Thursday, October 7, 2010

ಶಿರಡಿ ಎಲ್ಲಿದೆ ? ಶಿರಡಿಗೆ ಹೋಗುವ ಬಗೆ ಹೇಗೆ? - ಕೃಪೆ -ಸಾಯಿಅಮೃತಧಾರಾ.ಕಾಂ

ಶಿರಡಿಯು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಕೊಪರ್ಗಾವ್ ತಾಲ್ಲೂಕಿನಲ್ಲಿದೆ. ಕೊಪರ್ಗಾವ್ ನಿಂದ ಶಿರಡಿಯು 16 ಕಿಲೋಮೀಟರ್ ದೂರದಲ್ಲಿದೆ.  

ಶಿರಡಿಗೆ ರಸ್ತೆ , ರೈಲು ಮತ್ತು ವಾಯು ಮಾರ್ಗವಾಗಿ ಹೋಗಲು ಅವಕಾಶ ಕಲ್ಪಿಸಲಾಗಿದೆ.

ರಸ್ತೆ ಮಾರ್ಗ : 
  
ಶಿರಡಿಗೆ ಭಾರತದ ಎಲ್ಲಾ ಪ್ರಮುಖ ನಗರಗಳಿಂದ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಶಿರಡಿಯು ಅಹಮದ್ ನಗರ ಮತ್ತು ಮನಮಾಡ ಹೆದ್ದಾರಿಯಲ್ಲಿದ್ದು, ಮುಂಬೈನಿಂದ 250 ಕಿಲೋಮೀಟರ್ ಮತ್ತು ನಾಸಿಕ್ ನಿಂದ 75 ಕಿಲೋಮೀಟರ್ ಗಳ ಅಂತರದಲ್ಲಿದೆ. ಮಹಾರಾಷ್ಟ್ರ ಟ್ರಾನ್ಸ್ ಪೋರ್ಟ್ ಡೆವಲಪ್ ಮೆಂಟ್  ಕಾರ್ಪೋರೇಷನ್ ಶಿರಡಿಯಿಂದ ಎಲ್ಲಾ ಪ್ರಮುಖ ನಗರಗಳಿಗೂ ಬಸ್ ಸೌಲಭ್ಯ ಕಲ್ಪಿಸಿದೆ.

ಪ್ರಮುಖ ಬಸ್ ನಿಲ್ದಾಣಗಳ ದೂರವಾಣಿ ಸಂಖ್ಯೆಗಳು ಮತ್ತು ಆನ್ ಲೈನ್ ಬುಕಿಂಗ್ ಮಾಡಲು http://www.saiamrithadhara.com/roadtransport.html ಜೋಡಣೆಯನ್ನು ಕ್ಲಿಕ್ಕಿಸಿ.

ರೈಲ್ವೆ ಮಾರ್ಗ : 


ಕೋಪರ್ಗಾವ್ ರೈಲ್ವೆ ನಿಲ್ಧಾಣವು ಶಿರಡಿಯಿಂದ 16 ಕಿಲೋಮೀಟರ್ ಗಳ ಅಂತರದಲ್ಲಿದೆ. ಇದು ದೌಂಡ್ ಮತ್ತು ಮನಮಾಡ ದ ಹಾದಿಯಲ್ಲಿದೆ. ಮನಮಾಡ ರೈಲ್ವೆ ನಿಲ್ಧಾಣವು ಶಿರಡಿಯಿಂದ 58 ಕಿಲೋಮೀಟರ್ ಗಳ ಅಂತರದಲ್ಲಿದೆ. ಶಿರಡಿ ದೇವಸ್ಥಾನದ ಪ್ರಾಂಗಣದಲ್ಲಿ ರೈಲ್ವೆ ಬುಕಿಂಗ್ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಈ ಕೌಂಟರ್ ಮುಖಾಂತರ ದೇಶದ ಯಾವ ತುದಿಯಲ್ಲಿನ ಊರಿಗಾದರೂ ಕೂಡ ಟಿಕೇಟ್ ಬುಕಿಂಗ್ ಮಾಡಿಸಬಹುದು. 

ಇತ್ತೀಚಿಗೆ ಹೊಸದಾಗಿ ಸಾಯಿನಗರ ರೈಲ್ವೆ ನಿಲ್ಧಾಣ ಪ್ರಾರಂಭಿಸಲಾಗಿದೆ. ಇದು ಶಿರಡಿ ದೇವಸ್ಥಾನದಿಂದ ಕೇವಲ ೫ ಕಿಲೋಮೀಟರ್ ಗಳ ಅಂತರದಲ್ಲಿದೆ. ಈ ರೈಲ್ವೆ ನಿಲ್ಧಾಣ ಪ್ರಾರಂಭವಾಗಿರುವುದರಿಂದ ಲಕ್ಷಾಂತರ ಮಂದಿ ಸಾಯಿಭಕ್ತರಿಗೆ ನೇರ ರೈಲ್ವೇ ಸೌಲಭ್ಯವನ್ನು ರೈಲ್ವೇ ಇಲಾಖೆ ಮಾಡಿಕೊಟ್ಟಂತೆ ಆಗಿದೆ. 



ಈ ನಿಲ್ಧಾಣವನ್ನು ಆಗಿನ ರೈಲ್ವೇ ಮಂತ್ರಿಗಳಾದ ಶ್ರೀ.ಲಲ್ಲೂ ಪ್ರಸಾದ್ ಯಾದವ್ ರವರು ಉದ್ಘಾಟನೆ ಮಾಡಿದರು. ಈ ನಿಲ್ಧಾಣಕ್ಕೆ ಮುಂಬೈ, ಚೆನ್ನೈ, ಪುಣೆ, ಬೆಂಗಳೂರಿನಿಂದ ನೇರ ರೈಲು ಸೌಕರ್ಯವನ್ನು ಕಲ್ಪಿಸಲಾಗಿದೆ. 

ಸಾಯಿನಗರ ರೈಲ್ವೇ ನಿಲ್ಧಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಲಾಗಿದ್ದು 500 ಮೀಟರ್ ಉದ್ದದ ಪ್ಲಾಟ್ ಫಾರಂ ಹೊಂದಿದೆ. 22 ಕೋಚ್ ಗಳ ರೈಲು ನಿಲ್ಲುವಂತೆ ಅವಕಾಶ ಕಲ್ಪಿಸಲಾಗಿದೆ. ಆಲ್ಲದೇ, 2 ಪ್ರಯಾಣಿಕರು ತಂಗುವ ಕೋಣೆಗಳು ಹಾಗೂ ಒಂದು ವಿಶ್ರಾಂತಿ ಕೋಣೆಯನ್ನು ಹೊಂದಿದೆ. ಈ ನಿಲ್ಧಾಣದ ನಿರ್ಮಾಣಕ್ಕೆ  78 ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿದೆ.

ಪ್ರಮುಖ ರೈಲ್ವೇ ನಿಲ್ದಾಣಗಳ ದೂರವಾಣಿ ಸಂಖ್ಯೆಗಳು ಮತ್ತು ಆನ್ ಲೈನ್ ಬುಕಿಂಗ್ ಮಾಡಲು http://www.saiamrithadhara.com/railways.html ಜೋಡಣೆಯನ್ನು ಕ್ಲಿಕ್ಕಿಸಿ.

ವಾಯು ಮಾರ್ಗ:

ಶಿರಡಿಗೆ ಹತ್ತಿರವಾದ ವಿಮಾನ ನಿಲ್ದಾಣ ನಾಸಿಕ್ ನಲ್ಲಿದೆ. ಇದು ಶಿರಡಿಯಿಂದ ಸುಮಾರು 75 ಕಿಲೋಮೀಟರ್ ಗಳ ದೂರದಲ್ಲಿದೆ. ಔರಂಗಾಬಾದಿನಲ್ಲಿ ಒಂದು ವಿಮಾನ ನಿಲ್ದಾಣವಿದ್ದು ಅದು ಶಿರಡಿಯಿಂದ 150 ಕಿಲೋಮೀಟರ್ ಗಳ ದೂರದಲ್ಲಿದೆ. ಮುಂಬೈ ವಿಮಾನ ನಿಲ್ದಾಣವು ಶಿರಡಿಯಿಂದ 296 ಕಿಲೋಮೀಟರ್ ಗಳ ದೂರದಲ್ಲಿದೆ. ಮುಂಬೈನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಪುಣೆ ವಿಮಾನ ನಿಲ್ದಾಣವು ಶಿರಡಿಯಿಂದ 231 ಕಿಲೋಮೀಟರ್ ಗಳ ಅಂತರದಲ್ಲಿದೆ. 

ಶಿರಡಿಗೆ ಬರುವ ಭಾರತೀಯ ಮತ್ತು ವಿದೇಶಿ ಸಾಯಿಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿಗೆ ಶಿರಡಿಯಲ್ಲೇ ವಿಮಾನ ನಿಲ್ದಾಣ ಮಾಡಲು ಚಿಂತನೆ ನಡೆಸಿ ಮಹಾರಾಷ್ಟ್ರ ಸರ್ಕಾರ ಶಿರಡಿ ಸಾಯಿಬಾಬಾ ಸಂಸ್ಥಾನದ ಸಹಯೋಗದೊಂದಿಗೆ ಶಿರಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ಕಾರ್ಯವನ್ನು 27ನೇ ಆಗಸ್ಟ್ 2010 ರಂದು ನೆರವೇರಿಸಿದರು. 


ಶಿರಡಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುವುದರಿಂದ ಹೆಚ್ಚು ಹೆಚ್ಹು ಸಾಯಿ ಭಕ್ತರು ದರ್ಶನಕ್ಕೆ ಬರುವಂತೆ ಆಗುವುದೇ ಆಲ್ಲದೇ ಬಸ್ ಮತ್ತು ರೈಲುಗಳ ಜನಸಂದಣಿ ಕಡಿಮೆಯಾಗುತ್ತದೆ. ಶಿರಡಿ ವಿಮಾನ ನಿಲ್ದಾಣವು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಳ್ಳಲಿದ್ದು ಇದರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು 260 ಕೋಟಿ  ಎಂದು ಅಂದಾಜು ಮಾಡಲಾಗಿದೆ. ವಿಮಾನ ನಿಲ್ದಾಣವು ಬರುವ ವರ್ಷದ ನವೆಂಬರ್ 2011 ರ ವೇಳೆಗೆ ಪೂರ್ಣಗೊಳಿಸುವ ಉದ್ದೇಶವನ್ನು ಮಹಾರಾಷ್ಟ್ರ ಸರ್ಕಾರ ಹೊಂದಿದೆ.

ಪ್ರಮುಖ ವಿಮಾನ ನಿಲ್ದಾಣಗಳ ದೂರವಾಣಿ ಸಂಖ್ಯೆಗಳು ಮತ್ತು ಆನ್ ಲೈನ್ ಬುಕಿಂಗ್ ಮಾಡಲು http://www.saiamrithadhara.com/airways.html ಜೋಡಣೆಯನ್ನು ಕ್ಲಿಕ್ಕಿಸಿ.

ಕನ್ನಡ ಅನುವಾದ - ಶ್ರೀಕಂಠ ಶರ್ಮ 

No comments:

Post a Comment