Wednesday, October 20, 2010

ಸಾಯಿ ಭಜನ ಗಾಯಕ - ಶ್ರೀ. ಶರತ್ ಬಿಳಿನೆಲೆ  - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ.ಶರತ್ ಬಿಳಿನೆಲೆ 


ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾದ ಶ್ರೀ.ಶರತ್ ಬಿಳಿನೆಲೆಯವರು 19 ನೇ ಜುಲೈ 1972 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಬಳಿಯ ಬಿಳಿನೆಲೆ ಗ್ರಾಮದಲ್ಲಿ ಜನಿಸಿದರು. ಇವರು ಸಿವಿಲ್ ಇಂಜಿನಿಯರಿಂಗ್ ಮತ್ತು ಆಟೋ ಕ್ಯಾಡ್ ನಲ್ಲಿ ಡಿಪ್ಲೋಮಾ ಪಡೆದಿರುತ್ತಾರೆ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀ.ವೆಂಕಟರಾಘವನ್ ಬಳಿ, ಗಮಕ ವಾಚನವನ್ನು (3 ವರ್ಷ) ಶ್ರೀಮತಿ.ವನಮಾಲ ಬೇಲೂರು ಅವರ ಬಳಿ ಮತ್ತು ಸುಗಮ ಸಂಗೀತವನ್ನು ಶ್ರೀ.ಎಂ.ಎಸ್.ಗಿರಿಧರ್ ರವರ ಬಳಿ ಕಲಿತಿದ್ದಾರೆ. ಆಲ್ಲದೇ, ನಾಟಕದಲ್ಲಿ ಕೂಡ ತರಬೇತಿಯನ್ನು ಪಡೆದಿದ್ದಾರೆ. 

ಇವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿಭಕ್ತರಿಗಾಗಿ ಈ ಕೆಳಗೆ ಕೊಡಲಾಗಿದೆ:

ಸಹಾಯಕ ನಿರ್ದೇಶಕ :

ಇವರು ಅನೇಕ ಕನ್ನಡ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುತ್ತಾರೆ. ಅವುಗಳಲ್ಲಿ ಮುಖ್ಯವಾದವುಗಳು, ಮಳೆಗಾಲ, ಶೋಧ, ನಾಂದಿ, ನವಿಲೇ ಓ ನವಿಲೇ (ಕಲಾತ್ಮಕ ಚಿತ್ರ). ಇದಲ್ಲದೆ, 4 ಕನ್ನಡ ಸಾಕ್ಷ್ಯ ಚಿತ್ರಗಲ್ಲಿ ಕೂಡ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುತ್ತಾರೆ. 

ಚಲನಚಿತ್ರಗಳು ಹಾಗೂ ದೂರದರ್ಶನ:

ಇವರು ಅನೇಕ ಕನ್ನಡ ಚಲನಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಮಳೆಗಾಲ, ಶೋಧ, ನಾಂದಿ, ಮಲೆನಾಡ ಪ್ರೇಮ ಕಥೆ, ಕಾನನ, ತೀರ್ಪು, ಕಡಲಗಳ್ಳರು. ಇಷ್ಟೇ ಆಲ್ಲದೇ, ಇವರು ಆರವಿ ಎಂಬ ಒಂದು ತಮಿಳು ಚಲನಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. 

ಇವರು ಅನೇಕ ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಕನ್ಯಾದಾನ, ವಾತ್ಸಲ್ಯ, ಎಲ್ಲಾ ಮರೆತಿರುವಾಗ, ಶಿವ ಲೀಲಾಮೃತ, ಅಕ್ಕ ಪಕ್ಕ (ಕಾಮೆಡಿ ಧಾರಾವಾಹಿ). ಇವರು 4 ದೂರದರ್ಶನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆಲ್ಲದೇ, ಜೇಂಕಾರ್ ಆಡಿಯೋ ನಿರ್ಮಾಣದ ಅನೇಕ ಅಲ್ಬಮ್ ಗಳಲ್ಲಿ ಅಭಿನಯಿಸಿದ್ದಾರೆ. 

ದೂರದರ್ಶನ ಚಿತ್ರಗಳ ನಿರ್ದೇಶಕ:

ಇವರು ಅನೇಕ ದೂರದರ್ಶನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಜುಗ್ಗ ಸ್ವಾಮಿ ಜುಗ್ಗ, ನಗೆಯ ಲೋಕ, ಸಾಹಸ ಸಿಂಹನ ಸವಿನೆನಪುಗಳು. ಇಷ್ಟೇ ಆಲ್ಲದೇ, ಇವರು 9 ಜಾಹೀರಾತುಗಳನ್ನು ಹಾಗೂ 12 ಕನ್ನಡ ನಾಟಕಗಳನ್ನು ಕೂಡ ನಿರ್ದೇಶಿಸಿದ್ದಾರೆ. 


ಸಂಗೀತ ನಿರ್ದೇಶಕ:

ಇವರು ಅನೇಕ ಕ್ಯಾಸೆಟ್ ಮತ್ತು ಸಿಡಿಗಳಿಗೆ ಸಂಗೀತವನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳು ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ, ಶಿವ ಲೋಕಾಮೃತ, ಭಕ್ತಿ ಗೀತಾಂಜಲಿ ಮತ್ತು ಕುಕ್ಕೆ ಭಕ್ತಿ ಗೀತ. 

ಹಿನ್ನೆಲೆ ಗಾಯಕ:

ಇವರು ಅನೇಕ ಕ್ಯಾಸೆಟ್ ಮತ್ತು ಸಿಡಿಗಳಿಗೆ ಹಿನ್ನೆಲೆ ಗಾಯಕರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ (ಭಕ್ತಿ ಗೀತೆಗಳು), ಹಲೋ ಪುಟಾಣಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟು (ಭಕ್ತಿ ಗೀತೆಗಳು). 

ಗೀತ ರಚನಕಾರ:

ಇವರು ಜೇಂಕಾರ್ ಆಡಿಯೋ, ಕುಕ್ಕೆ ಶ್ರೀ ಲೈವ್ ಕ್ಯಾಸೆಟ್ ಮತ್ತು ಅಶ್ವಿನಿ ಆಡಿಯೋ ಕಂಪನಿಗಳ ಅನೇಕ ಧ್ವನಿಸುರಳಿಗಳಿಗೆ ಗೀತೆಗಳನ್ನು ರಚಿಸುತ್ತಾ ಬಂದಿದ್ದಾರೆ. 



ಕಥಾ ಲೇಖಕ:

ಇವರು ಅನೇಕ ಕನ್ನಡ ಮತ್ತು ತುಳು ನಾಟಕಗಳಿಗೆ ಕಥೆಯನ್ನು ರಚಿಸಿದ್ದಾರೆ.

ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ಸಂಪರ್ಕದ ವಿವರಗಳು

ಗಾಯಕರ ಹೆಸರು
ಶರತ್ ಬಿಳಿನೆಲೆ
ವಿಳಾಸ
ನಂ.46, ಮಾಧವ ಕುಟೀರ, 9 ನೇ ಮುಖ್ಯ ರಸ್ತೆ, ವಿಶ್ವಕರ್ಮ        ದೇವಸ್ಥಾನದ ರಸ್ತೆ,  ಆರ್.ಪಿ.ಸಿ.ಬಡಾವಣೆ,ವಿಜಯನಗರ,      ಬೆಂಗಳೂರು-560 040.

ದೂರವಾಣಿ ಸಂಖ್ಯೆಗಳು
080-23145181 / 9480690035
ಈ ಮೇಲ್ ವಿಳಾಸ

ಅಂತರ್ಜಾಲ
-
ಆಲ್ಬಮ್ ಗಳು
ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ (ಭಕ್ತಿ ಗೀತೆಗಳು), ಹಲೋ ಪುಟಾಣಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟು (ಭಕ್ತಿ ಗೀತೆಗಳು).


ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment