Wednesday, October 20, 2010

ದೀಪಕ್ ಬಲರಾಜ್ ರ "ಮಾಲಿಕ್ ಏಕ್" ಚಿತ್ರ ಅಕ್ಟೋಬರ್ 29 ರಂದು ವಿಶ್ವದಾದ್ಯಂತ ಬಿಡುಗಡೆ - ಕೃಪೆ : ಸಾಯಿಅಮೃತಧಾರಾ.ಕಾಂ 


ಬಹು ದಿನಗಳಿಂದ ಸಾಯಿಭಕ್ತರು ನಿರೀಕ್ಷಿಸುತ್ತಿದ್ದ, ನಟ ಜಾಕಿ ಶ್ರಾಫ್ ಶಿರಡಿ ಸಾಯಿಬಾಬಾರವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮತ್ತು ದೀಪಕ್ ಬಲರಾಜ್ ನಿರ್ದೇಶನದ ಹಿಂದಿ ಚಲನಚಿತ್ರ "ಮಾಲಿಕ್ ಏಕ್" ವಿಶ್ವದಾದ್ಯಂತ ಇದೇ ತಿಂಗಳ 29 ನೇ ಅಕ್ಟೋಬರ್ 2010, ಶುಕ್ರವಾರದಂದು ಬಿಡುಗಡೆಯಾಗಲಿದೆ. ಪ್ರದರ್ಶನದ ಮೊದಲನ ದಿನದಿಂದ ಮಹಾರಾಷ್ಟ್ರದಾದ್ಯಂತ ಸಂಪೂರ್ಣ ತೆರಿಗೆ ವಿನಾಯಿತಿ ಈ ಚಿತ್ರಕ್ಕೆ ಇದೆ. ಈ ಚಿತ್ರವು ದೊಡ್ಡ ತಾರಾಗಣವನ್ನು ಹೊಂದಿದ್ದು ಜಾಕಿ ಶ್ರಾಫ್ ರವರಲ್ಲದೇ ಕಿಶೋರೆ ಸಹಾನೆ ವಿಜ್, ಅನುಪ್ ಜಲೋಟ, ಸ್ಮೃತಿ ಇರಾನಿ, ವರುಣ್ ವಿಜ್, ದಿವ್ಯಾ ದತ್ತಾ, ರಾಜೇಶ್ವರಿ ಸಚ್ ದೇವ, ಜರೀನಾ ವಹಾಬ್, ಶಕ್ತಿ ಕಪೂರ್, ಗೋವಿಂದ್ ನಾಮ್ ದೇವ್, ವಿಕ್ರಂ ಗೋಖಲೆ ಮತ್ತಿತರರನ್ನು ಒಳಗೊಂಡಿದೆ. ಈ ಚಿತ್ರಕ್ಕೆ ಸಂಗೀತವನ್ನು ಖ್ಯಾತ ಭಜನ ಗಾಯಕ ಮತ್ತು "ಭಜನ ಸಾಮ್ರಾಟ್" ಎಂದು ಖ್ಯಾತಿಯನ್ನು ಹೊಂದಿರುವ ಶ್ರೀ.ಅನುಪ್ ಜಲೋಟರವರು ನೀಡಿದ್ದಾರೆ. ಪ್ರಸಿದ್ದ ಗಾಯಕರಾದ ಜಗಜಿತ್ ಸಿಂಗ್, ಅನುಪ್ ಜಲೋಟ, ಪಂಕಜ್ ಉದಾಸ್, ಗುಲಾಂ ಆಲಿ, ಅನುರಾಧ ಪೌಡ್ ವಾಲ್, ಶ್ರೇಯಾ ಗೋಶಾಲ್ ರವರು ಈ ಚಿತ್ರದ ಅತ್ಯಂತ ಮಧುರವಾದ ಗೀತೆಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಈ ಚಿತ್ರವನ್ನು ನಟಿ ಕಿಶೋರಿ ಸಹಾನೆ ವಿಜ್ ಮತ್ತು ನಿಶಾ ಸುಮನ್ ಜೈನ್ ಜಂಟಿಯಾಗಿ ನಿರ್ಮಿಸಿದ್ದಾರೆ. 


"ಈ ಚಿತ್ರವು ಸಾಯಿಬಾಬಾರವರ ಬೋಧನೆಗಳು ಮತ್ತು ತತ್ವಗಳನ್ನು ಆಧರಿಸಿ ನಿರ್ಮಿಸಲಾಗಿದೆ, ಈ ಚಿತ್ರದ ನಿರ್ಮಾಣಕ್ಕೆ 2 ವರ್ಷಗಳ ಕಾಲ ಸಾಕಷ್ಟು ಸಂಶೋಧನೆಗಳನ್ನು ನೆಡೆಸಲಾಗಿದೆ, ಈ ಚಿತ್ರವು ಕ್ರಿ.ಶ.1900 ರಿಂದ 1918 ರ ವರೆಗೆ ನಡೆದ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗಿದೆ, ಈ ಹಿಂದೆ ಸಾಯಿಬಾಬಾರವರ ಜೀವನವನ್ನು ಆಧರಿಸಿ ನಿರ್ಮಿಸಿದ ಯಾವುದೇ ಚಿತ್ರಗಳಲ್ಲಿ ಬಳಸಿರದ ಅನೇಕ ಸಾಯಿಬಾಬಾರವರ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ, ನಟ ಜಾಕಿ ಶ್ರಾಫ್ 8 ತಿಂಗಳುಗಳ ಕಾಲ ಈ ಚಿತ್ರಕ್ಕೊಸ್ಕರವಾಗಿ ವಿಶೇಷ ತಾಲೀಮು ನಡೆಸಿ ಸಾಯಿಬಾಬಾರವರ ಪಾತ್ರವನ್ನು ಚೆನ್ನಾಗಿ ಅಧ್ಯಯನ ಮಾಡಿದುದೇ ಆಲ್ಲದೇ ಸಾಯಿಬಾಬಾರವರ ಪಾತ್ರಕ್ಕೆ ಸರಿಹೊಂದುವಂತೆ ತಮ್ಮ ದೇಹದ ತೂಕವನ್ನು ಕೂಡ ಇಳಿಸಿಕೊಂಡಿದ್ದಾರೆ, ಈ ಚಿತ್ರದಲ್ಲಿ ಬಾಬಾರವರು ಎಲ್ಲಾ ಫಕೀರರಂತೆ ಇರದ ಹಾಗೂ ಪ್ರಪಂಚದ ಎಲ್ಲಾ ವರ್ಗದ ಮತ್ತು ಮತಗಳಿಗೆ ಸೇರಿದ ಜನತೆಗೆ ತಾಳ್ಮೆ ಮತ್ತು ನಂಬಿಕೆಯನ್ನು ಬೋಧಿಸಿದ ಸಂತ ಶ್ರೇಷ್ಠ ಎಂಬ ರೀತಿಯಲ್ಲಿ ಬಿಂಬಿಸಲು ಸಂಪೂರ್ಣ ಪ್ರಯತ್ನ ಮಾಡಲಾಗಿದೆ" ಎಂದು ಚಿತ್ರದ ನಿರ್ದೇಶಕ ದೀಪಕ್ ಬಲರಾಜ್ ರವರು ತಿಳಿಸಿದ್ದಾರೆ. 

ಈ ಹಿಂದೆ 2003 ರಲ್ಲಿ  ದೀಪಕ್ ಬಲರಾಜ್ ರವರು "ಶಿರಡಿ ಸಾಯಿಬಾಬಾ" ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಬಂದಿದ್ದವು. ಆಲ್ಲದೇ ಪ್ರತಿಷ್ಟಿತ "ರಾಷ್ಟ್ರೀಯ ಐಕ್ಯತಾ ಪ್ರಶಸ್ತಿ" ಯನ್ನು ಆಗಿನ ರಾಷ್ಟ್ರಾಧ್ಯಕ್ಷರಾದ ಶ್ರೀ.ಕೆ.ಆರ್.ನಾರಾಯಣ್ ರವರು ನೀಡಿ ಗೌರವಿಸಿದ್ದರು. 

ಚಿತ್ರದ ನಿರ್ಮಾಪಕಿಯಾಗಿರುವ ನಿಶಾ ಜೈನ್ ರವರು ಶೇರು ಮಾರುಕಟ್ಟೆಯಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಆಲ್ಲದೇ, ಜೈನ್ ಸನ್ ಇಂಡಸ್ಟ್ರೀಸ್, ಸಾಯಿ ಡಿರೈವೆಟೀವ್ಸ್, ಸ್ಮಾರ್ಟ್ ಪ್ರಾಫಿಟ್ ಮತ್ತು ಬಿಲ್ಡ್ ಟು ಲಾಸ್ಟ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಲ್ಲದೇ, ಇವರು ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಈ ಚಿತ್ರದ ಹಾಡುಗಳ ವಿವರಗಳು ಈ ಕೆಳಕಂಡಂತೆ ಇವೆ:

ಸಂಗೀತ ಮತ್ತು ಸಾಹಿತ್ಯ : ಭಜನ ಸಾಮ್ರಾಟ್ ಅನುಪ್ ಜಲೋಟ

೧. ಸಗಾರೆ ಜಗತ್ ಮೇ - ಗಾಯಕ : ಜಗಜಿತ್ ಸಿಂಗ್
೨. ಸಾಯಿಬಾಬಾ ಗೀತಸುಧಾ - ಗಾಯಕ: ಪಂಕಜ್ ಉದಾಸ್
೩. ಸಾಯಿ ನಾಮ್ ಮೇ ಜಾದೂ ಐಸಾ - ಗಾಯಕ: ಅನುಪ್ ಜಲೋಟ (ಸಾಹಿತ್ಯ : ಮನೋಜ್ ಕುಮಾರ್)
೪. ಸಾಯಿ ಬಾಬಾ ಅಚ್ಚೇ - ಗಾಯಕರು: ಜೈದೀಪ್ ಚೌಧರಿ, ಬಾಬ್ಬಿ ವಿಜ್, ಜಾಕಿ ಶ್ರಾಫ್ (ಸಾಹಿತ್ಯ : ಅಮಿತ್ ಖನ್ನಾ)
೫. ಯಾ ಆಲಿ ಆಲಿ - ಗಾಯಕ: ಗುಲಾಂ ಆಲಿ

ಕನ್ನಡ ಅನುವಾದ : ಶ್ರೀಕಂಠ ಶರ್ಮ



No comments:

Post a Comment