರಡು ಕಡೆಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆದಿಡಲಾಗುತ್ತದೆ. ಅಲ್ಲದೇ, ದೇವಾಲಯದ ಆವರಣದಲ್ಲಿ 24x7 ಶಾಶ್ವತವಾಗಿ ತಜ್ಞ ವೈದ್ಯರುಗಳ ತಂಡದೊಂದಿಗೆ ಆಂಬುಲೆನ್ಸ್ ಅನ್ನು ನಿಲ್ಲಿಸಿರಲಾಗುತ್ತದೆ. ಅಲ್ಲದೇ, ದೇವಾಲಯದ ಕ್ಯೂ ಕಾಂಪ್ಲೆಕ್ಸ್ ನಲ್ಲಿ ತಜ್ಞ ವೈದ್ಯರುಗಳ ತಂಡವನ್ನು ಇರಿಸಲಾಗುತ್ತದೆ ಹಾಗೂ ವೈದ್ಯರುಗಳು ಎರಡು ಪಾಳಿಗಳಲ್ಲಿ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಶ್ರೀ.ಸೋನಾವಾನೆಯವರು ತಿಳಿಸಿದರು. 

ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ್ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ  ಜಿಲ್ಲಾಧಿಕಾರಿಗಳಾದ ಶ್ರೀ.ಅನಿಲ್ ಕಾವಡೆ,  ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ  ಸಾಹೇಬ್ ಶಿಂಧೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು, ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸಿಬ್ಬಂದಿಗಳೂ  ಬಹಳ ಶ್ರಮವಹಿಸಿ ಹಗಲಿರುಳೂ  ಈ ವರ್ಷದ ಗುರು ಪೂರ್ಣಿಮೆ ಉತ್ಸವವನ್ನು ಯಶಸ್ವಿಗೊಳಿಸುವ ಸಲುವಾಗಿ ದುಡಿಯುತ್ತಿದ್ದಾರೆ ಎಂದು ಶ್ರೀ.ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ಮರಾಠಿ ಭಾಷೆಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment