Thursday, July 10, 2014

ರಾಜಸ್ಥಾನದ ಶ್ರೀ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), ರಾಷ್ಟ್ರೀಯ ಹೆದ್ದಾರಿ-14, ಸಾಯಿಧಾಮ ಬನಾಸ, ರಾಜಸ್ಥಾನ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ಸಾಯಿಬಾಬಾ ಮಂದಿರವು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಉದಯಪುರದಿಂದ ಮೌಂಟ್ ಅಬುಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-14 ರಲ್ಲಿರುವ ಜೆ.ಕೆ.ಲಕ್ಷ್ಮಿ ಸಿಮೆಂಟ್ ಕಾರ್ಖಾನೆಯ ಹತ್ತಿರ ಇದೆ.

ಈ ಮಂದಿರದ ಭೂಮಿಪೂಜೆಯನ್ನು 19ನೇ ಜನವರಿ 2012 ರಂದು ನೆರವೇರಿಸಲಾಯಿತು. ಮಂದಿರದ ಶಿಲಾನ್ಯಾಸವನ್ನು 12ನೇ ಮಾರ್ಚ್ 2012 ರಂದು ನೆರವೇರಿಸಲಾಯಿತು.

ಮಂದಿರದ ಉದ್ಘಾಟನೆಯನ್ನು 2ನೇ ಜೂನ್ 2014 ರಂದು ಟ್ರಸ್ಟ್ ನ ಸದಸ್ಯರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. 

ಮಂದಿರವನ್ನು ಬನಾಸದಲ್ಲಿರುವ ಮಂದಿರದ ಟ್ರಸ್ಟ್ ಗೆ ಸೇರಿದ 40x70 ಚದರ ಅಡಿ ವಿಸ್ತೀರ್ಣ ಜಾಗದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಲಾಗಿದೆ. 

ಶ್ರೀ.ಪ್ರದೀಪ್ ಕುಮಾರ್ ಪಲಿವಾಲ್ ರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಅವರು ಮಂದಿರದ ದಿನನಿತ್ಯದ ಆಗು ಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಹಳ ಅತ್ಯುತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ 53 ಇಂಚು ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅ ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. 

ಮಂದಿರದ ಆವರಣದಲ್ಲಿ ಅಮೃತ ಶಿಲೆಯ ಶ್ರೀರಾಮ, ಬಾಬಾ ರಾಮದೇವ್, ರಾಧಾಕೃಷ್ಣ, ದುರ್ಗಾದೇವಿ ಮತ್ತು ಗಣೇಶನ ವಿಗ್ರಹಗಳನ್ನು  ಸಹ ಪ್ರತಿಷ್ಟಾಪಿಸಲಾಗಿದೆ.









ಮಂದಿರದ ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ:

ಮಂದಿರವನ್ನು ಬೆಳಿಗ್ಗೆ 5:45 ರಿಂದ ರಾತ್ರಿ  9:15 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ:

ಕಾಕಡಾ ಆರತಿ   - 5:45 
ಛೋಟಾ ಆರತಿ  - 7:15 
ಮಧ್ಯಾನ್ಹ ಆರತಿ -12:15 
ಧೂಪಾರತಿ       -  7:15 
ಶೇಜಾರತಿ        -  9:15 

ವಿಶೇಷ ಉತ್ಸವದ ದಿನಗಳು:

1.ಮಂದಿರದ ವಾರ್ಷಿಕೋತ್ಸವ ಪ್ರತಿವರ್ಷ 2ನೇ ಜೂನ್.
2.ಶ್ರೀರಾಮ ನವಮಿ 
3.ಗುರುಪೂರ್ಣಿಮೆ 
4.ಶ್ರೀಕೃಷ್ಣ ಜನ್ಮಾಷ್ಟಮಿ
5.ಬಾಬಾ ರಾಮದೇವ ಬಂಡಾರ (15  ದಿನಗಳು)
6.ನವರಾತ್ರಿ
7.ದೀಪಾವಳಿ
8.ಗಣೇಶ ಚತುರ್ಥಿ 

ದೇಣಿಗೆಗೆ ಮನವಿ:

ಶ್ರೀ ಶಿರಡಿ ಸಾಯಿಬಾಬಾ ಮಂದಿರಂ ಟ್ರಸ್ಟ್ (ನೋಂದಣಿ) ಯು ಮಂದಿರದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಹಾಗೂ ಕಾರ್ಯಚಟುವಟಿಕೆಗಳಿಗಾಗಿ ಸಹೃದಯ ಸಾಯಿಭಕ್ತರಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ಚೆಕ್/ಡಿಡಿ ಮುಖಾಂತರವಾಗಿ “ಶ್ರೀ ಶಿರಡಿ ಸಾಯಿಬಾಬಾ ಮಂದಿರಂ ಟ್ರಸ್ಟ್ (ನೋಂದಣಿ), ಬನಾಸ, ಭಾರತೀಯ ಸ್ಟೇಟ್ ಬ್ಯಾಂಕ್, ಖಾತೆ ಸಂಖ್ಯೆ:32160572749, ಶಾಖೆ: ಬಸಂತ್ ಘರ್, ಐ.ಎಫ್.ಎಸ್.ಸಿ. ಸಂಖ್ಯೆ:SBIN0007395" ಗೆ ಸಂದಾಯವಾಗುವಂತೆ ನೀಡಬಹುದಾಗಿದೆ. 

ಸ್ಥಳ: 
ಮಂದಿರವು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಉದಯಪುರದಿಂದ ಮೌಂಟ್ ಅಬುಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-14 ರಲ್ಲಿರುವ ಜೆ.ಕೆ.ಲಕ್ಷ್ಮಿ ಸಿಮೆಂಟ್ ಕಾರ್ಖಾನೆಯ ಹತ್ತಿರ ಇದೆ. ಮಂದಿರವು ಉದಯಪುರದಿಂದ 107 ಕಿಲೋಮೀಟರ್ ಹಾಗೂ ಅಬು ರಸ್ತೆ ರೈಲು ನಿಲ್ದಾಣದಿಂದ 38 ಕಿಲೋಮೀಟರ್ ಗಳ ಅಂತರದಲ್ಲಿರುತ್ತದೆ.

ವಿಳಾಸ: 
ಶ್ರೀ ಸಾಯಿಬಾಬಾ ಮಂದಿರ 
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ (ನೋಂದಣಿ), 
ರಾಷ್ಟ್ರೀಯ ಹೆದ್ದಾರಿ-14,
ಸಾಯಿಧಾಮ ಬನಾಸ, 
ಮೌಂಟ್ ಅಬು ಹತ್ತಿರ, 
ಸಿರೋಹಿ ಜಿಲ್ಲೆ, 
ರಾಜಸ್ಥಾನ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಪ್ರದೀಪ್ ಕುಮಾರ್ ಪಲಿವಾಲ್ 

ದೂರವಾಣಿ ಸಂಖ್ಯೆ: 
+91 97854 55634

ಇ-ಮೇಲ್ ವಿಳಾಸ: 
paliwal.pradeep23@gmail.com/Saidhambanas.nh14@gmail.com

ಮಾರ್ಗಸೂಚಿ: 
ಮಂದಿರವು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಉದಯಪುರದಿಂದ ಮೌಂಟ್ ಅಬುಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-14 ರಲ್ಲಿರುವ ಜೆ.ಕೆ.ಲಕ್ಷ್ಮಿ ಸಿಮೆಂಟ್ ಕಾರ್ಖಾನೆಯ ಹತ್ತಿರ ಇದೆ. ಮಂದಿರವು ಉದಯಪುರದಿಂದ 107 ಕಿಲೋಮೀಟರ್ ಹಾಗೂ ಅಬು ರಸ್ತೆ ರೈಲು ನಿಲ್ದಾಣದಿಂದ 38 ಕಿಲೋಮೀಟರ್ ಗಳ ಅಂತರದಲ್ಲಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment