Monday, September 12, 2011

ಚಿಕ್ಕಬಳ್ಳಾಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಮಂದಿರ, ಶ್ರೀ ಸಾಯಿ ಸೇವಾ ಸಮಿತಿ, ಬಿ.ಜಿ.ಎಸ್.ಶಾಲೆ ಎದುರುಗಡೆ, ಸಾಯಿ ನಗರ,ಗೌರಿಬಿದನೂರು - 561 208, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಚಿಕ್ಕಬಳ್ಳಾಪುರ ತಾಲ್ಲೂಕಿನ ಗೌರಿಬಿದನೂರು ಪಟ್ಟಣದಲ್ಲಿರುತ್ತದೆ. ದೇವಾಲಯವು ಗೌರಿಬಿದನೂರು ಬಸ್ ನಿಲ್ದಾಣದಿಂದ ಮತ್ತು ರೈಲ್ವೇ ನಿಲ್ದಾಣದಿಂದ ಸುಮಾರು 10 ನಿಮಿಷಗಳ  ನಡಿಗೆಯ ಅಂತರದಲ್ಲಿರುತ್ತದೆ.

ಈ ದೇವಾಲಯದ ಭೂಮಿ ಪೂಜೆಯನ್ನು 2000 ನೇ ಇಸವಿಯಲ್ಲಿ  ನೆರವೇರಿಸಲಾಯಿತು. 

ದೇವಾಲಯವನ್ನು 13ನೇ  ಏಪ್ರಿಲ್ 2003 ರಂದು ಸಾವಿರಾರು ಜನ ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. 


ದೇವಾಲಯವು ಸರಿ ಸುಮಾರು 2 1/2 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿದ್ದು ಈ ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ದಿವಂಗತ ಶ್ರೀ.ರಾಮಯ್ಯ ಮತ್ತು ಶ್ರೀಮತಿ.ಹೆಚ್.ಎಲ್.ಗೌರಮ್ಮನವರು ದಾನವಾಗಿ ನೀಡಿರುತ್ತಾರೆ. 

ಶ್ರೀ.ರಾಮಕೃಷ್ಣ ಮತ್ತು ಶ್ರೀಮತಿ.ವಿಜಯಲಕ್ಷ್ಮಿ ದಂಪತಿಗಳು ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ರಘು, ಶ್ರೀ.ಮಂಜುನಾಥ್ ಮತ್ತು ಶ್ರೀ. ಸಂತೋಷ್ ರವರುಗಳು ಈ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವು  ಬೆಳಗಿನ ಜಾವ 5:30 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 7:30 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ.  ಗುರುವಾರದ ದಿನದಂದು ಮಾತ್ರ ದೇವಾಲಯವು ರಾತ್ರಿ 9:30 ಕ್ಕೆ ಶೇಜಾರತಿಯ ನಂತರ ಮುಚ್ಚುತ್ತದೆ.


ಮಂದಿರದಲ್ಲಿ  5 ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.  ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ 2 ಅಡಿ ಎತ್ತರದ ಅಮೃತ ಶಿಲೆಯ ದತ್ತಾತ್ರೇಯ ದೇವರ ವಿಗ್ರಹ ಮತ್ತು ಬಲಭಾಗದಲ್ಲಿ 2 ಅಡಿ ಎತ್ತರದ ಅಮೃತ ಶಿಲೆಯ ಗಣಪತಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 


ಸಾಯಿಬಾಬಾರವರ ವಿಗ್ರಹದ ಕೆಳಗಡೆ ದಿನನಿತ್ಯ ಅಭಿಷೇಕಕ್ಕೆ ಬಳಸುವ ಪಂಚಲೋಹದ ಗಣಪತಿ, ಸಾಯಿಬಾಬಾ ಮತ್ತು ದತ್ತಾತ್ರೇಯ ದೇವರುಗಳ ವಿಗ್ರಹಗಳನ್ನು ನೋಡಬಹುದು. 


ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಬಳಸಲಾಗುವ ಮರದ ಪಲ್ಲಕ್ಕಿಯನ್ನು ಮಂದಿರದ ಒಳಗಡೆ ಕಾಣಬಹುದು. 


ದೇವಾಲಯದ ಆಫೀಸಿನಲ್ಲಿ ಸರಿ ಸುಮಾರು 5 ಅಡಿ ಎತ್ತರದ ಗ್ಲಾಸ್ ಫೈಬರ್ ನಲ್ಲಿ ಮಾಡಿದ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಇರಿಸಲಾಗಿದ್ದು ಇದನ್ನು ವಿಶೇಷ ಉತ್ಸವದ ದಿನಗಳಂದು "ಉತ್ಸವಮುರ್ತಿ" ಯಾಗಿ ಬಳಸಿಕೊಳ್ಳಲಾಗುತ್ತಿದೆ.


ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 














ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು



ಆರತಿಯ ಸಮಯ: 

ಕಾಕಡಾ ಆರತಿ 
5:30 AM
 ಮಧ್ಯಾನ್ಹ ಆರತಿ
12:30 PM
ಧೂಪಾರತಿ
6:30 PM
ಶೇಜಾರತಿ
7:30 PM

ಗುರುವಾರದ ದಿನದಂದು ಮಾತ್ರ ರಾತ್ರಿ 9:30 ಕ್ಕೆ ಶೇಜಾರತಿಯ ಕಾರ್ಯಕ್ರಮವಿರುತ್ತದೆ. 

ಪ್ರತಿದಿನ ದೇವಾಲಯದಲ್ಲಿ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 5/- ರುಪಾಯಿಗಳು. 

ಪ್ರತಿದಿನ ಬೆಳಿಗ್ಗೆ  9 ಘಂಟೆಯಿಂದ 10 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ "ಕ್ಷೀರಾಭಿಷೇಕ" ಮಾಡಲಾಗುತ್ತದೆ.  ಸೇವಾಶುಲ್ಕ 51/- ರುಪಾಯಿಗಳು. 

ಪ್ರತಿದಿನ ಗುರುವಾರ ಬೆಳಿಗ್ಗೆ  9 ಘಂಟೆಯಿಂದ 10 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ "ಪಂಚಾಮೃತ ಅಭಿಷೇಕ" ಮಾಡಲಾಗುತ್ತದೆ.  ಸೇವಾಶುಲ್ಕ 51/- ರುಪಾಯಿಗಳು.  

ಪ್ರತಿ ಗುರುವಾರ ಸಂಜೆ 6:45 ರಿಂದ 7 ಘಂಟೆಯವರೆಗೆ ಪಲ್ಲಕ್ಕಿ ಉತ್ಸವವಿರುತ್ತದೆ. ಯಾವುದೇ ಸೇವಾಶುಲ್ಕ ಇರುವುದಿಲ್ಲ. 

ಪ್ರತಿ ತಿಂಗಳ ಹುಣ್ಣಿಮೆಯ ದಿನ ಬೆಳಿಗ್ಗೆ 10 ಘಂಟೆಯಿಂದ 12:30 ರ ವರೆಗೆ  ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತದೆ. ಸೇವಾ ಶುಲ್ಕ 51/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು: 
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 13ನೇ ಏಪ್ರಿಲ್.
ಗುರುಪೂರ್ಣಿಮೆ.
ಶ್ರೀರಾಮನವಮಿ. 
ಗೋಕುಲಾಷ್ಟಮಿ.
ವಿಜಯದಶಮಿ.
ದತ್ತಜಯಂತಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 
 


ಸ್ಥಳ: 
ಬಿ.ಜಿ.ಎಸ್.ಶಾಲೆ ಎದುರುಗಡೆ, ಸಾಯಿ ನಗರ,ಗೌರಿಬಿದನೂರು.

ವಿಳಾಸ:


ಶ್ರೀ ಸಾಯಿಬಾಬಾ ಮಂದಿರ
ಶ್ರೀ ಸಾಯಿ ಸೇವಾ ಸಮಿತಿ, 
ಬಿ.ಜಿ.ಎಸ್.ಶಾಲೆ ಎದುರುಗಡೆ, 
ಸಾಯಿ ನಗರ,ಗೌರಿಬಿದನೂರು - 561 208, 
ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ರಘು / ಶ್ರೀ.ಸಂತೋಷ್ / ಶ್ರೀ.ಮಂಜುನಾಥ್ / ಶ್ರೀಮತಿ.ವಿಜಯಲಕ್ಷ್ಮಿ / ಶ್ರೀ.ರಾಮಕೃಷ್ಣ

ದೂರವಾಣಿ ಸಂಖ್ಯೆಗಳು: 
 
+ 91 92417 59810 / +91 99169 33036 / +91 78995 50796


ಈ ಮೇಲ್ ವಿಳಾಸ:  

ಮಾರ್ಗಸೂಚಿ:
ಗೌರಿಬಿದನೂರು ರೈಲ್ವೇ ನಿಲ್ದಾಣ ಅಥವಾ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಿಂದ ಸರಿ ಸುಮಾರು 10 ನಿಮಿಷಗಳ ಅಂತರದಲ್ಲಿರುತ್ತದೆ. ದೇವಾಲಯ ತಲುಪಲು ಈ ಎರಡೂ ಸ್ಥಳಗಳಿಂದ ಆಟೋ ಸೌಲಭ್ಯವಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment